Search This Blog

Friday 11 October 2019

ಅರ್ಚನ್ ಎನ್ನುವ ಖಗೋಲ ವಿಜ್ಞಾನಿ.


ಹಿರಣ್ಯಸ್ತೂಪಃ ಸವಿತರ್ಯಥಾ ತ್ವಾಂಗಿರಸೋ ಜುಹ್ವೇ ವಾಜೇ ಅಸ್ಮಿನ್ |
ಏವಾ ತ್ವಾರ್ಚನ್ನ ವಸೇ ವಂದಮಾನಃ ಸೋಮಸ್ಯೇವಾಂಶುಂ ಪ್ರತಿ ಜಾಗರಾಹಂ || ಇದು ಋಗ್ವೇದದ ಹತ್ತನೇ ಮಂಡಲದ ೧೪೯ನೇ ಸೂಕ್ತ.
ಋಗ್ವೇದದಲ್ಲಿ ಅಂಗಿರಾ ಋಷಿಯವಂಶವು ಅತ್ಯಂತ ದೊಡ್ಡದು. ಅಷ್ಟೇ ಪ್ರಸಿದ್ಧವೂ ಆಗಿದೆ. ಋಷಿಯ ೪೪ ಮಂದಿ ಋಗ್ವೇದದಲ್ಲಿ ಸೂಕ್ತದೃಷ್ಟಾರರಾಗಿ ಕಾಣಿಸಿಕೊಳ್ಳುತ್ತಾರೆ. ಅಂಗಿರಾಋಷಿಯ ಮಗ ಹಿರಣ್ಯಸ್ತೂಪ ಎನ್ನುವವನು ಎನ್ನುವುದು ಋಗ್ವೇದದ ಒಂದನೇ ಮಂಡಲದ ೩೧ ರಿಂದ ೩೫ನೇ ಸೂಕ್ತ ಅಂದರೆ ೭೧ ಋಕ್ಕುಗಳು, ಒಂಬತ್ತನೇ ಮಂಡಲದ ನಾಲ್ಕನೇ ಸೂಕ್ತ, ೬೯ನೇ ಸೂಕ್ತ, ಒಟ್ಟು ಸೂಕ್ತಗಳ ದೃಷ್ಟಾರ ಋಷಿ ಎನ್ನಲಾಗಿದೆ. ಹಿರಣ್ಯ ಎನ್ನುವ ಪದಕ್ಕೆ ಚಿನ್ನ ಅಥವಾ ಚಿನ್ನದಂತೆ ಹೊಳಪುಳ್ಳ ಎನ್ನುವ ಅರ್ಥ ಬರುತ್ತದೆ. ಸ್ತೂಪ ಎನ್ನುವುದು ಇಲ್ಲಿ ಕೂದಲುಗಳಿಗೆ ಹೇಳಲಾಗಿದ್ದು, ಜುಟ್ಟನ್ನು ನಿರ್ದೇಶಿಸುತ್ತದೆ. ಂನ್ನದಂತೆ ಹೊಳಪುಳ್ಳ ಶಿಖೆ ಇದ್ದುದರಿಂದ ಋಷಿಗೆ ಹಿರಣ್ಯಕೇಶಿ ಎನ್ನುವ ಹೆಸರು ಬಂದಿದೆ. ಹಿರಣ್ಯಕೇಶಿಯೂ ಸಹ ತನ್ನ ತಂದೆಯಂತೆಯೇ ಅತ್ಯಂತ ಪ್ರಭಾವಿ ಮತ್ತು ಅಷ್ಟೇ ಪ್ರಸಿದ್ಧ. ಇಬ್ಬರೂ ಋಷಿಗಳು ಸಹ ಸೂರ್ಯನ ಕುರಿತಾಗಿ ಅಧ್ಯಯನ ಮಾಡಿದವರು ಎಂದು ಋಗ್ವೇದದ ಒಂದನೇ ಮಂಡಲದಲ್ಲಿ ಸವಿತೃನನ್ನು ಸ್ತುತಿಸಿ ಹೊಗಳಿ ಕೊಂಡಾಡಿದ್ದು ತಿಳಿದು ಬರುತ್ತದೆ. ಅಂಗಿರಾ ಋಷಿಯ ಮೊಮ್ಮಗ ಮತ್ತು ಹಿರಣ್ಯಸ್ತೂಪನ ಮಗ ಅರ್ಚನ್ ಎನ್ನುವವನು ಇಬ್ಬರ ಸಾಧನೆಯ ಫಲಶ್ರುತಿ ಎನ್ನುವಂತೆ ಕಂಗೊಳಿಸುತ್ತಾನೆ. ಅರ್ಚನ್ ಎನ್ನುವ ಋಷಿ ಖಗೋಲದ ಅಧ್ಯಯನವನ್ನು ಮಾಡಿದ್ದ ಎನ್ನುವುದು ಆತನ ಸೂಕ್ತದಿಂದ ತಿಳಿದು ಬರುತ್ತದೆ.
ಸವಿತಾ ಯಂತ್ರೈಃ ಪೃಥಿವೀಮರಮ್ಣಾದಸ್ಕಂಭನೇ ದ್ಯಾಮದೃಂಹತ್ |
ಅಶ್ವಮಿವಾಧುಕ್ಷದ್ಧುನಿಮಂತರಿಕ್ಷಮತೂರ್ತೇ ಬದ್ಧಂ ಸವಿತಾ ಸಮುದ್ರಂ ||
ಋಗ್ವೇದದ ಹತ್ತನೇ ಮಂಡಲಕ್ಕೆ ಇದೇ ಅರ್ಚನ್ ಎನ್ನುವವನೇ ದೃಷ್ಟಾರ. ಈತ ಸೂರ್ಯನ ಕುರಿತಾಗಿ ತಿಳಿಸುತ್ತಾ ಸೂರ್ಯನನ್ನು ಸವಿತಾ ಎಂದು ಉದ್ಗರಿಸುತ್ತಾನೆ. ಅಂದರೆ ಇಡೀ ಬ್ರಹ್ಮಾಂಡದ ಸೃಷ್ಟಿಗೆ ಸೂರ್ಯನೇ ಕಾರಣ, ಸೂರ್ಯ ಎನ್ನುವವನೇ ಚೇತನಾದಾಯಕ ಎಂದು ಹೇಳುತ್ತಾನೆ. ಅಲ್ಲದೇ ಮುಂದುವರಿದು ಹೇಳುತ್ತಾ ಸೂರ್ಯ ಭೂಮಿಯನ್ನು ವಾಯುವಿನಿಂದ ಮತ್ತು ಮಳೆಯಿಂದ ಬಿಗಿಯಾಗಿ ಹಿಡಿದು ಅಲುಗಾಡದಂತೆ ಹಿಡಿದಿಟ್ಟುಕೊಂಡಿದ್ದಾನೆ ಅನ್ನುತ್ತಾನೆ. ಅಂದರೆ ಭೂಮಿಯು ಯಾವುದೋ ಒಂದು ಆಕಷ್ಣಾ ಶಕತಿಯಿಂದ ಸೂgರ್ಯನಿಂದಲೇ ನಿಯಂತ್ರಿಸಲ್ಪಡುತ್ತಿದೆ ಎನ್ನುತ್ತಾನೆ. ಯಾವುದೇ ಆಧಾರವೂ ಇಲ್ಲದೇ ಅಂತರಿಕ್ಷದಲ್ಲಿರುವ ದ್ಯುಲ್ಲೋಕ(ದೇವಲೋಕ)ವನ್ನೂ ಸಹ ಹಿಡಿದು ಇಟ್ಟುಕೊಂಡಿದ್ದಾನೆ. ಯಾವುದೇ ಆಶ್ರಯವೂ ಇರದೇ ಆಕಾಶದಲ್ಲಿನ ಮೋಡಗಳಿಂದ ಭೂಮಿಗೆ ಮಳೆ ಬೀಳುವಂತೆ ಮಾಡುವವನೂ ಸಹ ಇದೇ ಸೂರ್ಯ ಎಂದು ತಿಳಿಸಿಕೊಡುವ ಋಷಿ ಖಗೋಳವಿಜ್ಞಾನದ ಅತ್ಯಂತ ಪ್ರಾಚೀನ ವಿಜ್ಞಾನಿಯಂತೂ ಹೌದು ಅನ್ನಿಸುತ್ತದೆ. ಋಕ್ಕಿನಲ್ಲಿ ಆತ ಅದನ್ನು ಸ್ಪಷ್ಟ ಪಡಿಸುತ್ತಾನೆ.
ಸವಿತಾ ಯಂತ್ರೈಃ ಪೃಥಿವೀ ಎನ್ನುವಲ್ಲಿ ಎಲ್ಲವನ್ನು ತನ್ನ ಅಧೀನದಲ್ಲಿಟ್ಟುಕೊಂಡು ನಿಯಂತ್ರಣದಲ್ಲಿಟ್ಟುಕೊಳ್ಳುವವನು ಸೂರ್ಯ ಎನ್ನುತ್ತಾನೆ. ಯಂತ್ರೈಃ ಎನ್ನುವ ಪದವೇ ಆಂಗ್ಲಭಾಷೆಯ ಕಂಟ್ರೋಲ್ ಎನ್ನುವ ಪದವನ್ನು ಸೂಚಿಸುತ್ತದೆ.
ಸವಿತಾ ಯಂತ್ರೈಃ ಪೃಥಿವೀಮರಮ್ಣಾದಸ್ಕಂಭನೇ ದ್ಯಾಮದೃಂಹತ್| ಎನ್ನುವ ಸ್ತೋತ್ರದಲ್ಲಿ ಸೂರ್ಯನು ಕೆಲವು ಸಾಧನೋಪಾಯಗಳಿಂದ ಭೂಮಿಯನ್ನು ತನ್ನ ಅಧೀನದಲ್ಲಿಟ್ಟುಕೊಂಡಿದ್ದಾನೆ. ಅದನ್ನು ಅಲುಗಾಡದಂತೆ ಸ್ಥಾಪಿಸಿಕೊಂಡಿದ್ದಾನೆ. ಗುರುತ್ವಾಕರ್ಷಣೆಯನ್ನು ಸ್ಪಷ್ಟವಾಗಿ ಋಕ್ಕಿನಲ್ಲಿ ಋಷಿ ಕಟ್ಟಿಕೊಡುತ್ತಾನೆ ಎಂದರೆ ಅಶ್ವಮಿವಾಧುಕ್ಷದ್ಧುನಿಮಂತರಿಕ್ಷಮತೂರ್ತೇ ಬದ್ಧಂ ಸವಿತಾ ಸಮುದ್ರಂಭೂಮಿಯ ಮೇಲೆ ಗಿಡ ಮರ ಬಳ್ಳಿಗಳು ನಮ್ಮನು ತಡೆದು ನಿಲ್ಲಿಸಬಹುದು. ಆದರೆ ಅಂತರಿಕ್ಷದಲ್ಲಿ ಹಾಗಾಗುವುದಿಲ್ಲ ಅಲ್ಲಿ ಯಾವುದೇ ಅಡೆತಡೆಗಳು ನಮ್ಮನ್ನು ಹಿಡಿದು ನಿಲ್ಲಿಸಲಾರವು ಯಾಕೆಂದರೆ ಅಲ್ಲಿ ಅಂತಹ ಆಕರ್ಷಣೆ ಇರದೇ ಅದು ಗುರುತ್ವವನ್ನು ಪಡೆಯದೇ ಅಥವಾ ಗುರುತ್ವ ಕಡಿಮೆ ಇರಬಹುದು ಎನ್ನುತ್ತಾನೆ. ಅದೊಂದು ನಿರ್ಬಾಧಿತ ಸ್ಥಳ. ಕೆಳಗಿನಿಂದ ಒಂದು ಕಡ್ಡಿಯನ್ನು ಮೇಲಕ್ಕೆಸೆದರೆ ಅದು ಪುನಃ ಕೆಳಕ್ಕೇ ಬೀಳುತ್ತದೆ. ಆದರೆ ಮೇಲೆ ಹಾಗಲ್ಲ ಎನ್ನುವುದು ಋಷಿಯ ಅಭಿಪ್ರಾಯ. ಅಶ್ವಮಿವಾಧುಕ್ಷದ್ಧುನಿಮಂತರಿಕ್ಷಮತೂರ್ತೇ ಎನ್ನುವಲ್ಲಿ ಕುದುರೆಗಳು ತಮ್ಮ ಮೈ ಮೇಲಿನ ಧೂಳನ್ನು ಕೊಸರಿಕೊಂಡು ಊರೆಲ್ಲಾ ಪಸರಿಸುವಂತೆ, ಮೋಡಗಳನ್ನು ಸಹ ಸೂರ್ಯನೇ ಚದುರಿಸಿ ಮಳೆಬೀಳುವಂತೆ ಮಾಡುತ್ತಾನೆ ಎಂದು ಋಷಿ ಹೇಳುತ್ತಾನೆ. 
ಯತ್ರಾ ಸಮುದ್ರಃ ಸ್ಕಭಿತೋ ವ್ಯೌನದಪಾಂ ನಪಾತ್ಸವಿತಾ ತಸ್ಯ ವೇದಾ|
ಅತೋ ಭೂರತ ಉತ್ಥಿತಂ ರಜೋತೋ ದ್ಯಾವಾ ಪೃಥಿವೀ ಅಪ್ರತೇಥಾಂ ||
ಇದರಲ್ಲಿ ಇಡೀ ಬ್ರಹ್ಮಾಂಡದಲ್ಲಿರುವ ಭೂಮಿ ಮತ್ತು ಅಂತರಿಕ್ಷಗಳ ರಚನೆ ಸೂರ್ಯನಿಂದಲೇ ಎಂದು ಪ್ರತಿಪಾದಿಸುತ್ತಾನೆ. ಅಗ್ನಿಯೂ ಸಹ ಸೂರ್ಯನಿಗೆ ಸಮೀಪದ ಬಂಧು ಎಂದು ಹೇಳುತ್ತಾನೆ. ಅದೇನೇ ಇರಲಿ ಸೂರ್ಯನಿಂದಲೇ ಜಗತ್ತಿನ ಸೃಷ್ಟಿಯಾಯಿತೆನ್ನುವುದು ಆಧುನಿಕ ವಿಜ್ಞಾನದ ಇನ್ನೊಂದು ರೂಪ ಇರಬಹುದು. ಒಂದು ಸೂಕ್ತವೇ ಇಡೀ ಖಗೋಲ ವಿಜ್ಞಾನದ ಅನೇಕ ಅಂಶಗಳನ್ನು ದೊರಕಿಸಿ ಕೊಡುತ್ತದೆ. ಅದನ್ನು ಮುಂದಕ್ಕೆ ಬರೆಯುವೆ.
#ಅರ್ಚನ್_ವಿಜ್ಞಾನಿ


No comments:

Post a Comment