Search This Blog

Monday 13 February 2017

ವ್ಯೋಮ ತಾರಾಧಿನಾಥ - ಶ್ರೀಮತ್ ಕದಂಬಪನ್

ಇದು ಹಾಸನ ಜಿಲ್ಲೆಯ ಬೇಲೂರಿನ ಹಲ್ಮಿಡಿಯಲ್ಲಿರುವ ವೀರಭದ್ರ ದೇವಾಲಯದ ಎದುರಿಗಿದ್ದ ಶಿಲಾ ಶಾಸನ. ಕದಂಬ ಕಾಕುಸ್ಥವರ್ಮನ ಶಾಸನ ಸುಮಾರು ೪೫೦ನೇ ಇಸವಿಯದ್ದು. ಪೂರ್ವದ ಕದಂಬರ ಕಾಲದ ಶಾಸನಗಳು ಹೆಚ್ಚಿನವು ಸಂಸ್ಕೃತದಲ್ಲಿವೆ. ಮತ್ತು ಕಾಕುಸ್ಥವರ್ಮನ ಹಲಸಿಯ ಶಾಸನ ಕನ್ನಡದ ನೆಲಕ್ಕೆ ಋ ಅಕ್ಷರವನ್ನು ಪರಿಚಯಿಸಿದ ಮೊದಲ ಶಾಸನ. ಆಮೇಲೆ ಚಿಕ್ಕಬೆಟ್ಟದ ಶಾಸನದಲ್ಲಿ ಬಳಸಿದ್ದು ಬಿಟ್ಟರೆ ಮಧ್ಯದ ಶತಮಾನಗಳಲ್ಲಿ ಋ ಕಾರ ಪ್ರಾಯಶಃ ಬಳಕೆ ಆಗಿರಲಿಕ್ಕಿಲ್ಲ. ಆದರೂ ಸಹ ಸಂಪೂರ್ಣ ಸಂಸ್ಕೃತ ಭಾಷೆಯಿಂದ ಕನ್ನದಕ್ಕೆ ಬಂದಿರುವುದು ಸೋಜಿಗವೆನ್ನಿಸುತ್ತದೆ. ಬಹುಶಃ ಉತ್ತರದಲ್ಲಿ ನಮ್ಮ ನಾಡಿನ ಉತ್ತರದಲ್ಲಿ ಸಂಸ್ಕೃತ ಹೆಚ್ಚು ಪ್ರಚಲಿತವಿದ್ದು ದಕ್ಷಿಣಕ್ಕೆ ಕನ್ನಡ ಹೆಚ್ಚು ಪ್ರಚಲಿತವಿದ್ದಿರಬಹುದು. ಭಟ, ನಾಡು, ಬಟರಿ ಕುಲ, ದಕ್ಷಿಣಾಪಥ, ಪೊಗಳೆಪ್ಪೊಟ್ಟಣ, ಕೆಲ್ಲ, ಸೇಂದ್ರಕ, ಅರಸ, ಬಾಳ್ಗಳ್ಚು, ಕುರುಂಬಿಡಿ, ಪತ್ತೊಂದಿ. ಮುಂತಾದುವು ಬಳಕೆಗೊಂಡದ್ದು ಗಮನಿಸಿದರೆ ಅದಕ್ಕೂ ಮೊದಲೇ ಕನ್ನಡ ಹಂತ ಹಂತವಾಗಿ ಬೆಳೆದು ಬಂದಿದೆ. ಒಮ್ಮೆಲೇ ಇಂತಹ ಪದಗುಚ್ಚಗಳು ಬಂದದ್ದು ಗಮನಿಸಿದರೆ ಇದಕ್ಕೂ ಮೊದಲೇ ಶಿಲಾಶಾಸನಗಳು ಅಥವಾ ತಾಮ್ರಪಟಗಳು ಬಂದಿರಬಹುದು.
1 ಜಯತಿ ಶ್ರೀ ಪರಿಷ್ವಙ್ಗಶ್ಯಾರ್ಙ್ಗ[ವ್ಯಾ]ನತಿರಚ್ಯುತಃ ದಾನವಕ್ಷ್ಣೋರ್ಯುಗಾನ್ತಾಗ್ನಿಃ
[ಶಿಷ್ಟಾನಾನ್ತು] ಸುದರ್ಶನಃ
2 ನಮಃ ಶ್ರೀಮತ್ಕದಂಬಪನ್ತ್ಯಾಗಸಂಪನ್ನನ್ಕಲಭೋರ[ನಾ] ಅರಿ ಕ
3 ಕುಸ್ಥಭಟ್ಟೋರನಾಳೆ ನರಿದಾವಿ[ಳೆ] ನಾಡುಳ್ ಮೃಗೇಶನಾ
4 ಗೇನ್ದ್ರಾಭೀಳರ್ಭ್ಭಟಹರಪ್ಪೋರ್ ಶ್ರೀ ಮೃಗೇಶನಾಗಾಹ್ವಯ
5 ರಿರ್ವ್ವರಾ ಬಟರಿಕುಲಾಮಲವ್ಯೋಮತಾರಾಧಿನಾಥನ್ನಳಪ
6 ಗಣಪಶುಪತಿಯಾ ದಕ್ಷಿಣಾಪಥ ಬಹುಶತಹವನಾ
7 ಹವದು[ಳ್] ಪಶುಪ್ರದಾನ ಶೌಯ್ರ್ಯೋದ್ಯಮಭರಿತೋ[ನ್ದಾನ]ಪ
8 ಶುಪತಿಯೆನ್ದು ಪೊಗಳೆಪ್ಪೊಟ್ಟಣ ಪಶುಪತಿ
9 ನಾಮಧೇಯನಾಸರಕ್ಕೆಲ್ಲಭಟರಿಯಾ ಪ್ರೇಮಾಲಯ
10 ಸುತನ್ಗೆ ಸೇನ್ದ್ರಕಬಣೋಭಯದೇಶದಾ ವೀರಪುರುಷ ಸಮಕ್ಷ
11 ದೆ ಕೇಕಯ ಪಲ್ಲವರಂ ಕಾದೆರೆದು ಪೆತ್ತಜಯನಾ ವಿಜ
12 ಅರಸನ್ಗೆ ಬಾಳ್ಗಳ್ಚು ಪಲ್ಮಡಿಉಂ ಮೂಳವಳ್ಳಿಉಂ ಕೊ
13 ಟ್ಟಾರ್ ಬಟಾರಿಕುಲದೊನಳಕದಮ್ಬನ್ಕಳ್ದೋನ್ ಮಹಾಪಾತಕನ್
14 ಇರ್ವ್ವರುಂ ಸಳ್ಪಙ್ಗದರ್ ವಿಜಾರಸರುಂ ಪಲ್ಮಡಿಗೆ ಕುರು
15 ಮ್ಬಿಡಿವಿಟ್ಟಾರ್ ಅದಾನಳಿವೊನ್ಗೆ ಮಹಾಪಾತಕಮ್ ಸ್ವಸ್ತಿ
16 ಭಟ್ಟರ್ಗ್ಗೀಗಳ್ದೆ ಒಡ್ಡಲಿ ಆ ಪತ್ತೊನ್ದಿ ವಿಟ್ಟಾರಕರ