Search This Blog

Sunday 13 November 2016

ಶಂಕರಾಚಾರ್ಯರಿಂದ ಪರಿಚಯಿಸಲ್ಪಟ್ಟ ಪಂಚಾಯತನ ದಲ್ಲಿ ಗಣೆಶ ಯಾವ ದಿಕ್ಕಿನಲ್ಲಿರುತ್ತಾನೆ ?

ಶಾಕಾಬ್ದೇ ಲಿಖ್ಯಮಾನೇ ಮುನಿ ರಸ ಮನುಭಿರ್ಮಂಡಪಂ ಶೈಲ ಸಾರೈರ್ಮುಕ್ತೈ ನಿರ್ಮಾಯ ಭ
ಕ್ತ್ಯಾಧೃತ ವಿಬುಧ ಗಣಂ ಶ್ರೀ ಮಹೇಂದ್ರೋತ್ರ ಸಾಕ್ಷಾತ್ ಮಧ್ಯೇ ವಿಷ್ಣುಂ ಕೃಶಾನೋರ್ದ್ದಿ
ಶಿ ದಿವಸ್ಕರಂ ನೈರೃತೇ ವಿಘ್ನರಾಜಂ ವಾಯವ್ಯೇ ಶೈಲಪುತ್ರೀಂ ಹರಹರಿತಿ ಸೌರೈರ್ವಂದಿ
ತಂ ವಿಶ್ವನಾಥಂ ಶ್ರೀ ಗೋವಿಂದ ಮಿಶ್ರಸ್ಯ ನೀಲೋಪಲೇನ ಘಟಿತೋ ಮಠ ಏಶ ಯ
ಸ್ಯ ಸಂಘರ್ಷ್ಣಾದುಪಚಿತಾ ಕಿಲ ನೀಲ ಮೂರ್ತಿಃ ಅತನ್ವತೀ ವತ ವೃತೈವ ಕಲಂಕ ವಾದಂ
ವಿಂಬೇ ವಿಧೋರ್ವಿಮಲ ಭಾಸಿ ವಿಭಾತಿ ರೇಖಾ || ಶ್ರೀ ಶತಾವಧಾನಸ್ಯ ||

ಇದು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ವಾರಿಯಲ್ಲಿನ ಶಾಸನ. ಪಂಚಾಯತನ ಪೂಜಾವಿಧಾನದಲ್ಲಿ ಇದನ್ನು ನಿರ್ಮಿಸಲಾದ ಮಠ ಒಂದರಲ್ಲಿನ ದೇವಾಲಯವನ್ನು ನಿರ್ದೇಶಿಸಲಾಗಿದೆ ಇದಕ್ಕೆ ನಾನು ಇಲ್ಲಿ ಹೆಚ್ಚೇನನ್ನೂ ಬರೆಯಲಾರೆ. ಇದರ ಲಿಪಿ ಬಂಗಾಳಿ ಸುಮಾರು ೧೫ನೇ ಶತಮಾನದ ಲಿಪಿ.

ಶಂಕರಾಚಾರ್ಯರಿಂದ ಪರಿಚಯಿಸಲ್ಪಟ್ಟ ಪಂಚಾಯತನ ದಲ್ಲಿ ಗಣೆಶ ಯಾವ ದಿಕ್ಕಿನಲ್ಲಿರುತ್ತಾನೆ ?
ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು , ಈ ಐದೂ ದೇವತೆಗಳ ಮೂರ್ತಿಗಳಿದ್ದಲ್ಲಿ ಅಥವಾ ಶಿಲೆಗಳಿದ್ದಲ್ಲಿ ಅವರ ಮನೆ ದೇವತೆಯ ಮೂರ್ತಿ ಯಾ ಶಿಲೆಯನ್ನು ಮಧ್ಯದಲ್ಲಿಟ್ಟು ಉಳಿದವುಗಳನ್ನು ಈ ಕೆಳಗಿನ ಕ್ರಮದಲ್ಲಿಡುವುದು ಶಾಸ್ತ್ರ ಪದ್ದತಿ. ಪೂಜೆಗೆ ಸಾಮಾನ್ಯವಾಗಿ ಉತ್ತರ ಅಥವಾ ಪೂರ್ವಕ್ಕೆ ಅಭಿಮುಖವಾಗಿ ಕುಳಿತುಕೊಳ್ಳುವುದು. ದೇವರ ಮಂಟಪ ಪಶ್ಚಿಮ ಅಭಿಮುಖವಾಗಿದ್ದರೆ ಮಂಟಪಕ್ಕೇ ಎದುರಾಗಿ ಪಶ್ಚಿಮಕ್ಕೆ ಆಭಿಮುಖವಾಗಿ ಕುಳಿತುಕೊಳ್ಳಬೇಕಾಗುತ್ತೆ. ಆದ್ದರಿಂದ ದೇವರ ಮಂಟಪವು ಪೂರ್ವ ಅಥವಾ ಉತ್ತರ ಅಭಿಮುಖವಾಗಿ ಇರುವುದು ಒಳ್ಳೆಯದು. ಆಗ ದೇವರ ಮಂಟಪವು ಎಡಕ್ಕೆ ಬರುವಂತೆ ಇದ್ದು ಪೂಜೆಗೆ ಅನುಕೂಲವಾಗುವುದು
ಪಂಚಾಯತನ ದೇವತೆಗಳು ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು. ಇವುಗಳಲ್ಲಿ ಆಯಾ ದೇವತೆಗಳ ಭಕ್ತರು ಮುಖ್ಯ ದೇವತೆಯನ್ನು ಮಧ್ಯದಲ್ಲಿಟ್ಟು ಉಳಿದ ದೇವತೆಗಳನ್ನು ಸುತ್ತಲೂ ಇಟ್ಟು ಪೂಜಿಸಬೇಕು. ಈ ಐದೂ ದೆವತೆಗಳಿಗೆ ಬೇರೆ ಬೇರೆ ಬಗೆಯ ಶಿಲೆಗಳಿವೆ. ಮೂರ್ತಿಗಳ ಬದಲು ಅವುಗಳನ್ನಿಟ್ಟು ಅಭಿಷೇಕ ಪೂಜೆ ಮಾಡುವ ಪದ್ಧತಿಗಳಿವೆ.
ವಿಷ್ಣು ಕೇಂದ್ರ ; ಶಿವ -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಗಣಪತಿ ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಸೂರ್ಯ ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ
ಶಿವ ಕೇಂದ್ರ : -ವಿಷ್ಣು ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಸೂರ್ಯ- ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಗಣಪತಿ -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.
ಸೂರ್ಯಕೇಂದ್ರ : ಶಿವ -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಗಣಪತಿ -ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; -ವಿಷ್ಣು -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.
ಅಂಬಿಕಾ ಕೇಂದ್ರ : -ವಿಷ್ಣು -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಶಿವ -ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಗಣಪತಿ -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ;: ಸೂರ್ಯ- ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.
ಗಣಪತಿ ಕೇಂದ್ರ : -ವಿಷ್ಣು -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಶಿವ -ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಸೂರ್ಯ -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ ; ಅಂಬಿಕಾ - ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ಅತ್ಯಾಶ್ಚರ್ಯ... ಅದ್ವೈತದ ಅಮೃತ ಸುಧೆಯನ್ನು ಶಿಷ್ಯಕೋಟಿಗೆ ಉಣಿಸಿದ ಮಹಾಮಹಿಮ ಶ್ರೀ ಶಂಕರಭಗವತ್ಪಾದರು ದೇವರುಗಳನ್ನು ಮಾತ್ರ ಹದ್ನೆಂಟು ಮಾಡಿಕೊಟ್ಟು ಹೋದರಲ್ಲಾ..!


Anantha Narayana Bhat ಕೆಲವೆಡೆ ಸ್ಕಂದನೂ ಬರುತ್ತಾನಲ್ಲಾ?

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ನನಗದೆಲ್ಲಾ ಗೊತ್ತಿಲ್ಲ... ಹೇ..ಭಗವಂತಾ.... ಎಲ್ಲ ಒಳ್ಳೇಯದು ಮಾಡಪ್ಪಾ.. ಅಂತ ಕೇಳಿಕೊಳ್ತೇನೆ ಅಷ್ಟೇ.

Guruprasad Kanle ಶಂಕರಭಗವತ್ಪಾದರು ಅಹಂ ಬ್ರಹ್ಮಾಸ್ಮಿ ಅಂತ ಹೇಳಿಯೂ ಮೂರ್ತಿ ಪೂಜೆಗೂ ವ್ಯವಸ್ಥೆ ಮಾಡಿದರು.
ಕರ್ಮಮಾರ್ಗ , ಭಕ್ತಿಮಾರ್ಗಗಳು ಸುಲಭ , ಜ್ಞಾನಮಾರ್ಗ ಕಷ್ಟ ಅಂತ ಗೊತ್ತಿತ್ತು ಅವರಿಗೆ..
ಅಲ್ವೇ?

Guruprasad Kanle ನಾನು ಏನು ಅಂತ ಗೊತ್ತಾದ್ರೆ ಬೇರೆ ದೇವರು ಯಾಕೆ..?
ಗೊತ್ತಾಗ್ಬೇಕಲ್ಲ ನಮ್ಮಂತ ಪಾಪಿಗಳಿಗೆ.

ರಾಮು ಎಂ ಎಸ್ ಸುಗುಣ ಬ್ರಹ್ಮೊಪಾಸನೇ ಬೇಕೆ ಬೇಕು..
ಮುಕ್ತ ಪುರುಷನನ್ನು ಧ್ಯಾನತ್ಿಸು, ಗುಣಾನುಸಂದಾನ ಮಾಡುತ್ತ ಸಾತ್ವಿಕದೆಡೆಗೆ ತೆರಳಲು ಬೇಕು.
External ದೇವರು / ದೇವರ ನಾಮ / ಪ್ರತೀಕ ಎಲ್ಲವು Adjective ವಿಶೇಷಣಗಳು.
ಗುಣಾನುಸಂದಾನಕ್ಕೆ
ಆದರೆ ಅದ್ವೈತ ಸಾಕ್ಷಾತ್ಕಾರಕ್ಕೆ ತ್ರಿಗುಣಗಳನ್ನು ಮೀರಿರಬೇಕು
ಅದಕ್ಕೆ ಶಿವನಿಗೆ ತ್ರಿಶೂಲ..!!

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ನಾನು ವೇದವನ್ನು ತಕ್ಕ ಮಟ್ಟಿಗೆ ಗುರುಮುಖದಿಿಂದ ಕಲಿತಿದ್ದು. ಆ ನಂತರದ ಅಧ್ಯಯನ ಓದಿ ತಿಳಿದಿದ್ದು. ಶಾಸ್ತ್ರಗಳು ವೇದದಷ್ಟು ಸುಲಭಗ್ರಾಹ್ಯವಲ್ಲ ಶಂಕರರ ಅದ್ವೈತವು ವೇದಾಂತ ಶಾಸ್ತ್ರಕ್ಕೆ ಅನ್ವಯಿಸಿಕೊಂಡಿದ್ದು. ದರ್ಶನ ಎಂದು ಕರೆಯುತ್ತಾರೆ. ಅವುಗಳಲ್ಲಿ 6 ದರ್ಶನಗಳಿವೆ. ಒಂದು ರೀತಿಯಲ್ಲಿ ಈ 6 ದರ್ಶನಗಳೂ ಭಗವಂತನನ್ನು ತಿಳಿಯುವುದಕ್ಕಾಗಿ ಇದ್ದವಲ್ಲ, ಇವು ವೇದವನ್ನು ತಿಳಿಯುವ ಭಿನ್ನ ಮಾರ್ಗಗಳು. ನ್ಯಾಯ, ಮೀಮಾಂಸ ಸಾಂಖ್ಯಾದಿಗಳ ಮೂಲಕ ವೇದವನ್ನು ಅರ್ಥೈಸುತ್ತವೆ. ಅವುಗಳಲ್ಲಿ ವೇದಾಂತವು ಭಗವದವಲಂಬನ ದರ್ಶನ.

Guruprasad Kanle ಅದೇ ನಾನು ಹೇಳಿದೆ.
ಎಲ್ಲವನ್ನೂ ಮೀರಿನಿಂತವರಿಗೆ ಅಹಂ ಬ್ರಹ್ಮಾಸ್ಮಿ ಸಾಕು.
ನಮ್ಮಂತವರಿಗೆ ದೇವೋಪಾಸನೆ ಬೇಕು.
ದೇವೋಪಾಸನೆಗಾಗಿ ಮೂರ್ತಿಯೂ ಬೇಕು.
ನಿರ್ಗುಣ ನಿರಾಕಾರವನ್ನು ಕಲ್ಪನೆ ಮಾಡಿಕೊಳ್ಳುವುದೂ ಕಷ್ಟ ನಮಗೆ

Guruprasad Kanle ನನಗಂತೂ ಏನೂ ಗೊತ್ತಿಲ್ಲ.
ಗುರುಗಳಿಗೆ ಕೈ ಮುಗಿಯೋದಷ್ಟೇ ಗೊತ್ತಿರೋದು.
ಗುರುಗಳು ಅಂದ್ರೆ ನನಗೆ ಶ್ರೀಧರರೊಬ್ಬರೇ.

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ಯಾವುದು ಏನೇ ಇದ್ದರೂ ಕೊನೇಯಲ್ಲಿ ಇರುವುದು ಹೇ.. ಭಗವಂತಾ... ಎಂಬುದು ಮಾತ್ರ.. ಏಕೆಂದರೆ ನಾಸ್ತಿ ಸಿದ್ಧಾಂತವು ಇದೂವರೆಗೆ ಬಾಳ್ಗೊಡಲಿಲ್ಲ..

Guruprasad Kanle ಗೊತ್ತಿಲ್ಲ ಅನ್ನೊದು ಗೊತ್ತಾದ್ರೆ ಸಾಕು..
ಭಗವಂತನೇ ಗತಿ ಅಂತ ಗೊತ್ತಾಗುತ್ತೆ 
ರಾಮು ಎಂ ಎಸ್ ಆಚಾರ್ಯರ ಸಿದ್ಧಾಂತ ಬ್ರಹ್ಮ ಒಂದೇ ಎನ್ನುವುದು.
ನೀನೇ ದೇವರು ಎನ್ನುವುದು.
ಯಾವಾಗ ಬ್ರಹ್ಮ ಅವಿದ್ಯೆಗೆ ಸಿಲುಕುವುದೋ ಆಗ
ಬೌತಿಕ ಪ್ರಜ್ಞೆ, ದ್ವೈತ ಭಾವದಿಂದ external ದೇವರು / ಮುಕ್ತ ಪುರುಷರ ಹುಡುಕಾಟ.
ಅದ್ವೈತ ಸಾಧಿಸಲು ಏಳು ಮೆಟ್ಟಿಲು ಹತ್ತಬೇಕು... ಅದು ಸುಲಭವಲ್ಲ ಎಂದೇ ಭಕ್ತಿ ಮಾರ್ಗದಿಂದ ಕುಂಡಲಿ ಜಾಗೃತಿ...

Guruprasad Kanle ನಾನೇ ದೇವರು ಅಂತ..

ರಾಮು ಎಂ ಎಸ್ ಹೌದು...
ಇರುವುದು ಒಂದೇ ಆತ್ಮ (ಬ್ರಹ್ಮ / ಮಾಯೆ)
ಒಬ್ಬನೇ ಬ್ರಹ್ಮ ಸಾವಿರಾರು ಅಕೌಂಟುಗಳ ಮೂಲಕ facebook ಪೋಸ್ಟು ಹಾಕುತ್ತಿದ್ದಾನೆ...!!
ಒಬ್ಬನೇ ಬ್ರಹ್ಮ ಒಂದು ಕಡೆ ಪರ ಇನ್ನೊಂದೆಡೆ ವಿರೊಧಾಭಾಸ ಮಾಡುತ್ತಿದ್ದಾನೆ..!!

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ಮೂರ್ತಿ ಅಥವಾ ದೇವಾಲಯಗಳೇ ನಮ್ಮ ಉಪಾಸನೆಗೆ ಏಕೆ ಬೇಕು ಎಂಬುದಕ್ಕೆ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಯ ಕಥೆಯೊಂದು ದೃಷ್ಟಾಂತ (ಕಥೆ ನಿಜವೋ ಸುಳ್ಳೋ ಗೊತ್ತಿಲ್ಲ, ವಿಚಾರವಂತೂ ಗಮನೀಯ..!)
ಒಮ್ಮೆ ರಾಮಕೃಷ್ಣರಲ್ಲಿಗೆ , ಎಂದಿನಂತೇ ಪ್ರವಚನ ಕೇಳಲು ಬರುತ್ತಿದ್ದ ಭಕ್ತನೊಬ್ಬ ಬಂದ. ಪ್ರವಚನದ ಬಳಿಕ ಕೈ ಮುಗಿದು ಕೇಳಿದ.. " ಸ್ವಾಮೀ.. ನಿನ್ನೆ ತಮ್ಮ ಪ್ರವಚನದಲ್ಲಿ ದೇವರು ಸರ್ವಾಂತರ್ಯಾಮಿ. ಎಲ್ಲೆಡೆಯೂ ದೇವರಿದ್ದಾನೆ. ಅದಕ್ಕಾಗಿ ಭಗವಂತನನ್ನು ಹುಡುಕಿ ಎಲ್ಲೋ ಹೋಗಬೇಕಿಲ್ಲ ಎಂದಿರಿ. ಆದರೆ ಇಂದು ದೇವರನ್ನು ಪತ್ರ ಪುಷ್ಪಾದಿಗಳಿಂದ ಪೂಜಿಸಬೇಕು, ದೇವಸ್ಥಾನಗಳಿಗೆ ಹೋಗಬೇಕು, ಅಲ್ಲಿ ಭಗವದಾರಾಧನೆ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎನ್ನುತ್ತೀರೀ.. ಹಾಗಾದರೆ ದೇವಾಲಯದಲ್ಲಿಯೇ ದೇವರಿರೋದಾ..? " ಎಂದಾಗ ಪರಮಹಂಸರು ಅವನಿಗೆ ಒಂದು ಸೈಕಲ್ ತರುವುದಕ್ಕೆ ಹೇಳಿದರು (ಆಗ ಸೈಕಲ್ ಇತ್ತಾ..? ಎಂದು ಪ್ರಶ್ನಿಸಬೇಡಿ...!) ಅದನ್ನು ತುಳಿಯಲು ಹೇಳಿದರು... ಅವನು ತುಳಿದ.. ನಂತರ ಸೈಕಲ್ಲನ್ನು ಹತ್ತಿರ ತರಹೇಳಿ ಅದರ ಟಟ್ಯೂಬಿನೊಳಗಿಂದ ಗಾಳಿಯನ್ನು ಹೊರತೆಗೆದರು...! ಮತ್ತೆತುಳಿಯಲು ಹೇಳಿದರು...!
ಆಗ ಆ ಭಕ್ತ ಆಗುವುದಿಲ್ಲ.. ಗಾಳಿ ಇಲ್ಲದೇ ಮುಂದೆ ತುಳಿಯುವುದು ಸಾಧ್ಯವಿಲ್ಲ. ಎಂದ. ಆಗ ರಾಮಕೃಷ್ಣರು ...ನಿನ್ನ ಪ್ರಶ್ನೆಗೆ ಇದೇ ಉತ್ತರ ಎನ್ನುತ್ತಾ... ವಾತಾವರಣದಲ್ಲಿ ಎಲ್ಲ ಕಡೆಯೂ ಗಾಳಿ ಇದ್ದರೂ ಚಕ್ರದ ಟ್ಯೂಬಿನೊಳಕ್ಕೆ ಹೇಗೆ ಗಾಳಿಯನ್ನು ಒತ್ತಡದಲ್ಲಿ ತುಂಬಿದರೆ ಮಾತ್ರ ಸೈಕಲ್ ಚಲಾಯಿಸಲು ಸಾಧ್ಯವೋ ಅದೇ ರೀತಿ ಭಗವಂತ ಅಣು-ರೇಣು - ತೃಣ -ಕಾಷ್ಟ ಹೀಗೇ ಸರ್ವಾಂತರ್ಯಾಮಿಯಾಗಿದ್ದರೂ ಅವನನ್ನು ಶಕ್ತಿ ಕೇಂದ್ರವಾಗಿ ನೋಡಲುನಮಗೆ ದೇವಾಲಯಗಳು, ಮೂರ್ತಿಗಳೂ ಬೇಕು. ಎಂದರು..
ಇದು ಕಥೆ..

ರಾಮು ಎಂ ಎಸ್ Gospel of Shri Ramakrishna Paramahamsa ದಲ್ಲಿ ಉಲ್ಲೇಖವಿದೆ

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ಆಯಸ್ಸು ಹೆಚ್ಚಿದಷ್ಟೂ ಈ ಮನುಷ್ಯ ಪ್ರಾಣಿ ಪಾಪವನ್ನೇ ಮಾಡುತ್ತಾನೆ ಬಿಟ್ರೆ ಪುಣ್ಯಕಾರ್ಯ ಮಾಡೋದಿಲ್ಲ ಅಂತ ಗೊತ್ತಾದದ ಮೇಲೆ ಭಗವಂತ ಇವನಿಗೆ ಆಯಸ್ಸನ್ನೇ ಕಡಿಮೆ ಮಾಡಿಬಿಟ್ಟ...! 100-120 ವರ್ಷ ಬದುಕುತ್ತಿದ್ದವ ಈಗೀಗ 60 ಕ್ಕೇಗೊಟಕ್...
ಅದನ್ನೇ ಮೊನ್ನೆ ಮೋದೀಯವರು ಮಾಡಿದ್ದು... ನೋಟುಗಳು ಹೆಚ್ಚೆಚ್ಚು ಇದ್ದಷ್ಟೂ ಈ ಕೊಳಕು ಮನುಷ್ಯರು ಕಳತನ ಮಾಡೋದೇ ಹೆಚ್ಚಾಗ್ತಿರೋದನ್ನು ನೋಡಿದ ಮೋದಿಯವರು ಇರೋ ನೋಟನ್ನೇ 'ಬ್ಯಾನ್ ' ಮಾಡಿದ್ರು...!
Deepak Hv ಶಂಭೌ ಮಧ್ಯಗತೇ ಹರೀನ ಹರಭೂದೇವ್ಯೋ ಹರೌ ಶಂಕರೇಭಾಸ್ಯೇನಾಗಸುತಾ ರವೌ ಹರಗಣೇಶಾಂಬಿಕಾಃ ಸ್ಥಾಪಿತಾಃ।

ದೇವ್ಯಾಂ ವಿಷ್ಣುಹರೇಭವಕ್ತ್ರರವಯೋ ಲಂಬೋದರೇಜೇಶ್ವರೇನಾರ್ಯಾಃ ಶಂಕರಭಾಗತೋತಿ ಸುಖದಾ ವ್ಯಾಸ್ತಾಸ್ತು ಹಾನಿಪ್ರದಾಃ।
ಶಿವಪಂಚಾಯತನದಲ್ಲಿ ಶಿವ ಮಧ್ಯ ಹರಿ ಈಶಾನ್ಯ ಸೂರ್ಯ ಆಗ್ನೇಯ,ಗಣೇಶ ನೈರುತ್ಯ,ದುರ್ಗೆ ವಾಯವ್ಯ

ವಿಷ್ಣು ಪಂಚಾಯತನದಲ್ಲಿ ವಿಷ್ಣು ಮಧ್ಯ ಶಿವ+ಗಣಪತಿ+ಸೂರ್ಯ+ದುರ್ಗೆ (ಈಶಾನ್ಯ ದಿಕ್ಕಿನಿಂದ)

ಸೂರ್ಯ ಪಂಚಾಯತನ ಸೂರ್ಯ ಮಧ್ಯ ಶಿವ+ಗಣಪತಿ+ವಿಷ್ನು+ದುರ್ಗೆ (ಈಶಾನ್ಯ ದಿಕ್ಕಿನಿಂದ)

ದುರ್ಗಾ ಪಂಚಾಯತನ ದುರ್ಗೆ ಮಧ್ಯ ವಿಷ್ಣು+ಶಿವ+ಗಣಪತಿ+ಸೂರ್ಯ ((ಈಶಾನ್ಯ ದಿಕ್ಕಿನಿಂದ)

ಗಣಪತಿ ಪಂಚಾಯತನ ಗಣಪತಿ ಮಧ್ಯ, ವಿಷ್ಣು+ಶಿವ+ಸೂರ್ಯ+ದುರ್ಗೆ ((ಈಶಾನ್ಯ ದಿಕ್ಕಿನಿಂದ)

Venkataramana Bhat ಒಂಟಿ ಕೊಪ್ಪಲ್ ಪಂಚಾಂಗದಲ್ಲಿ ಕೊಟ್ಟಿರುವ ರೀತಿಗೂ ಶಂಕರಾಚಾರ್ಯರ ಪೂಜಾ ಕ್ರಮಕ್ಕೂ ವ್ಯತ್ಯಾಸ ಇದೆಯೇ?

ನಗುತಾ ನಲಿ ನಲಿ ಹನ್ನೊಂದನೇ ದಿಕ್ಕಿನಲ್ಲಿರುತ್ತಾನೆ. ಚಲೊ ಉಡುಪಿ.   

Shankar Bhatt Katte " ಭ್ಋಂಗರಾಜಾಂಶಕೇ ವಾಪಿ ಪಾವಕೇತು ವಿನಾಯಕಮ್ " 
ಆಧಾರ - ಮಯಮತ ಎಂಬ ಭಾರತದ ಅತಿ ಪುರಾತನವಾದ ವಾಸ್ತುಗ್ರಂಥ

Vishwanatha Sharma ಪೂರ್ಣಸ್ಯಾವಹನಂ ಕುತ್ರ?
(ಸ್ಥಾನಮಪಿ)






Friday 4 November 2016

ಕಾಳಗುಜ್ಜೆನಿಯಾ - ಅರಸಿ

ಕ್ರಿ. ಶ ಸುಮಾರು ಐದನೆಯ ಶತಮಾನದಲ್ಲಿ ಕದಂಬ ವಂಶದ ರಾಜ ರವಿವರ್ಮನ ಶಾಸನ ಇದು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೆಳಗುಂದಿ ಅಥವಾ ಕೆಳಗುಂದ್ಲಿ ಎನ್ನುವ ಪ್ರದೇಶದಲ್ಲಿದ್ದ ಶಾಸನ ಶಾಸನದ ಕೆಲವು ಅಕ್ಷರಗಳು ಕಾಣಿಸುತ್ತಿಲ್ಲ. ಆದರೂ ಕನ್ನಡದ ಮಟ್ಟಿಗೆ ಕದಂಬರ ಈ ಶಾಸನ ಅತ್ಯಂತ ಮಹತ್ವದ್ದು ಎನ್ನಬಹುದಾಗಿದೆ ಮೊದಲನೆಯದಾಗಿ ಇದು ಸಂಪೂರ್ಣ ಕನ್ನಡದ ಸೊಗಡನ್ನು ಹೊತ್ತಿದ್ದು ಇದು ದ್ವಿಭಾಷಾ ಶಾಸನಗಳ ಸಾಲಿನಿಂದ ದೂರ ಉಳಿದಿದೆ. ಹಾಗೆಯೇ ಇನ್ನೊಂದು ಮಹತ್ವದ ವಿಷಯ ಅಂದರೆ ಇದು ಕನ್ನಡದಲ್ಲಿನ "ಅರಸಿ" ಪದ ಮೊತ್ತ ಮೊದಲ ಬಾರಿಗೆ ಬಂದಿದೆ. ಕೆಳಗುಂದಿಯನ್ನು ಕಾಗುಜ್ಜೆನಿ ಅನ್ನುವ ಹೆಸರಿನಿಂದ ಕರೆದಿರಬಹುದು. 






Saturday 22 October 2016

ಹೆಸರು ಮಾತ್ರ ಕುಬ್ಜ ...ಸಾಹಿತ್ಯದಲ್ಲಿ ಅಮೋಘ

ಶಾಂತಿವರ್ಮ ಕದಂಬ ರಾಜರುಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಿಕೊಂಡಿದ್ದ ಮತ್ತು ಪಿತೃವಾಕ್ಯವನ್ನು ನೆರವೇರಿಸಿದವರಲ್ಲಿ ಪ್ರಮುಖನಾಗಿದ್ದ. ಕಾಕುತ್ಸವರ್ಮನ ಕಾಲದಲ್ಲಿ ಸ್ತಾನಗುಂದೂರಿನಲ್ಲಿ (ತಾಳಗುಂದ) ನಿರ್ಮಿಸಿದ ಕೆರೆಯ ನೆನಪಿಗೆ ಶಾಂತಿವರ್ಮ ಬರೆಸಿದ ಶಾಸನ ಕಾವ್ಯ ಪ್ರಪಂಚದ ಅದ್ಭುತಗಳಲ್ಲೊಂದು. ಕುಬ್ಜನೆನ್ನುವ ಕವಿಯನ್ನು ಬಳಸಿಕೊಂಡು ತನ್ನ ಹಿರಿಯರೆಲ್ಲರ ಕಾರ್ಯಗಳನ್ನು ಸ್ಮರಿಸಿದ ಶಾಸನ ರಚನೆಯಲ್ಲಿ ಕುಬ್ಜನು ೧ನೇ ಶ್ಲೋಕದಿಂದ ೨೪ನೇ ಶ್ಲೋಕದ ತನಕ ಮಾತ್ರಾ ಸಮಕ ವಿಶೇಷ ಅಥವಾ ಮಿಶ್ರ ಗಣ ಗೀತಿಕಾ ಛಂದಸ್ಸನ್ನು ಬಳಸಿಕೊಂಡಿದ್ದರೆ, ೨೫ ಮತ್ತು ೨೬ ಪುಷ್ಪಗೀತಿಕಾ ಉಪಯೋಗಿಸಿದ್ದಾನೆ, ಹಾಗೆಯೇ ಶಾರ್ದೂಲವಿಕ್ರೀಡಿತಾ, ವಸಂತ ತಿಲಕ, ಮಂದಾಕ್ರಾಂತಾ ಮತ್ತು ಇನ್ನಿತರ ಛಂದಸ್ಸುಗಳನ್ನು ಬಳಸಿಕೊಂಡಿದ್ದಾನೆ. ಕವಿಯೊಬ್ಬ ಸಾಹಿತ್ಯದ ಆಳಕ್ಕಿಳಿದರೆ ಹೇಗೆ ಕೃತಿ ರಚಿಸುತ್ತಾನೆ ಎನ್ನುವುದು ಕುಬ್ಜನಿಂದ ತಿಳಿಯುತ್ತದೆ. ಕುಬ್ಜನು ರಾಜನ ಆಜ್ಞೆಯನ್ನು ಕಾವ್ಯಾತ್ಮಕವಾಗಿ ವಿಬುಧಸಂಘಮೌಲಿ ಎನ್ನುವುದಾಗಿ ೮ನೇ ಸಾಲಿನಲ್ಲಿ ಹೇಳಿದ್ದಲ್ಲದೇ ೯ನೇ ಸಾಲಿನಲ್ಲಿ ಶ್ರುತಿ ಪಥ ನಿಪುಣ ಕವಿಃ ಎಂದಿದ್ದಾನೆ. ೧೨ನೇ ಸಾಲಿನಲ್ಲಿ ವಸಂತ ತಿಲಕಾ ಛಂದಸ್ಸನ್ನು ಬಳಸಿ ಸಂಗೀತ ನೃತ್ಯವನ್ನು ಕೊಂಡಾಡಿದ್ದಾನೆ. ಕೊನೆಯಲ್ಲಿ ತಾನು ಕುಬ್ಜನೆನ್ನುವ ಕವಿ ಈ ಶಿಲೆಯನ್ನು ಕಾವ್ಯಾತ್ಮಕವಾಗಿ ಕಾಕುಸ್ತವರ್ಮನ ಮಗನಾದ ಶಾಂತಿವರ್ಮಮಹಾರಾಜನ ಆಜ್ಞೆಯನ್ನು ಬರೆದಿರುವೆ ಎಂದಿದ್ದಾನೆ. ಮಯೂರವರ್ಮ, ಚುಟು ಶಾತಕರ್ಣಿಮುಂತಾದವರನ್ನು ಸ್ಮರಿಸಿದ ಶಾಸನ ಇದಂಬ್ರಾಹ್ಮಂ ಇದಂ ಕ್ಶಾತ್ರಂ ಎನ್ನುವುದಕ್ಕೆ ಒಂದು ನಿದರ್ಶನ ಒದಗಿಸುತ್ತದೆ.



£Á£Á «zsÀ zÀæ«t¸ÁgÀ ¸ÀªÀÄÄZÀÑÀAiÉÄõÀÄ ªÀÄvÀÛ ¢é¥ÉãÀÝç ªÀÄzÀªÁ¹vÀ UÉÆÃ¥ÀÄgÉõÀÄ
¸ÀAVÃvÀ ªÀ®ÄÎ ¤£ÁzÉõÀÄ UÀȺÉõÀÄ AiÀĸÀå  ®PÀÁëöäöåYΣÁ zsÀÈwªÀÄwà ¸ÀÄagÀA ZÀgÉêÉÄÃ||
UÀÄ¥ÁÛ¢ ¥ÁwÜðªÀ PÀįÁªÀÄÄâgÀĺÀ ¸ÀܯÁ¤ ¸ÉßúÁzÀgÀ ¥ÀætAiÀÄ ¸ÀªÀÄãçªÀÄ PÉøÀgÁtÂÀ
²æà ªÀÄ£ÀÛöå£ÉÃPÀ £ÀÈ¥À µÀlàzÀ ¸ÉëvÁ¤ AiÉÆèÉÆÃzsÀAiÀÄzÀÄÝ»vÀȢâüw©ü£ÀÈð¥ÁPÀÌðB ||




Monday 17 October 2016

ಆರ್ಯಪುರದ ನಭೂತೋ ನ ಭವಿಷ್ಯತಿ

ಸುಮಾರು ಕ್ರಿ ಶ ಏಳನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಹುಚ್ಚಪ್ಪಯ್ಯ ಗುಡಿ ಅಯ್ಯಾವೊಳೆ ಅಥವಾ ಐಹೊಳೆಯ ಗತ ಇತಿಹಾಸದ ಕುರುಹಾಗಿ ಇಂದಿಗೂ ಕಾಣಸಿಗುವಲ್ಲಿ ಪ್ರಮುಖವಾಗಿರುವಂತಹದ್ದು. ಆರ್ಯಪುರವೆಂದು ಸಂಸ್ಕೃತದಲ್ಲಿ ಕರೆಸಿಕೊಂಡ ಈ ಊರು ಅನೇಕ ಶಿಲ್ಪಿಗಳ ಆಶ್ರಯ ತಾಣ ವಾಗಿತ್ತು. ನರಸೊಬ್ಬ ಎನ್ನುವ ಪ್ರಮುಖ ಶಿಲ್ಪಿಯೊಬ್ಬ ಆಕಾಲದಲ್ಲಿನ ಅರಮನೆಯ ವಾಸ್ತುಶಾಸ್ತ್ರದಲ್ಲಿ ಅತ್ಯಂತ ಪ್ರಸಿದ್ಧ ನಾಗಿದ್ದುದು ಶಾಸನ ಒಂದರಲ್ಲಿ ಆತನನ್ನು ನಭೂತೋ ನ ಭವಿಷ್ಯತಿ ಎನ್ನುವುದಾಗಿ ಹೊಗಳಿದ್ದರಿಂದ ತಿಳಿದು ಬರುತ್ತದೆ. ಐಹೊಳೆಯ ಅನೇಕ ಕಡೆಗಳಲ್ಲಿ ಶಿಲ್ಪಿಗಳನ್ನು ಅತಿಶಯವಾಗಿ ಹೊಗಳಿರುವುದು ಹೊಗಳಿಸಿಕೊಂಡಿರುವುದು ಕಾಣ ಸಿಗುತ್ತದೆ.




Friday 7 October 2016

ಪ್ರಾಚೀನದಿಂದ ಅರ್ವಾಚೀನದೆಡೆಗೆ

ಸುಮಾರು ಕ್ರಿ. ಶ ೭ ನೇ ಶತಮಾನದಿಂದ ನಮಗೆ ಕಾಣಿಸಿಕೊಳ್ಳುವ ಸಾಂತರ ವಂಶದ ರಾಜರು, ಶಿವಮೊಗ್ಗ ಮತ್ತು ಈಗಿನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚು ಪ್ರಸಿದ್ಧರಾಗಿದ್ದರು. ಕಲೆ ವಾಸ್ತು ಶಿಲ್ಪ ಹಾಗೂ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ಕೊಟ್ಟವರು. ಅವರ ಕೊಡುಗೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಹೊಂಬುಜ ಅಥವ ಇಂದಿನ ಹುಂಚದಿಂದ ಬಂದ ಸಾಂತರ ಪ್ರಮುಖ ಆಕರ್ಷಣೀಯ ದೇಗುಲಗಳಲ್ಲಿ ಹೊಸಗುಂದ ಪ್ರಮುಖವಾದದ್ದು. ಸಾಗರ ತಾಲೂಕಿನಲ್ಲಿ ಪ್ರಕೃತಿಯ ಹಸಿರು ಸೊಬಗಿನಲ್ಲಿ ಕಲೆಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾ ಇರುವ ರಮಣೀಯ ಕ್ಷೇತ್ರಗಳಲ್ಲಿ ಒಂದು. ಶಿಲ್ಪ ಕಲೆಯ ಜೊತೆಗೆ ಅತೀ ಅಪರೂಪವಾದ ಮಿಥುನಶಿಲ್ಪವನ್ನು ಹೊಂದಿರುವ ದೇವಾಲಯಗಳಲ್ಲಿ ಹೊಸಗುಂದ ಪ್ರಮುಖವಾದದ್ದು. ಇತ್ತೀಚೆಗೆ ಇದು ನವೀಕರಣಗೊಂಡಿದ್ದರೂ ಪ್ರಾಚೀನತೆಯನ್ನು ಕಳೆದುಕೊಳ್ಳದೇ ಅರ್ವಾಚೀನ ಜಗತ್ತಿನಲ್ಲಿ ನಿಂತಿದೆ.

Thursday 6 October 2016

ಕಣಜದ ಬರಹ - ಲಿಪಿ ಸಾಹಿತ್ಯ



ಕಾ ಚಿಂತಾ ಮರಣೇ.......................ರಣೇ

ಯುದ್ಧದಲ್ಲಿನ ಜಯದಿಂದ ಜಯಲಕ್ಷ್ಮಿ ಲಭಿಸಿ ಅಭಿಮಾನಿಗಳ ಪ್ರಜೆಗಳ ನಾಗರೀಕರ ಪ್ರಶಂಸೆಗೆ ಪಾತ್ರರಾಗುತ್ತಾರೆ. ವೀರಾವೇಶದಿಂದ ಹೋರಾಡಿ ವೀರ ಮರಣವನ್ನು ಹೊಂದಿದರೆ ಸ್ವರ್ಗಪ್ರಾಪಿಯಾಗುತ್ತದೆ. ಸ್ವರ್ಗದ ಜಯಾಂಗನೆ ಒಳಿಯುತ್ತಾಳೆ. ದೇಶಕ್ಕಾಗಿ ಪ್ರಾಣ ತೆತ್ತು ದೇಶಭಿಮಾನವನ್ನು ಹೆಚ್ಚಿಸಿದಂತಾಗುತ್ತದೆ. ಈ ನಶ್ವರವಾದ ಶರೀರಕ್ಕಾಗಿ (ಒಂದು ಕ್ಷಣದಲ್ಲಿ ಧ್ವಂಸವಾಗುವ) ಈ ದೇಹಕ್ಕಾಗಿ ರಣಾಂಗಣದಲ್ಲಿ ಮರುಕ ಪಡಬಾರದು ಆಶೆಯನ್ನು ಹೊಂದಿ ರಣಾಂಗಣದಿಂದ ಹೇಡಿಯಂತೆ ಹಿಂದಿರುಗ ಬಾರದೆನ್ನುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ಶಾಸನಾಂತ್ಯದಲ್ಲಿ ಹಾಕಲಾಗುತ್ತಿತ್ತು. ಆ ಕಾಲಕ್ಕೆ ಸಾರ್ವಜನಿಕ ಸ್ಥಳ ಎನ್ನುವುದು ದೇವಾಲಯಗಳಾಗಿತ್ತು. ಕಲೆ, ಸಾಹಿತ್ಯ, ಆಚಾರ ವಿಚಾರಗಳ ಧಾಮವಾಗಿದ್ದ ದೇವಾಲಯಗಳಲ್ಲಿ ಶಾಸನ ಬರೆಸುವ ರೂಢಿ ಬಳಕೆಗೆ ಬಂದಿತ್ತು.
   

Tuesday 27 September 2016

ಕೀಳ್ಗುಂಟೆ ಎನ್ನುವ ಅನಿಷ್ಟ ಪದ್ಧತಿ

ಸುಮಾರು ೯ನೇ ಶತಮಾನದ ಆರಂಭದಲ್ಲಿ ನಮಗೆ ಕಾಣಸಿಗುವ ಶಾಸನಗಳಲ್ಲಿ ಕೀಳ್ಗುಂಟೆ ಅಥವಾ ಕೀಳ್ಗಂಚಿ ಪ್ರಮುಖವಾದದ್ದು. ಅತ್ಯಂತ ಕ್ರೂರವೂ ಅಸಹ್ಯವೂ ಆದ ಈ ಸಂಪ್ರದಾಯವನ್ನು ಅದು ಹೇಗೆ ಸತಿ ಸಹಗಮನ ಹೊಡೆದು ಹಾಕಿತೋ ತಿಳಿಯುತ್ತಿಲ್ಲ. ಸತಿ ಪದ್ಧತಿಯಲ್ಲಿ ತನ್ನ ಗಂಡನ ಚಿತೆಗೆ ಸತಿ ಹಾರಿ ಜೀವ ತೆಗೆದುಕೊಳ್ಳುತ್ತಾಳೆ. ಆದರೆ ಇಲ್ಲಿ ಯಾವುದೋ ಒಬ್ಬ ರಾಜ ಮರಣ ಹೊಡಿದಾಗ ಅತನ ಶವದ ಕೆಳಗೆ ಜೀವಂತ ವ್ಯಕ್ತಿಯೊಬ್ಬನನ್ನು ಮಲಗಿಸಿ ಅವನ ಆತ್ಮಾರ್ಪಣೆ ಮಾಡಿಸಲಾಗುತ್ತದೆ. ಈ ಅನಿಷ್ಟ ಪದ್ಧತಿಯ ಬಗ್ಗೆ ಒಂದು ಮಾತನ್ನೂ ಹೇಳಲಾಗುತ್ತಿಲ್ಲ.


Courtessy . E I 

Saturday 24 September 2016

ಕ್ಷಾತ್ರವೃತ್ತಿ ಲತಾಮೂಲ ಗುಣಾಂಬು .......

ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪುರ ಶಾಸನದಲ್ಲಿನ ಒಂದು ಸಾಲು ಇದರಲ್ಲಿ ಮಯೂರ ವರ್ಮನನ್ನು ವೇದ ವೇದಾಂಗ ವಿದ್ಯಾಪಾರಗ ಎಂದಿದ್ದಲ್ಲದೇ ಕ್ಷತ್ರಿಯ ಬಲವನ್ನೂ ಹೇಳಲಾಗಿದೆ. ಕದಂಬರ ರವಿವರ್ಮನ ಈ ಶಾಸನ ೫ ೬ನೇ ಶತಮಾನದ್ದು ಇದರ ಅಕ್ಷರವಂತೂ ಕುಬ್ಜನ ತಾಳಗುಂದದ ಸ್ತಂಬಶಾಸನದಷ್ಟೇ ಸುಂದರ ಮತ್ತು ನೇರವಾಗಿದೆ. ಶಾಸನ ಕವಿ ಬೇರೆಯಾಗಿದ್ದರೂ ಕಂಡರಣೆಕಾರ ಒಂದರಂತೇ ಇನ್ನೊಂದನ್ನು ಅನುಸರಿಸುವುದು ಸಾಮಾನ್ಯ. ಈ ಚಿತ್ರವನ್ನು ಡಾ. ಬಾ ರಾ ಗೋಪಾಲ್ ರವರ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ.

Courtesy. Dr. B R Gopal

Thursday 22 September 2016

ಸಾಧುಪ್ರಿಯನ್ - ಅಸಾಧು ಜನ ವರ್ಜಿತನ್ - ಉಡುಪಿ ಜಿಲ್ಲೆಯ ಉದ್ಯಾವರ

ಸುಮಾರು ೮ ನೇ ಶತಮಾನದಲ್ಲಿ ಖಂಡರಿಸಲಾದ ಕಪ್ಪೆ ಅರಭಟ್ಟನ ಶಾಸನ, ಶಾಸನ ಇತಿಹಾಸದಲ್ಲಿಯೆ ದೊಡ್ದ ಮೈಲಿಗಲ್ಲನ್ನು ಸ್ಥಾಪಿಸಿತು. ಸಾಹಿತ್ಯದ ಅನೇಕ ಅಂಶಗಳನ್ನು ತನ್ನಲ್ಲಿ ಹೊದ್ದು ಮೈದಳೆದ ಈ ಶಾಸನ ಯಾರ ಕುರಿತಾಗಿ ಬರೆಯಲಾಗಿದೆ. ಮತ್ತು ಇದರಲ್ಲಿ ರೋದನ ಮತ್ತು ಕಿಚ್ಚು ಯಾಕಾಗಿ ಅನ್ನುವುದೂ ಸಹ ಸುಲಭವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಅನೇಕರು ಅನೇಕ ವಿಧವಾಗಿ ವಿಶ್ಲೇಶಿಸಿದರೂ ಸಹ ಒಮ್ಮತದ ಅಭಿಪ್ರಾಯ ಬಹಳ ಕಡಿಮೆಯೇ ಸರಿ. ಒಂದು ಕಡೆ ತಾನು ಒಳ್ಳೆಯ ಜನರಿಗೆ ಒಳ್ಳೆಯವನಾಗಿಯೂ ದುರ್ಜನರಿಗೆ ಕೆಟ್ಟವನಾಗಿದ್ದೇನೆ ಅಂತ ಹೇಳಿಕೊಳ್ಳುತ್ತಾನೆ. ಇನ್ನೊಂದೆಡೆ ದಿನವೂ ಅವಮಾನದಿಂದ ಬದುಕುವುದಕ್ಕಿಂತ ಸಾಯುವುದೇ ಲೇಸು ಅನ್ನುತ್ತಾನೆ. ಇನ್ನೊಂದೆಡೆ ನಾನು ಬಲಿಷ್ಟನಾದ ಕಲಿ ಶೂರ ಎನ್ನುತ್ತಾನೆ. ಹೀಗೆ ವರ್ಣಿಸಿಕೊಂಡಿದ್ದರೂ ಇಡೀ ಶಾಸನ ಕನ್ನಡ ಭಾಷೆಗೆ ತ್ರಿಪದಿ ಛಂದಸ್ಸಿನ ರೇಖೆ ಹಾಕಿ ಕೊಟ್ಟದ್ದಂತೂ ನಿಜ.

ಇದು ಉಡುಪಿ ಜಿಲ್ಲೆಯ ಉದ್ಯಾವರದ ಶಾಸನ ಅಳುಪ ರಾಜ ವಂಶಸ್ಥನಾದ ಪಾಂಡ್ಯನ ಮಗ ದೇವು ಎನ್ನುವವನ ಕಾಲದ್ದು. ಬಾದಾಮಿ ಚಾಲುಕ್ಯರ ಎರಡನೇ ಪೊಲೆಕೇಶಿಯ ಕಪ್ಪೆ ಅರಭಟ್ಟನ ಶಾಸನದ ಶಬ್ದಮಾಧುರ್ಯವನ್ನು ಹೊತ್ತಿರುವ ಶಾಸನ . ಹೇಳಿರುವ ವಿಧಾನ ಬೇರೆ ಆದರೂ ಅರ್ಥ ಮಾತ್ರ ಅದನ್ನೇ ಧ್ವನಿಸುತ್ತದೆ. ಕಪ್ಪೆ ಅರಭಟ್ಟನ ಶಾಸನ ಕಡೆದ ಶಿಲ್ಪಿಯೋ ಅಥವಾ ಆ ಶಾಸನದ ಶಾಸನ ಪಾಠವನ್ನು ರಚಿಸಿದ ಕವಿಯ ಅನುಕರಣೆಯನ್ನು ಮಾಡಲಿಕ್ಕಾಗಿ ಅದನ್ನೇ ಧ್ವನಿಸುವ ನುಡಿಗಟ್ಟನ್ನು ಹಾಕಲಾಗಿರ ಬಹುದು. ಅದೇನೇ ಇರಲಿ ಕರಾವಳಿಯ ಜನರಿಗೆ ಸಾಹಿತ್ಯದ ರುಚಿಯನ್ನಂತೂ ಉಣ ಬಡಿಸಿದೆ.

Wednesday 21 September 2016

ಸ್ವರ್ಣವಲ್ಲಿಯ ಸರ್ವಜ್ಞ ಸರಸ್ವತಿ ಸ್ವಾಮೀಜಿಯವರು - ಕಡತೋಕೆಯ ಅಗ್ನಿಹೋತ್ರೀ ಕೇಶವ ಭಟ್ಟರು - ಸವಾಯಿ ರಾಮಚಂದ್ರ ನಾಯಕ

೧೬೭೪ ನೇ ಇಸವಿಯಲ್ಲಿ ಸೋದೆಯ ಸವಾಯಿ ರಾಮಚಂದ್ರ ನಾಯಕರು ಮುಖ್ಯಮಂತ್ರಿಗಳಾಗಿದ್ದರು, ಆಗ ಸೋದೆಯ ಹೊನ್ನಹಳ್ಳಿಯ(ಈಗಿನ ಸ್ವರ್ಣವಲ್ಲಿಯ)_ ಮಠದಲ್ಲಿ ಸರ್ವಜ್ಞ ಸರಸ್ವತಿ ಸ್ವಾಮೀಜಿಯವರು ಕೊಡಿಸಿದ ಅಪ್ಪಣೆಯಂತೆ ರಾಜರ ಅಭ್ಯುದಯಕ್ಕಾಗಿ ಕಾಶಿಯಿಂದ ಶ್ರೌತಿ ವಿಶ್ವಪತಿ ಭಟ್ಟರನ್ನು ಕರೆಸಿ ಕಡತೋಕೆಯ ಬೆಳ್ಳಿ ಶಂಭುದೇವರು ಭಟ್ಟರ ಮಗ ಅಗ್ನಿಹೋತ್ರಿ ಕೇಶವ ಭಟ್ಟರಿಂದ ಅರಸರ ಸಮ್ಮುಖದಲ್ಲಿ ಯಜ್ಞವನ್ನು ಮಾಡಿಸಿದ ಬಗ್ಗೆ ಉಲ್ಲೇಖಿಸಲಾಗಿದೆ. ಈ ಶಾಸನದ ವಿಶೇಷವೆಂದರೆ ಇದನ್ನು ಅಗ್ನಿಹೋತ್ರದ ಮಂಟಪದಲ್ಲಿಯೇ ಬರೆಯಲಾಗಿದ್ದು ಈ ಶಾಸನದ ಮಧ್ಯಭಾಗದಲ್ಲಿ ಅದನ್ನು ಆಹವನೀಯ, ಗಾರ್ಹಪತ್ಯ ಮತ್ತು ದಕ್ಷಿಣಾಗ್ನಿಯನ್ನು ಖಂಡರಿಸಲಾಗಿದೆ. ಅಕ್ಷರ ಅಚ್ಚ ಕನ್ನಡವಾಗಿದ್ದರೂ ಕೆಲವೊಂದು ಅಕ್ಷರವನ್ನು ಗೊಂದಲಕಾರಿಯಾಗಿ ಬರೆದಿದ್ದಾರೆ . ಕೆಲವು ಹತ್ತನೇ ಶತಮಾನದ ಅಕ್ಷರಗಳನ್ನು ಹೋಲುತ್ತಿದೆ. ಇದು ಈಗ ಸ್ವರ್ಣವಲ್ಲಿ ಮಠದಲ್ಲಿರುವ ಶಾಸನ. ಹೊನ್ನಹಳ್ಳಿಗೂ ಕಡತೋಕೆಗೂ ಕಾಲಕಾಲಾಂತರದ ಸಂಬಂಧ ಇರುವುದು ತಿಳಿದು ಬರುತ್ತದೆ.















 

Monday 19 September 2016

ಸಂಗೀತಪುರದ - ಭಟ್ಟಾಕಲಂಕ

೧೬೦೪ನೇ ಇಸವಿಯಲ್ಲಿ ಕೊಂಡಕುಂದಾನ್ವಯ ವಂಶದ ಚಾರು ಕೀರ್ತಿ ಪಂಡಿತನ ಶಿಷ್ಯನೇ ಸಂಗೀತಪುರದ ಅಕಲಂಕದೇವ. ಎರಡನೇ ನಾಗವರ್ಮ ಮತ್ತು ಕೇಶಿರಾಜನ ನಂತರದ ಕನ್ನಡ ವಯ್ಯಾಕರಣಿಕರಲ್ಲಿ ಭಟ್ಟಾಕಲಂಕ ವಿಶಿಷ್ಟವಾದ ಸ್ಥಾನವನ್ನು ಹೊಂದಿದ್ದಾನೆ. ಕನ್ನಡದ ವ್ಯಾಕರಣವನ್ನು ಸಂಸ್ಕೃತದಲ್ಲಿ ಬರೆದ ಭಟ್ಟಾ ಕಲಂಕದೇವನು ಭಾಷೆಯೊಂದು ಜಾಗತಿಕ ಮಟ್ಟದಲ್ಲಿ ಪ್ರಸಾರಗೊಳ್ಳಲಿ ಎನ್ನುವ ಮಹತ್ವಾಕಾಂಕ್ಷೆ ಹೊಂದಿದ್ದ ಎನ್ನುವುದು ಅವನ ಕೆಲಸದಿಂದ ತಿಳಿದು ಬರುತ್ತದೆ. ಈಗಿನ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿ ಜೈನ ಕೇಂದ್ರವಾಗಿದ್ದು ಅಲ್ಲಿ ಭಟ್ಟಾಕಲಂಕ ಇದ್ದಿರುವುದರಿಂದ ಭಟ್ಕಳ ಎನ್ನುವ ಹೆಸರು ಬಂತು ಎನ್ನುವುದು ರೂಢಿ ಒಬ್ಬ ಕವಿಯ ಹೆಸರನ್ನೇ ಒಂದು ಊರು ಹೊಂದಿತು ಎನ್ನುವುದಾದರೆ ಅದಕ್ಕಿಂತ ದೊಡ್ದ ಭಾಗ್ಯ ಸಾಹಿತ್ಯ ಲೋಕಕ್ಕೆ ಬೇರೆ ಇರಲಾರದು. ಇದು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾದಲ್ಲಿರುವ ಶಾಸನವೊಂದರಿಂದ ತೆಗೆದುಕೊಂಡಿದ್ದೇನೆ.


Saturday 17 September 2016

ಸಿಂಹ ಕ್ಕೆ ಕನ್ನಡದಲ್ಲಿ ಸಿಂಘವೇ ಪರ್ಯಾಯವೇ ......

"ಸಿಂಹ" ಈ ಪದಕ್ಕೆ ಕನ್ನಡದಲ್ಲಿ ಪ್ರತ್ಯೇಕವಾದ ಬೇರೊಂದು ಪದ ಸಿಗುವುದಿಲ್ಲ. ಕ್ರಿ ಶ ೭ ನೇ ಶತಮಾನದಲ್ಲಿ ಬಾದಾಮಿಯ ಗುಹೆಯಲ್ಲಿ ಸಿಂಗಮಂಚಿ ಪದ ಬಳಕೆಯಾಗಿದೆ. ಈ ಸಿಂಗ ಎನ್ನುವುದು ಅಲ್ಲಿ ಸಿಂಹ ಪದಕ್ಕೆ ಬಂದಿರುವುದು. ಶಿಖಾರಿಪುರ ತಾಲೂಕಿನ ಕಲ್ಲೇಶ್ವರ ದೇವಾಲಯದ ಕ್ರಿ ಶ ಸುಮಾರು ೭೦೦ ರ ವಿಜಯಾದಿತ್ಯ ಸತ್ಯಾಶ್ರಯನ ಶಾಸನ ಒಂದರಲ್ಲಿ ಅರ್ಕ್ಕೇಸರಿ ಪದ ಬಂದಿದೆ. ತುಮಕೂರಿನ ಹಿರೇಗುಡಕಲ್ ಶಾಸನದಲ್ಲಿ ಪಂಡಿತರ ಸಿಂಹ ಎನ್ನಲಾಗಿದೆ ಹಿರೇಕೆರೂರಿನ ಸಿಡೇನೂರಿನಲ್ಲಿ ಸಿಂಗವಡ್ಡಗಿ ಬಳಕೆಯಾಗಿದೆ. ಉದ್ಯಾವರದ ಶಾಸನದಲ್ಲಿ ಕಾಳೆಗ ಕೇಸರಿ ಎಂದು ಹೇಳಿದ್ದಾರೆ. ಮಾರ ಸಿಂಗ ಮತ್ತು ಸಿಂಗಪ್ಪೊತ್ತಗಳೂ ಬಂದಿವೆ ಹಾಗೆಯೇ ಬಾದಾಮಿಯ ತಟ್ಟುಕೋಟೆಯ ಕಪ್ಪೆ ಅರಭಟ್ಟನ ಶಾಸನದಲ್ಲಿಯೂ ಸಿಂಘಮನ್ ಎಂದು ಬಳಸಿಕೊಂಡಿದ್ದಾರೆ ಸಂಸ್ಕೃತದಲ್ಲಿ ಬಳಕೆಯಾದ ಹೆಚ್ಚಿನ ಎಲ್ಲಾ ಪ್ರಾಣಿಗಳಿಗೂ ಕನ್ನಡದಲ್ಲಿ ಕನ್ನಡದ್ದೇ ಪದ ಬಳಕೆಯಲ್ಲಿದ್ದರೂ ಸಿಂಹ ಮಾತ್ರ ಸಂಸ್ಕೃತ ಬಿಟ್ಟರೆ ಪ್ರಾಕೃತದ ಪದ ಹಾಗೆ ಉಳಿಸಿಕೊಂಡಿದೆ. ಭೌಗೋಳಿಕವಾಗಿ ಗಮನಿಸಿದರೂ ಕನ್ನಡನಾಡಿನಲ್ಲಿ ಎಲ್ಲಿಯೂ ಸಿಂಹಗಳಿದ್ದಿರಲಿಕ್ಕಿಲ್ಲ. ಕನ್ನಡನಾಡಿನಲ್ಲಿ ಯೇ ಹುಟ್ಟಿ ಅಸ್ತಿತ್ವದಲ್ಲಿದ ಪ್ರಾಣಿಗಳಿಗೆ ಹೆಸರು ಕನ್ನಡ ಭಾಶೆಯಲ್ಲಿಯೇ ಉಳಿಸಿಕೊಂಡಿವೆ.