Search This Blog

Tuesday 11 July 2017

ದಿವ್ಯಪ್ಸರಸೆಯರೊಡ ನೆರದು ಸಮ್ಬು ಸನ್ತೋಸದಿಳ್ದಂ

ಬೆಳಗಾವಿ ಜಿಲ್ಲೆಯ ಪರಸಗಡ ತಾಲೂಕಿನ ಕೋಟೂರು ಪರಮಾನಂದ ದೇವಾಲಯದ ದಕ್ಷೀನಕ್ಕಿರುವ ಈ ವೀರಗಲ್ಲು ಬಾದಾಮಿ ಚಾಲುಕ್ಯರ ಪರಹಿತರಾಜನದ್ದು. ಸುಮಾರು ೯ನೇ ಶತಮಾನದ ಕಾಲಮಾನ. ಈ ಶಾಸನದಲ್ಲಿ "ವೇಳೆಗೊಂಡು" ವೇಳೆವಡಿಚರು ಮಿನ್ನಪ್ಪೋರು, ಮೀಗದುಳ್ಳೋರು, ಬಗೆವೊಡೆವರ್. ಹೀಗೆ ಅನೇಕ ವಿಷಯಗಳನ್ನು ತಿಳಿಸುತ್ತಾ ಶಂಭುವನ್ನು ನೆನೆಯುತ್ತಿರುವ ಶಾಸನವಿದು. ಮನದೊಳ್ ಮೃಡನ ನಗುವಾಗೆ ಎನ್ನುತ್ತಾ ಈ ಶಾಸನ ವಿಶಿಷ್ಟವಾಗುತ್ತದೆ. ಕೊನೆಯಲ್ಲಿ ಪಸರೆಯ ಜೊತೆ ಶಂಭುವು ಸುಖದಿಂದ ಇದ್ದ ಎನ್ನುತ್ತದೆ.

1. ಶ್ರೀಜಯಯುತಂಗೆ ಪರಹಿತರಾಜಂಗೆ ಚಾಳುಕ್ಯವಂಶದಾತಂಗೆ ಲಸ
2. ದ್ರಾಜಿತಗುಣಂಗೆ ಸಮ್ಬು ವಿರಾಜೀ(ಜಿ)ತಮತಿ ವೇಳೆಗೊಣ್ಡು ಭಯರಹಿತಮನಂ [||]
3. ಜಡಿ ರಜತೋದರದಳ್ಕದೆ ತಡದಡಿಸದೆ ನಡದು ದಹನನಂ ವೊಲಗೊಣ್ವೋ
4. ಗಡಿಸದೆ ಚಿನ್ತಿಸಿ ಮನದೊಳ್ಮೃಡನ ನಗುಮ್ವಾಗೆ ಪಾಯ್ದ ಸಮ್ಬುವೆ ಬೀರಂ ||
5. ಕಿಚ್ಚಿನೊೞಗಿೞ್ದು ಸಮ್ಬು ನಿಜೇಚ್ಚೆಯಿನೊಲದಾರಿವಾರಿಮೆನ್ದನುನಯದಿಂ
6. ಬಿಚ್ಚಳಿಕೆವೆರಸಿ ಮನದೊಳ್ಮೆಚ್ಚಿ ಮಹೇಶ್ವರನನಲ್ಲಿ ಚಿನ್ತಿಸುತಿೞ್ದಂ ||
7. ಪೊಗಳಲ್ಕಳುಮ್ಬಮಪ್ಪೊಳ್ಪುಗೞನೆ ತನಗವನೆ ಸಾ(ಶ)ಶ್ವತಂ-ಮಾಡಿ ಧಗ
8. ದ್ಧಗಿತ ಶಿಖಿ ಸೆಕೆಯ ಕೊಳೆ ನಗೆ ಮೊಗದಿಂ [ಶ]ಮ್ಬುವನೆ ಸಮ್ಬು ನೆನೆಯುತಿಳ್ದಂ ||
9. ಸಮ್ಬುಗಮಚಿನ್ತ್ಯಮಾಯ್ತು ಗುಣಂಬಗೆಯಲ್ಕಳ . . . . . ಬೀರಮನಿದನಾವೊಂ
10. ಮುಮ್ಬಗೆದು ಪೊಗಳಲ್ಕಱಿಇವೊಂ ಸಮ್ಬುವನಮ್ಬುಧಿ[ವಾ]ರಿತ ಧರಣೀತಲದೊಳ್ ||
11. ಮುನ್ನೆಗೞ್ದ ವೇಳೆವಡಿಚರುಮಿನ್ನಪ್ಪೋರುಮೀಗದುಳ್ಳೊರುಂ ಬಗೆವೊಡವರ್
12. ನಿನ್ನನ್ನರೆ ನಿನ್ನನ್ನರೆ ನಿನ್ನನ್ನರೆ ನಿನಗೆ ನೀನೆ ದೊರೆಯಯ್ಸಮ್ಬೂ ||
13. ಚರ್ಚಾದ್ಯಂ ಭವನ ಗುಣಂ ಬೆಚ್ಚಿರೆ ತನ್ನೊಳ್ಸಮನ್ತು ಸಮ್ಬು ನಿತಾನ್ತಂ
14. ಕಿಚ್ಚಂ ಪೊಕ್ಕುದನೀ ಜಗಮಚ್ಚರಿ-ವಟ್ಟದನೆ ನುಡಿಯುತಿರ್ಪ್ಪುದು ನಿಚ್ಚಂ||
15. ಉರಿಗೊಡ್ಡಿ ಮೆಯ್ಯನಳ್ಕದೆ ಪರಮ-ತಪೋಧನ-ನಿವಿತ್ತಿಯಿನ್ದಿರಿದು ಮಹೇ-
16. ಶ್ವರನನೆ ಚಿನ್ತಿಸಿ ದಿವ್ಯಪ್ಸರಸೆಯರೊಡ ನೆರದು ಸಮ್ಬು ಸನ್ತೋಸದಿಳ್ದಂ ||



No comments:

Post a Comment