Search This Blog

Friday 14 July 2017

ಪೊರಾಣಪೊಕಿತಿಯ - ಖರೋಷ್ಟಿಯ - ಚಪಡ

ಖರೋಷ್ಟೀ ಮೂಲದವನಾದ ಅರಮೈಕ್ ಮತ್ತು ಬ್ರಾಹ್ಮಿಯನ್ನು ಬಲ್ಲಂತಹ ಸಂಸ್ಕೃತದ ಪಾಂಡಿತ್ಯವನ್ನು ಹೊಂದಿದ್ದ ವಿದ್ವಾಂಸನೊಬ್ಬ ಗಾಂಧಾರದ ಶಿಲ್ಪವನ್ನು ಮೈಗೂಡಿಸಿಕೊಂಡು ದೂರದ ಗಾಂಧಾರದಿಂದ ನಾಲಂದಕ್ಕೆ ಕಲೆಯನ್ನು ಕಲಿಯುವ ಉದ್ದೇಶದಿಂದ ಬರುತ್ತಾನೆ. ಹಾಗೆ ಬಂದ ವಿದ್ವಾಂಸನಿಗೆ ಇಲ್ಲಿ ಕಲೆಗೆ ಅಷ್ಟೊಂದು ಮಹತ್ವವಿಲ್ಲದ ಕಾಲವಾಗಿದ್ದು ಲಿಪಿಕಾರನಾಗಿ ಪರಿಚಿತನಾಗುತ್ತಾನೆ. ಅದೇ ಕಾಲಕ್ಕೆ ಪ್ರಾಕೃತವನ್ನು ಭಾಷೆಯಾಗಿ ಬಳಸಿಕೊಂಡು ಬ್ರಾಹ್ಮಿಯನ್ನು ಲಿಪಿಯಾಗಿ ಉಪಯೋಗಿಸಿಕೊಂಡು ದೇಶಾದ್ಯಂತ ಧರ್ಮ ಪ್ರಸಾರದ ಕಾರ್ಯವನ್ನು ನಡೆಸುವ ಸಲುವಾಗಿ ಲಿಪಿಕಾರರನ್ನು ಅಶೋಕ ಹುಡುಕುತ್ತಿದ್ದ. ಈ ವಿದ್ವಾಂಸನ ಲಿಪಿಜ್ಞಾನವನ್ನು ಬಳಸಿಕೊಂಡು ಪ್ರಾಕೃತ ಭಾಷೆಯನ್ನು ಬಳಸಿಕೊಂಡು ಬ್ರಾಹ್ಮಿಯಲ್ಲಿ ಬೃಹತ್ ಮತ್ತು ಕಿರು ಬಂಡೆಗಳ ಮೇಲೆ ತನ್ನ ಧರ್ಮ ಪ್ರಸಾರವನ್ನು ಕೈಗೊಂಡ. ಆದರೆ ಅಶೋಕನ ಕಟ್ಟುನಿಟ್ಟಿನ ಆದೇಶದಿಂದಾಗಿ ತಾನು ಕಟ್ಟಿ ನಿಲ್ಲಿಸಿದ ಸಾಮ್ರಾಜ್ಯದಲ್ಲಿನ ಯಾವುದೇ ಸಾಹಿತಿಗಳೋ ಲಿಪಿಕಾರರೋ ಸಾಧಕರದ್ದೋ ಹೆಸರು ಹೊರಗೆ ಪ್ರಕಾಶಿಸಲೇ ಇಲ್ಲ. ಆದರೆ ಈ ಗಾಂಧಾರದ ಶಿಲ್ಪಿ. ಉತ್ತರದಿಂದ ದಕ್ಷಿಣದ ಬ್ರಹ್ಮಗಿರಿಗೆ ಬಂದವನಿಗೆ ಇನ್ನು ಅಶೋಕ ಇಲ್ಲಿಗೆ ಬರುವುದಿಲ್ಲ ಅನ್ನಿಸಿರಲೂ ಬಹುದು ಮತ್ತು ತಾನು ಬ್ರಾಹ್ಮಿಯನ್ನು ಅಲ್ಲದೇ ಬೇರೆ ಲಿಪಿಯನ್ನು ಬಲ್ಲವನು ಅನ್ನುವುದನ್ನು ಪ್ರಜೆಗಳಿಗೆ ತಿಳಿಸಲೋಸುಗವೋ ಅಶೋಕನ ಆಜ್ಞೆಯನ್ನು ಧಿಕ್ಕರಿಸಿ ತನ್ನ ಹೆಸರನ್ನು ಖರೋಷ್ಟಿಯಲ್ಲಿ "ಚಪಡೇನ ಲಿಖಿತಂ ಲಿಪಿಕರೇಣ" ಬರೆದು ಶಾಸನವನ್ನು ಕೊನೆಗೊಳಿಸುತ್ತಾನೆ. ಈತ ದಕ್ಷಿಣಕ್ಕೆ ಬಂದು ಲಿಪಿಯನ್ನು ಖಂಡರಿಸದೇ ಇದ್ದರೆ ದಕ್ಷಿಣದಲ್ಲಿ ಲಿಪಿಯ ಬಳಕೆ ಅದೆಷ್ಟೊ ಸಮಯ ತೆಗೆದುಕೊಳ್ಳುತಿದ್ದಿರಬಹುದು. "ಪೊರಾಣ ಪೊಕಿತಿ" ಎನ್ನುವ ಪಾರಂಪರಿಕ ಧರ್ಮವೊಂದು ನಮಗೆ ಗೋಚರಿಸುತ್ತಲೇ ಇರಲಿಲ್ಲ. ಇಂತಹ ಚಪಡ ಬಹುಭಾಷಾ ಅನೇಕ ಲಿಪಿಗಳ ವಿದ್ವಾಂಸನಾಗಿದ್ದನಲ್ಲದೇ ನಮಗೆ ಲಿಪಿಯೊಂದನ್ನು ಪರಿಚಯಿಸಿ "ಇಸಿಲ" ವನ್ನು ದಾಖಲಿಸಿ ಕನ್ನಡವನ್ನು ಪುರಾತನಗೊಳಿಸಿದ ಬಹು ದೂರದ ವಿದ್ವಾಂಸ.
  

Tuesday 11 July 2017

ದಿವ್ಯಪ್ಸರಸೆಯರೊಡ ನೆರದು ಸಮ್ಬು ಸನ್ತೋಸದಿಳ್ದಂ

ಬೆಳಗಾವಿ ಜಿಲ್ಲೆಯ ಪರಸಗಡ ತಾಲೂಕಿನ ಕೋಟೂರು ಪರಮಾನಂದ ದೇವಾಲಯದ ದಕ್ಷೀನಕ್ಕಿರುವ ಈ ವೀರಗಲ್ಲು ಬಾದಾಮಿ ಚಾಲುಕ್ಯರ ಪರಹಿತರಾಜನದ್ದು. ಸುಮಾರು ೯ನೇ ಶತಮಾನದ ಕಾಲಮಾನ. ಈ ಶಾಸನದಲ್ಲಿ "ವೇಳೆಗೊಂಡು" ವೇಳೆವಡಿಚರು ಮಿನ್ನಪ್ಪೋರು, ಮೀಗದುಳ್ಳೋರು, ಬಗೆವೊಡೆವರ್. ಹೀಗೆ ಅನೇಕ ವಿಷಯಗಳನ್ನು ತಿಳಿಸುತ್ತಾ ಶಂಭುವನ್ನು ನೆನೆಯುತ್ತಿರುವ ಶಾಸನವಿದು. ಮನದೊಳ್ ಮೃಡನ ನಗುವಾಗೆ ಎನ್ನುತ್ತಾ ಈ ಶಾಸನ ವಿಶಿಷ್ಟವಾಗುತ್ತದೆ. ಕೊನೆಯಲ್ಲಿ ಪಸರೆಯ ಜೊತೆ ಶಂಭುವು ಸುಖದಿಂದ ಇದ್ದ ಎನ್ನುತ್ತದೆ.

1. ಶ್ರೀಜಯಯುತಂಗೆ ಪರಹಿತರಾಜಂಗೆ ಚಾಳುಕ್ಯವಂಶದಾತಂಗೆ ಲಸ
2. ದ್ರಾಜಿತಗುಣಂಗೆ ಸಮ್ಬು ವಿರಾಜೀ(ಜಿ)ತಮತಿ ವೇಳೆಗೊಣ್ಡು ಭಯರಹಿತಮನಂ [||]
3. ಜಡಿ ರಜತೋದರದಳ್ಕದೆ ತಡದಡಿಸದೆ ನಡದು ದಹನನಂ ವೊಲಗೊಣ್ವೋ
4. ಗಡಿಸದೆ ಚಿನ್ತಿಸಿ ಮನದೊಳ್ಮೃಡನ ನಗುಮ್ವಾಗೆ ಪಾಯ್ದ ಸಮ್ಬುವೆ ಬೀರಂ ||
5. ಕಿಚ್ಚಿನೊೞಗಿೞ್ದು ಸಮ್ಬು ನಿಜೇಚ್ಚೆಯಿನೊಲದಾರಿವಾರಿಮೆನ್ದನುನಯದಿಂ
6. ಬಿಚ್ಚಳಿಕೆವೆರಸಿ ಮನದೊಳ್ಮೆಚ್ಚಿ ಮಹೇಶ್ವರನನಲ್ಲಿ ಚಿನ್ತಿಸುತಿೞ್ದಂ ||
7. ಪೊಗಳಲ್ಕಳುಮ್ಬಮಪ್ಪೊಳ್ಪುಗೞನೆ ತನಗವನೆ ಸಾ(ಶ)ಶ್ವತಂ-ಮಾಡಿ ಧಗ
8. ದ್ಧಗಿತ ಶಿಖಿ ಸೆಕೆಯ ಕೊಳೆ ನಗೆ ಮೊಗದಿಂ [ಶ]ಮ್ಬುವನೆ ಸಮ್ಬು ನೆನೆಯುತಿಳ್ದಂ ||
9. ಸಮ್ಬುಗಮಚಿನ್ತ್ಯಮಾಯ್ತು ಗುಣಂಬಗೆಯಲ್ಕಳ . . . . . ಬೀರಮನಿದನಾವೊಂ
10. ಮುಮ್ಬಗೆದು ಪೊಗಳಲ್ಕಱಿಇವೊಂ ಸಮ್ಬುವನಮ್ಬುಧಿ[ವಾ]ರಿತ ಧರಣೀತಲದೊಳ್ ||
11. ಮುನ್ನೆಗೞ್ದ ವೇಳೆವಡಿಚರುಮಿನ್ನಪ್ಪೋರುಮೀಗದುಳ್ಳೊರುಂ ಬಗೆವೊಡವರ್
12. ನಿನ್ನನ್ನರೆ ನಿನ್ನನ್ನರೆ ನಿನ್ನನ್ನರೆ ನಿನಗೆ ನೀನೆ ದೊರೆಯಯ್ಸಮ್ಬೂ ||
13. ಚರ್ಚಾದ್ಯಂ ಭವನ ಗುಣಂ ಬೆಚ್ಚಿರೆ ತನ್ನೊಳ್ಸಮನ್ತು ಸಮ್ಬು ನಿತಾನ್ತಂ
14. ಕಿಚ್ಚಂ ಪೊಕ್ಕುದನೀ ಜಗಮಚ್ಚರಿ-ವಟ್ಟದನೆ ನುಡಿಯುತಿರ್ಪ್ಪುದು ನಿಚ್ಚಂ||
15. ಉರಿಗೊಡ್ಡಿ ಮೆಯ್ಯನಳ್ಕದೆ ಪರಮ-ತಪೋಧನ-ನಿವಿತ್ತಿಯಿನ್ದಿರಿದು ಮಹೇ-
16. ಶ್ವರನನೆ ಚಿನ್ತಿಸಿ ದಿವ್ಯಪ್ಸರಸೆಯರೊಡ ನೆರದು ಸಮ್ಬು ಸನ್ತೋಸದಿಳ್ದಂ ||



Saturday 8 July 2017

ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ

ಶರೀರಂ ಸುರೂಪಂ ತಥಾ ವಾ ಕಲತ್ರಂ ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್| || ೧ ||

ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ ಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ೨ ||

ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್|| ೩ ||

ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ ಸದಾಚಾರ ವೃತ್ತೆಷು ಮತ್ತೋ ನ ಚಾನ್ಯಃ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್|| ೪ ||

ಕ್ಷಮಾಮಂಡಲೇ ಭೂಪಭೂಪಾಲ ಬೃಂದೈಃ ಸದಾ ಸೇವಿತಂ ಯಸ್ಯ ಪಾದಾರವಿಂದಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್|| ೫ ||

ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್ ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್|| ೬ || 
ನ ಭೋಗೇ ನ ಯೋಗೇ ನ ವಾ ವಾಜಿರಾಜೌ ನ ಕಾಂತಾ ಮುಖೇ ನೈವ ವಿತ್ತೇಷು ಚಿತ್ತಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್|| || 
ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ ನ ದೇಹೇ ಮನೋ ವರ್ತತೇ ಮೇ ತ್ವನರ್ಧ್ಯೇ
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್|| 8 ||