Search This Blog

Wednesday 23 August 2017

ದುರ್ವಿನೀತನ ಶಬ್ದಾವತಾರ ಸಂಸ್ಕøತವಾದರೆ ವಡಕಥಾ ???

ದುರ್ವಿನೀತನ ಶಬ್ದಾವತಾರ ಸಂಸ್ಕøತವಾದರೆ ವಡಕಥಾ ???
ಆರಂಭ ಕಾಲದ ಕದಂಬರಿಗಿಂತ ಹೆಚ್ಚು ಸಮಯ ನಮ್ಮ ನಾಡನ್ನು ಆಳಿದವರಲ್ಲಿ ಗಂಗರು ಪ್ರಮುಖರು. ಧರ್ಮನಿಷ್ಠರಾಗಿದ್ದ ಗಂಗರು ಕನ್ನಡನಾಡಿಗೆ ಕೊಟ್ಟ ಕೊಡುಗೆ ಅಪೂರ್ವ ಪ್ರಾಯಶ ಗಂಗರು ಸುಸಂಸ್ಕøತರಾಗಿದ್ದರು ಮತ್ತು ಭಾಷೆ ಮತ್ತು ಲಿಪಿಗಳ ಅಭಿಮಾನಿಗಳಾಗಿದ್ದರು ಕರ್ನಾಟಕದಲ್ಲಿ ಆಗಿನ್ನೂ ಎರಡು ಮೂರು ಶತಮಾನಗಳ ಅಂತರದಲ್ಲಿ  ಪ್ರಾಕೃತ ಮತ್ತು ಬ್ರಾಹ್ಮಿಯಲಿಪಿಯ ಕೊಂಡಿ ಕಳಚಿಕೊಂಡ ಕಾಲ ಕದಂಬರು ಬ್ರಾಹ್ಮಿಯಿಂದ ಹೊರಬಂದಿದ್ದರು ಆಗ ಗಂಗರು ಸಂಸ್ಕøತವನ್ನು ಆಯ್ದುಕೊಂಡದ್ದು ಅವರ ಬಹುತೇಕ ತಾಮ್ರಪಟ ಶಾಸನಗಳಿಂದ ತಿಳಿದು ಬರುತ್ತದೆ. ಶಾಸನಕೋಟೆ ತಾಮ್ರಪಟದಿಂದ ತಿಳಿದು ಬರುತ್ತದೆ. ಕನ್ನಡ ಪದಗಳನ್ನು ಸಂಸ್ಕøತ ಭಾಷಾ ಶಾಸನದಲ್ಲಿ ಸೇರಿಸಿ ಬರೆದ ಇನ್ನೊಂದು ವಿದವನ್ನು ಹರಿವರ್ಮನ ಕೂಡಲೂರು ಮತ್ತು ತುಂಬಲು ಶಾಸನದಿಂದ ತಿಳಿಯುತ್ತದೆ, ಹಾಗೆ ಸಂಪೂರ್ಣ ಕನ್ನಡದಲ್ಲಿ ಬರೆದ ಶಾಸನ ಕಾಣಸಿಗುವುದು ಗಂಗರ ಸಿರಗುಂದ ಶಾಸನದಿಂದ.   
ಕೋಲಾರ ಜಿಲ್ಲೆಯ ಮುಳಬಾಗಿಲಿನ ಉತ್ತನೂರು ಶಾಸನ ಗಂಗ ದೊರೆ ದುರ್ವಿನೀತನದ್ದು. ದುರ್ವಿನೀತನು ತನ್ನ ಆಳ್ವಿಕೆಯ 20ನೇ ವರ್ಷದಲ್ಲಿ ಪುದಲ್ನಾಡ ರಾಷ್ಟ್ರದ ಕೋಳಿಳ್ತೂರು ಗ್ರಾಮವನ್ನು ನಲ್ವತ್ತೆಂಟು ವೈದಿಕ ಬ್ರಾಹ್ಮಣರಿಗೆ ಮೂವತ್ತೆರಡು ಪರಿಹಾರಗಳೊಡನೆ ಕೊಟ್ಟನು. ರೇಡಿಯೂರ ಗ್ರಾಮದ ಕ್ಷೇತ್ರದಾರರಿಗೆ ಯಾವ ತೊಂದರೆಯೂ ಆಗದಂತೆ ಗ್ರಾಮದ ಕೆರೆಯಿಂದ ನೀರುಸಿಗುವಂತೆ ಮಾಡುವ ಕ್ಷೇತ್ರಗಳಿಗೆ ಸೀಮಿತಗೊಳಿಸಿ, ಇದನ್ನು ಬಳಸಬೇಕೆಂಬುದನ್ನು ಈ ಶಾಸನದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ವಿವರಗಳನ್ನೊಳಗೊಂಡ ಸಂಸ್ಕøತ ಭಾಷಾ ದಾಖಲೆಯನ್ನು ಐದು ತಾಮ್ರಪಟಗಳ ಒಂಬತ್ತು ಪುಟಗಳ ಮೇಲೆ 40 ಸಾಲುಗಳಲ್ಲಿ ಪ್ರಾಚೀನ ಕನ್ನಡ ಲಿಪಿಯಲ್ಲಿ ಬರೆದವನು, ಕೂನಾಚಾಯ್ರ್ಯ ಎನ್ನುವವನÀ ವಂಶದವನಾದ ಕೊಂಗಣಿ ಪೆಂದಟ್ಟಾರನು. ಇದಕ್ಕೆ ಪ್ರತಿಫಲವಾಗಿ ಈ ಲಿಪಿಕಾರನು ದುರ್ವಿನೀತನಿಂದ ಒಂದು ಖಂಡುಗ ಬೀಜದ ಗದ್ದೆಯನ್ನು ಪಡೆದುಕೊಂಡನು. ಈ ತಾಮ್ರಪಟದ ವೈಶಿಷ್ಟ್ಯವೆಂದರೆ ಈ ಶಾಸನಕವಿಯು ದುರ್ವಿನೀತನ ಬಗ್ಗೆ ಒಂದು ವಿಶೇಷ ಮಾಹಿತಿಯನ್ನು ಮೊದಲ ಬಾರಿಗೆ ಕೊಡುತ್ತಾ ದುರ್ವಿನೀತನು ಶಬ್ದಾವತಾರಎನ್ನು ಗ್ರಂಥವೊಂದನ್ನು ಬರೆದ ಕುರಿತು, ಮತ್ತು ದೇವಭಾರತಿ ಸಂಪಾದಿತ ವಡ್ಡಕಥಾವನ್ನು ರಚಿಸಿದ ಮಾಹಿತಿಯೊಂದಿಗೆ ಕಿರಾತಾರ್ಜುನೀಯದ ಹದಿನೈದನೆಯ ಸರ್ಗಕ್ಕೆ ಟೀಕೆಗಳನ್ನು ಬರೆದನೆಂದೂ ಹೇಳುವನು.

ದುರ್ವಿನೀತನು ಕಿರಾತಾರ್ಜುನೀಯಕ್ಕೆ ಬರೆದ ಟೀಕೆಯ ಬಗ್ಗೆ ಕೊಟ್ಟಿಂಬದ ಶಾಸನದಲ್ಲಿ ಉಲ್ಲೇಖಗಳಿದ್ದರೂ ಸಹ  ವಡ್ಡಕಥಾಮತ್ತು ಶಬ್ದಾವತಾರದ ಪ್ರಸ್ತಾಪ ಇಲ್ಲಿ ಮೊದಲ ಬಾರಿಗೆ ಬಂದಿರುವುದು. ಇವುಗಳಲ್ಲಿ ಶಬ್ದಾವತಾರ ಸಂಸ್ಕøತದಲ್ಲಿ ಬರೆದದ್ದು ಇರಬಹುದು, ವಡ್ಡಕಥಾ ಯಾವ ಭಾಷೆಯಲ್ಲಿ ಬರೆದದ್ದು ಎನ್ನುವುದು ತಿಳಿದು ಬರುತ್ತಿಲ್ಲ, ಆದರೂ ಸಹ ಸುಮಾರು ಆರನೇ ಶತಮಾನದಲ್ಲಿ ರಾಜನೊಬ್ಬ ಸಂಸ್ಕøತ ಭಾóಷಾ ಪಾಂಡಿತ್ಯ ಹೊಂದಿದ್ದಲ್ಲದೇ ಕೀರಾತಾರ್ಜುನೀಯ ದಂತಹ ಕೃತಿಗೆ ಟೀಕೆ ಬರೆಯುವಂತಹ ಸಾಹಸ ಮಾಡಿದ್ದಲ್ಲದೇ ಶಬ್ದಾವತಾರ ದಂತಹ ಕೃತಿ ಬರೆದದ್ದು ಮತ್ತು ವಡ್ಡಕಥಾ ಬರೆದ ಉಲ್ಲೇಖ ಸಿಗುತ್ತದೆ, ವಡ್ಡಕಥಾ ಪ್ರಾಯಶಃ ಕನ್ನಡದ್ದೇ ಆಗಿದ್ದರೇ ಆರನೇ ಶತಮಾನದ ಹೊತ್ತಿಗೆ ಕನ್ನಡ ಸಾಹಿತ್ಯದ ಸಾಮ್ರಾಜ್ಯವನ್ನೇ ಸೃಷ್ಟಿಸಿದ್ದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಅದೇನೇ ಇರಲಿ ಅಂತೂ ಕನ್ನಡ ಅತ್ಯಂತ ಪ್ರಾಚೀನ ಸಮೃದ್ಧ ಭಾಷೆ ಎನ್ನುವುದು ನಿರ್ವಿವಾದ.   



No comments:

Post a Comment