Search This Blog

Tuesday 10 July 2018

ಸಂಗೀತವನ್ನೇ ಉಸಿರಾಡಿದ ರಾಜನೊಬ್ಬನಾದರೆ; ಸಂಗೀತವನ್ನೇ ಉಸಿರಾಡಿದ ಊರಾಗಿದೆ ನಮ್ಮ ನಾಡು.


ಗುಪ್ತವಂಶ ಪ್ರಾಮುಖ್ಯಕ್ಕೆ ಬಂದದ್ದು ಘಟೋತ್ಕಚನ ಮಗನಾದ 1ನೆಯ ಚಂದ್ರಗುಪ್ತನ ಕಾಲದಲ್ಲಿಯೇಶಾಸನಗಳಲ್ಲಿ ಇವನಿಗೆ ಮಹಾರಾಜಾಧಿರಾಜನೆಂಬ ಬಿರುದಿದ್ದದ್ದು ಕಂಡುಬರುತ್ತದೆಅಲ್ಲದೆ ಇವನು ಅಚ್ಚುಹಾಕಿಸಿದ ಚಿನ್ನದ ನಾಣ್ಯಗಳೂ ದೊರೆತಿವೆಇವನು ಲಿಚ್ಛವಿ ವಂಶಕ್ಕೆ ಸೇರಿದ ಕುಮಾರದೇವಿಯನ್ನು ಮದುವೆಯಾಗಿದ್ದ ವೇಳೆಗೆ ಬಿಹಾರ ಪ್ರಾಂತ್ಯದ ಉತ್ತರ ಭಾಗದಲ್ಲಿ ವೈಶಾಲಿ ಮತ್ತು ನೇಪಾಳಗಳ ನಡುವಣ ಪ್ರದೇಶ ಲಿಚ್ಚವಿಯರ ಆಳ್ವಿಕೆಗೆ ಒಳಪಟ್ಟಿತ್ತು ಪ್ರದೇಶವು ಗುಪ್ತರು ಆಳುತ್ತಿದ್ದಿರಬಹುದಾದ ಪ್ರದೇಶಕ್ಕೆ ಹೊಂದಿದಂತಿತ್ತು ವಂಶಕ್ಕೆ ಉತ್ತರಾಧಿಕಾರಿಗಳಿಲ್ಲದ ಕಾರಣ ಲಿಚ್ಛವಿ ರಾಜ್ಯವೂ ಸ್ವಾಧೀನಕ್ಕೆ ಬಂತುಕುಮಾರದೇವಿಯನ್ನು ಮದುವೆಯಾದದ್ದು ಚಂದ್ರಗುಪ್ತನ ಜೀವನದ ಗತಿಯನ್ನೇ ಬದಲಾಯಿಸಿತೆನ್ನಬಹುದುಇದರ ಪರಿಣಾಮವಾಗಿ ಇವನ ರಾಜ್ಯ ವಿಸ್ತಾರಗೊಂಡಿತುಪ್ರಾಬಲ್ಯ ಹೆಚ್ಚಿತುಇವನ ತಂದೆ"ಮಹಾರಾಜ"ನೆನಿಸಿಕೊಂಡಿದ್ದಈಗ ಚಂದ್ರಗುಪ್ತನು `ಮಹಾರಾಜಾಧಿರಾಜನೆಂದು ಬಿರುದಾಂಕಿತನಾದ ಚಂದ್ರಗುಪ್ತ ಆಳ್ವಿಕೆಗೆ ಬಂದ ವರ್ಷವಾದ 320ರಿಂದ ಗುಪ್ತರ ಹೆಸರಿನಲ್ಲಿ ಒಂದು ಶಕೆಯನ್ನು ಗಣನೆಗೆ ತರಲಾಯಿತುಗುಪ್ತಶಕೆಯನ್ನು ಸಮುದ್ರಗುಪ್ತನ ಆಳ್ವಿಕೆಯ ಮೊದಲ ವರ್ಷದಿಂದ ಗಣಿಸಲಾಯಿತೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದು ಚಂದ್ರಗುಪ್ತನ ಆಳ್ವಿಕೆಯ ಮೊದಲ ವರ್ಷದಿಂದಲೇ ಆರಂಭವಾಯಿತೆಂದು ಒಪ್ಪಲಾಗಿದೆಸಮುದ್ರಗುಪ್ತನ  ಅಲಾಹಾಬಾದ್ ಸ್ತಂಭಶಾಸನದಲ್ಲಿ ಚಂದ್ರಗುಪ್ತನ ಆಸ್ಥಾನದ ವರ್ಣನೆ ಇದೆತನ್ನ ಆಳ್ವಿಕೆಯ ಕೊನೆಯ ಕಾಲದಲ್ಲಿಸಮುದ್ರಗುಪ್ತನೇ ಸಮರ್ಥನಾದ ತನ್ನ ಉತ್ತರಾಧಿಕಾರಿಯೆಂದು ಯೋಚಿಸಿಆಸ್ಥಾನಿಕರ ಸಮ್ಮುಖದಲ್ಲಿ ಚಂದ್ರಗುಪ್ತ ಸಮುದ್ರಗುಪ್ತನನ್ನು ತನ್ನ ನಂತರದ ರಾಜನಾಗಿ ಆಳಲು ಆರಿಸಿದನೆಂದು ಹೇಳಿದೆಇದರಿಂದ ಬಹುಶಃ ಸಮುದ್ರಗುಪ್ತ ಆತನ ಹಿರಿಯ ಮಗನಾಗಿರದೆ ಅವನ ಹಿರಿಯ ಸೋದರನೊಬ್ಬನಾಗಿದ್ದರೂ ಇರಬಹುದೆಂದು ಊಹೆ ಮಾಡಲಾಗಿದೆ. ಸಮುದ್ರಗುಪ್ತನ ನಾಣ್ಯಗಳನ್ನು ಹೋಲುವಕಾಚಗುಪ್ತನೆಂಬವನಚಿನ್ನದ ನಾಣ್ಯಗಳು ದೊರೆತಿವೆಇವುಗಳ ಆಧಾರದಮೇಲೆ ಕಾಚಗುಪ್ತ ಸಮುದ್ರಗುಪ್ತನ ಹಿರಿಯ ಸೋದರನಾಗಿದ್ದಿರಬೇಕೆಂದು ಹಲವರು ಸೂಚಿಸಿದ್ದಾರೆಆದರೆ ಇದೂ ಕೂಡಾ ನಂಬಲಿಕ್ಕೆ ಅರ್ಹವಾಗಿಲ್ಲ.
ಈ ಶಾಸನವನ್ನು ಕವಿ ಹರಿಷೇಣ ಎನ್ನುವವ ರಚಿಸಿದ. ಈತನ ಅನಿಸಿಕೆಯಂತೆ. ಭಾರತ ಒಂದು ಪ್ರಬುದ್ಧ ಸಮೃದ್ಧ ರಾಷ್ಟ್ರವಾದದ್ದೇ ಅಲ್ಲದೇ ಅಧ್ಯಾತ್ಮಿಕ ಸ್ಥರ ಒಂದರಲ್ಲಿ ಮಾತ್ರವೇ ಗುರುತಿಸಿಕೊಳ್ಳದೇ ಸಾಂಸ್ಕೃತಿಕವಾಗಿಯೂ ಅಷ್ಟೇ ಮಹತ್ತರ ಪಾತ್ರವಹಿಸಿತ್ತು. ತಂಬುರವನ್ನು ನುಡಿಸುತ್ತಿದ್ದರೆ ಆತ ರಾಜನಾಗಿ ಕಾಣಿಸಿಕೊಳ್ಳದೇ ಕೇವಲ ಕಲೆಗಾರನಂತೆ ವರ್ತಿಸುತ್ತಿದ್ದನಂತೆ. ಸಮುದ್ರಗುಪ್ತ ಸಂಗೀತದಲ್ಲಿ ಪ್ರಗಲ್ಬ ಪಾಂಡಿತ್ಯವನ್ನು ಹೊಂದಿದ್ದನೆನ್ನುವುದು ಹರಿಷೇಣನಿಂದ ತಿಳಿದು ಬರುತ್ತದೆ. ಇದು ಉತ್ಪ್ರೇಕ್ಷೆಯಾಗಿರದೇ ಈತನ ಸಂಗೀತ ಪ್ರೇಮ ಬೇರೆಡೆಯೂ ಗಮನಕ್ಕೆ ಬರುತ್ತದೆ.
 ಶಾಸನವನ್ನು ಕಾವ್ಯವೆಂದು ವರ್ಣಿಸಲಾಗಿದೆಇದರ ಕರ್ತೃ ಮಹಾದಂಡನಾಯಕ ಧ್ರುವಭೂತಿಯ ಮಗ ಸಂಧಿವಿಗ್ರಹಿಕುಮಾರಾಮಾತ್ಯಮಹಾದಂಡನಾಯಕ ಹರಿಷೇಣಸಮುದ್ರಗುಪ್ತ ಸ್ವತಃ ಅನೇಕ ಕಾವ್ಯಗಳನ್ನು ರಚಿಸುವುದರಮೂಲಕ "ಕವಿರಾಜ"ನೆಂಬ ಪ್ರಶಸ್ತಿಗೆ ಅರ್ಹನಾಗಿದ್ದನೆಂದೂ ಸಂಗೀತಶಾಸ್ತ್ರದಲ್ಲಿ ತುಂಬುರುವನ್ನು ಮೀರಿಸಿದ್ದನೆಂದೂಶಾಸನದಲ್ಲಿ ಹೇಳಿದೆಅವನ ಯಾವ ಕಾವ್ಯಗಳು ಲಭ್ಯವಾಗಿಲ್ಲಆದರೆ ಅವನು ಸಂಗೀತ ಶಾಸ್ತ್ರಜ್ಞನೆಂಬ ವಿಷಯವನ್ನುಅವನು ಅಚ್ಚು ಹಾಕಿಸಿದ ಕೆಲವು ನಾಣ್ಯಗಳು ಸಮರ್ಥಿಸುತ್ತವೆಸಮುದ್ರಗುಪ್ತ ತಾನೇ ವೀಣೆಯನ್ನು ನುಡಿಸುತ್ತಿರುವಂತೆಈ ನಾಣ್ಯಗಳಲ್ಲಿ ಚಿತ್ರಿಸಲಾಗಿದೆ.
ನಮ್ಮ ದೇಶ ಈತನನ್ನ ರಾಜನನ್ನಾಗಿ ಪಡೆಯಿತು ಸಂಗೀತಗಾರನನ್ನಾಗಿ ಪಡೆಯಿತು ಸಾಂಸ್ಕೃತಿಕ ರಾಯಭಾರಿಯನ್ನಾಗಿ ಪಡೆಯಿತು. “ಧರ್ಮ ಪ್ರಾಚೀರ ಬಂಧಃ ಶಶಿಕರ ಸುಚಯಃ ಕೀರ್ತಯಃ ಸ ಪ್ರತಾನಾ ವೈದುಷ್ಯಂ ತತ್ವ ಭೇದಿ ಪ್ರಶಮ . . . ಉಕು . ಯ್ ; ಕ ಮು ತ್ . . . ಆರ್ಥಮ್ |”
ಅಧ್ಯೇಯಃ ಸೂಕ್ತ ಮಾರ್ಗಃ ಕವಿಮತಿವಿಭವೋತ್ಸಾರಣಂ ಚಾಪಿ ಕಾವ್ಯಂ ಕೋನು ಸ್ಯಾದ್ಯೋಸ್ಯನಸ್ಯಾದ್ ಗುಣ ಇತಿ ವಿದುಷಾಂ ದ್ಯಾನ ಪಾತ್ರಂ ಯ ಏಕಃ ||
ಎನ್ನುವುದಾಗಿ ಅಲಹಾಬಾದ್ ಸ್ತಂಬ ಶಾಸನದಿಂದ ತಿಳಿದು ಬರುತ್ತದೆ. ಈತ ಕವಿ, ಸಂಗೀತಗಾರ, ತಂಬುರದ ಜೋತೆಗೆ ಹಾಡುತ್ತಿದ್ದನಂತೆ. ಇಲ್ಲಿ ನಾವು ರಾಜನೇ ಸಂಗಿತಗಾರನನ್ನಾಗಿ ಕಂಡರೆ ದಕ್ಷಿಣದಲ್ಲಿ ಒಂದು ಊರನ್ನೇ ಸಂಗೀತವನ್ನಾಗಿಸಿದ ಇನ್ನೊಬ್ಬ ಕವಿಯ ಕಾವ್ಯ ಚಾತುರ್ಯ ಗಮನಿಸೋಣ.
ಕನ್ನಡ ಭಾಷೆ ತನ್ನ ಅಸ್ತಿತ್ವವನ್ನು ಸ್ಥಾಪಿಸಿದ ಸಮಯ ಅದು. ಲಿಪಿ ಕೂಡ ಬ್ರಾಹ್ಮಿಯಿಂದ ಬೇರ್ಪಟ್ಟು ಸ್ವತಂತ್ರವಾಗಿತ್ತು. ಶಾಸನ ಕವಿಗಳಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡವರು ಇಲ್ಲವೇ ಇಲ್ಲವೇನೋ ಅನ್ನುವಷ್ಟು ವಿರಳ. ಮಳವಳ್ಳಿಯಲ್ಲಿ ವಿಶ್ವಕರ್ಮನನ್ನು ಸ್ಮರಿಸಿದ್ದು ಕಾಣುತ್ತೇವೆ ಬಿಟ್ತರೆ ಆಮೇಲೆ ಹೇಳಿಕೊಳ್ಳುವಂತಹ ಶಾಸನ ಕವಿಗಳನ್ನು ಗುರುತಿಸಲಾಗದು ಆದರೆ ಮುಂದೆ ೪ - ೫ನೇ ಶತಮಾನದ ಸುಮಾರಿಗೆ ಶಾಂತಿವರ್ಮ ತಾಳಗುಂದದಲ್ಲಿ ಬರೆಸಿದ ಶಸನ ಮಹತ್ವವನ್ನು ಪಡೆಯುತ್ತದೆ. ಅಲ್ಲಿ ಕವಿ ತನ್ನ ಸರ್ವ ಸ್ವಾತಂತ್ರ್ಯವನ್ನುಪಯೋಗಿಸಿ ಅತ್ಯದ್ಭುತವಾದ ಛಂದೋಬದ್ಧವಾದ ರಚನೆ ಕಂಡು ಬರುತ್ತದೆ. ನನ್ನನ್ನು ಆಗಾಗ ಕಾಡುವ ಕವಿ ಈತ. ಈತ ತನ್ನ ಸಾಹಿತ್ಯದ ಕೃತಿಯಲ್ಲಿ ಕಲಿಯುಗದ ಪ್ರಸ್ತಾಪವನ್ನು ಮೊತ್ತಮೊದಲಿಗೆ ಮಾಡುತ್ತಾನೆ. "ಕಲಿಯುಗೇsಸ್ಮಿನ್ನಹೋsಬತ ಕ್ಷತ್ರಾತ್ ಪರಿಪೇಲವಾ ವಿಪ್ರತಾಯತಃ" ಎಂದು ಕಲಿಯುಗದ ಪ್ರಸ್ತಾವ ಮಾಡುತ್ತಾನೆ. ಇದರ ನಂತರದ ಕಲಿಯುಗದ ವರ್ಣನೆ ಬಾದಾಮಿ ಚಳುಕ್ಯರ ಕಾಲದಲ್ಲಿರಬೇಕು. ಅದೇನೇ ಇರಲಿ ಈ ತಾಳಗುಂದ ಶಾಸನದ ಕವಿ ಕೇವಲ ಒಂದು ವಿಷಯಕ್ಕೆ ಸೀಮಿತನಾಗುವುದಿಲ್ಲ. ಅದನ್ನು ಗಮನಿಸೋಣ.
ಕನ್ನಡಿಗರ ಬದುಕಿನ ಅವಿಭಾಜ್ಯ ಅಂಗ ಎಂದರೆ ಸಂಗೀತವೆಂದು ಮನಗಂಡಿದ್ದ ಕವಿ ತನ್ನ ಶಾಸನದಲ್ಲಿ ಅದನ್ನೇ ಬರೆಯುತ್ತಾನೆ. ನಾನಾವಿಧ ದ್ರವಿಣ ಸಾರ ಸಮುಚ್ಚ್ರಯೇಷು ಮತ್ತದ್ವಿಪೇಂದ್ರ ಮದವಾಸಿತ ಗೋಪುರೇಷುಸಂಗೀತ ವಲ್ಗು ನಿನದೇಷು ಗೃಹೇಷು ಯಸ್ಯ ಲಕ್ಷ್ಮ್ಯಾಂಗನಾ ಧೃತಿಮತೀ ಸುಚಿರಂ ಚರೇಮೆ” ಎಂದು ಬರೆದು ಸಂಗೀತವೆನ್ನುವುದು ನಮ್ಮ ನಾಡಿನ ಜನರ ದಿನ ನಿತ್ಯದ ಜೀವನದಲ್ಲಿ ಹೇಗೆ ಬೆರೆತು ಕೊಂಡಿತ್ತು ಎಂದು ಹೇಳುತ್ತಾನೆ. ಶಿವಮೊಗ್ಗ ಜಿಲ್ಲೆಯ ಈ ಊರು ಅಂದು ಪ್ರತಿಯೊಂದು ಮನೆಯಲ್ಲೂ ಸಂಗೀತದ ನೀನಾದ ಕೇಳಿ ಬರುತ್ತಿತ್ತೆನ್ನುವುದು ಕವಿಯ ಆಶಯ. ಇದರಲ್ಲಿ ಕವಿಯ ಉತ್ಪ್ರೇಕ್ಷೆ ಇದ್ದಿರಬಹುದು ಆದರೆ ಇದರ ನಂತರ ಬಂದ ಅಲ್ಲಿಗೆ ಸಮೀಪದ ಗುಡ್ನಾಪುರ ಶಾಸನವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಈ ಶಾಸನದಲ್ಲಿ ಅಂತಹ ಉತ್ರೇಕ್ಷೆ ಇದ್ದಂತೆ ನನಗನ್ನಿಸುವುದಿಲ್ಲ. ಅದೇನೇ ಇರಲಿ ಸಂಗೀತದ ಕುರಿತಾಗಿ ಕರ್ನಾಟಕದಲ್ಲಿ ಉಲ್ಲೇಖ ಆರಂಭವಗುವುದೇ ಈ ಶಾಸನದಿಂದ ಅಂದರೆ ತಪ್ಪಾಗದು.
ತಾಳಗುಂದ ಸ್ತಂಬಶಾಸನದ ಕವಿ ಸ್ವತಃ ಸಂಗೀತಗಾರನಿದ್ದಂತೆ ಅನ್ನಿಸುವುದಿಲ್ಲ. ಆದರೆ ಪ್ರೌಢ ಕವಿಯಂತೂ ಹೌದು. ರಾಮಾಯಣದಂತಹ ಮಹಾಕಾವ್ಯವನ್ನು ತನ್ನ ಕಾವ್ಯವಸ್ತುಗಳನ್ನಾಗಿಸಿಕೊಂಡದ್ದಲ್ಲದೇ ಕಾಳಿದಾಸನ ರಘುವಂಶವನ್ನೂ ಅಷ್ಟೇ ಸಮರ್ಥವಾಗಿ ತನ್ನದಾಗಿಸಿಕೊಂಡದ್ದು ಕಂಡುಬರುತ್ತದೆ. ಆದರೆ ಈ ಶಾಸನವನ್ನು ಬರೆಯುವಾಗ ಕವಿ ಸ್ಥಳೀಯ ಪರಿಸರವ್ ಅನ್ನು ಸೂಕ್ಷ್ಮವಾಗಿ ಅವಲೋಕಿಸಿ ಬರೆದಿರಬಹುದು. ಶಾಸನದಲ್ಲಿ ವೇದ ವೇದಾಂಗಗಳ ಕುರಿತಾಗಿ, ಅಗ್ರಹಾರದ ಕುರಿತಾಗಿ, ಘಟಿಕಾಸ್ಥಾನದ ಪರಿಚಯ ಮತ್ತು ಊರಿನ ಸಮಗ್ರ ಪರಿಚಯವನ್ನು ನಮ್ಮ ಕಣ್ಣಮುಂದೆ ತೆರೆದಿಡುತ್ತಾನೆ.
"ಸಂಗೀತ ವಲ್ಗು ನಿನದೇಷು ಗೃಹೇಷು" ಎಂದು ಎಲ್ಲಾ ಮನೆ ಮನೆಗಳಲ್ಲೂ ಸಂಗೀತದ ನಿನಾದವು ಕೇಳಿ ಬರುತ್ತಿತ್ತು ಎನ್ನುತ್ತಾನೆ. 
#ಶಿಲೆಗಳಲ್ಲದಗಿದ_ಸತ್ಯ


No comments:

Post a Comment