Search This Blog

Wednesday 18 April 2018

“ಪ್ರಮಗಂದ” ಎನ್ನುವುದು ಹಣದ ವ್ಯವಹಾರಕ್ಕೆ ಸಂಬಂಧಿಸಿದ ಬಡ್ಡಿಯ ಮಗನೇ ಹೊರತು ಪೋಟಿ - ಪೋಡಿ - ಬೋಡಿ - ಬೊಡ್ಡಿ - ಬಡ್ಡಿಯಲ್ಲ !!



ಈ ಶಾಸನ ಒಂದು ಗದ್ಯ ಸಾಹಿತ್ಯ ಪ್ರಕಾರವಾಗಿದ್ದು, ದ್ವಿತೀಯಾ ವಿಭಕ್ತಿ ಮತ್ತುಷಷ್ಟೀ ವಿಭಕ್ತಿಯ ವಿಶೇಷತೆಯನ್ನು ಕಪ್ಪೆ ಅರಭಟ್ಟನ ಶಾಸನದಲ್ಲಿ ನಾವು ಗಮನಿಸಿದರೆ ಇಲ್ಲಿ ನಾವು ತೃತೀಯ ಪುರುಷದ ಭವಿಷ್ಯತ್ಕಾಲದ ಕ್ರಿಯಾಪದರೂಪ "ಗೊಟ್ಟೋರ್" ಎನ್ನುವ ಪದ ಪ್ರಯೋಗವನ್ನು ಗಮನಿಸಬಹುದು. ಚಾಲುಕ್ಯ ದೊರೆ ವಿಜಯಾದಿತ್ಯನ ಸೂಳೆ ವಿನಾಪೋಟಿ ಎನ್ನುವವಳು ಚಿನ್ನದ ಪೀಠ, ಬೆಳ್ಳಿಯಕೊಡೆ ಮತ್ತು ಭೂದಾನವನ್ನು ಮಾಡಿಸಿದ ಉಲ್ಲೇಖ ಕಾಣ ಸಿಗುತ್ತದೆ. "ಹಿರಣ್ಯಗರ್ಭ" ದಾನದ ಉಲ್ಲೇಖವೂ ಇಲ್ಲಿ ಕಾಣ ಸಿಗುತ್ತದೆ. ಹಾಗೆಯೇಅಷ್ಟ ಶತ ಕ್ಷೇತ್ರಂ” ಎನ್ನುವಲ್ಲಿಯೂ ಎಂಟು ನೂರು ಅಳತೆಯ ಪ್ರಮಾಣ ಗಮನಿಸಬಹುದು. ಈಕೆಯು ಅರಸನ ಅಥವಾ ಅರಸು ಸೂಳೆಯಾಗಿದ್ದು ರಾಜ ಮರ್ಯಾದೆಯೂ ಸಲ್ಲುತ್ತಿದ್ದಿರಬಹುದು. ಅಂತೂ ವೇಶ್ಯೆಯೊಬ್ಬಳು ದಾನ ಮಾಡಿದ ಉಲ್ಲೇಖವನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟದಲ್ಲಿರುವ ಮಹಾಕೂಟೇಶ್ವರ ದೇವಸ್ಥಾನದ ಸ್ತಂಭವೊಂದರಲ್ಲಿ ಕಂಡರಿಸಲಾಗಿದೆ. ಈ ಶಾಸನ ಸುಮಾರು ೭೩೩ನೇ ಇಸವಿಗೆ ಸರಿಹೊಂದುತ್ತದೆ. ಬಾದಾಮಿ ಚಾಲುಕ್ಯರ ಕಾಲದ ಶಾಸನ.
ಶಾಸನ ಪಾಠ:
. ಸ್ವಸ್ತಿ ವಿಜಯಾದಿತ್ಯ ಸತ್ಯಾಶ್ರಯ ಶ್ರೀ ಪೃಥಿವೀ
. ವಲ್ಲಭ ಮಹಾರಾಜಾಧಿರಾಜ ಪರಮೇಶ್ವರ ಭಟಾ
. ರರಾ ಪ್ರಾಣವಲ್ಲಭೆ ವಿನಾಪೋಟಿಗಳೆನ್ವೊರ್ಸ್ಸೂಳೆ
. ಯರ ಇವರಾ ಮುದು ತಾಯ್ವಿರೇವಮಞ್ಚಳ್ಗಳವರಾ
. ಮಗಳ್ದಿರ್ಕುಚಿಪೋಟಿಗಳವರಾ ಮಗಳು ವಿನಾಪೋ
. ಟಿಗಳ ಇಲ್ಲಿಯೆ ಹಿರಣ್ಯಗರ್ಭಮಿೞ್ದು ಎಲ್ಲಾ ದಾನ
. ಮುಂ ಗೊಟ್ಟು ದೇವನಾ ಪೀಠಮಾನ್ಕಿಸುವಿನೆ ಕಟ್ಟಿ ಬೆಳ್ಳಿಯಾ
. ಕೊಡೆಯಾನೇಱಿಸಿಎ ಮಙ್ಗಲುಳ್ಳೆ ಅಷ್ಟಶತಂ ಕ್ಷೇ
. ತ್ರಗೊಟ್ಟೋರ್ ಇದಾನಳಿದೊನ್ಪಞ್ಚ ಮಹಾಪಾತಕನಕ್ಕುಮ್

ಹಿರಣ್ಯ ಮತ್ತು ಹಿರಣ್ಯಗರ್ಭ:
ಉದ್ಯೋಗಪರ್ವ೧೧೪ನೆಯ ಅಧ್ಯಾಯದಲ್ಲಿ
ನಿರ್ಮಿತಂ ವಹ್ನಿನಾ ಭೂಮೌ ವಾಯುನಾ ಶೋಧಿತಂ ತಥಾ |
ಯಸ್ಮಾದ್ಧಿರಣ್ಮಯಂ ಸರ್ವಂ ಹಿರಣ್ಯಂ ತೇನ ಚೋಚ್ಯತೇ || ೧ ||
 ಭೂಮಿಯ ತಳಭಾಗದಲ್ಲಿ ಅಗ್ನಿಯಿಂದ ನಿರ್ಮಿಸಲ್ಪಟ್ಟುದಾಗಿಯೂ ವಾಯುವಿನಿಂದ ಶೋಧಿಸಲ್ಪಟ್ಟುದಾಗಿಯೂ ಇರುವ ಒಂದು ಲೋಹವನ್ನುಹಿರಣ್ಯಎಂದು ಕರೆಯುತ್ತಾರೆ. ಎನ್ನುವ ಉಲ್ಲೇಖ ಸಿಗುತ್ತದೆ.
ಸಂಪೂರ್ಣಜಗತ್ತೂ ಹಿರಣ್ಯಪ್ರಧಾನ ವಾಗಿರುವುದರಿಂದಲೂ, ಇದು ಭೂಮಿಯಲ್ಲಿ ಸಾರಭೂತ ವಾಗಿರುವುದರಿಂದಲೂ, ಶುದ್ಧವಾಗಿರುವುದರಿಂದಲೂ ಮತ್ತು ಜಗತ್ತಿಗಿದು ಮೋಹಕವಾಗಿರುವುದರಿಂದಲೂ ಇದನ್ನುಹಿರಣ್ಯಎಂದು ಕರೆಯುತ್ತಾರೆ. ಸರ್ವವೂ ಹಿರಣ್ಮಯವೇ ಆಗಿರುವುದರಿಂದ (ಅಗ್ನಿಯು ಹಿರಣ್ಯರೇತಸ್ಕನು. ಮತ್ತು ಭೂಮಿಯು ಹಿರಣ್ಯಗರ್ಭೆಯು) ಲೋಹವನ್ನೇ ಹಿರಣ್ಯವೆಂದೂ ಕರೆಯುತ್ತಾರೆ.
ಧತ್ತೇ ಧಾರಯತೇ ಚೇದಮೇತಸ್ಮಾತ್ಕಾರಣಾದ್ಧನಮ್‍ |
ತದೇತತ್ತ್ರಿಷು ಲೋಕೇಷು ಧನಂ ತಿಷ್ಠತಿ ಶಾಶ್ವತಮ್‍ || ||
ಹಿರಣ್ಯಕ್ಕೆ ಎರಡು ವಿಧವಾದ ಶಕ್ತಿಗಳಿವೆ. ಇದು ಜಗತ್ತನ್ನೇ ಧಾರಣೆಮಾಡಿದೆ. ಇದರ ಅವಲಂಬನೆಯಿಂದಲೇ ಜಗತ್ತು ಇಂದು ಉಳಿದಿದೆ. ಜಗತ್ತನ್ನು ಇದೇ ಪೋಷಿಸುತ್ತಿದೆ. ಇಂತಹ ಸುವರ್ಣವನ್ನೇ ಆಭರಣಗಳ ರೂಪವಾಗಿ ಶ್ರೀಮಂತರು ಧಾರಣೆಮಾಡಿಕೊಳ್ಳುತ್ತಾರೆ. ಎರಡು ಗುಣಗಳೂ ಇದಕ್ಕೆ ಇರುವುದರಿಂದ ಇದನ್ನುಧನ’ ‘ಧನಎಂದು ಕರೆಯುತ್ತಾರೆ. ಧನವು ಮೂರು ಲೋಕಗಳಲ್ಲಿಯೂ ಸರ್ವಕಾಲಗಳಲ್ಲಿಯೂ ಇರುವ ವಸ್ತುವಾಗಿದೆ. ಆದುದರಿಂದಲೇ ಭೂಮಿಗೆ ಹಿರಣ್ಯಗರ್ಭ ಎನ್ನುವುದಾಗಿ ಕರೆಯಲಾಗಿದೆ.
ಮಹಾದಾನಗಳು ಹದಿನಾರು ಎನ್ನಲಾಗಿದ್ದರೂ ಸಹ ಅಗ್ನಿಪುರಾಣ ಹತ್ತನ್ನು ಮಾತ್ರವೇ ಹೇಳುತ್ತದೆ. ಇವುಗಳನ್ನೆಲ್ಲಾ ಆಚರಿಸಿದ ಮಾಹಿತಿ ನಮಗೆ ಇತಿಹಾಸದಲ್ಲಿ ಕಾಣಸಿಗದಿದ್ದರೂ ಸಹ ಅಶ್ವಮೇಧ, ರಾಜಸೂಯ, ವಾಜಪೇಯ, ಅಗ್ನಿಷ್ಟೋಮ, ಹಿರಣ್ಯಗರ್ಭ, ತುಲಾಪುರುಷ, ಗೋಸಹಸ್ರ, ಆಚರಿಸಿದ್ದಕ್ಕೆ ಸಾಕಷ್ಟು ಆಧಾರಗಳು ಸಿಗುತ್ತವೆ. ಮಾಉರ್ಯರ ನಂತರ ಕಾಲದ ಉತ್ತರಭಾರತದಲ್ಲಿ ಪುಷ್ಯಮಿತ್ರನ ಜೋಡಿ ಅಶ್ವಮೇಧದಿಂದ ಆರಂಭವಾಗಿ, ಆಚರಣೆಗಳು ಕ್ಷಿಪ್ರಗತಿಯಲ್ಲಿ ದಕ್ಷಿಣ ಭಾರತವನ್ನು ಆವರಿಸಿ ಬಿಟ್ಟವು, ಇಲ್ಲಿ ಅವು ಹೆಚ್ಚು ಮಾನ್ಯತೆ ಪಡೆಯತೊಡಗಿದ್ದನ್ನು ಕಾಣಬಹುದು. ದಕ್ಷಿಣದಲ್ಲಿ ಮೊದಲು ಸಿಗುವುದು ನಾಗಾರ್ಜುನಕೊಂಡದಲ್ಲಿ. ಆನಂದವಂಶ(ಗೋತ್ರ) ಮೊದಲ ರಾಜ ಗೋಸಹಸ್ರ ಮತ್ತು ಹಿರಣ್ಯಗರ್ಭ ದಾನಗಳನ್ನಾಚರಿಸಿ ಹದಿನಾಲ್ಕು ಬ್ರಾಹ್ಮಣರಿಗೆ ಗ್ರಾಮ ದತ್ತಿ ಕೊಟ್ಟುದು ತಿಳಿದು ಬರುತ್ತದೆ.

No comments:

Post a Comment