Search This Blog

Friday 11 October 2019

ವಿದೇಶೀಯರು ಭಾರತದ ಮೇಲೆ ದಂಡೆತ್ತಿ ಬಂದದ್ದು ಏಕೆ ?


ವಿದೇಶೀಯರು ಭಾರತದ ಮೇಲೆ ಯಾಕೆ ದಂಡೆತ್ತಿ ಬಂದರು ? ಭಾರತ ಒಂದು ಅನಾಗರಿಕ ದಟ್ಟ ದಾರುದ್ರ್ಯ ಹೊಂದಿದ್ದ ದೇಶವಾಗಿದ್ದರೆ ಯಾಕೆ ಬರುತ್ತಿದ್ದರು ? ಜಗತ್ತಿನ ಇತರೆಡೆಯ ಜನರಿಗೆ ಕಣ್ಣುಕುಕ್ಕಿದ್ದಕ್ಕೆ ದಾಳಿಮಾಡಿದ್ದಲ್ಲವೇ ? ನಿಜ, ಅದನ್ನೇ ಹೇಳಹೊರಟಿದ್ದು ನಾನು.
ಹೌದು ಇಡೀ ಜಗತ್ತಿನಲ್ಲಿ ಭಾರತವನ್ನು ಹೊರತು ಪಡಿಸಿ ಉಳಿದೆಡೆಗಳಲ್ಲಿ ಇನ್ನು ಸಂಸ್ಕಾರವನ್ನೇ ಪಡೆದಿರದ ಸಮಯದಲ್ಲಿ ಜಗತ್ತು ಬೌದ್ಧಿಕ ದಿವಾಳಿಯ ಅಂಚಿನಲ್ಲಿತ್ತು. ಜನರಿಗೆ ಬದುಕುವ ಕಲೆಯೇ ಗೊತ್ತಿರಲಿಲ್ಲ. ಮನುಷ್ಯ ಮತ್ತು ಪ್ರಾಣಿಗಳ ನಡತೆಯಲ್ಲಿನ ವ್ಯತ್ಯಾಸವೂ ತಿಳಿದಿರದ ಕಾಲವದು. ಅಂತಹ ಕಾಲದಲ್ಲಿ ಭಾರತ ಉಚ್ಛ್ರಾಯ ಸ್ಥಿತಿಯನ್ನು ತಲುಪಿತ್ತು. ಜಗತ್ತಿನ ವಿಸ್ಮಯಗಳಿಗೆ ಸಾಕ್ಷಿಯಾಗಿತ್ತು ಅಂದರೆ ಅದು ತಪ್ಪಲ್ಲ. ತೊದಲು ನುಡಿಗಳನ್ನೂ ಆಡಲು ಬಾರದ ಇತರ ದೇಶಗಳ ಜನರಿಗೆ ಮಾದರಿಯ ಜ್ಞಾನ ಬಂಡಾರವನ್ನು ಕೊಟ್ಟಾಗಿತ್ತು. ಹೌದು ಅದೊಂದು ಕಾಲ ಹೇಗಿತ್ತೆಂದರೆ ಇಂದು ನಾವು ಇಷ್ಟು ಪ್ರಗತಿಯ ಪಥದಲ್ಲಿದ್ದರೂ ಸಹ ಅಂದಿನ ಕಾಲದ ಹುಡುಕಾಟ ಬಿಡಿ ಅಂದಿನ ಕಾಲದ ಊಹೆಯೂ ಎಟುಕದು ಅಂತಹ ಭವ್ಯ ಭಾರತ ಇದಾಗಿತ್ತು. ನನಗೆ ಆಶ್ಚರ್ಯವಾಗುತ್ತದೆ. ಇಷ್ಟೆಲ್ಲಾ ದೊಡ್ದ ಜ್ಞಾನ ಬಂಡಾರವೇ ನಮ್ಮಲ್ಲಿತ್ತು, ಇಂದಿಗೂ ಇದೆ. ಆದರೆ ಅದರ ಸಮರ್ಪಕ ಪ್ರಯೋಜನ ನಾವು ಪಡೆದುಕೊಳ್ಳುತ್ತಿಲ್ಲವಲ್ಲಾ ಎನ್ನುವ ಕೊರಗು ಕಾಡುತ್ತದೆ.
ಭೂಮಿಯ ರಚನೆಯಿಂದ ಹಿಡಿದು ವೈದ್ಯಕೀಯ ವಿಜ್ಞಾನ, ಖಗೋಳ ವಿಜ್ಞಾನ, ಗಣಿತದ ವಿಸ್ಮಯಗಳನ್ನು ಅಂದಿನ ಜನ ತಿಳಿದಿದ್ದರು ಅಂದರೆ ನಾವೆಷ್ಟು ಧನ್ಯರು ಅನ್ನಿಸುತ್ತದೆ. ನಿನ್ನೆಯಷ್ಟೇ ನಾನು ಬರೆದೆ ಅದರಲ್ಲಿ ಸಂವತ್ಸರವನ್ನಾಧರಿಸಿ, ಸಂವತ್ಸರ ಚಕ್ರದ ಆಧಾರದಲ್ಲಿ ಮಳೆಯನ್ನು ನಿರ್ಧರಿಸುತ್ತಿದ್ದರು ಎಂದು ಬರೆದಿದ್ದೆ. ಜಗತ್ತಿನಾ ಉಳಿದಾವ ದೇಶಕ್ಕೋ ಪ್ರದೇಶಕ್ಕೋ ಹೋಗಿ ಇನ್ನು ಹತ್ತು ವರ್ಷ್ಜದ ನಂತರ ಕರಾರುವಾಕ್ಕಾಗಿ ಇಷ್ಟೇ ಮಳೆ ಬರುತ್ತದೆ. ಭೂಮಿಯ ಫಲವತ್ತತೆ ಕಡಿಮೆಯಾಗುತ್ತದೆ ಎಂದು ಹೇಳುತ್ತಾರಾ ನೋಡಿ. ಸಾಧ್ಯವಾಗದ ಮಾತದು ಆದರೆ ಭಾರತದಲ್ಲಿ ಋಗ್ವೇದದ ಒಂದನೇ ಮಂಡಲದ ೨೫ನೇ ಸೂಕ್ತದ ಹನ್ನೊಂದನೇ ಋಕ್ಕು
ಅತೋ ವಿಶ್ವಾನ್ಯದ್ಭುತಾ ಚಿಕಿತ್ವಾ ಅಭಿ ಪಶ್ಯತಿ | ಕೃತಾನಿ ಯಾ ಕರ್ತ್ವಾ || ಎನ್ನುವಲ್ಲಿ ನಮ್ಮನ್ನು ನಿಬ್ಬೆರಗಾಗಿಸುತ್ತದೆ. ಸೂಕ್ತದಲ್ಲಿ ಅಧಿಕಮಾಸದ ಕುರಿತಾಗಿ ಹೇಳಿರುವುದಂತೂ ವಿಜ್ಜಾನ ಲೋಕದ ವಿಸ್ಮಯ ಎನ್ನಬಹುದು. ಅಂದರೆ ಜಗತ್ತು ಇನ್ನೂ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುವುದಕ್ಕೆ ಎಷ್ಟೋ ಸಾವಿರ ವರ್ಷಗಳಿಗೂ ಮೊದಲೇ ಹೀಗೇ ನಡೆಯುತ್ತದೆ ಮತ್ತು ಹೀಗೇ ನಡೆದಿದೆ ಎನ್ನುವುದನ್ನು ಪರಿಚಯಿಸಿದ್ದು ಭಾರತ.
ವೇದಕಾಲ ಎಂತ ನಾವು ಹೇಳುತ್ತೇವೆ ಕಾಲದಲ್ಲಿ ನಡೆದ ದಾಶರಾಜ್ಞದಿಂದ ಇಡೀ ಜಗತ್ತಿಗೆ ಭಾರತ ಅನಿವಾರ್ಯವಾಗುವಂತ್ಯೆ ಮಾಡಿತ್ತು. ನಾವಿಂದು ವಿದೇಶದ ವ್ಯಾಮೋಹದಲ್ಲಿ ಬಿದ್ದಿದ್ದೇವೆ. ಆದರೆ ದಾಶರಾಜ್ಞ ಒಂದು ನಡೆಯದಿದ್ದರೆ ಜಗತ್ತು ಇಂದು ಹೀಗಿರುತ್ತಲೇ ಇರಲಿಲ್ಲ. ಅದಕ್ಕೆ ಕಾರಣ ಬಹಳ ಇದೆ. ಒಂದು ಸಣ್ನ ಉದಾಹರಣೆಯನ್ನು ಹೇಳಬಹುದು ಜಗತ್ತಿನ ಉಳಿದೆಡೆ ವ್ಯಾಪಾರ ವಹಿವಾಟಿನಲ್ಲಿ ಎಡವಿತ್ತಿದ್ದಾಗ ಅಂದಿನ ಭಾರತೀಯ ಲಾಭ ಪಡೆದು ಹಿಂತಿರುಗುತ್ತಿದ್ದ, ಹೌದು. ಜಗತ್ತಿಗೆ ಭಾರತ ಗಣಿತಕೊಟ್ಟಿದೆ. ಜಗತ್ತಿನ ಉಳಿದ ಯಾವ ಪ್ರದೇಶದಲ್ಲಿಯೂ ಗಣಿತದಿಂದ ಉಪಯೋಗ ಪಡೆಯುತ್ತಿರಲಿಲ್ಲ. ಯಾಕೆಂದರೆ ಜಗತ್ತಿನ ಇತರೆಡೆ ಭಾಗಾಕಾರ ಎನ್ನುವ ಲೆಕ್ಕವೇ ಇರಲಿಲ್ಲ. ಭಾರತೀಯ ಸುಲಭವಾಗಿ ಭಾಗಾಕಾರದ ಲೆಕ್ಕದಿಂದ ವ್ಯವಹಾರದಲ್ಲಿ ಲಾಭ ಪಡೆಯುತ್ತಿದ್ದ. ವೇದದಲ್ಲಿನ ಗಣಿತವಂತೂ ಅವರಿಗೆ ಕೈಗೆಟುಕದಾಗಿತ್ತು. 360ನ್ನು 12 ರಿಂದ ಭಾಗಿಸುವ ಪದ್ಧತಿಯೇ ಗೊತ್ತಿರಲಿಲ್ಲ. ಅಷ್ಟೇಕೆ ಈಜಿಪ್ಟಿನ ಪಿರಮಿಡ್ಡುಗಳಿಗೆ ಇಂತಹ ಗಣಿತದ ಅವಶ್ಯಕತೆ ಇತ್ತು. ಅದು ಭಾರತದ ಎರವಲೂ ಇರಬಹುದು. ಇನ್ನೊಂದು ಮುಖ್ಯ ವಿಷಯ ಎಂದರೆ ಸುಮಾರು -೮ನೇ ಶತಮಾನದ ತನಕವೂ ಇಜಿಪ್ಟ್, ರೋಮ್, ಮತ್ತು ಪರ್ಷಿಯಾದಂತಹ ದೇಶಗಳಲ್ಲಿ ಯಾವ ರೀತಿಯ ಲೆಕ್ಕ ಇದ್ದಿತ್ತೋ ಅದು ಗಣಿತದಿಂದ ಮಾಡಲು ಸಾಧ್ಯವಿರಲಿಲ್ಲ. ಆದರೆ ಬರೀ ಭಾಗಾಕಾರ ಗೊತ್ತಿದ್ದ ಭಾರತೀಯ ಸುಲಭವಾಗಿ ವ್ಯವಹರಿಸುತ್ತಿದ್ದ. ಭಾರತದ ಹೊರತಾದ ಇತರೆಡೆ ಹಣದ ವ್ಯವಹಾರ್ತದಲ್ಲಿ ಹಂಚಿಕೆಯೂ ಕಷ್ಟವಾಗಿತ್ತು ಅಂತಹ ಕಾಲದಲ್ಲಿ ಅದನ್ನು ಸುಲಭವಾಗುವಂತೆ ಹೇಳಿಕೊಟ್ಟದ್ದು ಭಾರತ. ಜಗತ್ತಿನಲ್ಲಿ ಭಾಗಾಕಾರದಿಂದ ವ್ಯವಹರಿಸಿ ಲಾಭವನ್ನು ಪಡೆದು ಹಿಂತಿರುಗುತ್ತಿದ್ದುದನ್ನು ತಾವೂ ಕಲಿತ ಮೇಲೆಯೇ ಭಾರತದ ಮೇಲೆ ವಿದೇಶೀಯರ ಆಕ್ರಮಣ ಆಗಿದ್ದು, ಅಂದರೆ ಭಾರತೀಯರಿಗೆ ಲಾಭದ ಕುರಿತಾಗಿ ಗೊತ್ತಿತ್ತು. ಇಲ್ಲಿ ಸಂಪತ್ತು ವೃದ್ಧಿಸುವುದು ಗೊತ್ತಿತ್ತು ಎನ್ನುವ ಕಾರಣಕ್ಕೆ ವಿದೇಶೀ ಆಕ್ರಮಣ ಆಯ್ತು. ಪೊಳ್ಳು ಬ್ರಿಟೀಷರ ಇತಿಹಾಸದ ಸೃಷ್ಟಿಯಂತಲ್ಲ. ನಿನ್ನೆ ನಾನು ಬರೆದ ನನ್ನ ಬರಹದಲ್ಲಿ ಕೆಲವನ್ನು ಮಾತ್ರ ಹೇಳಿದ್ದೆ. ಸಂವತ್ಸರ ಮತ್ತು ಮಳೆಯನ್ನು ಕೇಂದ್ರೀ ಕರಿಸಿಕೊಂಡು ಅಧಿಕಮಾಸದ ಕುರಿತು ಹೇಳಿದ್ದೆ. ಅಧಿಕಮಾಸದ ಕುರಿತು ಅನೇಕರು ನಿನ್ನೆ ನನಗೆ ವಯಕ್ತಿಕವಾಗಿ ಕೇಳಿದರು. ಆದರೆ ಇಂದು ನಕ್ಷತ್ರವನ್ನು ಕುರಿತು ಹೇಳಬೇಕೆನ್ನಿಸುತ್ತಿದೆ.
ನಕ್ಷತ್ ಎನ್ನುವುದು ವ್ಯಾಪಿಸು ಅಥವಾ ವಾಸಿಸು, ವಾಸಿಸುವ ಮನೆ ಅಥವಾ ಗೃಹ ಎನ್ನುವ ಅರ್ಥವನ್ನು ಕೊಡುತ್ತದೆ.
ಪತ್ಯೇ ತಾಯವೋ ಯಥಾ ನಕ್ಷತ್ರಾ ಯನ್ತ್ಯಕ್ತುಭಿಃ |
ಸೂರಾಯ ವಿಶ್ವ ಚಕ್ಷಸೇ || ಋಗ್ವೇದದ ಒಂದನೇ ಮಂಡಲದ ಐವತ್ತನೇ ಸೂಕ್ತದ ಎರಡನೇ ಋಕ್ಕು
ಸಾಮಾನ್ಯವಾಗಿ ರಾತ್ರಿ ಕಾಲದಲ್ಲಿ ಕಳ್ಳರು ಮತ್ತು ಬೇರೆ ಬೇರೆ ಅನೈತಿಕ ವ್ಯವಹಾರದಲ್ಲಿ ತೊಡಗಿರುವ ಜನ ಜಾಗ್ರತರಾಗಿರುತ್ತಾರೆ. ಆದರೆ ಸೂರ್ಯೋದಯವಾಗುವುದನ್ನು ತಿಳಿಯುತ್ತಿದ್ದಂತೆ ಮರೆಯಾಗಿ ಓಡಿ ಹೋಗುತ್ತಾರೆ. ಅದೇ ರೀತಿ ದೇವತೆಗಳಿಗೆಲ್ಲಾ ಮನೆಯಂತಿರುವ ನಕ್ಷತ್ರಗಳು ಅಥವಾ ಸುಕೃತವನ್ನುಮಾಡಿದ ತೇಜೋಪುಂಜಗಳು ರಾತ್ರಿಕಾಲದಲ್ಲಿ ಮಿಂಚುತ್ತಿದ್ದು, ಸೂರ್ಯನ ಆಗಮನವಾದೊಡನೆ ಮರೆಯಾಗುತ್ತವೆ ಎನ್ನುವುದು ಋಕ್ಕಿನ ಭಾವಾರ್ಥ. ಹೌದು ರಾತ್ರಿಯಾದೊಡನೆ ಆಕಾಶದ ಸೊಬಗನ್ನು ಇಮ್ಮಡಿಗೊಳಿಸುವುದು ನಕ್ಷತ್ರಗಳು. ನಕ್ಷತ್ರಗಳನ್ನು ಯಜುರ್ವೇದದಲ್ಲಿಯಂತೂ ಲೋಕದಲ್ಲಿ ಲೋಕೋದ್ಧರಕ್ಕಾಗಿ ನೆರವೇರಿಸುವ ಯಜ್ಞ ಯಾಗಾದಿಗಳಿಂದ ತಮ್ಮ ಪುಣ್ಯಗಳನ್ನು ಇಮ್ಮಡಿಗೊಳಿಸಿಕೊಂಡು ಸೇರುವ ಲೋಕದಲ್ಲಿ ಪ್ರಕಾಶಮಾನರಾಗಿ ಗೋಚರಿಸುವವರೆ ನಕ್ಷತ್ರಗಳು ಎಂದು ಬಣ್ಣಿಸಿದ್ದು ಸಿಗುತ್ತದೆ. "ಸುಕೃತಾಂ ವಾ ಏತಾನಿ ಜ್ಯೋತೀಂಷಿ ಯನ್ನಕ್ಷತ್ರಾಣಿ ಎಂದು ತೈತ್ತಿರೀಯ ಸಂಹಿತೆಯ ::: ರಲ್ಲಿ ಹೇಳಿದೆ. ದೇವ ಗೃಹಾ ವೈ ನಕ್ಷತ್ರಾಣಿ ಎಂದು ತೈತ್ತಿರೀಯ ಬ್ರಾಹ್ಮಣದ :::೬ರಲ್ಲಿ ಹೇಳಿದೆ. ಅಂದರೆ ನ್ಕ್ಷತ್ರಗಳು ಎಂದರೆ ದೇವತೆಗಳು ವಾಸಿಸುವ ಮನೆ ಅಥವಾ ದೇವತೆಗಳ ಮನೆ ಎಂದಿದೆ. ನಕ್ಷತಿ ಎನ್ನುವ ಪದಕ್ಕೆ ಸಂಚರಿಸು ಅಥವ ಚಲಿಸು ಎನ್ನುವ ಅರ್ಥ ಇದ್ದು ಗತಿ ಎನ್ನುವ ಅರ್ಥ ಹೊಂದಿರುವ ಧಾತುವಿನಿಂದ ಬಂದಿರುವ ಪದ. ಕ್ಷತ್ರ ಎಂದರೆ ಹಿರಣ್ಯದಂತೆ ಪ್ರಕಾಶಮಾನವಾದುದು ಎಂದು ಅರ್ಥ. ಲೋಕದಲ್ಲಿ ಸತ್ಕರ್ಮಗಳಲ್ಲಿ ನಿರತರಾದವರು ಸ್ವರ್ಗಲೋಕದಲ್ಲಿ ಬೆಳಗುತ್ತಿರುವರು ಎನ್ನುವುದು ಅರ್ಥವಾಗಿರುತ್ತದೆ.
ಸೂರ್ಯಾಯ ವಹತುಃ ಪ್ರಾಗಾತ್ಸವಿತಾ ಯಮವಾಸೃಜತ್ |
ಅಘಾಸು ಹನ್ಯಂತೇ ಗಾವೋರ್ಜುನ್ಯೋಃ ಪರ್ಯುಹ್ಯತೇ || ಋಗ್ವೇದ ೧೦. ೮೫. ೧೩
ಸೂರ್ಯನ ಮಗಳು ತನ್ನ ಪತಿಯ ಗೃಹಕ್ಕೆ ಹೋಗುವಾಗ ಗೋವುಗಳೇ ಮೊದಲಾದ ಸಂಪತ್ತುಗಳನ್ನು ಜೊತೆಗೆ ಕಳುಹಿಸುತ್ತಾನೆ. ಬಳುವಳಿಗಳ ಮೆರವಣಿಗೆಯು ಸೂರ್ಯಾದೇವಿಗಿಂತಲೂ ಮೊದಲೇ ಬಂದಿತು. ಸೂರ್ಯನಿಂದ ಕಳುಹಿಸಲ್ಪಟ್ಟ ಗೋವುಗಳು ಮಘಾ ನಕ್ಷತ್ರಗಳ ಗುಂಪಿನಲ್ಲಿ ಮುಂದೆ ಹೋಗಲ್ಪಡುತ್ತದೆ. ಸೂರ್ಯನ ಮಗಳು ಫಲ್ಗುಣೀ ನಕ್ಷತ್ರಗಳ ಗುಂಪಿನಲ್ಲಿ ಒಯ್ಯಲ್ಪಡುತ್ತಾಳೆ ಎನ್ನುವಲ್ಲಿ ನಕ್ಷತ್ರಗಳ ಹೆಸರು ಕಾಣಿಸಿಕೊಂಡಿತು ಇನ್ನು ಯಜುರ್ವೇದದಲ್ಲಿ ಸ್ಪಷ್ಟವಾಗಿ ೨೭ ನಕ್ಷತ್ರಗಳಿವೆ ಎಂದು ::೧೦:, , ರಲ್ಲಿ ಹೇಳಲ್ಪಟ್ಟಿವೆ. ಕೃತ್ತಿಕಾನಕ್ಷತ್ರಮಗ್ನಿರ್ದೇವತಾಗ್ನೇರುಚಃ ಎಂದು ಆರಂಭವಾಗಿ ಭರಣೀ ನಕ್ಷತ್ರಂ ಯಮೋ ದೇವತಾ ಎನ್ನುವಲ್ಲಿಗೆ ಕೊನೆಯಾಗುತ್ತದೆ ಇಲ್ಲಿ ೨೭ ನಕ್ಷತ್ರಗಳನ್ನೇ ಹೇಳಿದೆ. ಹೀಗೇ ನಾವು ಜಗತ್ತು ಕಣ್ಣು ಬಿಡುವ ಪೂರ್ವದಲ್ಲಿ ಅಥವಾ ಜಗತ್ತಿನ ಇತರ ದೇಶಗಳ ಜನ ಇನ್ನೂ ಅಂಬೆಗಾಲಿಡುವಾಗ ನಾವು ಅತ್ಯಂತ ಉಚ್ಚ್ರಾಯ ಸ್ಥಿತಿಯಲ್ಲಿ ಇತ್ತು ಎನ್ನುವುದಂತೂ ಸ್ಪಷ್ಟವಾಗುತ್ತದೆ.


No comments:

Post a Comment