Search This Blog

Saturday 19 August 2017

ಸಮರಮುಖಮಖ ಹುಥ ಪ್ರಹತ ಸುರ ಪುರುಷ ಪಶೂಪಹಾರ - ದುರ್ವಿನೀತಃ


ಶಾಸನಗಳು ಅಂದರೆ ಸಾಮಾನ್ಯವಾಗಿ ಎಲ್ಲರೂ ಭಾವಿಸುವುದು ಆಗಿಹೋದ ಘಟಿತ ಘಟನೆಗಳ ದಾಖಲೀಕರಣ ಎಂದೇ ಭಾವಿಸುತ್ತಾರೆ. ಇದರ ಬರಹಗಳು ಕೇವಲ ರಾಜವಂಶ ಮತ್ತು ಬಿರುದು, ಮತ್ತು ರಾಜರುಗಳ ಯುದ್ಧದ ಕುರಿತಾದ ವಿವರಣೆ ಹಾಗೂ ದಾನ ದತ್ತಿ ಉಂಬಳಿ ಮತ್ತು ಕೆಲವು ವೀರರ ಕುರಿತಾದ ವಿಷಯಗಳು ಎಂದೇ ಭಾವಿಸಿರುತ್ತಾರೆ. ಆದರೆ ಅದಕ್ಕೂ ಮಿಗಿಲಾದ ಮತ್ತು ಅದ್ಭುತವಾದ ಅಂಶಗಳನ್ನೂ ಅನೇಕ ಶಾಸನಗಳು ಹೊಂದಿರುತ್ತವೆ ಅನ್ನುವುದು ಇಂತಹ ಶಾಸನಗಳಿಂದ ತಿಳಿದುಬರುತ್ತದೆ. 6ನೇ ಶತಮಾನದಲ್ಲಿದ್ದ ಭಾರವಿಯ ಕಿರಾತಾರ್ಜುನೀಯ ಕೃತಿಯ ಹದಿನೈದನೆಯ ಸರ್ಗಕ್ಕೆ ಟೀಕೆಯನ್ನು ದುರ್ವೀತನು ಬರೆದ ಎನ್ನುವುದಾಗಿ ಉಲ್ಲೇಖಿಸಲಾಗಿದೆ. ದುರ್ವಿನೀತನು ಸಂಸ್ಕೃತ ಭಾಷೆಯ ಮೇರು ಕವಿಯಾಗಿದ್ದ ಎನ್ನುವುದು ಇದರಿಂದ ತಿಳಿದು ಬರುತ್ತದೆ. ಕೋಲಾರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹೊಸಪೇಟೆಯಲ್ಲಿರುವ ಕೊಟ್ಟಿಂಬ ಶಾಸನ, 799ನೇ ಇಸವಿಯ ಈ ಶಾಸನ ಗಂಗ ವಂಶದ ಯುವರಾಜ ಮಾರಸಿಂಹನದ್ದು. ಗಂಗದೊರೆ ಮಾರಸಿಂಹನ ದತ್ತಿಯ ಕುರಿತಾದ ಶಾಸನ. ಕನ್ನಡ ಲಿಪಿ ಮತ್ತು ಸಂಸ್ಕೃತ - ಮತ್ತು ಕನ್ನಡ ಭಾಷೆಯಲ್ಲಿರುವ ದ್ವಿಭಾಷಾ ಶಾಸನ.113 ಸಾಲುಗಳ ದೀರ್ಘವಾದ ಶಾಸನದಲ್ಲಿ 109ಸಾಲುಗಳು ಸಂಸ್ಕೃತ ಭಾಷೆಯಲ್ಲಿಯೂ ಉಳಿದವು ಕನ್ನಡದಲ್ಲಿಯೂ ಇವೆ. ಕಿರಾತಾರ್ಜುನೀಯದ ಉಲ್ಲೇಖ ಸಿಗುವುದು 16ನೇ ಸಾಲಿನಲ್ಲಿ.

"ಸಮರಮುಖಮಖ ಹುಥ ಪ್ರಹತ ಸುರ ಪುರುಷ ಪಶೂಪಹಾರ ವಿಘಸವಿಹಸ್ತಿ ಕೃತ ಕೃತಾಂತಾಗ್ನಿಮು"
"ಖಃ ಕೀರಾತಾರ್ಜುನೀಯ ಪಞ್ಚದಶ ಸರ್ಗ್ಗಟೀಕಾಕಾರೋ ದುರ್ವಿನೀತ ನಾಮಧೇಯಃ"


No comments:

Post a Comment