ಶಾಸನ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ವಿಷ್ಣುವನ್ನು ಕುರಿತಾಗಿ ಚತುರ್ಭುಜ ಮತ್ತು ಗರುಡ ಕೇತು ಎನ್ನುವುದಾಗಿ ವರ್ಣಿಸಿದ್ದಲ್ಲದೇ ಜನಾರ್ದನ ಪದವನ್ನು ಬಳಕೆ ಮಾಡಲಾದ ಈ ಶಾಸನವನ್ನು ಬುಧಗುಪ್ತನು ಏರಣ್ ನಲ್ಲಿನ ಕಲ್ಲಿನ ಸ್ತಂಬ ಶಾಸನದಲ್ಲಿ ಬರೆಸಿದ್ದಾನೆ. ಕನ್ನಡದಲ್ಲಂತೂ ಹಲ್ಮಿಡಿ ಶಾಸನದಲ್ಲಿ ಮೊತ್ತ ಮೊದಲಿಗೆ ಮಂಗಲಾಚರಣೆಯಲ್ಲಿ ವಿಷ್ಣುವಿನ ಬಗ್ಗೆ ಬಂದಿದ್ದರೆ ಹೆಚ್ಚಿನ ಕಡೆ ಪುಣ್ಯ ಕ್ಷೇತ್ರಗಳನ್ನು ಕುರುಕ್ಷೇತ್ರ, ವಾರಣಾಸಿ ಎಂದು ಬಳಸಿಕೊಂಡಿದ್ದಾರೆ.
Search This Blog
Wednesday, 14 September 2016
Monday, 12 September 2016
ವೈಜಯಂತೀಪುರದ ಮಯೂರ ವರ್ಮ ಚಿತ್ರದುರ್ಗದ ಚಂದ್ರವಳ್ಳಿಯಲ್ಲಿ
ಕನ್ನಡದ ನೆಲದಲ್ಲಿ
ತನ್ನ ಅಧಿಪತ್ಯವನ್ನು ಸ್ಥಾಪಿಸಿದ “ಇದಂ ಬ್ರಾಹ್ಮಂ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ” ಎನ್ನುವುದನ್ನು
ಕ್ರಿಯಾತ್ಮಕವಾಗಿ ತೋರಿಸಿದ ಮಹಾ ಮೇಧಾವಿ ಕದಂಬವಂಶದ ಮಯೂರ ವರ್ಮ. ಈತನ
ಬಗ್ಗೆ ಈತನ ಹೆಸರನ್ನು ಅಧಿಕೃತವಾಗಿ ಸೂಚಿಸುವಂತಹ ಶಾಸನವೇ ಇಲ್ಲ ಎನ್ನಬಹುದು. ಆದರೆ ಇದಕ್ಕೆ
ಅಪವಾದ ಎನ್ನುವಂತೆ ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿಯ ಈ ಶಾಸನ ಮಯೂರವರ್ಮನು
ಕೆರೆಯನ್ನು ಕಟ್ಟಿಸಿದ ಬಗೆಗಿನ ಉಲ್ಲೇಖವಿದೆ. ಸಂಸ್ಕೃತ ಪ್ರಬುದ್ಧ ವಿದ್ವಾಂಸನಾದ ಮಯೂರವರ್ಮನ
ತರುವಾಯ ಬಂದ ಅರಸರೆಲ್ಲಾ ಶಾಸನ ಸಾಹಿತ್ಯವನ್ನು ಗಮನದಲ್ಲಿರಿಸಿಕೊಂಡದ್ದು ಕಾಣಬರುತ್ತದೆ. ಕದಂಬರ
ಕುರಿತಾಗಿ ಅನೇಕ ವಿಸ್ಮಯಕಾರ್ರಿ ವಿಷಯಗಳು ಅನೇಕ ವಿಧದಲ್ಲಿ ಸಿಗುತ್ತವೆ. ಕ್ರಿ. ಶ
೩ನೇ ಶತಮಾನದ ಸುಮಾರಿನ ಸಂಸ್ಕೃತದ ಈ ಶಾಸನ ಬ್ರಾಹ್ಮೀ ಲಿಪಿಯಲ್ಲಿದೆ.
Saturday, 10 September 2016
ಸುಮನಸಾಂ ಮನಸಾಮಕಸ್ಮಾದಸ್ಮಾದಕಾಲ ಕಲಿಕಾಲ ವಿರಾಮ ಶಂಕಾಂ - ಖಜುರಾಹೋ
ಕ್ರಿ.ಶ. ೯೫೦
ರಿಂದ ೧೦೫೦ ರ ವರೆಗೆ ಆಳಿದ ಚಂಡೇಲ ವಂಶದ ಅರಸರು ಖಜುರಾಹೋ ವನ್ನು ತಮ್ಮ
ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಇಲ್ಲಿನ ಇಡೀ
ಪ್ರದೇಶ ಎ೦ಟು ದ್ವಾರಗಳಿದ್ದ ಕೋಟೆಯಿ೦ದ ಸುತ್ತುವರಿಯಲ್ಪಟ್ಟಿತ್ತು. ಪ್ರತಿ ದ್ವಾರದ ಎರಡು
ಬದಿಯಲ್ಲಿಯೂ ಖರ್ಜೂರದ ವೃಕ್ಷಗಳಿದ್ದುದರಿಂದ ಈ ಸ್ಥಳಕ್ಕೆ "ಖಜುರಾಹೊ" ಎಂಬ ಹೆಸರು ಬ೦ದಿತೆ೦ದು
ಹೇಳಲಾಗುತ್ತದೆ. ಯಶೋವರ್ಮನ
ಕಾಲದಲ್ಲಿದ್ದ ಮಾಧವನೆನ್ನುವ ಸಂಸ್ಕೃತ ಕವಿಗೆ ದೆದ್ದನೆನ್ನುವವನು ಪ್ರಶಸ್ತಿಯನ್ನು ನೀಡಿದ
ಕುರಿತು ಈ ದೇವಾಲಯದಲ್ಲಿರುವ ಶಾಸನ ಒಂದರಲ್ಲಿ ಹೇಳಲಾಗಿದೆ. ಅತ್ಯಂತ ಸುಂದರವಾದ ಪದಗಳನ್ನು
ಪೋಣಿಸಿ ರಚಿಸಿದ ಈ ಶಾಸನ ಸಾಹಿತ್ಯಾಸಕ್ತರಿಗೆ ಅತ್ಯಂತ ಮಹತ್ವದ್ದು, ಇಲ್ಲಿ ಇನ್ನೊಂದು ಮುಖ್ಯ ವಿಶೇಷವೆಂದರೆ ಸಂಸ್ಕೃತ
ಭಾಷೆಯನ್ನು ಕುರಿತು ಕವಿ ಜಯಗಣ ನ ಮಗನನ್ನು ಸಂಸ್ಕೃತಭಾಷಾ ವಿದುಷ ಎಂದು ಬಣ್ಣಿಸಿದ್ದಾರೆ. ಒಂದು ಭಾಷೆಯ
ಕುರಿತು ಅಭಿಮಾನದಿಂದ ಹೇಳಿರುವುದು ಶಾಸನ ಇತಿಹಾಸದಲ್ಲಿ ತುಂಬಾ ವಿರಳ. ಖಂಡರಿಸಿರುವ ಅಕ್ಷರವನ್ನು
ಕುರಿತಾಗಿಯೂ ಸಹ ರುಚಿರಾಕ್ಷರ ಎಂದು ಹೊಗಳಿಕೊಂಡದ್ದು ನಾಗರಿಲಿಪಿಯ ಬಗ್ಗೆ ಅವರಿಗಿದ್ದ
ಅಭಿಮಾನವನ್ನು ತೋರಿಸುತ್ತದೆ. ಇಲ್ಲಿ ರುಚಿರಾಕ್ಷರ ಎನ್ನುವುದು ಪ್ರಶಸ್ತಿಯನ್ನು ಕುರಿತಾಗಿಯೂ
ಹೇಳಿರುವ ಸಾಧ್ಯತೆ ಇದೆ.ಭಾಷೆ
ಮತ್ತು ಲಿಪಿ ಯ ಜೊತೆಗೆ ಗೌರವಕ್ಕೆ ಪಾತ್ರನಾದ ಮಾಧವನು ಬೇರೆ ಬೇರೆ ಕೃತಿಗಳನ್ನು ಬರೆದವನು.
ಆದರೆ ಇದಕ್ಕೂ ಮೊದಲು ಸುಮಾರು ಕ್ರಿ ಶ
೬೯೯ರಲ್ಲಿ ಬಾದಾಮಿಯಲ್ಲಿ ವಿಜಯಾದಿತ್ಯ ಎನ್ನುವ ಚಾಲುಕ್ಯ ವಂಶದ ರಾಜನೊಬ್ಬ ಒಂದು ಶಾಸನ ಬರೆಸಿದಾಗ
ಆ ಶಾಸನದಲ್ಲಿನ ೯ ಸಾಲುಗಳನ್ನು ಸಂಸ್ಕೃತ ಭಾಷೆಯಲ್ಲಿಯು ೧೦ನೇ ಸಾಲಿನಿಂದ ಕನ್ನಡದಲ್ಲಿ ಬರೆಸಿದ.
ಆಗ ೧೦ನೇ ಸಾಲಿನಲ್ಲಿ ಅತಃ ಪರಂ ವರ್ಣಾನ್ಯೇತಾನಿ ಪ್ರಾಕೃತ ಭಾಷಾಯಾಂ ಎಂದು ಹೇಳಿಕೊಳ್ಳಲಾಗಿದೆ. ಆದರೆ
ನಿರ್ದಿಷ್ಟವಾಗಿ ಕನ್ನಡವನ್ನು ಹೇಳದೇ ಇದ್ದರೂ ಸಹ ಭಾಷೆಯ ಬಗ್ಗೆ ಹೇಳಿದ್ದಾನೆ. ಅಕ್ಷರವನ್ನು
ಕುರಿತಾಗಿ ಮತ್ತು ಕವಿಯನ್ನು ಹೆಸರಿಸಿದ್ದಿಲ್ಲ. ಖಜುರಾಹೋ ಶಿಲ್ಪಕಲೆಗಳಲ್ಲಿ ವೈಶಿಷ್ಟ್ಯವನ್ನು
ಹೊಂದಿದ್ದಲ್ಲದೇ ಭಾಷಾ ಜ್ಞಾನದ ಕುರಿತಾಗಿ ಉಲ್ಲೇಖಿಸಿದ ಮಹತ್ವದ ದೇವಾಲಯ.
ಯಸ್ತ್ಯಾಗ ವಿಕ್ರಮ ವೆವೇಕ ಕಲಾ ವಿಲಾಸ
ಪ್ರಜ್ಞಾಪ್ರತಾಪ ವಿಭವ ಪ್ರಭವಶ್ಚರಿತ್ರಾತ್ ಚಕ್ರೇ ಕೃತೀ
ಸುಮನಸಾಂ ಮನಸಾಮಕಸ್ಮಾದಸ್ಮಾದಕಾಲ ಕಲಿಕಾಲ
ವಿರಾಮ ಶಂಕಾಂ
ಶಬ್ದಾನುಶಾಸನ ವಿದಾಪಿತ್ರಮಾನ್ತ್ರ್ಯ ಡತ್ತ
ದದ್ದೇನ ಮಾದವ ಕವಿಃ ಸ ಇಮಾಂ ಪ್ರಶಸ್ತಿಂ
ಯಸ್ಯಾಮಲಂಕ ವಿಯಶಃ ಕೃತಿನಃ ಕಯಾಸು ರೋಮಾಂಚ
ಕಂಚಕ ಜುಷಃ ಪರಿಕೀರ್ತಯನ್ತೀ
ಸಂಸ್ಕೃತ ಭಾಷಾ ವಿದುಷಾ ಜಯಗುಣ ಪುತ್ರೇಣ
ಕೌತುಕಾ ಲಿಖಿತಾ
ರುಚಿರಾಕ್ಷರಾ ಪ್ರಶಸ್ತಿಃ ಕರಣಿಕ ಜದ್ದೇನ ಗೌಡೇನ
Wednesday, 7 September 2016
ಐಂದ್ರ - ಅಷ್ಟಾಧ್ಯಾಯೀ - ಸರ್ಪಬಂಧ
ಕೈಲಾಸ ವಾಸಿಯಾದ ಶಿವನಿಗೆ ಅನೇಕ ಶ್ರೇಷ್ಟರಾದ ಗಣಗಳ ಸಮೂಹವೇ ಇತ್ತು. ಅವರಲ್ಲಿ ಪುಷ್ಪದಂತಕೂಡಾ ಒಬ್ಬ. ಆತ ಒಮ್ಮೆ ಒಂದು ತಪ್ಪು ಮಾಡುತ್ತಾನೆ. ಆಗ ಪಾರ್ವತಿ ಕೋಪಗೊಳ್ಳುತ್ತಾಳೆ. ಕೋಪಗೊಂಡ ಪಾರ್ವತಿ ಶಾಪನೀಡುತ್ತಾಳೆ. ಆ ಶಾಪದ ಪರಿಣಾಮ ಪುಷ್ಪದಂತನು ಭೂಲೋಕದಲ್ಲಿ ವರರುಚಿಯಾಗಿ ಹುಟ್ಟುತ್ತಾನೆ. ವರರುಚಿಗೆ ಇನ್ನೊಂದು ಹೆಸರಿರುವುದು ಕಾತ್ಯಾಯನ ಎಂದು. ಅವನು ಪಾಟಲೀ ಪುತ್ರದಲ್ಲಿ ಉಪಾಧ್ಯಾಯ ವರ್ಷನೆನ್ನುವವನ ಬಳಿ ಸಕಲ ಶಾಸ್ತ್ರವಿದ್ಯೆಗಳನ್ನು ಕಲಿಯುತ್ತಾನೆ. ಹಾಗೆಯೇ ಅಲ್ಲಿಯೇ ಉಪಕೋಶ ಅನ್ನುವವಳನ್ನು ವಿವಾಹವಾಗಿ ಅಲ್ಲಿಯೇ ನೆಲೆಸಿರುತ್ತಾನೆ. ಅದೇ ಕಾಲಕ್ಕೆ ಪಾಣಿನಿ ಎನ್ನುವ ಮಂದಬುದ್ಧಿಯವನೊಬ್ಬ ವರ್ಷನ ಶಿಷ್ಯನಾಗಿ ಬಂದು ಸೇರಿಕೊಳ್ಳುತ್ತಾನೆ. ಅವನ ಮಂದ ಬುದ್ಧಿಯನ್ನು ಗಮನಿಸಿದ ಗುರುಪತ್ನಿ ಅವನನ್ನು ಓಡಿಸುತ್ತಾಳೆ ಇದರಿಂದ ಖಿನ್ನನಾದ ಪಾಣಿನಿ ಹಿಮಾಲಯಕ್ಕೆ ತಪಸ್ಸಿಗೆ ತೆರಳುತ್ತಾನೆ . ಅಲ್ಲಿ ಶಿವನನ್ನು ಮೆಚ್ಚಿಸಿ. ಎಲ್ಲಾ ವಿದ್ಯೆಗಳನ್ನೂ ಅಭ್ಯಾಸ ಮಾಡಿ ಮರಳಿ ಪಾಟಲೀ ಪುತ್ರಕ್ಕೆ ಬಂದು ವರರುಚಿಯನ್ನು ವಾದಕ್ಕೆ ಕರೆದು ಏಳು ದಿನಗಳ ಕಾಲ ವಾದ ಮಾಡುತ್ತಾನೆ. ಪಾಣಿನಿ ಮತ್ತು ವರರುಚಿ ವಾದ ಮಾಡುತ್ತಾ ೭ ದಿನ ಕಳೆಯುತ್ತದೆ ಎಂಟನೇ ದಿನ ವರರುಚಿ ಪಾಣಿನಿಯನ್ನು ಗೆದ್ದನು ಆದರೆ ಅಷ್ಟರಲ್ಲಿ ಶಿವನು ಮೇಲಿನಿಂದ ಹೂಂಕರಿಸಲು ವರರುಚಿಯಲ್ಲಿದ್ದ ಐಂದ್ರ ವ್ಯಾಕರಣವೆಲ್ಲಾ ನಷ್ಟವಾಗಿ ವರರುಚಿ ಸೋತು ಪಾಣಿನಿಯೇ ಗೆದ್ದನು. ಇದೊಂದು ದಂತ ಕಥೆಯಾಗಿದ್ದರೂ ಸಹ ಪಾಣಿನಿಗಿಂತಲೂ ಪೂರ್ವದಲ್ಲೂ ಇನ್ನೊಂದು ವ್ಯಾಕರಣ ಪ್ರಬೇಧ ಇದ್ದದ್ದು ತಿಳಿದು ಬರುತ್ತದೆ. ಆದರೆ ಪಾಣಿನಿಯ ವ್ಯಾಕರಣವೇ ಮುಂದೆ ಪ್ರಮಾಣ ಗ್ರಂಥವಾಗುತ್ತಾ ಸಾಗುತ್ತದೆ.
ಸಂಸ್ಕೃತ ಸಾಹಿತ್ಯದ ಇತಿಹಾಸದಲ್ಲಿ ಕ್ರಿಸ್ತ ಪೂರ್ವದಲ್ಲಿ ಯಾಜ್ಞವಲ್ಕ್ಯ, ಬೌಧಾಯನ, ಕಾಟ್ಯಾಯನ, ಆಪಸ್ತಂಬ, ಪಿಂಗಲ, ಪಾಣಿನಿ ಹೀಗೆ ಸಾಹಿತ್ಯ ಕಾರರು, ಸ್ಮೃತಿಕಾರರು - ಭಾಷ್ಯಕಾರರ ದಂಡು ನಮಗೆ ಸಿಗುತ್ತದೆ. ಅವುಗಳಲ್ಲಿ ಪಾಣಿನಿಯೇ ಅತ್ಯಂತ ಅತ್ಯಂತ ಗಂಭೀರವಾದ ಮಾರ್ಗವನ್ನು ಕರುಣಿಸಿದ ಅಂದರೆ ಅದು ಅತಿಶಯವಲ್ಲ. ಅಸ್ತವ್ಯಸ್ತ ವಾದ ಪದಬಳಕೆಯ ಕ್ರಮಕ್ಕೆ ಹದಿನಾಲ್ಕು ಸೂತ್ರಗಳನ್ನು ಹಾಕಿ ಒಂದು ವ್ಯವಸ್ಥಿತ ಪದ್ಧತಿಯನ್ನು ತೋರಿಸಿಕೊಟ್ಟದ್ದು ಪಾಣಿನಿಯ ದೊಡ್ದ ಕೊಡುಗೆ. ಆದರೆ ಅದನ್ನು ಅಳವಡಿಸಿಕೊಳ್ಳುವಲ್ಲಿ ಸಂಸ್ಕೃತ ಭಾಷಾ ಲೋಕ ತನ್ನದೇ ಆದ ದೊಡ್ದ ಕೊಡುಗೆಯನ್ನು ನೀಡಿದೆ.
ಒಂದು ದೇಶದ ರಾಜ ತಾನು ಕವಿಯಾಗಿ ಮಾರ್ಗದರ್ಶಕನಾಗಿ ಉತ್ತಮ ಆಡಳಿತಗಾರನಾಗಿ ಇದ್ದರೆ ಆ ದೇಶ ಎಂದೂ ಸಹ ದುರ್ಭಿಕ್ಷದಿಂದ ಇರಲು ಸಾಧ್ಯವೇ ಇಲ್ಲ ಅನ್ನುವುದಕ್ಕೆ ೧೧- ೧೨ ನೇ ಶತಮಾನದ ಭೋಜನೇ ಉದಾಹರಣೆ. ಸಾಹಿತ್ಯದ ಮೇಲೆ ಮಾತ್ರವಲ್ಲದೇ ಸಂಸ್ಕೃತ ಭಾಷಾ ಶಾಸ್ತ್ರದ ಮೇಲೂ ಸಹ ಆತ ಪ್ರಭುತ್ವದ ಜೊತೆಗೆ ಆಸಕ್ತಿ ಹೊಂದಿದ್ದ ಸಾಮಾನ್ಯರೂ ಸಹ ವ್ಯಾಕರಣ ಬದ್ಧರಾಗಿ ಮುಂದಿನ ಪೀಳಿಗೆಗೆ ಭಾಷೆಯನ್ನು ಜೀವಂತ ಇಡಲಿ ಎನ್ನುವ ಮಹತ್ವಾಕಾಂಕ್ಷೆಯಿಂದ ವ್ಯಾಕರಣಕ್ಕೆ ಸಂಬಂಧಿಸಿ ನಾಲ್ಕು ಶಾಸನಗಳನ್ನು ಬರೆಸಿದ ಅದು ಕೂಡಾ ಸಾರ್ವಜನಿಕರು ಹೆಚ್ಚಾಗಿರುವ ಕಡೆ ಅದನ್ನು ಬರೆಸಿದ ಅದುವೇ ಉಜ್ಜಯಿನಿಯ ಮಹಾಕಾಲೇಶ್ವರ ದೇವಾಲಯದ ಸರ್ಪಬಂಧ ಶಾಸನ. ಇಲ್ಲಿ ನಾನು ಸಧ್ಯಕ್ಕೆ ಒಂದನ್ನು ತಮ್ಮೆದುರಿಗೆ ಇಟ್ಟಿದ್ದೇನೆ.
ಸಂಸ್ಕೃತ ಸಾಹಿತ್ಯದ ಇತಿಹಾಸದಲ್ಲಿ ಕ್ರಿಸ್ತ ಪೂರ್ವದಲ್ಲಿ ಯಾಜ್ಞವಲ್ಕ್ಯ, ಬೌಧಾಯನ, ಕಾಟ್ಯಾಯನ, ಆಪಸ್ತಂಬ, ಪಿಂಗಲ, ಪಾಣಿನಿ ಹೀಗೆ ಸಾಹಿತ್ಯ ಕಾರರು, ಸ್ಮೃತಿಕಾರರು - ಭಾಷ್ಯಕಾರರ ದಂಡು ನಮಗೆ ಸಿಗುತ್ತದೆ. ಅವುಗಳಲ್ಲಿ ಪಾಣಿನಿಯೇ ಅತ್ಯಂತ ಅತ್ಯಂತ ಗಂಭೀರವಾದ ಮಾರ್ಗವನ್ನು ಕರುಣಿಸಿದ ಅಂದರೆ ಅದು ಅತಿಶಯವಲ್ಲ. ಅಸ್ತವ್ಯಸ್ತ ವಾದ ಪದಬಳಕೆಯ ಕ್ರಮಕ್ಕೆ ಹದಿನಾಲ್ಕು ಸೂತ್ರಗಳನ್ನು ಹಾಕಿ ಒಂದು ವ್ಯವಸ್ಥಿತ ಪದ್ಧತಿಯನ್ನು ತೋರಿಸಿಕೊಟ್ಟದ್ದು ಪಾಣಿನಿಯ ದೊಡ್ದ ಕೊಡುಗೆ. ಆದರೆ ಅದನ್ನು ಅಳವಡಿಸಿಕೊಳ್ಳುವಲ್ಲಿ ಸಂಸ್ಕೃತ ಭಾಷಾ ಲೋಕ ತನ್ನದೇ ಆದ ದೊಡ್ದ ಕೊಡುಗೆಯನ್ನು ನೀಡಿದೆ.
ಒಂದು ದೇಶದ ರಾಜ ತಾನು ಕವಿಯಾಗಿ ಮಾರ್ಗದರ್ಶಕನಾಗಿ ಉತ್ತಮ ಆಡಳಿತಗಾರನಾಗಿ ಇದ್ದರೆ ಆ ದೇಶ ಎಂದೂ ಸಹ ದುರ್ಭಿಕ್ಷದಿಂದ ಇರಲು ಸಾಧ್ಯವೇ ಇಲ್ಲ ಅನ್ನುವುದಕ್ಕೆ ೧೧- ೧೨ ನೇ ಶತಮಾನದ ಭೋಜನೇ ಉದಾಹರಣೆ. ಸಾಹಿತ್ಯದ ಮೇಲೆ ಮಾತ್ರವಲ್ಲದೇ ಸಂಸ್ಕೃತ ಭಾಷಾ ಶಾಸ್ತ್ರದ ಮೇಲೂ ಸಹ ಆತ ಪ್ರಭುತ್ವದ ಜೊತೆಗೆ ಆಸಕ್ತಿ ಹೊಂದಿದ್ದ ಸಾಮಾನ್ಯರೂ ಸಹ ವ್ಯಾಕರಣ ಬದ್ಧರಾಗಿ ಮುಂದಿನ ಪೀಳಿಗೆಗೆ ಭಾಷೆಯನ್ನು ಜೀವಂತ ಇಡಲಿ ಎನ್ನುವ ಮಹತ್ವಾಕಾಂಕ್ಷೆಯಿಂದ ವ್ಯಾಕರಣಕ್ಕೆ ಸಂಬಂಧಿಸಿ ನಾಲ್ಕು ಶಾಸನಗಳನ್ನು ಬರೆಸಿದ ಅದು ಕೂಡಾ ಸಾರ್ವಜನಿಕರು ಹೆಚ್ಚಾಗಿರುವ ಕಡೆ ಅದನ್ನು ಬರೆಸಿದ ಅದುವೇ ಉಜ್ಜಯಿನಿಯ ಮಹಾಕಾಲೇಶ್ವರ ದೇವಾಲಯದ ಸರ್ಪಬಂಧ ಶಾಸನ. ಇಲ್ಲಿ ನಾನು ಸಧ್ಯಕ್ಕೆ ಒಂದನ್ನು ತಮ್ಮೆದುರಿಗೆ ಇಟ್ಟಿದ್ದೇನೆ.
Wednesday, 31 August 2016
ಸ್ವಹಸ್ತೋಯಂ - ಭೋಜರಾಜಃ
ಆರಂಭ ಕಾಲೀನ
ಸಹಸ್ರಮಾನದಲ್ಲಿ ಅಂದರೆ ಹತ್ತನೆ ಶತಮಾನಕ್ಕೂ ಮೊದಲು ಕಾಳಿದಾಸನಿಗೆ ಅನೇಕ ಅಭಿಮಾನಿ
ಕವಿಗಳಿದ್ದದ್ದು ಅಲ್ಲಲ್ಲಿ ಕಂಡು ಬರುತ್ತವೆ. ಅನೇಕ ಶಿಲ್ಪಿಗಳು, ಅನೇಕ ಕಲಾಕಾರರು ಮತ್ತು ಕವಿಗಳು ಕಾಳಿದಾಸನನ್ನು ಒಂದಲ್ಲ ಒಂದು
ರೀತಿಉಯಿಂದ ಹೊಗಳಿದ್ದಾರೆ ಮತ್ತು ಅಭಿಮಾನದಿಂದ ತಮ್ಮನ್ನೂ ಸಹ ಕಾಳಿದಾಸ ಎಂದೇ ಹೆಸರಿಸಿಕೊಂಡಿದ್ದಾರೆ.
ಇನ್ನು ಕೆಲವರು ತಾವು ಕಾಳಿದಾಸನಿಗೆ ಸಮನಾದ ಕವಿಗಳು ಎಂದಿದ್ದರೆ ಮತ್ತೆ ಕೆಲವರು ಕಾಳಿದಾಸಕಿಂತಲೂ
ತಾವು ಕಡಿಮೆಯವರಲ್ಲ ಅವನಿಗಿಂತ ಶ್ರೇಷ್ಠರು ಎಂದವರೂ ಇದ್ದಾರೆ. ಅನೇಕ ರಾಜರುಗಳು ತಮ್ಮ
ಶಾಸನಗಳಲ್ಲಿ ರಘುವಂಶದ ಮಂಗಲಾಚರಣೆಯನ್ನು ತಾವು ಅಳವಡಿಸಿಕೊಂಡದ್ದು ಕಂಡು ಬರುತ್ತದೆ. ಹೀಗೆ
ಕಾಳಿದಾಸ ಒಂದಿಲ್ಲೊಂದು ಕಾರಣಕ್ಕೆ ಆಗಾಗ ಜನಮಾನಸದಲ್ಲಿದ್ದ. ಸಾಮಾನ್ಯ್ ೮ನೇ ಶ್ಡತಮಾನದ ನಂತರದ
ಅನೇಕ ಶಾಸನ ಸಾಹಿತ್ಯದಲ್ಲಿ ಹರ್ಷ ಚರಿತದ ಸಾಲುಗಳು ಬಂದಿದ್ದರೂ ಸಹ ಕವಿ ಗೌಣವಾಗಿಯೇ ಉಳಿದ. ಕಾಳಿದಾಸನ ಕಾಲಕ್ಕೆ
ಮತ್ತು ಅವನ ನಂತರದ ಸಂಸ್ಕೃತ ಸಾಹಿತ್ಯ ಒಂದು ರೀತಿಯಲ್ಲಿ ಶ್ರೀಮಂತಗೊಳ್ಳುತ್ತಾ ಹೋಯಿತು. ಪಾಣಿನೀ
ಮಹರ್ಷಿಯ ಶಿಕ್ಷಾ ದಲ್ಲಿನ ವಿಧಿಗಳನ್ನು ಅಳವಡಿಸಿಕೊಂಡು ಸುಸಂಬದ್ಧವಾಗುತ್ತಾ ಸಾಗಿತು ಅನ್ನ
ಬಹುದು . ಸುಂದರ ಪದರಚನೆ ಆಲಂಕಾರಿಕ ಲಕ್ಷಣಗಳನ್ನು ಹೊತ್ತು ತಂದಿತು ಅಂದರೆ ತಪ್ಪಾಗುವುದಿಲ್ಲ.
ಆದರೆ ಹತ್ತನೇ ಶತಮಾನದ ತರುವಾಯ ಬಂದ ಭೋಜ
ಸ್ವತಃ ಸಂಸ್ಕೃತದ ಪ್ರಕಾಂಡ ಪಂಡಿತನಾಗಿದ್ದ ಆತನ ಆಸ್ಥಾನದಲ್ಲಿಯೂ ಪರಿಣತ ಮತ್ತು ಅತ್ಯಂತ
ಶ್ರೇಷ್ಠ ಕವಿಗಳಿದ್ದರು. ಆತನ ಶಾಸನಗಳನ್ನು ಗಮನಿಸುತ್ತಾ ಸಾಗಿದರೆ ವಿದ್ವಜ್ಜನ ಸಮೂಹವೇ ಇದ್ದಿರ
ಬಹುದು. ಪದಗಳ ರಚನೆ, ಪದಲಾಲಿತ್ಯ,
ಮತ್ತು ಶಾಸನಗಳಲ್ಲಿ ಬಳಕೆಗೊಂಡ ಶ್ಲೋಕಗಳಂತೂ
ಅದೊಂದು ಅತ್ಯದ್ಭುತ ಆಸ್ಥಾನವಾಗಿರಲೇ ಬೇಕು ಅನ್ನಿಸುತ್ತದೆ. ಬಹುಭಾಷಾ ಪಾಂಡಿತ್ಯ ಹೊಂದಿದ ಭೋಜ
ಎಲ್ಲಿಯೂ ಕಾಳಿದಾಸನನ್ನು ಉಲ್ಲೇಖಿಸಿದ್ದು ಕಾಣಸಿಗುವುದಿಲ್ಲ. ಆದರೂ ಇಲ್ಲಿ ಉಜ್ಜಯಿನಿಯ
ಶಾಸನದಲ್ಲಿ ತನ್ನ ಹಸ್ತಗಳಿಂದಲೇ ರಚಿಸಿದ ಶಾಸನವಿದು ಎಂದು ಎರಡೆರಡು ಬಾರಿ ಪ್ರಕಟಿಸಿದ್ದಾನೆ.
ಆದರೆ ನಾವು ಈಗ ಕಲ್ಪಿಸಿಕೊಳ್ಳುವ ಕಾಳಿದಾಸನೇ ಬೇರೆ ಹಿಂದೆ ಆಗಿ ಹೋಗಿದ್ದ ಕಾಳಿದಾಸನೇ ಬೇರೆ. ಅದು ಹೇಗೋ
ಇಂದು ಕಲ್ಪಿತ ಘಟನೆಗಳನ್ನು ಆಧರಿಸಿದ ಕಾಳಿದಾಸ ಕಾಣ ಸಿಗುತ್ತಾನೆ.
Monday, 29 August 2016
ಪಾರಿಜಾತ ಮಂಜರೀ - ಭೋಜನ ಪ್ರಹಸನ
ಅರ್ಜುನವರ್ಮನ ಈ
ಶಾಸನವು ಮಧ್ಯ ಭಾರತದ ಧಾರಾನಗರದ್ದು ಇದನ್ನು ಹಿಂದೆ ಮಾಳವದ ಪರಮಾರ ರಾಜರು ಆಳುತ್ತಿದ್ದರು.
ಪ್ರಾಚೀನ ನಾಗರೀ ಲಿಪಿಯಲ್ಲಿ ಈ ಶಾಸನವನ್ನು ಖಂಡರಿಸಿದ್ದರೂ ಅತ್ಯಂತ ಸುಂದರವಾದ ಅಕ್ಷರಗಳಿಂದ
ಕೆತ್ತಲ್ಪಟ್ಟಿದೆ. ಈ ಭೋಜದೇವನ ಕುರಿತಾದ ಈ ಶಾಸನದಲ್ಲಿ ಭೋಜ ತಾನೇ ಶ್ರೀ ಕೃಷ್ಣ ಎನ್ನುವುದಾಗಿ ಹೋಲಿಸಿ ಕೊಂಡಿದ್ದಾನೆ. ಇದೊಂದು ಎರಡು ಅಂಕಗಳಿರುವ
ಪ್ರಹಸನ ಇದರಲ್ಲಿ. ಈ ಪ್ರಹಸನದ ಕೊನೆಯ ಹಂತದಲ್ಲಿ ತಿಳಿದು ಬರುವುದು ಕಲಚೂರಿ ವಂಶದ ರಾಜಾ
ಗಾಂಗೇಯನನ್ನು ಭೋಜನು ಸೋಲಿಸಿದ ವರ್ಣನೆ ಇದೆ. ಇದರಲ್ಲಿ ಸೂತ್ರಧಾರ, ನಟೀ, ಅರ್ಜುನವರ್ಮ, ವಿದಗ್ಧ, ರಾಣೀ ಸರ್ವಕಲಾ ಮತ್ತು ಅವಳ ಸೇವಕಿ ಕನಕಲೇಖಾ, ಹಾಗೂ ಕುಸುಮಾಕರ ಮತ್ತು
ವಸಂತಲೀಲಾ. ಇದರ ನಾಯಕಿ ಪಾರಿಜಾತಮಂಜರಿ ಅಥವಾ ವಿಜಯ ಶ್ರೀ. ಕುಸುಮಾಕರನು ಸಂಸ್ಕೃತದಲ್ಲಿ
ಮಾತನಾಡುತ್ತಾನೆ, ಉಳಿದವರು ಪ್ರಾಕೃತ ಮತ್ತು ಸೌರಸೇನಿಯಲ್ಲಿ
ಮಾತನಾಡುತ್ತಾರೆ. ಈ ಶಾಸನದ ಆರಂಭದಲ್ಲಿ ಮಂಗಲಾಚರಣೆಯ ಶ್ಲೋಕ ಬಳಸದೇ ಈ ಶಾಸನಕ್ಕೆ ಎರಡು
ಬಂಡೆಗಳನ್ನು ಆಯ್ದು ಕೊಂಡಿದ್ದೇನೆ ಎಂದು ಶಿಲ್ಪಿ ರಾಮದೇವನು ಹೇಳಿಕೊಳ್ಳುತ್ತಾನೆ . ಎಲ್ಲಾ
ಶಾಸನಗಳ ಕ್ರಮದಂತೆ ತನ್ನ ಹೆಸರನ್ನು ಕೊನೆಗೆ ಬರೆದರೂ. ಓದುಗರು ತಿಳಿದಿರಲಿ ಎಂದು ಎರಡು ಶಾಸನ
ಎಂದು ಬರೆದು ತನ್ನ ಜಾಣ್ಮೆ ಮೆರೆದಿದ್ದಾನೆ. ಈತನ ಅಕ್ಷರವಂತೂ ಇಂದಿನ ಮುದ್ರಿತ ದಾಖಲೆಗಳಿಗೆ
ಕಡಿಮೆ ಇಲ್ಲ.
Friday, 26 August 2016
ಯಥಾವಿಧಿ ಹುತಾಗ್ನಿನಾಂ ಯಥಾ ಕಾಮಾರ್ಚಿತಾರ್ಥಿನಾಂ - ಮಂಗಲೇಶನ ಶಾಸನದಲ್ಲಿ
ಪದವೀಂ ಕಾಲಿದಾಸಸ್ಯ
ಲಲಿತಾಂ ಮೃದುಲೈಃ ಪದೈ |
ನ ಶಕ್ನುವಂತ್ಯಹೋ ಗನ್ತುಂ
ಪಶ್ಯನ್ತೋsಪಿ ಕವೀಶ್ವರಾಃ ||
ಸಾಯಣಾಚಾರ್ಯರು ತಮ್ಮ
ಸುಭಾಷಿತದಲ್ಲಿ ಕಾಳಿದಾಸನ ಕಾವ್ಯಮಾರ್ಗವೆನ್ನುವುದು ಲಾಲಿತ್ಯದಿಂದ ಕೂಡಿದೆ, ಅವನು ಉಪಯೋಗಿಸುವ
ಪದಗಳು ತುಂಬಾ ಮೃದುವಾದ ನುಡಿಗಳು. ಆದರೆ ಅವನಂತೆಯೇ ಬರೆಯಲು ಎಂತೆಂತಹ ಕವಿಗಳು ಹರಸಾಹಸಪಟ್ಟರೂ
ಸಾಧ್ಯವಾಗಿಲ್ಲ, ಕಾಳಿದಾಸನ ಕಾವ್ಯಮಾರ್ಗ ಮತ್ತಾರಿಗೂ ಪ್ರವೇಶಕೊಟ್ಟಿಲ್ಲ ಏನಾಶ್ಚರ್ಯ. ಎಂದು
ಉದ್ಗರಿಸಿದ್ದಾರೆ. ಇದನ್ನೇ ದಂಡಿ
ಲಿಪ್ತಾಮಧುದ್ರವೇಣಾಸನ್
ಯಸ್ಯ ನಿರ್ವಿಷಯಾ ಗಿರಃ |
ತೇನೇದಂ ವರ್ತ್ಮ ವೈದರ್ಭಂ
ಕಾಲಿದಾಸೇನ ಶೋಭಿತಮ್ ||
ಜೇನಿನ ಮಧುರವಾದ ಸಿಹಿಯಲ್ಲಿ ಅವನ
ವೈದರ್ಭೀ ಶೈಲಿಯನ್ನು ಕೊಂಡಾಡಿದ್ದಾರೆ.
ಬಾಣ ಭಟ್ಟ:
ನಿರ್ಗತಾಸು ನವಾ ಕಸ್ಯ
ಕಾಲಿದಾಸಸ್ಯ ಸೂಕ್ತಿಷು |
ಪ್ರೀತಿರ್ಮಧುರಸಾಂದ್ರಾಸು
ಮಂಜರೀಷ್ವಿವ ಜಾಯತೇ || ಎಂದಿದ್ದಾನೆ.
ವಸಂತ ಋತುವಿನ ಆರಂಭದಲ್ಲಿನ
ಚಿಗುರಿರುವ ಮಾವಿನ ಹೂಗೊಂಚಲು ಎಂದು ಬಾಣ ಉದ್ಗರಿಸಿದ್ದಾನೆ.
ಕಾಳಿದಾಸನನ್ನು ಮೀರಿಸುವ
ಇನ್ನೊಬ್ಬ ಕವಿ ಹುಟ್ಟಲೇ ಇಲ್ಲವೆಂದು ಇನ್ನೊಂದು ಶ್ಲೋಕ ಹೇಳುತ್ತದೆ.
ಪುರಾ ಕವೀನಾಂ ಗಣನಾ
ಪ್ರಸಂಗೇ ಕನಿಷ್ಠಿಕಾಧಿಷ್ಠಿತ ಕಾಲಿದಾಸಾ |
ಅದ್ಯಾಪಿ
ತತ್ತುಲ್ಯಕವೇರಭಾವಾದನಾಮಿಕಾ ಸಾರ್ಥವತೀ ಬಭೂವ||
ಇದನ್ನೆಲ್ಲಾ
ಸಂಸ್ಕೃತಕವಿಗಳೇ ಹೇಳಿದ್ದರೆ ನಮ್ಮ ಕನ್ನಡದ ಕವಿ ರುದ್ರಭಟ್ಟ ತನ್ನ ಜಗನ್ನಾಥ ವಿಜಯದಲ್ಲಿ ಹೀಗೆ
ಸುಂದರವಾಗಿ ಅನುವಾದಿಸಿದ್ದಾನೆ .
ಸುಕವಿ ಜನಗಣನೆಯೊಳ್
ದತ್ತಕನಿಷ್ಠಿಕನಾಗೆ ಕಾಳಿದಾಸಂ ಮೊದಲೆಂ |
ದು ಕರಂ ಬಣ್ಣಿಪರದರಿಂದೆ
ಕಾಳಿದಾಸಂಗೆ ದಾಸರೆನಿಪರ್ ಕವಿಗಳ್ ||
ಕಾಶ್ಮೀರದ ಆಲಂಕಾರಿಕರಿಗೆಲ್ಲಾ ಕಾಳಿದಾಸನೇ
ಮೇಲ್ಪಂಕ್ತಿ ಅದರಲ್ಲೂ ಕಾಳಿದಾಸಾದೀನಾಮಿವ ಯಶಃ ಎಂದು ಮಮ್ಮಟ ಹಾಡಿ ಹೊಗಳಿದ್ದಾನೆ. ಕನ್ನಡದಲ್ಲಿ
ಪಂಪನೊಬ್ಬನನ್ನು ಹೊರತು ಪಡಿಸಿ ಉಳಿದೆಲ್ಲಾ ಕವಿಗಳೂ ಒಂದಲ್ಲ ಒಂದು ರೀತಿಯಲ್ಲಿ ಕಾಳಿದಾಸನನ್ನು
ಹೊಗಳಿದ್ದಾರೆ.
ಮೃದು ಪದ್ಯ ರಚನೆಯೊಳ್ ಕಾಳಿದಾಸನುಂ
ಗದ್ಯರಚನೆಯೊಳ್ ಬಾಣನುಮಂ |
ಕದ ಕವಿಗಳೆನಿಸಿ ನೆಗಳ್ದರದರಿಂ
ಸತ್ಕವಿಗಳಿರ್ವರೆಮಗಭಿವಂದ್ಯರ್ || ಎಂದು ರನ್ನ ಮುಕ್ತಕಂಠದಿಂದ ಬಾಣನನ್ನೂ ಮತ್ತು ಕಾಳಿದಾಸನನ್ನು
ವಂದಿಸಿದರೆ ದುರ್ಗಸಿಂಹನು ತನ್ನ ಪಂಚತಂತ್ರದಲ್ಲಿ "ಸುರತರ ಚಂದ್ರಿಕಾ ದ್ಯುತಿನಿರಸ್ತ ಸಮಸ್ತ ಜಗತ್ತಮಂ ಕಳಾ ಪರಿಣತನೆಂದೊಡೇವೊಗಳ್ವೆನುನ್ನತಿಯಂ ಕವಿ
ಕಾಳಿದಾಸನಾ" ಎಂದಿದ್ದಾನೆ. ಹೀಗೆ ಒಂದಿಲ್ಲೊಂದು ಬಗೆಯಲ್ಲಿ ಕಾಳಿದಾಸ ಕಾವ್ಯ
ಪ್ರಪಂಚದಲ್ಲಿ ಹೊಗಳಲ್ಪಟ್ಟಿದ್ದಾನೆ. ಪೊನ್ನನಂತೂ ತಾನು ಕಾಳಿದಾಸನಿಗೂ ಮಿಗೆಲೆಂದು
ಹೇಳಿಕೊಂಡಿದ್ದಾನೆ. "ಮುನ್ನುಳ್ಳ ಕಾಳಿದಾಸಂಗಂ" "ನಾಗವರ್ಮನಂತೂ "ತನಗಿನ್ನಾರ್ ಸರಿ .....ನಾಗವರ್ಮ ಕೃತಿಗಂ ಕಾಳಿದಾಸಂಬರಂ"
ಶಾಸನ ಸಾಹಿತ್ಯದಲ್ಲೂ ಹಿಂದೆ ಬಿದ್ದಿಲ್ಲ ಕಲ್ಯಾಣಿ ಚಾಲುಕ್ಯರ ಕಾಲದ ಆರನೇ ವಿಕ್ರಮಾದಿತ್ಯನ
ಹೂಲಿ ಶಾಸನದಲ್ಲಿ "ವಾಗರ್ಥಾ ವಿವ...." ಎನ್ನುವ ರಘುವಂಶದ ಮಂಗಲಾಚರಣೆಯನ್ನು ಬಳಸಿಕೊಲಾಗಿದೆ. ಬೆಂಗಳೂರು ಬೇಗೂರಿನ ಅಗಸಾಳೆ ಮಠದ
ತಾಮ್ರ ಶಾಸನದಲ್ಲೂ ವಾಗರ್ಥವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಇವುಗಳಲ್ಲದೇ ಬಾದಾಮಿ
ಚಾಲುಕ್ಯರ ಕಾಲದ ಎರಡನೇ ವಿಕ್ರಮಾದಿತ್ಯನ ಆಸ್ಥಾನ ಕವು ರವಿಕೀರ್ತಿಯಂತೂ ತಾನು ಭಾರವಿ ಮತ್ತು
ಕಾಳಿದಾಸನಿಗೆ ಸಮನಾದವನೆಂದಿದ್ದಾನೆ. ಮಹಾಕೂಟದ ಮಂಗಲೇಶನ ಸ್ತಂಬ ಶಾಸನದಲ್ಲೂ ರಘುವಂಶದ "ಯಥಾವಿಧಿ ಹುತಾಗ್ನಿನಾಂ ಯಥಾ
ಕಾಮಾರ್ಚಿತಾರ್ಥಿನಾಂ" ಎಂದು ಶಾಸನವನ್ನು ಆರಂಭಿಸಲಾಗಿದೆ. ಕಾಳಿದಾಸ ಸಾಹಿತ್ಯಲೋಕದ ಅನಭಿಷಿಕ್ತ ದಿಒರೆ ಎನ್ನಿಸಿ ಅಂದಿಗೂ ಇಂದಿಗೂ ಎಂದೆಂದಿಗೂ
ಸಾಹಿತ್ಯಾಸಕ್ತರ ಕೇಂದ್ರವಾಗಿದ್ದಾನೆ. ಅಸೂಯಾಪರರಿಗೂ ಅವಕಾಶ ಕಲ್ಪಿಸಿ, ಹೆಗ್ಗಳಿಕೆಗೂ ಅವಕಾಶ ಮಾಡಿಕೊ ಟ್ಟ ಒಬ್ಬನೇ ಒಬ್ಬ ಕವಿ ಕಾಳಿದಾಸ.
Subscribe to:
Posts (Atom)









