Search This Blog

Monday 17 October 2016

ಆರ್ಯಪುರದ ನಭೂತೋ ನ ಭವಿಷ್ಯತಿ

ಸುಮಾರು ಕ್ರಿ ಶ ಏಳನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಹುಚ್ಚಪ್ಪಯ್ಯ ಗುಡಿ ಅಯ್ಯಾವೊಳೆ ಅಥವಾ ಐಹೊಳೆಯ ಗತ ಇತಿಹಾಸದ ಕುರುಹಾಗಿ ಇಂದಿಗೂ ಕಾಣಸಿಗುವಲ್ಲಿ ಪ್ರಮುಖವಾಗಿರುವಂತಹದ್ದು. ಆರ್ಯಪುರವೆಂದು ಸಂಸ್ಕೃತದಲ್ಲಿ ಕರೆಸಿಕೊಂಡ ಈ ಊರು ಅನೇಕ ಶಿಲ್ಪಿಗಳ ಆಶ್ರಯ ತಾಣ ವಾಗಿತ್ತು. ನರಸೊಬ್ಬ ಎನ್ನುವ ಪ್ರಮುಖ ಶಿಲ್ಪಿಯೊಬ್ಬ ಆಕಾಲದಲ್ಲಿನ ಅರಮನೆಯ ವಾಸ್ತುಶಾಸ್ತ್ರದಲ್ಲಿ ಅತ್ಯಂತ ಪ್ರಸಿದ್ಧ ನಾಗಿದ್ದುದು ಶಾಸನ ಒಂದರಲ್ಲಿ ಆತನನ್ನು ನಭೂತೋ ನ ಭವಿಷ್ಯತಿ ಎನ್ನುವುದಾಗಿ ಹೊಗಳಿದ್ದರಿಂದ ತಿಳಿದು ಬರುತ್ತದೆ. ಐಹೊಳೆಯ ಅನೇಕ ಕಡೆಗಳಲ್ಲಿ ಶಿಲ್ಪಿಗಳನ್ನು ಅತಿಶಯವಾಗಿ ಹೊಗಳಿರುವುದು ಹೊಗಳಿಸಿಕೊಂಡಿರುವುದು ಕಾಣ ಸಿಗುತ್ತದೆ.




No comments:

Post a Comment