Search This Blog

Wednesday 21 September 2016

ಸ್ವರ್ಣವಲ್ಲಿಯ ಸರ್ವಜ್ಞ ಸರಸ್ವತಿ ಸ್ವಾಮೀಜಿಯವರು - ಕಡತೋಕೆಯ ಅಗ್ನಿಹೋತ್ರೀ ಕೇಶವ ಭಟ್ಟರು - ಸವಾಯಿ ರಾಮಚಂದ್ರ ನಾಯಕ

೧೬೭೪ ನೇ ಇಸವಿಯಲ್ಲಿ ಸೋದೆಯ ಸವಾಯಿ ರಾಮಚಂದ್ರ ನಾಯಕರು ಮುಖ್ಯಮಂತ್ರಿಗಳಾಗಿದ್ದರು, ಆಗ ಸೋದೆಯ ಹೊನ್ನಹಳ್ಳಿಯ(ಈಗಿನ ಸ್ವರ್ಣವಲ್ಲಿಯ)_ ಮಠದಲ್ಲಿ ಸರ್ವಜ್ಞ ಸರಸ್ವತಿ ಸ್ವಾಮೀಜಿಯವರು ಕೊಡಿಸಿದ ಅಪ್ಪಣೆಯಂತೆ ರಾಜರ ಅಭ್ಯುದಯಕ್ಕಾಗಿ ಕಾಶಿಯಿಂದ ಶ್ರೌತಿ ವಿಶ್ವಪತಿ ಭಟ್ಟರನ್ನು ಕರೆಸಿ ಕಡತೋಕೆಯ ಬೆಳ್ಳಿ ಶಂಭುದೇವರು ಭಟ್ಟರ ಮಗ ಅಗ್ನಿಹೋತ್ರಿ ಕೇಶವ ಭಟ್ಟರಿಂದ ಅರಸರ ಸಮ್ಮುಖದಲ್ಲಿ ಯಜ್ಞವನ್ನು ಮಾಡಿಸಿದ ಬಗ್ಗೆ ಉಲ್ಲೇಖಿಸಲಾಗಿದೆ. ಈ ಶಾಸನದ ವಿಶೇಷವೆಂದರೆ ಇದನ್ನು ಅಗ್ನಿಹೋತ್ರದ ಮಂಟಪದಲ್ಲಿಯೇ ಬರೆಯಲಾಗಿದ್ದು ಈ ಶಾಸನದ ಮಧ್ಯಭಾಗದಲ್ಲಿ ಅದನ್ನು ಆಹವನೀಯ, ಗಾರ್ಹಪತ್ಯ ಮತ್ತು ದಕ್ಷಿಣಾಗ್ನಿಯನ್ನು ಖಂಡರಿಸಲಾಗಿದೆ. ಅಕ್ಷರ ಅಚ್ಚ ಕನ್ನಡವಾಗಿದ್ದರೂ ಕೆಲವೊಂದು ಅಕ್ಷರವನ್ನು ಗೊಂದಲಕಾರಿಯಾಗಿ ಬರೆದಿದ್ದಾರೆ . ಕೆಲವು ಹತ್ತನೇ ಶತಮಾನದ ಅಕ್ಷರಗಳನ್ನು ಹೋಲುತ್ತಿದೆ. ಇದು ಈಗ ಸ್ವರ್ಣವಲ್ಲಿ ಮಠದಲ್ಲಿರುವ ಶಾಸನ. ಹೊನ್ನಹಳ್ಳಿಗೂ ಕಡತೋಕೆಗೂ ಕಾಲಕಾಲಾಂತರದ ಸಂಬಂಧ ಇರುವುದು ತಿಳಿದು ಬರುತ್ತದೆ.















 

2 comments:

  1. ನಮ್ಮ ಅಗ್ನಿಹೋತ್ರಿ ಕುಟುಂಬದಲ್ಲಿ ಶಂಭು, ದೇವರು, ಇತ್ಯಾದಿ ಹೆಸರುಗಳ ಬಳಕೆ ಇದ್ದುದು ನಮ್ಮ ಇತಿಹಾಸವನ್ನವಲೋಕಿಸಿದಾಗ ತಿಳಿದು ಬಂದಿತ್ತು. ಆದರೆ ಕೇಶವ ಎಂಬ ಹೆಸರುನಮ್ಮ ಕುಟುಂಬಿಕರಲ್ಲಿ ಹಿಂದೆ ಇದ್ದ ಬಗ್ಗೆ ನನಗೆ ಎಲ್ಲಿಯೂ ಉಲ್ಲೇಖ ಸಿಕ್ಕಿಲ್ಲ..
    ಅಗ್ನಿಹೋತ್ರವನ್ನಿಟ್ಟ ವ್ಯಕ್ತಿಯ ಹೆಸರು ’ಸುಬ್ರಾಯಭಟ್ಟ ಎಂಬುದಾಗಿ ಕುಟುಂಬದ ಹಿರಿಯರು ಹೇಳುವುದನ್ನು ಕೇಳಿದ್ದೆ..

    ReplyDelete
  2. ಶಾಸನ ಬರೆಯುವಾಗ ಕಲ್ಲಿನ ರಚನೆಗೆ ಅದು ಬರೆಯಲು ಅಸಾಧ್ಯವಾಗಿರಲೂ ಬಹುದು,. ಅಥವಾ ಒಬ್ಬರಿಗೇ ಒಂದಕ್ಕಿಂತ ಹೆಚ್ಚು ಹೆಸರಿದ್ದಿರಲೂ ಬಹುದು. ಶಿಲ್ಪಿ ದೂರದವನಿರಬಹುದು.

    ReplyDelete