Search This Blog

Friday 11 October 2019

ಮಳೆಗೆ ಮರುದ್ದೇವತೆಯೇ ಮೂಲ.


ಆದಹ ಸ್ವಧಾಮನು ಪುನರ್ಗರ್ಭತ್ವಮೇರಿರೇ |
ದಧಾನಾ ನಾಮ ಯಜ್ಞಿಯಂ || ಇದು ಋಗ್ವೇದ ಒಂದನೇ ಮಂಡಲದಲ್ಲಿ ಬರುವ ಋಕ್ಕು.

ಇದು ಒಂದು ರೀತಿಯಲ್ಲಿ ನನಗೆ ಆಶ್ಚರ್ಯ ಹುಟ್ಟಿಸಿತು. ಇಂದು ನಾವು ಬೇಸಿಗೆ ಕಳೆದು ಮುಂಗಾರು ಬರುವುದು ಸ್ವಲ್ಪ ತಡವಾದರೂ ಸಹ ಹಂಡೆಗಳಲ್ಲಿ ಕುಳಿತು ಪರ್ಜನ್ಯ ಜಪವನ್ನೋ ಅಥವಾ ವರುಣ ಜಪವನ್ನೋ ಮಾಡುವುದನ್ನು ಕಾಣುತ್ತೇವೆ ಕೇಳುತ್ತೇವೆ ತೀರಾ ಆಧುನಿಕವಾಗಿಯೂ ಕಾಣುತ್ತೇವೆ. ಇನ್ನು ಕೆಲವೆಡೆ ಅಭಿಷೇಕಾದಿಗಳನ್ನು ಕಾಣುತ್ತೇವೆ. ಆದರೆ ಮೇಲೆ ಹೇಳಿದ ಋಕ್ಕನ್ನು ಗಮನಿಸಿದರೆ, ಮಳೆಗಾಲ ಕಳೆದು ಬೇಸಿಗೆ ಬಂದು ಪುನಃ ಮಳೆಯ ಆಗಮನಕ್ಕೆ ಮರುದ್ದೇವತೆಗಳನ್ನು ಸೂಕ್ತಕಾರ ಪ್ರಾರ್ಥಿಸುತ್ತಾನೆ. "ಮಳೆಗಾಲವು ಕಳೆದ ನಂತರ ಯಜ್ಞ ಯಾಗಾದಿಗಳಲ್ಲಿ ಗೌರವಿಸಲ್ಪಡುವ ಇತರ ದೇವತೆಗಳಂತೆ ಪ್ರಸಿದ್ಧರಾದ ಮರುದ್ದೇವತೆಗಳು ಜನರಿಗೆ ಸಸ್ಯರೂಪವಾದ ಆಹಾರವನ್ನೂ ಮತ್ತು ನೀರನ್ನು ಕೊಡುವುದಕ್ಕಾಗಿ ಪುನಃ ಹಿಂದಿನಂತೆ ಈಗಲೂ ಮಳೆಯನ್ನು ಉತ್ಪಾದಿಸುವ ಮೊದಲು ಮೋಡಗಳ ಮಧ್ಯದಲ್ಲಿ ನೀರು ಒಟ್ಟಾಗಿ ಸೇರಿ ಗರ್ಭರೂಪದಿಂದಿರುವಂತೆ ಪರ್ಜನ್ಯನನ್ನು ಪ್ರೇರೇಪಿಸಿದರು." ಎಂದು ಮರುದ್ದೇವತೆಗಳು ಮಳೆಗೆ ಮೂಲ ಎನ್ನುವುದನ್ನು ಅಂದರೆ ಗಾಳಿಯಿಂದ ಮೋಡಗಳೆಲ್ಲಾ ಒಂದೆಡೆ ಸೇರಿ ತಮ್ಮಲ್ಲಿರುವ ನೀರಿನ ಹನಿಗಳನ್ನು ಭೂಮಿಯ ಮೇಲೆ ಚಿಮುಕಿಸಲಿ. ಮೋಡಕ್ಕೆ ಗಳಿಯ ಅವಶ್ಯಕತೆಯನ್ನು ಪ್ರತಿಪಾದಿಸಲಾಗಿದೆ. ಅಂದರೆ ನಾವುಗಳು ಇಂದು ಕೇವಲ ಪರ್ಜನ್ಯ ಜಪಮಾಡಿದರೆ ಸಾಕಾಗದು ಜೊತೆಯಲ್ಲಿ ಮರುದ್ದೇವತೆಗಳನ್ನೂ ಸಹ ಅದೇ ರೀತಿ ಮೋಡಗಳಿಗೆ ಪೂರಕವಾಗಿರುವಂತೆ ಪ್ರಾರ್ಥಿಸಬೇಕು ಎನ್ನುವುದು ತಿಳಿಯುತ್ತದೆ. ಅಂದರೆ ಕಾಲದಲ್ಲಿಯೂ ಸಹ ಮಳೆಗಾಗಿ ಪ್ರಾರ್ಥಿಸುತ್ತಿದ್ದರು ಆದರೆ ಪ್ರಾರ್ಥನೆಯ ವಿಧಾನ ಸ್ವಲ್ಪ ಬೇರೆ ಇತ್ತು.
ಗಟ್ಟಿಯಾದ ಮೋಡವು ಗಾಳಿಯ ಸಹಾಯದಿಂದ ನೀರಾಗಿ ಮಳೆಯಾಗುವ ಕ್ರಿಯೆ ವಿಜ್ಞಾನದಲ್ಲೂ ಇರಬಹುದು. ಆದರೆ ಇಲಲಿ ಗಾಳಿಯ ಶಕ್ತಿಯನ್ನು ಮತ್ತು ಅದರ ಅವಶ್ಯಕತೆಯನ್ನು ಸೂಕ್ತಕಾರ ಗಮನಿಸಿ ಮಳೆಗೆ ಪೂರಕ ಮೋಡ, ಮೋಡ ಕರಗಲಿಕ್ಕೆ ಗಾಳಿಯ ಅಥವಾ ಪ್ರಬಲವಾದ ಶಕ್ತಿಯೊಂದರ ಅವಶ್ಯಕತೆಯನ್ನು ತಿಳಿಸುತ್ತಾನೆ.

#ಮಳೆ_ಮೋಡ_ಗಾಳಿ

No comments:

Post a Comment