Search This Blog

Sunday 13 November 2016

ಶಂಕರಾಚಾರ್ಯರಿಂದ ಪರಿಚಯಿಸಲ್ಪಟ್ಟ ಪಂಚಾಯತನ ದಲ್ಲಿ ಗಣೆಶ ಯಾವ ದಿಕ್ಕಿನಲ್ಲಿರುತ್ತಾನೆ ?

ಶಾಕಾಬ್ದೇ ಲಿಖ್ಯಮಾನೇ ಮುನಿ ರಸ ಮನುಭಿರ್ಮಂಡಪಂ ಶೈಲ ಸಾರೈರ್ಮುಕ್ತೈ ನಿರ್ಮಾಯ ಭ
ಕ್ತ್ಯಾಧೃತ ವಿಬುಧ ಗಣಂ ಶ್ರೀ ಮಹೇಂದ್ರೋತ್ರ ಸಾಕ್ಷಾತ್ ಮಧ್ಯೇ ವಿಷ್ಣುಂ ಕೃಶಾನೋರ್ದ್ದಿ
ಶಿ ದಿವಸ್ಕರಂ ನೈರೃತೇ ವಿಘ್ನರಾಜಂ ವಾಯವ್ಯೇ ಶೈಲಪುತ್ರೀಂ ಹರಹರಿತಿ ಸೌರೈರ್ವಂದಿ
ತಂ ವಿಶ್ವನಾಥಂ ಶ್ರೀ ಗೋವಿಂದ ಮಿಶ್ರಸ್ಯ ನೀಲೋಪಲೇನ ಘಟಿತೋ ಮಠ ಏಶ ಯ
ಸ್ಯ ಸಂಘರ್ಷ್ಣಾದುಪಚಿತಾ ಕಿಲ ನೀಲ ಮೂರ್ತಿಃ ಅತನ್ವತೀ ವತ ವೃತೈವ ಕಲಂಕ ವಾದಂ
ವಿಂಬೇ ವಿಧೋರ್ವಿಮಲ ಭಾಸಿ ವಿಭಾತಿ ರೇಖಾ || ಶ್ರೀ ಶತಾವಧಾನಸ್ಯ ||

ಇದು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ವಾರಿಯಲ್ಲಿನ ಶಾಸನ. ಪಂಚಾಯತನ ಪೂಜಾವಿಧಾನದಲ್ಲಿ ಇದನ್ನು ನಿರ್ಮಿಸಲಾದ ಮಠ ಒಂದರಲ್ಲಿನ ದೇವಾಲಯವನ್ನು ನಿರ್ದೇಶಿಸಲಾಗಿದೆ ಇದಕ್ಕೆ ನಾನು ಇಲ್ಲಿ ಹೆಚ್ಚೇನನ್ನೂ ಬರೆಯಲಾರೆ. ಇದರ ಲಿಪಿ ಬಂಗಾಳಿ ಸುಮಾರು ೧೫ನೇ ಶತಮಾನದ ಲಿಪಿ.

ಶಂಕರಾಚಾರ್ಯರಿಂದ ಪರಿಚಯಿಸಲ್ಪಟ್ಟ ಪಂಚಾಯತನ ದಲ್ಲಿ ಗಣೆಶ ಯಾವ ದಿಕ್ಕಿನಲ್ಲಿರುತ್ತಾನೆ ?
ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು , ಈ ಐದೂ ದೇವತೆಗಳ ಮೂರ್ತಿಗಳಿದ್ದಲ್ಲಿ ಅಥವಾ ಶಿಲೆಗಳಿದ್ದಲ್ಲಿ ಅವರ ಮನೆ ದೇವತೆಯ ಮೂರ್ತಿ ಯಾ ಶಿಲೆಯನ್ನು ಮಧ್ಯದಲ್ಲಿಟ್ಟು ಉಳಿದವುಗಳನ್ನು ಈ ಕೆಳಗಿನ ಕ್ರಮದಲ್ಲಿಡುವುದು ಶಾಸ್ತ್ರ ಪದ್ದತಿ. ಪೂಜೆಗೆ ಸಾಮಾನ್ಯವಾಗಿ ಉತ್ತರ ಅಥವಾ ಪೂರ್ವಕ್ಕೆ ಅಭಿಮುಖವಾಗಿ ಕುಳಿತುಕೊಳ್ಳುವುದು. ದೇವರ ಮಂಟಪ ಪಶ್ಚಿಮ ಅಭಿಮುಖವಾಗಿದ್ದರೆ ಮಂಟಪಕ್ಕೇ ಎದುರಾಗಿ ಪಶ್ಚಿಮಕ್ಕೆ ಆಭಿಮುಖವಾಗಿ ಕುಳಿತುಕೊಳ್ಳಬೇಕಾಗುತ್ತೆ. ಆದ್ದರಿಂದ ದೇವರ ಮಂಟಪವು ಪೂರ್ವ ಅಥವಾ ಉತ್ತರ ಅಭಿಮುಖವಾಗಿ ಇರುವುದು ಒಳ್ಳೆಯದು. ಆಗ ದೇವರ ಮಂಟಪವು ಎಡಕ್ಕೆ ಬರುವಂತೆ ಇದ್ದು ಪೂಜೆಗೆ ಅನುಕೂಲವಾಗುವುದು
ಪಂಚಾಯತನ ದೇವತೆಗಳು ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು. ಇವುಗಳಲ್ಲಿ ಆಯಾ ದೇವತೆಗಳ ಭಕ್ತರು ಮುಖ್ಯ ದೇವತೆಯನ್ನು ಮಧ್ಯದಲ್ಲಿಟ್ಟು ಉಳಿದ ದೇವತೆಗಳನ್ನು ಸುತ್ತಲೂ ಇಟ್ಟು ಪೂಜಿಸಬೇಕು. ಈ ಐದೂ ದೆವತೆಗಳಿಗೆ ಬೇರೆ ಬೇರೆ ಬಗೆಯ ಶಿಲೆಗಳಿವೆ. ಮೂರ್ತಿಗಳ ಬದಲು ಅವುಗಳನ್ನಿಟ್ಟು ಅಭಿಷೇಕ ಪೂಜೆ ಮಾಡುವ ಪದ್ಧತಿಗಳಿವೆ.
ವಿಷ್ಣು ಕೇಂದ್ರ ; ಶಿವ -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಗಣಪತಿ ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಸೂರ್ಯ ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ
ಶಿವ ಕೇಂದ್ರ : -ವಿಷ್ಣು ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಸೂರ್ಯ- ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಗಣಪತಿ -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.
ಸೂರ್ಯಕೇಂದ್ರ : ಶಿವ -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಗಣಪತಿ -ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; -ವಿಷ್ಣು -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.
ಅಂಬಿಕಾ ಕೇಂದ್ರ : -ವಿಷ್ಣು -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಶಿವ -ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಗಣಪತಿ -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ;: ಸೂರ್ಯ- ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.
ಗಣಪತಿ ಕೇಂದ್ರ : -ವಿಷ್ಣು -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಶಿವ -ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಸೂರ್ಯ -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ ; ಅಂಬಿಕಾ - ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ಅತ್ಯಾಶ್ಚರ್ಯ... ಅದ್ವೈತದ ಅಮೃತ ಸುಧೆಯನ್ನು ಶಿಷ್ಯಕೋಟಿಗೆ ಉಣಿಸಿದ ಮಹಾಮಹಿಮ ಶ್ರೀ ಶಂಕರಭಗವತ್ಪಾದರು ದೇವರುಗಳನ್ನು ಮಾತ್ರ ಹದ್ನೆಂಟು ಮಾಡಿಕೊಟ್ಟು ಹೋದರಲ್ಲಾ..!


Anantha Narayana Bhat ಕೆಲವೆಡೆ ಸ್ಕಂದನೂ ಬರುತ್ತಾನಲ್ಲಾ?

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ನನಗದೆಲ್ಲಾ ಗೊತ್ತಿಲ್ಲ... ಹೇ..ಭಗವಂತಾ.... ಎಲ್ಲ ಒಳ್ಳೇಯದು ಮಾಡಪ್ಪಾ.. ಅಂತ ಕೇಳಿಕೊಳ್ತೇನೆ ಅಷ್ಟೇ.

Guruprasad Kanle ಶಂಕರಭಗವತ್ಪಾದರು ಅಹಂ ಬ್ರಹ್ಮಾಸ್ಮಿ ಅಂತ ಹೇಳಿಯೂ ಮೂರ್ತಿ ಪೂಜೆಗೂ ವ್ಯವಸ್ಥೆ ಮಾಡಿದರು.
ಕರ್ಮಮಾರ್ಗ , ಭಕ್ತಿಮಾರ್ಗಗಳು ಸುಲಭ , ಜ್ಞಾನಮಾರ್ಗ ಕಷ್ಟ ಅಂತ ಗೊತ್ತಿತ್ತು ಅವರಿಗೆ..
ಅಲ್ವೇ?

Guruprasad Kanle ನಾನು ಏನು ಅಂತ ಗೊತ್ತಾದ್ರೆ ಬೇರೆ ದೇವರು ಯಾಕೆ..?
ಗೊತ್ತಾಗ್ಬೇಕಲ್ಲ ನಮ್ಮಂತ ಪಾಪಿಗಳಿಗೆ.

ರಾಮು ಎಂ ಎಸ್ ಸುಗುಣ ಬ್ರಹ್ಮೊಪಾಸನೇ ಬೇಕೆ ಬೇಕು..
ಮುಕ್ತ ಪುರುಷನನ್ನು ಧ್ಯಾನತ್ಿಸು, ಗುಣಾನುಸಂದಾನ ಮಾಡುತ್ತ ಸಾತ್ವಿಕದೆಡೆಗೆ ತೆರಳಲು ಬೇಕು.
External ದೇವರು / ದೇವರ ನಾಮ / ಪ್ರತೀಕ ಎಲ್ಲವು Adjective ವಿಶೇಷಣಗಳು.
ಗುಣಾನುಸಂದಾನಕ್ಕೆ
ಆದರೆ ಅದ್ವೈತ ಸಾಕ್ಷಾತ್ಕಾರಕ್ಕೆ ತ್ರಿಗುಣಗಳನ್ನು ಮೀರಿರಬೇಕು
ಅದಕ್ಕೆ ಶಿವನಿಗೆ ತ್ರಿಶೂಲ..!!

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ನಾನು ವೇದವನ್ನು ತಕ್ಕ ಮಟ್ಟಿಗೆ ಗುರುಮುಖದಿಿಂದ ಕಲಿತಿದ್ದು. ಆ ನಂತರದ ಅಧ್ಯಯನ ಓದಿ ತಿಳಿದಿದ್ದು. ಶಾಸ್ತ್ರಗಳು ವೇದದಷ್ಟು ಸುಲಭಗ್ರಾಹ್ಯವಲ್ಲ ಶಂಕರರ ಅದ್ವೈತವು ವೇದಾಂತ ಶಾಸ್ತ್ರಕ್ಕೆ ಅನ್ವಯಿಸಿಕೊಂಡಿದ್ದು. ದರ್ಶನ ಎಂದು ಕರೆಯುತ್ತಾರೆ. ಅವುಗಳಲ್ಲಿ 6 ದರ್ಶನಗಳಿವೆ. ಒಂದು ರೀತಿಯಲ್ಲಿ ಈ 6 ದರ್ಶನಗಳೂ ಭಗವಂತನನ್ನು ತಿಳಿಯುವುದಕ್ಕಾಗಿ ಇದ್ದವಲ್ಲ, ಇವು ವೇದವನ್ನು ತಿಳಿಯುವ ಭಿನ್ನ ಮಾರ್ಗಗಳು. ನ್ಯಾಯ, ಮೀಮಾಂಸ ಸಾಂಖ್ಯಾದಿಗಳ ಮೂಲಕ ವೇದವನ್ನು ಅರ್ಥೈಸುತ್ತವೆ. ಅವುಗಳಲ್ಲಿ ವೇದಾಂತವು ಭಗವದವಲಂಬನ ದರ್ಶನ.

Guruprasad Kanle ಅದೇ ನಾನು ಹೇಳಿದೆ.
ಎಲ್ಲವನ್ನೂ ಮೀರಿನಿಂತವರಿಗೆ ಅಹಂ ಬ್ರಹ್ಮಾಸ್ಮಿ ಸಾಕು.
ನಮ್ಮಂತವರಿಗೆ ದೇವೋಪಾಸನೆ ಬೇಕು.
ದೇವೋಪಾಸನೆಗಾಗಿ ಮೂರ್ತಿಯೂ ಬೇಕು.
ನಿರ್ಗುಣ ನಿರಾಕಾರವನ್ನು ಕಲ್ಪನೆ ಮಾಡಿಕೊಳ್ಳುವುದೂ ಕಷ್ಟ ನಮಗೆ

Guruprasad Kanle ನನಗಂತೂ ಏನೂ ಗೊತ್ತಿಲ್ಲ.
ಗುರುಗಳಿಗೆ ಕೈ ಮುಗಿಯೋದಷ್ಟೇ ಗೊತ್ತಿರೋದು.
ಗುರುಗಳು ಅಂದ್ರೆ ನನಗೆ ಶ್ರೀಧರರೊಬ್ಬರೇ.

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ಯಾವುದು ಏನೇ ಇದ್ದರೂ ಕೊನೇಯಲ್ಲಿ ಇರುವುದು ಹೇ.. ಭಗವಂತಾ... ಎಂಬುದು ಮಾತ್ರ.. ಏಕೆಂದರೆ ನಾಸ್ತಿ ಸಿದ್ಧಾಂತವು ಇದೂವರೆಗೆ ಬಾಳ್ಗೊಡಲಿಲ್ಲ..

Guruprasad Kanle ಗೊತ್ತಿಲ್ಲ ಅನ್ನೊದು ಗೊತ್ತಾದ್ರೆ ಸಾಕು..
ಭಗವಂತನೇ ಗತಿ ಅಂತ ಗೊತ್ತಾಗುತ್ತೆ 
ರಾಮು ಎಂ ಎಸ್ ಆಚಾರ್ಯರ ಸಿದ್ಧಾಂತ ಬ್ರಹ್ಮ ಒಂದೇ ಎನ್ನುವುದು.
ನೀನೇ ದೇವರು ಎನ್ನುವುದು.
ಯಾವಾಗ ಬ್ರಹ್ಮ ಅವಿದ್ಯೆಗೆ ಸಿಲುಕುವುದೋ ಆಗ
ಬೌತಿಕ ಪ್ರಜ್ಞೆ, ದ್ವೈತ ಭಾವದಿಂದ external ದೇವರು / ಮುಕ್ತ ಪುರುಷರ ಹುಡುಕಾಟ.
ಅದ್ವೈತ ಸಾಧಿಸಲು ಏಳು ಮೆಟ್ಟಿಲು ಹತ್ತಬೇಕು... ಅದು ಸುಲಭವಲ್ಲ ಎಂದೇ ಭಕ್ತಿ ಮಾರ್ಗದಿಂದ ಕುಂಡಲಿ ಜಾಗೃತಿ...

Guruprasad Kanle ನಾನೇ ದೇವರು ಅಂತ..

ರಾಮು ಎಂ ಎಸ್ ಹೌದು...
ಇರುವುದು ಒಂದೇ ಆತ್ಮ (ಬ್ರಹ್ಮ / ಮಾಯೆ)
ಒಬ್ಬನೇ ಬ್ರಹ್ಮ ಸಾವಿರಾರು ಅಕೌಂಟುಗಳ ಮೂಲಕ facebook ಪೋಸ್ಟು ಹಾಕುತ್ತಿದ್ದಾನೆ...!!
ಒಬ್ಬನೇ ಬ್ರಹ್ಮ ಒಂದು ಕಡೆ ಪರ ಇನ್ನೊಂದೆಡೆ ವಿರೊಧಾಭಾಸ ಮಾಡುತ್ತಿದ್ದಾನೆ..!!

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ಮೂರ್ತಿ ಅಥವಾ ದೇವಾಲಯಗಳೇ ನಮ್ಮ ಉಪಾಸನೆಗೆ ಏಕೆ ಬೇಕು ಎಂಬುದಕ್ಕೆ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಯ ಕಥೆಯೊಂದು ದೃಷ್ಟಾಂತ (ಕಥೆ ನಿಜವೋ ಸುಳ್ಳೋ ಗೊತ್ತಿಲ್ಲ, ವಿಚಾರವಂತೂ ಗಮನೀಯ..!)
ಒಮ್ಮೆ ರಾಮಕೃಷ್ಣರಲ್ಲಿಗೆ , ಎಂದಿನಂತೇ ಪ್ರವಚನ ಕೇಳಲು ಬರುತ್ತಿದ್ದ ಭಕ್ತನೊಬ್ಬ ಬಂದ. ಪ್ರವಚನದ ಬಳಿಕ ಕೈ ಮುಗಿದು ಕೇಳಿದ.. " ಸ್ವಾಮೀ.. ನಿನ್ನೆ ತಮ್ಮ ಪ್ರವಚನದಲ್ಲಿ ದೇವರು ಸರ್ವಾಂತರ್ಯಾಮಿ. ಎಲ್ಲೆಡೆಯೂ ದೇವರಿದ್ದಾನೆ. ಅದಕ್ಕಾಗಿ ಭಗವಂತನನ್ನು ಹುಡುಕಿ ಎಲ್ಲೋ ಹೋಗಬೇಕಿಲ್ಲ ಎಂದಿರಿ. ಆದರೆ ಇಂದು ದೇವರನ್ನು ಪತ್ರ ಪುಷ್ಪಾದಿಗಳಿಂದ ಪೂಜಿಸಬೇಕು, ದೇವಸ್ಥಾನಗಳಿಗೆ ಹೋಗಬೇಕು, ಅಲ್ಲಿ ಭಗವದಾರಾಧನೆ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎನ್ನುತ್ತೀರೀ.. ಹಾಗಾದರೆ ದೇವಾಲಯದಲ್ಲಿಯೇ ದೇವರಿರೋದಾ..? " ಎಂದಾಗ ಪರಮಹಂಸರು ಅವನಿಗೆ ಒಂದು ಸೈಕಲ್ ತರುವುದಕ್ಕೆ ಹೇಳಿದರು (ಆಗ ಸೈಕಲ್ ಇತ್ತಾ..? ಎಂದು ಪ್ರಶ್ನಿಸಬೇಡಿ...!) ಅದನ್ನು ತುಳಿಯಲು ಹೇಳಿದರು... ಅವನು ತುಳಿದ.. ನಂತರ ಸೈಕಲ್ಲನ್ನು ಹತ್ತಿರ ತರಹೇಳಿ ಅದರ ಟಟ್ಯೂಬಿನೊಳಗಿಂದ ಗಾಳಿಯನ್ನು ಹೊರತೆಗೆದರು...! ಮತ್ತೆತುಳಿಯಲು ಹೇಳಿದರು...!
ಆಗ ಆ ಭಕ್ತ ಆಗುವುದಿಲ್ಲ.. ಗಾಳಿ ಇಲ್ಲದೇ ಮುಂದೆ ತುಳಿಯುವುದು ಸಾಧ್ಯವಿಲ್ಲ. ಎಂದ. ಆಗ ರಾಮಕೃಷ್ಣರು ...ನಿನ್ನ ಪ್ರಶ್ನೆಗೆ ಇದೇ ಉತ್ತರ ಎನ್ನುತ್ತಾ... ವಾತಾವರಣದಲ್ಲಿ ಎಲ್ಲ ಕಡೆಯೂ ಗಾಳಿ ಇದ್ದರೂ ಚಕ್ರದ ಟ್ಯೂಬಿನೊಳಕ್ಕೆ ಹೇಗೆ ಗಾಳಿಯನ್ನು ಒತ್ತಡದಲ್ಲಿ ತುಂಬಿದರೆ ಮಾತ್ರ ಸೈಕಲ್ ಚಲಾಯಿಸಲು ಸಾಧ್ಯವೋ ಅದೇ ರೀತಿ ಭಗವಂತ ಅಣು-ರೇಣು - ತೃಣ -ಕಾಷ್ಟ ಹೀಗೇ ಸರ್ವಾಂತರ್ಯಾಮಿಯಾಗಿದ್ದರೂ ಅವನನ್ನು ಶಕ್ತಿ ಕೇಂದ್ರವಾಗಿ ನೋಡಲುನಮಗೆ ದೇವಾಲಯಗಳು, ಮೂರ್ತಿಗಳೂ ಬೇಕು. ಎಂದರು..
ಇದು ಕಥೆ..

ರಾಮು ಎಂ ಎಸ್ Gospel of Shri Ramakrishna Paramahamsa ದಲ್ಲಿ ಉಲ್ಲೇಖವಿದೆ

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ಆಯಸ್ಸು ಹೆಚ್ಚಿದಷ್ಟೂ ಈ ಮನುಷ್ಯ ಪ್ರಾಣಿ ಪಾಪವನ್ನೇ ಮಾಡುತ್ತಾನೆ ಬಿಟ್ರೆ ಪುಣ್ಯಕಾರ್ಯ ಮಾಡೋದಿಲ್ಲ ಅಂತ ಗೊತ್ತಾದದ ಮೇಲೆ ಭಗವಂತ ಇವನಿಗೆ ಆಯಸ್ಸನ್ನೇ ಕಡಿಮೆ ಮಾಡಿಬಿಟ್ಟ...! 100-120 ವರ್ಷ ಬದುಕುತ್ತಿದ್ದವ ಈಗೀಗ 60 ಕ್ಕೇಗೊಟಕ್...
ಅದನ್ನೇ ಮೊನ್ನೆ ಮೋದೀಯವರು ಮಾಡಿದ್ದು... ನೋಟುಗಳು ಹೆಚ್ಚೆಚ್ಚು ಇದ್ದಷ್ಟೂ ಈ ಕೊಳಕು ಮನುಷ್ಯರು ಕಳತನ ಮಾಡೋದೇ ಹೆಚ್ಚಾಗ್ತಿರೋದನ್ನು ನೋಡಿದ ಮೋದಿಯವರು ಇರೋ ನೋಟನ್ನೇ 'ಬ್ಯಾನ್ ' ಮಾಡಿದ್ರು...!
Deepak Hv ಶಂಭೌ ಮಧ್ಯಗತೇ ಹರೀನ ಹರಭೂದೇವ್ಯೋ ಹರೌ ಶಂಕರೇಭಾಸ್ಯೇನಾಗಸುತಾ ರವೌ ಹರಗಣೇಶಾಂಬಿಕಾಃ ಸ್ಥಾಪಿತಾಃ।

ದೇವ್ಯಾಂ ವಿಷ್ಣುಹರೇಭವಕ್ತ್ರರವಯೋ ಲಂಬೋದರೇಜೇಶ್ವರೇನಾರ್ಯಾಃ ಶಂಕರಭಾಗತೋತಿ ಸುಖದಾ ವ್ಯಾಸ್ತಾಸ್ತು ಹಾನಿಪ್ರದಾಃ।
ಶಿವಪಂಚಾಯತನದಲ್ಲಿ ಶಿವ ಮಧ್ಯ ಹರಿ ಈಶಾನ್ಯ ಸೂರ್ಯ ಆಗ್ನೇಯ,ಗಣೇಶ ನೈರುತ್ಯ,ದುರ್ಗೆ ವಾಯವ್ಯ

ವಿಷ್ಣು ಪಂಚಾಯತನದಲ್ಲಿ ವಿಷ್ಣು ಮಧ್ಯ ಶಿವ+ಗಣಪತಿ+ಸೂರ್ಯ+ದುರ್ಗೆ (ಈಶಾನ್ಯ ದಿಕ್ಕಿನಿಂದ)

ಸೂರ್ಯ ಪಂಚಾಯತನ ಸೂರ್ಯ ಮಧ್ಯ ಶಿವ+ಗಣಪತಿ+ವಿಷ್ನು+ದುರ್ಗೆ (ಈಶಾನ್ಯ ದಿಕ್ಕಿನಿಂದ)

ದುರ್ಗಾ ಪಂಚಾಯತನ ದುರ್ಗೆ ಮಧ್ಯ ವಿಷ್ಣು+ಶಿವ+ಗಣಪತಿ+ಸೂರ್ಯ ((ಈಶಾನ್ಯ ದಿಕ್ಕಿನಿಂದ)

ಗಣಪತಿ ಪಂಚಾಯತನ ಗಣಪತಿ ಮಧ್ಯ, ವಿಷ್ಣು+ಶಿವ+ಸೂರ್ಯ+ದುರ್ಗೆ ((ಈಶಾನ್ಯ ದಿಕ್ಕಿನಿಂದ)

Venkataramana Bhat ಒಂಟಿ ಕೊಪ್ಪಲ್ ಪಂಚಾಂಗದಲ್ಲಿ ಕೊಟ್ಟಿರುವ ರೀತಿಗೂ ಶಂಕರಾಚಾರ್ಯರ ಪೂಜಾ ಕ್ರಮಕ್ಕೂ ವ್ಯತ್ಯಾಸ ಇದೆಯೇ?

ನಗುತಾ ನಲಿ ನಲಿ ಹನ್ನೊಂದನೇ ದಿಕ್ಕಿನಲ್ಲಿರುತ್ತಾನೆ. ಚಲೊ ಉಡುಪಿ.   

Shankar Bhatt Katte " ಭ್ಋಂಗರಾಜಾಂಶಕೇ ವಾಪಿ ಪಾವಕೇತು ವಿನಾಯಕಮ್ " 
ಆಧಾರ - ಮಯಮತ ಎಂಬ ಭಾರತದ ಅತಿ ಪುರಾತನವಾದ ವಾಸ್ತುಗ್ರಂಥ

Vishwanatha Sharma ಪೂರ್ಣಸ್ಯಾವಹನಂ ಕುತ್ರ?
(ಸ್ಥಾನಮಪಿ)






Friday 4 November 2016

ಕಾಳಗುಜ್ಜೆನಿಯಾ - ಅರಸಿ

ಕ್ರಿ. ಶ ಸುಮಾರು ಐದನೆಯ ಶತಮಾನದಲ್ಲಿ ಕದಂಬ ವಂಶದ ರಾಜ ರವಿವರ್ಮನ ಶಾಸನ ಇದು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೆಳಗುಂದಿ ಅಥವಾ ಕೆಳಗುಂದ್ಲಿ ಎನ್ನುವ ಪ್ರದೇಶದಲ್ಲಿದ್ದ ಶಾಸನ ಶಾಸನದ ಕೆಲವು ಅಕ್ಷರಗಳು ಕಾಣಿಸುತ್ತಿಲ್ಲ. ಆದರೂ ಕನ್ನಡದ ಮಟ್ಟಿಗೆ ಕದಂಬರ ಈ ಶಾಸನ ಅತ್ಯಂತ ಮಹತ್ವದ್ದು ಎನ್ನಬಹುದಾಗಿದೆ ಮೊದಲನೆಯದಾಗಿ ಇದು ಸಂಪೂರ್ಣ ಕನ್ನಡದ ಸೊಗಡನ್ನು ಹೊತ್ತಿದ್ದು ಇದು ದ್ವಿಭಾಷಾ ಶಾಸನಗಳ ಸಾಲಿನಿಂದ ದೂರ ಉಳಿದಿದೆ. ಹಾಗೆಯೇ ಇನ್ನೊಂದು ಮಹತ್ವದ ವಿಷಯ ಅಂದರೆ ಇದು ಕನ್ನಡದಲ್ಲಿನ "ಅರಸಿ" ಪದ ಮೊತ್ತ ಮೊದಲ ಬಾರಿಗೆ ಬಂದಿದೆ. ಕೆಳಗುಂದಿಯನ್ನು ಕಾಗುಜ್ಜೆನಿ ಅನ್ನುವ ಹೆಸರಿನಿಂದ ಕರೆದಿರಬಹುದು.