Search This Blog

Thursday 31 August 2017

ಪೆಣದುಗ್ರಾಹಿತವಂಶಮಂ ತರಿದು ಭೂಭೃದ್ವರ್ಗ್ಗಮಂ ನುರ್ಗ್ಗಿ ...ಚಾಳುಕ್ಯರ ಆರನೇ ವಿಕ್ರಮಾದಿತ್ಯ.

ಬನವಾಸಿ ಕದಂಬರಕಾಲ, ಆಗಿನ್ನು ದಕ್ಷಿಣದಲ್ಲಿ ಲಿಪಿಯೊಂದು ತನ್ನ ತನವನ್ನು ಉಳಿಸಿ ಬೆಳೆಸಿಕೊಳ್ಳಲು ಮತ್ತು ಸ್ವತಂತ್ರವಾಗಲು ಹವಣಿಸುತ್ತಿದ್ದ ಕಾಲ, ಬ್ರಾಹ್ಮಿಯಿಂದ ಕಳಚಿದ ಕೊಂಡಿಯೊಂದು ಕನ್ನಡವಾಗಿ ಗುರುತಿಸಿಕೊಂಡು ತನ್ನದೇ ಸ್ವತಂತ್ರ ಇತಿಹಾಸವನ್ನು ನಿರ್ಮಿಸಿದ ಕಾಲದಲ್ಲಿ ಸಂಸ್ಕೃತದ ಕವಿ ಕುಬ್ಜನೆನ್ನುವ ಮೇರು ಕವಿಯೊಬ್ಬ ಸಂಪದ್ಭರಿತ ಸಾಹಿತ್ಯದ ರುಚಿಯನ್ನು ಉಣಿಸುತ್ತಿದ್ದ, ಈ ಕುಬ್ಜ ಇದ್ದೆಲ್ಲಾ ಛಂದಸ್ಸನ್ನು ಬಳಸಿಕೊಂಡು ಸ್ತಂಬ ಶಾಸನವನ್ನೇನೋ ರಚಿಸಿದ. ಆದರೆ ಆತನ ಉಳಿದಾವ ಕೃತಿಗಳೂ ನಮಗೆ ಸಿಗದೇ ಹೋದದ್ದು ನಗಾದ ನಷ್ಟ. ಅದೇನೇ ಇರಲಿ, ಅದೇ ಕಾಲ ಅಥವಾ ತುಸು ಹಿಂದು ಮುಂದಕ್ಕೆ ಉತ್ತರಕನ್ನಡದ ಗುಡ್ನಾಪುರದ ಶಾಸನ ಕವಿಯಿಂದ ಇನ್ನೊಂದು ಸಾಹಿತ್ಯದ ಕೊಡುಗೆ ಬಂದಿತು. ಈ ಶಾಸನಗಳ ನಂತರ ಮಹಾಕೂಟ ಶಾಸನಕಾರ ದಾಟ ಕಾಳಿದಾಸನ ಕಾವ್ಯದ ಉಲ್ಲೇಖಮಾಡಿ ತಾನೂ ಸಹ ಸಂಸ್ಕೃತ ಭಾಷೆಯ ಕವಿ ಎಂದು ತೋರಿಸಿಕೊಟ್ತರೂ ಆಮೇಲೆ ಸುಮಾರು ಮೂವತ್ತು ವರ್ಷಗಳ ನಂತರ ಚಾಳುಕ್ಯರ ಕಾಲದಲ್ಲಿನ ಎರಡನೇ ಪುಲಕೇಶಿಯ ಕಾಲದ ಸುಮಾರು 634 ನೇ ಇಸವಿಯಲ್ಲಿ ರವಿಕೀರ್ತಿ ಎನ್ನುವ ಆಸ್ಥಾನ ಕವಿಯೊಬ್ಬ ಐಹೊಳೆಯ ಮೇಗುತಿಯಲ್ಲಿ ಸಾಹಿತ್ಯಾತ್ಮಕವಾದ ಶಿಲಾ ಫಲಕ ಖಂಡರಿಸಿ ತಾನು ಕಾಳಿದಾಸ ಭಾರವಿಯಂತಹ ಅತ್ಯಂತ ಶ್ರೇಷ್ಠ ಕವಿಗಳಿಗಿಂತ ಕಡಿಮೆಯವನಲ್ಲ ಎಂದು ಇತಿಹಾಸ ನಿರ್ಮಿಸುತ್ತಾನೆ. ಆದರೆ ಈಗ ನಾನು ಹೇಳ ಹೊರಟಿರುವುದು ಕೊಪ್ಪಳ ಜಿಲ್ಲೆಯ ಇಟಗಿಯಲ್ಲಿನ ಕ್ರಿ ಶ ೧೧೧೨ನೇ ಇಸವಿಯ ಚಾಲುಕ್ಯ ದೊರೆ 6ನೆಯ ವಿಕ್ರಮಾದಿತ್ಯನ ಕುರಿತು.
ಅಚ್ಚ ಕನ್ನಡದ ಪರಿಶುದ್ಧ ಭಾಷೆ, ಆಲಂಕಾರಿಕ ಶೈಲಿಯಲ್ಲಿ ರಮಣೀಯ ವರ್ಣನೆಗಳು, ಹೀಗೆ ಕಾವ್ಯಾಸಕ್ತರು ಮತ್ತು ಸಾಹಿತ್ಯದ ಓದುಗರನ್ನು ಪ್ರಬುದ್ಧ ಚಿಂತನೆಗ ಹಚ್ಚುವ ಅತ್ಯಂತ ಮಹತ್ವದ ಆಕರ ಎಂದೆನಿಸುವ ಈ ಶಾಸನದಲ್ಲಿ ಬೆಳ್ವಲ, ಇಟಗೆ ಮುಂತಾದುವುಗಳ ವರ್ಣನೆ ಕಣ್ಣಿಗೆ ಕಟ್ಟುವಂತಿದೆ.
ಸೃಷ್ಟಿಕರ್ತನಿಂದ-ಭರತನ ತನಕ :
ಸ್ವಯಂಭು (ಬ್ರಹ್ಮ) ವಿಗೆ ಮಗನಾಗಿ ಸ್ವಾಯಂಭುವ ಹುಟ್ಟಿದ ಈ ಸ್ವಾಯಂಭುವನಿಗೆ ಮನುವು ಮಗನಾಗಿ ಜನಿಸಿದ, ಮನುವಿನ ಮಗ ಪ್ರಿಯವ್ರತ ರಾಜ, ಪ್ರಿಯವ್ರತ ರಾಜನಿಗೆ ಏಳುಜನ ಮಕ್ಕಳು" ಸಪ್ತ ದ್ವೀಪಮಂ ಪಚ್ಚುಕೊಟ್ಟನಿಳಾವಲ್ಲಭನಾ" ಏಳುಜನ ತನ್ನ ಮಕ್ಕಳಿಗೆ ಹಂಚಿಕೊಟ್ಟನು. ಅಂತಹ ಪ್ರಿಯವೃತನ ವಂಶದವನು ಎಂದು ಚಾಳುಕ್ಯ ವಿಕ್ರಮಾದಿತ್ಯನನ್ನು ಹೊಗಳಲಾಗಿದೆ.
"ಎನಿಸಿರ್ದ್ಧಂಬುರುಹ ಸ್ವಯಂಭುಗೆ ಸುತಂ ಸ್ವಾಯಂಭುವಂ ಪುಟ್ಟಿದಂ
ಮನುವಾತಂಗೆ ಮಗಂ ಪ್ರಿಯಬ್ರತ ನೃಪಂ ತತ್ಪುತ್ರರಗ್ನೀದ್ರಮು -
ಖ್ಯ ನರೇಂದ್ರೋತ್ತಮರೆರ್ವ್ವರಂ ತವರ್ಗ್ಗೆ ಸಪ್ತದ್ವೀಪಮಂ ಪಚ್ಚು ಕೊ-
ಟ್ಟನಿಳಾವಲ್ಲಭನಾ ಪ್ರಿಯಬ್ರತನುದಾತ್ತ ಕ್ಷಾತ್ರಗೋತ್ರೋತ್ತಮಂ || " ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 6ನೇ ಸಾಲಿನಿಂದ.
ಅಗ್ನೀದ್ರನಿಗೆ ಜಂಬೂದ್ವೀಪವೂ(ಲವಣ ಸಮುದ್ರಾವೃತ), ಮೇಧಾತಿಥಿಗೆ ಪ್ಲಕ್ಷದ್ವೀಪ(ಇಕ್ಷುರದ್ವೀಪಾವೃತ). ವಪುಷ್ಮಂತನಿಗೆ ಶಾಲ್ಮಲೀ ದ್ವೀಪ (ಸುರಾಸಮುದ್ರ). ಜ್ಯೋತಿಷ್ಮಂತನಿಗೆ ಕುಶದ್ವೀಪ. ರಾಜಚಕ್ರನೆಂದು ಖ್ಯಾತನಾದ ದ್ಯುತಿಮಂತನಿಗೆ ಕ್ರೌಂಚದ್ವೀಪ. ಹವ್ಯನನಿಗೆ ಶಾಕಾಂತದ್ವೀಪ. ಸವನನಿಗೆ ಪುಷ್ಕರದ್ವೀಪ. ಜಂಬೂದ್ವೀಪದ ಒಡೆಯನಾದ ಅಗ್ನೀಧ್ರನಿಗೆ ಒಂಭತ್ತು ಮಕ್ಕಳು, ಅವರಲ್ಲಿ ನಾಭಿಯೇ ಮೊದಲಾದವರು. (ನಾಭಿಕ್ಷೇತ್ರ, ಕಿಂಪುರುಷವರ್ಷ, ಹರಿವರ್ಷ, ಇಳಾವೃತ....ಹೀಗೆಯೇ ಸಾಗುತ್ತದೆ.) ಇವರೆಲ್ಲಾ ಸೇರಿ ನವಖಂಡಗಳನ್ನು ಆಳಿದರು. ನಾಭಿಯ ಮಗ ಋ‌ಷಭನೂ ಆತನ ಮಗ ಭರತನೂ ಈ ಭರತಖಂಡವನ್ನು ಆಳಿದರು. ಇಂತಹ ಭರತಾದಿ ರಾಜರುಗಳಿಗಿಂತಲೂ ಬಹಳ ಅತ್ಯಂತ ಪ್ರಸಿದ್ಧನಾಗಿ ಈಗ ಚಕ್ರವರ್ತಿಯಾಗಿದ್ದಾನೆ ಎಂದು ಶ್ಲಾಘಿಸಲ್ಪಟ್ಟಿದೆ.
ಲವಣಾಂಭೋನಿಧಿ ಸುತ್ತಿರಲ್ಕೆಸೆವ ಜಂಭೂದ್ವೀಪವಗ್ನೀಧ್ರರಾ -
ಜ್ಯವಿಳಾಸಾಸ್ಪದ ವಿಕ್ಷುವೇಷ್ಟಿತ ವಿಶಾಳಪ್ಲಕ್ಷವಕ್ಷುಣ್ಣ ಸೌ -
ಷ್ಠವ ಮೇಧಾತಿದಿಪಾಳಿತಂ ಸುರೆಗಡಲ್ ಸುತ್ತಿರ್ಪ್ಪಿನಂ ನೋಡಲೊ -
ಪ್ಪುವುದಾ ಶಾಲ್ಮಲಿ ಸೋಷ್ಮಸಾಹಸವಪುಷ್ಮದ್ಭೂಭುಜಸ್ವೀಕೃತಂ || ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 7ನೇ ಸಾಲಿನಿಂದ.
ಇದೇ ಶಾಸನದಲ್ಲಿ ಚಂದ್ರವಂಶದ ಹಿರಿಮೆಯನ್ನು ಸಾರುತ್ತಾ ...... ಎರಡನೆಯ ಕಮಳ ಗರ್ಭರುಂ ತ್ರಿಭುವನ ಸದ್ಧರ್ಮ ಸೂತ್ರಧಾರರುಂ" ಎಂದು ಚಂದ್ರವಂಶದ ಪರಂಪರೆಯನ್ನು ಹೇಳುತ್ತಾ .....
ಅನುಪಮ ಹೇಮ ತಾಮರಸಗರ್ಬ್ಭನ ಮಾನಸಪುತ್ರನತ್ರಿ ತ -
ನ್ಮನುಪತಿನೇತ್ರ ಪುತ್ರಿಕೆಗೆ ಪುಟ್ಟಿದ ನಂದನನಿಂದುಮೌಳಿಮಂ -
ಡನನ ಮೃತಾಂಶು ತತ್ಪ್ರಿಯಸುತಂ ಬುಧನುನ್ನತ ಸೋಮ ವಂಶವ -
ರ್ದ್ಧನನೊಗೆದಂ ಬುಧಂ ಗವಿಳೆಗಂ ಪೃಥುಕೀರ್ತಿರವಂ ಪುರೂರವ || ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 17ನೇ ಸಾಲಿನಿಂದ.
ಸ್ವಾಯಂಭುವನಿಂದ ಹಿಡಿದು ಚಾಕ್ಷುಷನ ತನಕ ಆರು ಮನುಗಳು ಆಳಿದ ತರುವಾಯ ಏಳನೆಯ ವೈವಸ್ವತನು ದಕ್ಷನ ಮೊಮ್ಮಗ ವಿವಸ್ವಂತನ ಮಗನು. ಇಳೆ ಪುರೂರವ ಮುಂತಾದವರಿಂದ ಸಾಗಿ ಹಾರೀತಿಯ ಹಲವು ಮಕ್ಕಳಿಂದ ಈ ಚಾಳುಕ್ಯ ವಂಶವು ಚಂದ್ರವಂಶದಿಂದ ಕೀರ್ತಿ ಹೊಂದಿತು. ಎನ್ನುವುದಾಗಿ ಹೇಳಲಾಗಿದೆ. ಅದೇ ಸತ್ಯಾಶ್ರಯಕುಳವಾಯಿತು.
ಚಾಳುಕ್ಯ ವಿಕ್ರಮ ;
"ಪೆಣದುಗ್ರಾಹಿತ ವಂಶಮಂ" ಎಂದು ಶೌರ್ಯ ಸಾಹಸ, ಅವನ ಔನ್ನತ್ಯವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿರುವ ಕವಿ, ವಿಕ್ರಮಾದಿತ್ಯನನ್ನು ಶ್ಲೇಷ ರೂಪಕಾಲಂಕಾರಗಳನ್ನು ಬಳಸಿ ತನ್ನ ಕವಿತಾ ಸಾಮರ್ಥ್ಯವನ್ನು ಮೆರೆದಿದ್ದಾನೆ. ಕೇಳೀಗೃಹವನ್ನೂ ಉದ್ಘರಿಸಿರುವ ಕವಿಯ ಹೇಳಿರುವುದು ಹೀಗೆ....

ಕ್ಷಣದಿಂ ಕಂಟಕಕೋಟಿಯಂ ಕಡಿದು ಸಪ್ತಾಂಭೋಧಿ ಸಂರುದ್ಧಧಾ
ರಿಣಿಯಂ ಧೋರ್ವ್ವಳದಿಂದೆ ನೇರ್ಪ್ಪಡಿಸಿ ಕೀರ್ತ್ತಿಶ್ರೀಗೆ ಕೇಳೀಗೃಹಾಂ -
ಗಣಮಪ್ಪಂತಿರೆ ಮಾಡಿದಂ ಸುಭಟರಾರ್ಚ್ಚಾಳುಕ್ಯರಾಮಂಬರ || ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 25ನೇ ಸಾಲಿನಿಂದ.
ಎಂದು ಕೀರ್ತಿಶ್ರೀಗೆ ಕೇಳೀಗೃಹದಂತೆ ಎಂದು ಅತ್ಯಂತ ಮನೋಜ್ಞವಾಗಿ ವರ್ಣಿಸಿದ್ದಾರೆ.
ವಿಕ್ರಮಾದಿತ್ಯನ ದೋರ್ದ್ದಂಡವನ್ನು(ಭುಜಬಲ-ಬಾಹುಬಲ)ವನ್ನು ತಿಳಿಸುತ್ತಾ ಕವಿಯು -
ಕಮಠಾಧೀಶನ ಬೆನ್ನೊಳಿರ್ದ್ದು ಫಣಿರಾಜೋದ್ಯತ್ಫಣಾಗ್ರಕ್ಕೆ ವಂ -
ದು ಮಹೀಕಾಮಿನಿ ದಿಗ್ಗಜಬ್ರಜದ ಕುಂಭಾಗ್ರಂಗಳಂ ಮೆಟ್ಟಿ ವಿ
ಕ್ರಮಚಕ್ರೇಶನುದಗ್ರವಪ್ಪ ಭುಜಮಂ ಬಂದೇರಿದಳ್ ರಾಗದಿಂ -
ದಮಿದೇನುನ್ನತಮಯ್ತೊ ದಕ್ಷಿಣಭುಜಂ ಚಾಳುಕ್ಯ ಚಕ್ರೇಶನ || ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 26ನೇ ಸಾಲಿನಿಂದ.
ಆಮೆಯ(ಕೂರ್ಮ)ಬೆನ್ನಿನ ಮೇಲೆ, ಆದಿಶೇಷನ ಹೆಡೆಗಳಮೇಲೆ, ದಿಗ್ಗಜಗಳ ತಲೆಗಳ ಮೇಲೆ ಈ ಜಗತ್ತು ನಿಂತಿದೆ ಎನ್ನುವುದು ನಮ್ಮ ಪ್ರಾಚೀನ ಪುರಾಣಗಳ ಕಲ್ಪನೆ. ಆದರೆ ರಾಜನೂ ಸಹ ಭೂಧರ(ಭೂಮಿಯನ್ನು ಧರಿಸಿದವನು). ಅದೇ ರೀತಿ ವಿಕ್ರಮಾದಿತ್ಯನೂ ಧರಿಸಿದ್ದಾನೆ. ಭೂ ದೇವಿಯು ಅವನ ಭುಜಕ್ಕೆ ಏರಲು (ದೋರ್ದ್ದಂಡ) ಆಮೆಯ ಬೆನ್ನು, ಆದಿಶೇಷನ ಹೆಡೆ, ಮತ್ತು ದಿಗ್ಗಜಗಳ ತಲೆ ಮೆಟ್ಟಿಲುಗಳಾದವು ಎಂದು ಶಾಸನ ಕವಿ ವರ್ಣಿಸುತ್ತಾನೆ.
ವಿಕ್ರಮಾದಿತ್ಯನಿಗೆ ಶತ್ರುರಾಜರೂ ಸಹ ವಂದಿಸುತ್ತಿದ್ದರು ಎನ್ನುವುದು ಕವಿಯ ಈರೀತಿಯ ಅಂಬೋಣ....
ಪುದಿದು ಪೊದಳ್ದ ವಿಕ್ರಮ ವಿಜೃಂಭಣಮಂ ತೊರೆದಾಳ್ವೆಸಕ್ಕೆ ಪೂ -
ಣ್ದೊದವಿದ ಭೀತಿಯಿಂದೆರಗಲನ್ಯನೃವಾವಳಿ ಪಾದಪೀಠದೊಳ್
ಪದನಕದರ್ಪ್ಪಣಂಗಳೊಳಗಾ ರಿಪುಭೂಪರ ರೂಪು ಚಂದ್ರ ಬಿಂ -
ಬದ ಮೃಗದಂತಿರ್ಪ್ಪುವು ನೆಗರ್ತ್ತೆಯ ವಿಕ್ರಮಚಕ್ರವರ್ತ್ತಿಯ || ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 30ನೇ ಸಾಲಿನಿಂದ.
ವಿಕ್ರಮಾದಿತ್ಯನ ಅಡಿಯ ಉಗುರುಗಳ ಕನ್ನಡಿಗಳಲ್ಲಿ ಮೂಡಿದ ವೈರಿ ರಾಜರುಗಳ ರೂಪಗಳು ಚಂದ್ರ ಬಿಂಬದ ಜಿಂಕೆಯಂತೆ ಕಾಣುತ್ತಿದ್ದವು. ಇಲ್ಲಿ ವೈರಿ ರಾಜರ ಮುಖಗಳನ್ನು ಚಂದ್ರನ ಬಿಂಬಕ್ಕೆ ಹೋಲಿಸಿರುವುದು ಅತ್ಯಂತ ಮಹತ್ವದ್ದು. ವೈರಿಗಳ ಮುಖವು ಕಪ್ಪಾಗಿದ್ದವು, ಅಥವಾ ವೈರಿಗಳ ಮುಖವು ಕಳೆಗುಂದಿದ್ದವು ಎನ್ನುವುದನ್ನು ಹಾಗೆ ಕವಿ ವಿಡಂಬನೆಮಾಡಿದ್ದಾನೆ. ಹೀಗೆ ಶಾಸನ ಒಂದರ ಕವಿ ಎಂತಹ ಅದ್ಭುತವಾದ ಕಾವ್ಯದ ಸೃಷ್ಟಿಗೆ ರಾಜಾಶ್ರಯವನ್ನು ಬಳಸಿಕೊಂಡಿದ್ದ ಅಥವಾ ಕವಿಯೊಬ್ಬನನ್ನು ರಾಜ ತನ್ನ ವರ್ಣನೆಗೆ ಬಳಸಿಕೊಂಡಿರಬಹುದಾದ ಸಾಧ್ಯತೆಯೂ ಇರಬಹುದು. 

Tuesday 29 August 2017

ವನವಾಸಿ ಯೋಶಿದೀಕ್ಷಣ ವಿಮುಗ್ಧ ಕರ್ಣಾರ ಯುವತೀ ........

ರಾಮಾಯಣದ ಅಯೋಧ್ಯಾ ಕಾಂಡದ ೯ನೇ ಅಧ್ಯಾಯದಲ್ಲಿ ಬನವಾಸಿಯನ್ನು ವೈಜಯನ್ತಿ ಎಂದು ಕರೆಯಲಾಗಿದೆ.
ದಿಶಾಮಾಸ್ತಾಯ ವೈ ದೇವೀ ದಕ್ಷಿಣಾಂ ದಂಡಕಾನ್ ಪ್ರತಿ | ವೈಜಯಂತಮಿತಿಖ್ಯಾತಂ ಪುರಂ ಯತ್ ತಿಮಿಧ್ವಜಃ || ಎಂದು ಬನವಾಸಿಯನ್ನು ಕುರಿತಾಗಿ ಉಲ್ಲೇಖಿಸಲಾಗಿದೆ. ೯:೩:೧೩
ದಂಡಕಾರಣ್ಯದ ದಕ್ಷ್ಜಿಣದ ವೈಜಯಂತಿ ಪುರದಲ್ಲಿ ತಿಮಿಧ್ವಜನೆನ್ನುವ ರಾಕ್ಷಸ ಇದ್ದ ಎನ್ನುವ ಉಲ್ಲೇಖ ಸಿಗುತ್ತದೆ.
ಸುಮಾರು ಆರನೇ ಶತಮಾನದಲ್ಲಿದ್ದ ವರಾಹಮಿಹಿರ ತನ್ನ ಬೃಹತ್ ಸಂಹಿತೆಯ ಹದಿನಾಲ್ಕನೆ ಅಧ್ಯಾಯದ ೧೨ನೇ ಶ್ಲೋಕದಲ್ಲಿ "ಕಂಟದ್ಕ್ಕನಕವನವಾಸಿ ....ಎಂದು ಬನವಾಸಿಯಯ ಉಲ್ಲೇಖವನ್ನು ಕೊಡುತ್ತಾನೆ.
ಸುಮಾರು ಹತ್ತನೇ ಶತಮಾನದಲ್ಲಿದ್ದ ಸೋಮದೇವನು ತನ್ನ ಯಶಸ್ತಿಲಕದಲ್ಲಿ
ವನವಾಸಿ ಯೋಶಿದೀಕ್ಷಣ ವಿಮುಗ್ಧ ಕರ್ಣಾರ ಯುವತೀ ಎಂದು ಬನವಾಸಿಯನ್ನು ವರ್ಣಿಸುತ್ತಾನೆ.
ಹತ್ತನೇ ಶತಮಾನದ ಪಂಪನು ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ಬಣ್ಣಿಸಿದಷ್ಟು ಮತ್ತಾರೂ ಹೊಗಳಿದಂತೆ ಕಾಣಿಸುವುದಿಲ್ಲ. ತಾನು ಮರಿದುಂಬಿಯಾಗಿಯಾದರೂ ಬನವಾಸಿಯಲ್ಲಿ ಜನಿಸಬೇಕೆನ್ನುವ ಹಂಬಲವನ್ನು ಹೇಳುತ್ತಾನೆ.
ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತಜಾತಿ
ಸಂಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಮ್
ನಗೆಮೊಗೆದೊಳ್ ಪಳಂಬಲೆಯೆ ಕೂಡುವ ನಲ್ಲರೆ ನೋಳ್ಪೊಡಾವ
ಬೆಟ್ಟುಗಳೊಳಮಾವ ನಂದನ ವನಂಗಳೊಳಮ್ ಬನವಾಸಿ ದೇಶದೊಳ್[4-28]

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಮ್ಪಿನಿಮ್ಪುಗ
ಳ್ಗಾಗರವಾದ ಮಾನಸರೆ ಮಾನಸರಮ್ತವರಾಗಿ ಪುಟ್ಟಲೇ
ನಾಗೆಯುಮೇನೊ ತೀರ್ದುಪು[ದೆ] ತೀರದೊಡಮ್ ಮಹಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್[4-29]

ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ಡೊಡಮಿಂಬನಾಳ್ದ
ಗೇಯಮ್ ಕಿವಿವೊಕ್ಕೊಡಮ್ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಮ್
ಪಂಗೆಡೆಗೊಂಡಮ್ ಮಧುಮಹೋತ್ಸವಮದೊಡಮೇನನೆಂಬೆನಾ
ರಂಕುಸವಿಟ್ಟೊಡಮ್ ನೆನೆವುದೆನ್ನ ಮನಮ್ ವನವಾಸಿ ದೇಶಮಮ್[4-30]

ಚಾಮರಸನು ತನ್ನ ಪ್ರಭುಲಿಂಗ ಲೀಲೆಯಲ್ಲಿ ಬನವಾಸಿಯ ವರ್ಣನೆಯನ್ನು ಅತ್ಯಂತ ಸುಂದರವಾಗಿ ವರ್ಣಿಸುತ್ತಾನೆ.
ಅದರೊಳ್ ಅವನಿ ಕಾಂತೆಗೊಪ್ಪುವ
ವದನವೋ ಶ್ರಿಂಗಾರ ಸರದ
ಸದನವೋ ಸೊಬಗಿನ ಸುಮನದ ಸುಖದ ನೆಲೆವೀಡೋ
ಸುದತಿರತ್ನಗಳೊಗೆವ ಚೆಲುವಂ
ಬುದ್ಧಿಯೋ ಪೇಳೆನೆ ಸಕಲ ಸೌರಂ
ಭದಲ್ಲಿ ಸೊಗಸಿಹುದಲ್ಲಿ ಬನವಾಸಿ ಎಂಬ ಪಟ್ಟಣವು ಎಂದು ಬನವಾಸಿಯನ್ನು ಅಲ್ಲಿನ ಜನರನ್ನು ಮತ್ತು ಭವನಗಳ ಕುರಿತಾಗಿ ಹೇಳುತ್ತಾನೆ.
ಇತ್ತಿಚಿನ ಕವಿ ಬೇಂದ್ರೆಯವರು ಸಹ ಬನವಾಸಿಯನ್ನು ತಮ್ಮ ಕವಿತೆ ಗಂಗಾವತರಣದ ಮೂಲಕ ವಿಜ್ರಂಭಿಸುತ್ತಾರೆ.
ಏಲಾವನ ಲವಲೀ ಬನ ಲವಂಗ ಬನಗಳಲಿs
ನಾಗಲತಾ ಸಂಕುಲ ಬನವಾಸಿಯ ಜನಗಳಲಿsss
ಲೀಲಾಂದೋಲಿತ ದೋಲಾ ಲಲನಾ ಮಣಿಗಳಲಿss
ಎಂದು ಹೇಳಿಕೊಳ್ಳುತ್ತಾರೆ.
ಆದರೆ ಇವೆಲ್ಲಕ್ಕೂ ಮಿಗಿಲಾಗಿ ಕದಂಬರ ಹೆಚ್ಚಿನೆಲ್ಲಾ ಶಾಸನಗಳಲ್ಲಿಯೂ ಸಹ ವೈಜಯಂತೀ ಪುರವನ್ನು ನೆನೆಯದೇ ಇರುವುದಿಲ್ಲ. ನಮಗೆ ಅಧಿಕೃತವಾಗಿ ಕಣ್ಣಿಗೆ ಕಾನೀಸುವ ದಾಖಲೆಗಳು ಕದಂಬರ ಶಾಸನಗಳೇ. ಒಂದು ದೃಷ್ಟಿಯಲ್ಲಿ ನಾಗಾರಾಧನೆ ಆರಂಭವಾಗಿರುವುದೇ ಬನವಾಸಿಯಿಂದ ಅಂದರೆ ಅದು ತಪ್ಪಿರಲಿಕ್ಕಿಲ್ಲ. ಸಾತಕರ್ಣಿಗಳ ಕಾಲದ ಚುಟುಕಲಾನಂದ ಸಾತಕರ್ಣಿ ನಾಗನನ್ನು ನಾಗ ಶಿಲ್ಪವನ್ನು ಕೆತ್ತಿಸಿದ ಉಲ್ಲೇಖ ಅದೇ ನಾಗ ಶಿಲ್ಪದಲ್ಲಿ ನಗೆ ಕಾಣಸಿಗುವುದಲ್ಲದೇ ಶಿಲ್ಪಿಯೊಬ್ಬ ತಾನು ಈ ನಾಗನನ್ನು ಮಾಡಿದ್ದೇನೆ ಎಂದುಕೊಂಡಿರುವುದು ವಿಶೇಷವಾಗಿ ಕಾಣಿಸುತ್ತದೆ. ಭಾಶಃಎ ಪ್ರಾಕೃತವಾಗಿದ್ದು ಲಿಪಿ ಬ್ರಾಹ್ಮಿಯಲ್ಲಿದೆ.
 


Wednesday 23 August 2017

ದುರ್ವಿನೀತನ ಶಬ್ದಾವತಾರ ಸಂಸ್ಕøತವಾದರೆ ವಡಕಥಾ ???

ದುರ್ವಿನೀತನ ಶಬ್ದಾವತಾರ ಸಂಸ್ಕøತವಾದರೆ ವಡಕಥಾ ???
ಆರಂಭ ಕಾಲದ ಕದಂಬರಿಗಿಂತ ಹೆಚ್ಚು ಸಮಯ ನಮ್ಮ ನಾಡನ್ನು ಆಳಿದವರಲ್ಲಿ ಗಂಗರು ಪ್ರಮುಖರು. ಧರ್ಮನಿಷ್ಠರಾಗಿದ್ದ ಗಂಗರು ಕನ್ನಡನಾಡಿಗೆ ಕೊಟ್ಟ ಕೊಡುಗೆ ಅಪೂರ್ವ ಪ್ರಾಯಶ ಗಂಗರು ಸುಸಂಸ್ಕøತರಾಗಿದ್ದರು ಮತ್ತು ಭಾಷೆ ಮತ್ತು ಲಿಪಿಗಳ ಅಭಿಮಾನಿಗಳಾಗಿದ್ದರು ಕರ್ನಾಟಕದಲ್ಲಿ ಆಗಿನ್ನೂ ಎರಡು ಮೂರು ಶತಮಾನಗಳ ಅಂತರದಲ್ಲಿ  ಪ್ರಾಕೃತ ಮತ್ತು ಬ್ರಾಹ್ಮಿಯಲಿಪಿಯ ಕೊಂಡಿ ಕಳಚಿಕೊಂಡ ಕಾಲ ಕದಂಬರು ಬ್ರಾಹ್ಮಿಯಿಂದ ಹೊರಬಂದಿದ್ದರು ಆಗ ಗಂಗರು ಸಂಸ್ಕøತವನ್ನು ಆಯ್ದುಕೊಂಡದ್ದು ಅವರ ಬಹುತೇಕ ತಾಮ್ರಪಟ ಶಾಸನಗಳಿಂದ ತಿಳಿದು ಬರುತ್ತದೆ. ಶಾಸನಕೋಟೆ ತಾಮ್ರಪಟದಿಂದ ತಿಳಿದು ಬರುತ್ತದೆ. ಕನ್ನಡ ಪದಗಳನ್ನು ಸಂಸ್ಕøತ ಭಾಷಾ ಶಾಸನದಲ್ಲಿ ಸೇರಿಸಿ ಬರೆದ ಇನ್ನೊಂದು ವಿದವನ್ನು ಹರಿವರ್ಮನ ಕೂಡಲೂರು ಮತ್ತು ತುಂಬಲು ಶಾಸನದಿಂದ ತಿಳಿಯುತ್ತದೆ, ಹಾಗೆ ಸಂಪೂರ್ಣ ಕನ್ನಡದಲ್ಲಿ ಬರೆದ ಶಾಸನ ಕಾಣಸಿಗುವುದು ಗಂಗರ ಸಿರಗುಂದ ಶಾಸನದಿಂದ.   
ಕೋಲಾರ ಜಿಲ್ಲೆಯ ಮುಳಬಾಗಿಲಿನ ಉತ್ತನೂರು ಶಾಸನ ಗಂಗ ದೊರೆ ದುರ್ವಿನೀತನದ್ದು. ದುರ್ವಿನೀತನು ತನ್ನ ಆಳ್ವಿಕೆಯ 20ನೇ ವರ್ಷದಲ್ಲಿ ಪುದಲ್ನಾಡ ರಾಷ್ಟ್ರದ ಕೋಳಿಳ್ತೂರು ಗ್ರಾಮವನ್ನು ನಲ್ವತ್ತೆಂಟು ವೈದಿಕ ಬ್ರಾಹ್ಮಣರಿಗೆ ಮೂವತ್ತೆರಡು ಪರಿಹಾರಗಳೊಡನೆ ಕೊಟ್ಟನು. ರೇಡಿಯೂರ ಗ್ರಾಮದ ಕ್ಷೇತ್ರದಾರರಿಗೆ ಯಾವ ತೊಂದರೆಯೂ ಆಗದಂತೆ ಗ್ರಾಮದ ಕೆರೆಯಿಂದ ನೀರುಸಿಗುವಂತೆ ಮಾಡುವ ಕ್ಷೇತ್ರಗಳಿಗೆ ಸೀಮಿತಗೊಳಿಸಿ, ಇದನ್ನು ಬಳಸಬೇಕೆಂಬುದನ್ನು ಈ ಶಾಸನದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ವಿವರಗಳನ್ನೊಳಗೊಂಡ ಸಂಸ್ಕøತ ಭಾಷಾ ದಾಖಲೆಯನ್ನು ಐದು ತಾಮ್ರಪಟಗಳ ಒಂಬತ್ತು ಪುಟಗಳ ಮೇಲೆ 40 ಸಾಲುಗಳಲ್ಲಿ ಪ್ರಾಚೀನ ಕನ್ನಡ ಲಿಪಿಯಲ್ಲಿ ಬರೆದವನು, ಕೂನಾಚಾಯ್ರ್ಯ ಎನ್ನುವವನÀ ವಂಶದವನಾದ ಕೊಂಗಣಿ ಪೆಂದಟ್ಟಾರನು. ಇದಕ್ಕೆ ಪ್ರತಿಫಲವಾಗಿ ಈ ಲಿಪಿಕಾರನು ದುರ್ವಿನೀತನಿಂದ ಒಂದು ಖಂಡುಗ ಬೀಜದ ಗದ್ದೆಯನ್ನು ಪಡೆದುಕೊಂಡನು. ಈ ತಾಮ್ರಪಟದ ವೈಶಿಷ್ಟ್ಯವೆಂದರೆ ಈ ಶಾಸನಕವಿಯು ದುರ್ವಿನೀತನ ಬಗ್ಗೆ ಒಂದು ವಿಶೇಷ ಮಾಹಿತಿಯನ್ನು ಮೊದಲ ಬಾರಿಗೆ ಕೊಡುತ್ತಾ ದುರ್ವಿನೀತನು ಶಬ್ದಾವತಾರಎನ್ನು ಗ್ರಂಥವೊಂದನ್ನು ಬರೆದ ಕುರಿತು, ಮತ್ತು ದೇವಭಾರತಿ ಸಂಪಾದಿತ ವಡ್ಡಕಥಾವನ್ನು ರಚಿಸಿದ ಮಾಹಿತಿಯೊಂದಿಗೆ ಕಿರಾತಾರ್ಜುನೀಯದ ಹದಿನೈದನೆಯ ಸರ್ಗಕ್ಕೆ ಟೀಕೆಗಳನ್ನು ಬರೆದನೆಂದೂ ಹೇಳುವನು.

ದುರ್ವಿನೀತನು ಕಿರಾತಾರ್ಜುನೀಯಕ್ಕೆ ಬರೆದ ಟೀಕೆಯ ಬಗ್ಗೆ ಕೊಟ್ಟಿಂಬದ ಶಾಸನದಲ್ಲಿ ಉಲ್ಲೇಖಗಳಿದ್ದರೂ ಸಹ  ವಡ್ಡಕಥಾಮತ್ತು ಶಬ್ದಾವತಾರದ ಪ್ರಸ್ತಾಪ ಇಲ್ಲಿ ಮೊದಲ ಬಾರಿಗೆ ಬಂದಿರುವುದು. ಇವುಗಳಲ್ಲಿ ಶಬ್ದಾವತಾರ ಸಂಸ್ಕøತದಲ್ಲಿ ಬರೆದದ್ದು ಇರಬಹುದು, ವಡ್ಡಕಥಾ ಯಾವ ಭಾಷೆಯಲ್ಲಿ ಬರೆದದ್ದು ಎನ್ನುವುದು ತಿಳಿದು ಬರುತ್ತಿಲ್ಲ, ಆದರೂ ಸಹ ಸುಮಾರು ಆರನೇ ಶತಮಾನದಲ್ಲಿ ರಾಜನೊಬ್ಬ ಸಂಸ್ಕøತ ಭಾóಷಾ ಪಾಂಡಿತ್ಯ ಹೊಂದಿದ್ದಲ್ಲದೇ ಕೀರಾತಾರ್ಜುನೀಯ ದಂತಹ ಕೃತಿಗೆ ಟೀಕೆ ಬರೆಯುವಂತಹ ಸಾಹಸ ಮಾಡಿದ್ದಲ್ಲದೇ ಶಬ್ದಾವತಾರ ದಂತಹ ಕೃತಿ ಬರೆದದ್ದು ಮತ್ತು ವಡ್ಡಕಥಾ ಬರೆದ ಉಲ್ಲೇಖ ಸಿಗುತ್ತದೆ, ವಡ್ಡಕಥಾ ಪ್ರಾಯಶಃ ಕನ್ನಡದ್ದೇ ಆಗಿದ್ದರೇ ಆರನೇ ಶತಮಾನದ ಹೊತ್ತಿಗೆ ಕನ್ನಡ ಸಾಹಿತ್ಯದ ಸಾಮ್ರಾಜ್ಯವನ್ನೇ ಸೃಷ್ಟಿಸಿದ್ದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಅದೇನೇ ಇರಲಿ ಅಂತೂ ಕನ್ನಡ ಅತ್ಯಂತ ಪ್ರಾಚೀನ ಸಮೃದ್ಧ ಭಾಷೆ ಎನ್ನುವುದು ನಿರ್ವಿವಾದ.   



Monday 21 August 2017

ಸೌಂದರಾನಂದದ ಅಶ್ವಘೋಷನು - ರಾಜನಾಗಿದ್ದನೇ ????

ಬೌದ್ಧಮತ ತನ್ನ ನೆಲೆಯನ್ನು ಕಂಡುಕೊಂಡ ಕಾಲ ಅದು. ಸರಿ ಸುಮಾರು ಕ್ರಿ. ಶ. ೭೮ ರ ಅವಧಿ. ಮೊದಲ ಸಹಸ್ರಮಾನದ ಮೊದಲ ಶತಮಾನ. ಹಸಿದ ಕುದುರೆಗಳು ತಮ್ಮೆದುರಿಗಿದ್ದ ಆಹಾರವನ್ನೂ ಸೇವಿಸದೇ ಅಸ್ಖಲಿತವಾದ ಧರ್ಮವಾಣಿಯ ನುಡಿಗಳನ್ನು ಕೇಳಿಸಿಕೊಂಡು ಆಹಾರವನ್ನು ಸೇವಿಸಿದವಂತೆ ಅದಕ್ಕೆ ಆಚಾರ್ಯನೆನ್ನುವ ಗೌರವದಿಂದ ಕರೆಯಲ್ಪಡುತ್ತಿದ್ದವನು ಆಶ್ವಘೋಷನೆನ್ನುವ ಹೆಸರಿನಿಂದ ಮುಂದೆ ಪ್ರಸಿದ್ಧನಾದ. ಈತನ ತಾಯಿ ಸುವರ್ಣಾಕ್ಷಿ, ಈತ ಹುಟ್ಟಿದ್ದು ಸಾಕೇತ ಅಥವಾ ಶ್ರಾವಸ್ತಿ. ಈತನ ತಂದೆಯ ಬಗ್ಗೆ ಎಲ್ಲಿಯೂ ತಿಳಿದು ಬರದಿರುವುದು ಸೋಜಿಗವಾಗಿದೆ. ಬ್ರಾಹ್ಮಣನಾಗಿ ಜನಿಸಿದ ಈತ ನಾಲ್ಕು ವೇದಗಳು ಹದಿನಾರು ಪುರಾಣಗಳನ್ನಲ್ಲದೇ ವೇದಾಂಗಾದಿಗಳನ್ನು ಕರಗತ ಮಾಡಿಕೊಂಡಿದ್ದ. ಸಂಗೀತದಲ್ಲಿಯೂ ಸಹ ಈತ ಪಳಗಿದ್ದನೆಂದು ಇನ್ನಿತರ ಹಲವು ಗ್ರಂಥಗಳಿಂದ ತಿಳಿದು ಬರುತ್ತದೆ. ಈತ ಮುಂದೆ ಬೌದ್ಧ ಧರ್ಮದ ಸರ್ವಾಸ್ತಿವಾದದ ಕಡೆ ಮನಗೊಟ್ಟು, ಭೌದ್ಧ ಧರ್ಮ ಸ್ವೀಕರಿಸಿದ. ಈತ ಸಂಸ್ಕøತದಲ್ಲಿ ಅದೆಷ್ಟು ಪಳಗಿದ್ದ ಅಂದರೆ ಈತ ಬುದ್ಧನನ್ನು ಇನ್ನಿಲ್ಲದಂತೆ ವರ್ಣಿಸಿ ತನ್ನ ಕಾವ್ಯಾತ್ಮಕ ಗುಣಗಳ ಮೂಲಕ ಬುದ್ಧನನ್ನು ಕೊಂಡಾಡಿ ಬೌದ್ಧದರ್ಮ ಪ್ರಪಂಚದಲ್ಲಿ ಎಲ್ಲ ಕಡೆ ಬುದ್ಧನನ್ನು ಅರಿಯುವಂತೆ ಮಾಡಿದವರಲ್ಲಿ ಈತನೂ ಒಬ್ಬ. ಬುದ್ಧ ಚರಿತ ಈತನ ಸುಪ್ರಸಿದ್ಧ ಕೃತಿಗಳಲ್ಲಿ ಒಂದು.
ಸೌಂದರಾನಂದ ಈತನ ಇನ್ನೊಂದು ಕೃತಿ. ಸೌಂದರಾನಂದದಲ್ಲಿ ತನ್ನ ಪರಿಚಯವನ್ನು ಹೇಳಿಕೊಳ್ಳುತ್ತ ಈತನು :
ಸೌಂದರಾನಂದೇ ಮಹಾಕಾವ್ಯೇ ಅಜ್ಞ ವ್ಯಾಕರಣೋ ನಾಮ ಅಷ್ಟಾದಶಃ
ಸರ್ಗಃ ಆರ್ಯ ಸುವರ್ಣಾಕ್ಷೀಪುತ್ರಸ್ಯ ಸಾಕೇತಕಸ್ಯ ಭಿಕ್ಷೋರಾಚಾರ್ಯ
ಭದಂ ತಸ್ಯ ಅಶ್ವಘೋಷಸ್ಯ ಮಹಾ ಕವೇರ್ಮಹಾವಾದಿನಃ ಕೃತಿರಿಯಮ್
ಆರ್ಯ(ಗೌರವಸೂಚಕ)ಪುತ್ರಿಯಾದ ಸುವರ್ಣಾಕ್ಷೀ ದೇವಿಯ ಮಗನಾದ ನಾನು ಸಾಕೇತ ಅಂದರೆ ಅಯೋಧ್ಯೆಯವನು, ಆಧ್ಯಾತ್ಮಿಕ ಗುರುವಾಗಿ, ಭೌದ್ಧ ಭಿಕ್ಷುವಾಗಿ, ಭೌದ್ಧಮತದ ಉಪದೇಶಕನಾಗಿ, ಶ್ರೇಷ್ಠಕವಿಯಾಗಿ, ವಾಗ್ಮಿ ಮತ್ತು ಮಹಾವಾದಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಸೌಂದರನಂದದ ಹದಿನೆಂಟನೆಯ ಸರ್ಗವನ್ನು ಅಜ್ಞವ್ಯಾಕರಣವೆಂದು ಕರೆಯಲಾಗಿದೆ. ಈತನ ಕಾಲವನ್ನು ಕನಿಷ್ಕನ ಕಾಲ ಎಂದು ಪರಿಗಣಿಸಲಾಗಿದೆ. ಕ್ರಿ. ಶ. 78 ರಿಂದ 150. ಬೌದ್ಧಮತದ ಅಷ್ಟಾಂಗ ಮಾರ್ಗವನ್ನು ಕಟ್ಟು ನಿಟ್ಟಾಗಿ ಅನುಸರಿಸಿದವನು. ಅಶ್ವಘೋಷ ಬಳಸಿದ ಭಾಷೆಯನ್ನು ಗಮನಿಸಿದರೆ ಪ್ರೌಢ ಸಂಸ್ಕøತವನ್ನು ಬಳಸಿದ್ದಾನೆ. ಕವಿಯಾಗಿ ನಾಟಕಕಾರನಾಗಿ ಸಂಗೀತಜ್ಞನಾಗಿ ಗುರುತಿಸಿಕೊಂಡ ಅಶ್ವಘೋಷ
ಬುದ್ಧಚರಿತ, ಸೌಂದರನಂದ ಎನ್ನುವ ಎರಡು ಮಹಾಕಾವ್ಯಗಳು, ಸೂತ್ರಾಲಂಕಾರ, ಸ್ವಲ್ಪಭಾಗ ಮಾತ್ರ ಸಂಸ್ಕೃತದಲ್ಲಿದೆ. ಮಹಾಯಾನ ಶ್ರದ್ಧೋತ್ಪಾದ, ಆ ಕಾಲದ ಮಹಾಯಾನ ಪಂಥದ ತತ್ತ್ವವಿವರಣೆ. ಗಂಡೀಸ್ತೋತ್ರಗಾಥಾ. ಛಂದೋಬದ್ದರಚನೆಯಲ್ಲಿ, ಸಂಗೀತಶಾಸ್ತ್ರದಲ್ಲಿ ಈತನ ವಿದ್ವತ್ತು ಅಪಾರ. ವಜ್ರಸೂಚೀ ಎನ್ನುವುದು ಧರ್ಮದ ಮೇಲಿನ ಹೋರಾಟವನ್ನು ಸೂಚಿಸುವ ಗ್ರಂಥ, ಶಾರೀಪುತ್ರಪ್ರಕರಣ, ನಾಟಕದ ಕೆಲವು ಭಾಗಗಳು ಮಾತ್ರ ದೊರೆತಿವೆ. ಅಶ್ವಘೋಷ ಕನಿಷ್ಕನಿಗೆ ಗುರುವಾಗಿದ್ದ. ಕನಿಷ್ಕ 125ರ ವೇಳೆಗೆ ಪೇಷಾವರ್ ನಗರದಲ್ಲಿ ಆಳುತ್ತಿದ್ದ. ಸಾರಾನಾಥದ ಅಶೋಕಸ್ತಂಭ ಶಾಸನದಲ್ಲಿ ಅಶ್ವಘೋಷ ರಾಜನ ನಿರ್ದೇಶನವಿದೆ. ಬಹುಶಃ ಇದು ಈ ಕವಿಯನ್ನೇ ಕುರಿತಿದ್ದಿರಬಹುದು. ಹಿಂದಿನ ಕಾಲದಲ್ಲಿ ಗುರುಗಳು, ಮಠಾಧಿಪತಿಗಳು, ಜ್ಞಾನಿಗಳು, ಕವಿಗಳು ಮೊದಲಾದ ಸಮಾಜದ ಉನ್ನತ ಪುರುಷರನ್ನು ರಾಜರೆಂದು ಕರೆಯುವುದು ವಾಡಿಕೆಯಲ್ಲಿತ್ತು. ಬೌದ್ಧಗುರು ಗಳ ಸಾಲಿನಲ್ಲಿ ಅಶ್ವಘೋಷ ಪಾರ್ಶ್ವನಾದ ಮೇಲೆ ನಾಗಾರ್ಜುನನಿಗಿಂತ ಹಿಂದೆ ಬರುತ್ತಾನೆ. ಬುದ್ಧಚರಿತ ಈಗ ಸಂಸ್ಕೃತದಲ್ಲಿ ಉಪಲಬ್ಧವಿರುವುದು 13 ಸರ್ಗಗಳು ಮಾತ್ರ. ಕಳೆದ ಶತಮಾನದಲ್ಲಿ ಅಮೃತಾನಂದ ಎನ್ನುವ ವಿದ್ವಾಂಸ ಇನ್ನೂ ನಾಲ್ಕು ಸರ್ಗಗಳನ್ನು ಪುರಕವಾಗಿ ರಚಿಸಿದ. ಈ ಕಾವ್ಯದಲ್ಲಿ ಬುದ್ಧನ ಮನೋಜ್ಞವಾದ ಜೀವನ ಮತ್ತು ಜ್ಞಾನೋಪದೇಶ ರಮಣೀಯವಾಗಿ ಚಿತ್ರಿಸಲ್ಪಟ್ಟಿವೆ. ಸರ್ಗಾನುಸಾರ ಕಥೆ ಹೀಗಿದೆ. ಇಕ್ಷ್ವಾಕು ವಂಶದ, ಶಾಕ್ಯರ ದೊರೆ ಶುದ್ಧೋದನನಿಗೆ ಅಪಗತ ಮಾಯೆಯಾದ ಮಾಯಾದೇವಿ ರಾಣಿ. ಕಪಿಲವಸ್ತು ರಾಜಧಾನಿ. ಒಮ್ಮೆ ಮಾಯಾದೇವಿಗೆ ಸ್ವಪ್ನದಲ್ಲಿ ಶ್ವೇತಗಜವೊಂದು ಹೊಟ್ಟೆಯನ್ನು ಹೊಕ್ಕಂತೆ ಭಾಸವಾಗುತ್ತದೆ. ಇದು ನಿಜವೋ ಎಂಬಂತೆ ಗರ್ಭವತಿಯಾಗುತ್ತಾಳೆ. ಕೆಲವು ದಿನಗಳು ಕಳೆಯಲು, ವನ ವಿಹಾರಕಾಲದಲ್ಲಿ ಲುಂಬಿನೀವನ ದಲ್ಲಿ ಲತಾವಲಂಬಿನಿಯಾಗಿದ್ದಾಗ ಮಾಯಾದೇವಿಯ ಪಾಶ್ರ್ವದಿಂದಲೇ ವೇದನಾರಹಿತವಾಗಿ ಶಿಶುವಿನ ಜನನವಾಗುತ್ತದೆ. ಜನಿಸಿದ ಕೂಡಲೇ ಮಗು ಎರಡು ಹೆಜ್ಜೆ ನಡೆದು ಸಿಂಹವಾಣಿ ಯಿಂದ ಹೀಗೆ ನುಡಿಯುತ್ತದೆ: ಜಗತ್ತಿನ ಒಳಿತಿಗಾಗಿ ಜ್ಞಾನಾರ್ಜನೆಗಾಗಿ ಜನ್ಮ ತಳೆದಿದ್ದೇನೆ ; ನನಗೆ ಇದೇ ಕಡೆಯ ಜನ್ಮ. ಪ್ರಕೃತಿಮಾತೆ ಅದ್ಭುತವಾಗಿ ಆಶ್ಚರ್ಯಜನಕವಾದ ಸಂಗತಿಗಳಿಂದ ಬುದ್ಧ ಜನನವನ್ನು ಸೂಚಿಸುತ್ತಾಳೆ. ತಾಯಿ ತಂದೆಗಳಿಗೆ ಆನಂದ ಮತ್ತು ಭಯ ಏಕಕಾಲದಲ್ಲುಂಟಾಗುತ್ತದೆ. ಬ್ರಾಹ್ಮಣರು ಈ ಶಿಶು ಮಹಾಜ್ಞಾನಿ ಅಥವಾ ಚಕ್ರವರ್ತಿಯಾಗು ವುದು ನಿಜವೆಂದು ಭವಿಷ್ಯ ನುಡಿಯುತ್ತಾರೆ. ಅಷ್ಟರಲ್ಲಿ ತನ್ನ ತಪೋಬಲದಿಂದ ಬುದ್ಧಜನ್ಮವನ್ನರಿತ ಅಸಿತ ಮಹರ್ಷಿ ತನ್ನ ಶೋಕವನ್ನು ನುಂಗಿಕೊಂಡು ಮುದುಕನಾದ ತಾನು ಬುದ್ಧನ ಉಪದೇಶವನ್ನು ಕೇಳುವವರೆಗೆ ಜೀವಿಸಿರುವುದಿಲ್ಲವಲ್ಲ ಎಂದು ಹಲುಬುತ್ತಾನೆ. ಜಗತ್ತಿನ ಮೋಹಾಂಧಕಾರವನ್ನು ನಾಶಗೊಳಿಸುವ ಸೂರ್ಯನೇ ಮಗನಾದರೂ ಮಗ ಎಲ್ಲಿ ಋಷಿಯೇ ಆಗುವನೋ ಎಂದು ಶುದ್ಧೋದನನಿಗೆ ಚಿಂತೆ ಪ್ರಾರಂಭವಾಯಿತು. ಜಾತಕರ್ಮಾದಿಗಳನ್ನು ನೆರವೇರಿಸಿ ಪುರಪ್ರವೇಶ ಮಾಡುತ್ತಾನೆ. ಹೀಗೇ ಕಥೆ ಸಾಗುತ್ತದೆ. ಇದರಲ್ಲಿ ಬುದ್ಧನ ಧರ್ಮಬೋಧೆ ಅವನ ದೈಹಿಕ ಅವಶೇಷಗಳ ವಿಚಾರವಾಗಿ ನಡೆದ ಕಲಹಗಳು ಮತ್ತು ಅಶೋಕ ಚಕ್ರವರ್ತಿಯ ವೃತ್ತಾಂತ ಇವೆಲ್ಲ ಉಕ್ತವಾಗಿವೆ. ಸೌಂದರನಂದ ಹದಿನೆಂಟು ಸರ್ಗಗಳ ಕಾವ್ಯ. ಬಹುಶಃ ಇದೇ ಅಶ್ವಘೋಷನ ಪ್ರಥಮ ಕೃತಿಯಾಗಿರಬಹುದು. ಏಕೆಂದರೆ ಈ ಗ್ರಂಥದ ಯಾವ ಭಾಗದಲ್ಲೂ ಇತರ ಗ್ರಂಥಗಳನ್ನು ಹೆಸರಿಸಿಲ್ಲ. ಅಶ್ವ್ಘೋಷನನ್ನು ರಾಜನೆಂದು ಕರೆದಿರುವುದು, ಕವಿಯೊಬ್ಬನನ್ನು ರಾಜಮರ್ಯಾದೆಯಿಂದ ಗೌರವಿಸಿ ಅವನ ಬಗ್ಗೆ ಶಾಸನವನ್ನೇ ಬರೆಸಿರುವುದು ಕವಿಗೆ ಕೊಟ್ಟ ಅತ್ಯುನ್ನತ ಗೌರವ.





Saturday 19 August 2017

ಸಮರಮುಖಮಖ ಹುಥ ಪ್ರಹತ ಸುರ ಪುರುಷ ಪಶೂಪಹಾರ - ದುರ್ವಿನೀತಃ


ಶಾಸನಗಳು ಅಂದರೆ ಸಾಮಾನ್ಯವಾಗಿ ಎಲ್ಲರೂ ಭಾವಿಸುವುದು ಆಗಿಹೋದ ಘಟಿತ ಘಟನೆಗಳ ದಾಖಲೀಕರಣ ಎಂದೇ ಭಾವಿಸುತ್ತಾರೆ. ಇದರ ಬರಹಗಳು ಕೇವಲ ರಾಜವಂಶ ಮತ್ತು ಬಿರುದು, ಮತ್ತು ರಾಜರುಗಳ ಯುದ್ಧದ ಕುರಿತಾದ ವಿವರಣೆ ಹಾಗೂ ದಾನ ದತ್ತಿ ಉಂಬಳಿ ಮತ್ತು ಕೆಲವು ವೀರರ ಕುರಿತಾದ ವಿಷಯಗಳು ಎಂದೇ ಭಾವಿಸಿರುತ್ತಾರೆ. ಆದರೆ ಅದಕ್ಕೂ ಮಿಗಿಲಾದ ಮತ್ತು ಅದ್ಭುತವಾದ ಅಂಶಗಳನ್ನೂ ಅನೇಕ ಶಾಸನಗಳು ಹೊಂದಿರುತ್ತವೆ ಅನ್ನುವುದು ಇಂತಹ ಶಾಸನಗಳಿಂದ ತಿಳಿದುಬರುತ್ತದೆ. 6ನೇ ಶತಮಾನದಲ್ಲಿದ್ದ ಭಾರವಿಯ ಕಿರಾತಾರ್ಜುನೀಯ ಕೃತಿಯ ಹದಿನೈದನೆಯ ಸರ್ಗಕ್ಕೆ ಟೀಕೆಯನ್ನು ದುರ್ವೀತನು ಬರೆದ ಎನ್ನುವುದಾಗಿ ಉಲ್ಲೇಖಿಸಲಾಗಿದೆ. ದುರ್ವಿನೀತನು ಸಂಸ್ಕೃತ ಭಾಷೆಯ ಮೇರು ಕವಿಯಾಗಿದ್ದ ಎನ್ನುವುದು ಇದರಿಂದ ತಿಳಿದು ಬರುತ್ತದೆ. ಕೋಲಾರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹೊಸಪೇಟೆಯಲ್ಲಿರುವ ಕೊಟ್ಟಿಂಬ ಶಾಸನ, 799ನೇ ಇಸವಿಯ ಈ ಶಾಸನ ಗಂಗ ವಂಶದ ಯುವರಾಜ ಮಾರಸಿಂಹನದ್ದು. ಗಂಗದೊರೆ ಮಾರಸಿಂಹನ ದತ್ತಿಯ ಕುರಿತಾದ ಶಾಸನ. ಕನ್ನಡ ಲಿಪಿ ಮತ್ತು ಸಂಸ್ಕೃತ - ಮತ್ತು ಕನ್ನಡ ಭಾಷೆಯಲ್ಲಿರುವ ದ್ವಿಭಾಷಾ ಶಾಸನ.113 ಸಾಲುಗಳ ದೀರ್ಘವಾದ ಶಾಸನದಲ್ಲಿ 109ಸಾಲುಗಳು ಸಂಸ್ಕೃತ ಭಾಷೆಯಲ್ಲಿಯೂ ಉಳಿದವು ಕನ್ನಡದಲ್ಲಿಯೂ ಇವೆ. ಕಿರಾತಾರ್ಜುನೀಯದ ಉಲ್ಲೇಖ ಸಿಗುವುದು 16ನೇ ಸಾಲಿನಲ್ಲಿ.

"ಸಮರಮುಖಮಖ ಹುಥ ಪ್ರಹತ ಸುರ ಪುರುಷ ಪಶೂಪಹಾರ ವಿಘಸವಿಹಸ್ತಿ ಕೃತ ಕೃತಾಂತಾಗ್ನಿಮು"
"ಖಃ ಕೀರಾತಾರ್ಜುನೀಯ ಪಞ್ಚದಶ ಸರ್ಗ್ಗಟೀಕಾಕಾರೋ ದುರ್ವಿನೀತ ನಾಮಧೇಯಃ"