Search This Blog

Tuesday 13 February 2018

ಗಿರಿವ್ರಜ - ರಾಜಧಾನಿಯಾಗಿತ್ತು.


ಗಿರಿವ್ರಜ ಎನ್ನುವುದು ಪ್ರಾಚೀನ ಮಗಧದ ರಾಜಧಾನಿ. ಈಗಿನ ಪಾಟ್ನದಿಂದ 62 ಕಿಮೀ ದೂರದಲ್ಲಿರುವ ಈ ಸ್ಥಳದ ಈಗಿನ ಹೆಸರು ರಾಜಗೀರ್. ಉಪರಿಚರ ವಸುವಿನಿಂದ ಈ ನಗರ ನಿರ್ಮಾಣವಾದ್ದರಿಂದ ಇದಕ್ಕೆ ವಸುಮತೀ ಎಂಬ ಇನ್ನೊಂದು ಹೆಸರೂ ಇದೆ. ಬೌದ್ಧರ ಉಚ್ಚ್ರಾಯ ಕಾಲದಲ್ಲಿ ಇದನ್ನು ರಾಜಗೃಹ ಎಂದು ಕರೆದರು. ಗಿರಿವ್ರಜ ಬಾರ್ಹದ್ರಥ ವಂಶದ ರಾಜಧಾನಿಯಾಗಿದ್ದುದರಿಂದ ಇದಕ್ಕೆ ಬಾರ್ಹದ್ರಥಪುರ ಎಂಬ ಹೆಸರಿತ್ತೆಂದು ತಿಳಿಯುತ್ತದೆ. ಬೌದ್ಧ ಗ್ರಂಥಗಳ ಪ್ರಕಾರ ಇದಕ್ಕೆ ಕುಶಾಗ್ರಪುರಿ ಎಂದೂ ಹೆಸರಿತ್ತು. ಬೃಹತ್ಸಂಹಿತೆ ಮತ್ತು ರಾಮಾಯಣ, ಮಹಾಭಾರತ ಮತ್ತು ಭಾಗವತಾದಿಗಳಲ್ಲದೇ ವಿಷ್ಣುಪುರಾಣಗಳಲ್ಲೂ ಗಿರಿವ್ರಜದ ಉಲ್ಲೇಖ ಬಂದಿದೆ. ಕೃಷ್ಣ, ಅರ್ಜುನ, ಭೀಮ-ಇವರು ಜರಾಸಂಧವಧೆಗಾಗಿ ಇಲ್ಲಿಗೆ ಬಂದಿದ್ದರೆಂದು ಭಾಗವತ ಪುರಾಣ ತಿಳಿಸುತ್ತದೆ. ಗೌತಮ ಬುದ್ಧ ವಿಶ್ರಾಂತಿಗಾಗಿ ಒಂದು ವರ್ಷಗಳ ಕಾಲ ಇಲ್ಲಿ ತಂಗಿದ್ದನೆಂದು ತಿಳಿದುಬರುತ್ತದೆ. ಇದು ಸಂಕ್ಷಿಪ್ತ ವಿವರಣೆ.
ವಾಲ್ಮೀಕಿರಾಮಾಯಣದ ಬಾಲಕಾಂಡದ 32ನೇ ರ್ಗ
ಅಮೂರ್ತರಜಸೋ ರಾಮ ಧರ್ಮಾರಣ್ಯಂ ಮಹಾಮತಿಃ |
ಚಕ್ರೇ ಪುರವರಂ ರಾಜಾ ವಸುಶ್ಚಕ್ರೇ ಗಿರಿವ್ರಜಮ್ || 7 ||
ಮಹಾಬುದ್ಧಿಶಾಲಿಯಾದ ಅಮೂರ್ತರಜಸನು ಧರ್ಮಾರಣ್ಯವೆಂಬ ಪಟ್ಟಣವನ್ನೂ, ವಸುರಾಜನು ಎಲ್ಲ ಪಟ್ಟಣಗಳಿಗೂ ಶ್ರೇಷ್ಠವಾದ ಗಿರಿವ್ರಜವೆಂಬ ಸುಂದರವಾದ ಪಟ್ಟಣವನ್ನೂ ನಿರ್ಮಿಸಿದರು. ರಾಮ! ಈಗ ನಾವಿರುವ ಈ ಪ್ರದೇಶವು ಮಹಾತ್ಮನಾದ ವಸುವಿನ ಪಟ್ಟಣವಾದ ಗಿರಿವ್ರಜಕ್ಕೆ ಸೇರಿದೆ.
ಏಷಾ ವಸುಮತೀ ರಾಮ ವಸೋಸ್ತಸ್ಯ ಮಹಾತ್ಮನಃ |
ಏತೇ ಶೈಲವರಾಃ ಪಞ್ಚ ಪ್ರಕಾಶನ್ತೇ ಸಮನ್ತತಃ || 8 ||
ಈ ಪಟ್ಟಣದ ಸುತ್ತಲೂ ಐದು ಪರ್ವತಗಳು ಕಂಗೊಳಿಸುತ್ತಿವೆ. ಇವು ಪಟ್ಟಣವನ್ನು ಸುತ್ತುವರಿದು ಇರುವುದರಿಂದಲೇ ಈ ಪಟ್ಟಣಕ್ಕೆ ಗಿರಿವ್ರಜವೆಂದು ಹೆಸರಾಯಿತು.
ಸುಮಾಗಧೀ ನದೀ ರಮ್ಯಾ ಮಗಧಾನ್ವಿಶ್ರುತಾ ಯಯೌ |
ಪಞ್ಚಾನಾಂ ಶೈಲಮುಖ್ಯಾನಾಂ ಮಧ್ಯೇ ಮಾಲೇವ ಶೋಭತೇ || 9 ||
ಈ ಐದು ವರ್ಷಗಳ ಮಧ್ಯದಲ್ಲಿ ಮಾಲೆಯಂತೆ ಪರಿಶೋಭಿಸುತ್ತಾ ಹರಿದುಬರುತ್ತಿರುವ ರಮಣೀಯ ಪ್ರಸಿದ್ಧವಾದ ಈ ನದಿಯ ಹೆಸರು ಸುಮಾಗಧೀ ಅಥವಾ ಶೋಣಾ.
ಸೈಷಾ ಹಿ ಮಾಗಧೀ ರಾಮ ವಸೋಸ್ತಸ್ಯ ಮಹಾತ್ಮನಃ |
ಪೂರ್ವಾಭಿಚರಿತಾ ವೀರ ಸುಕ್ಷೇತ್ರಾ ಸಸ್ಯಮಾಲಿನೀ || 10 ||
ಈ ನದಿಯು ಮಾಗಧದೇಶದಲ್ಲಿ ಹರಿದುಬರುತ್ತದೆ. ನಾವಿರುವ ಈ ಭೂಮಿಯು ಮಹಾತ್ಮನಾದ ವಸುವಿನ ರಾಜ್ಯವಾಗಿದ್ದ ಮಗಧಭೂಮಿಯಾಗಿದೆ.
ತಾಸ್ತು ಯೌವನಶಾಲಿನ್ಯೋ ರೂಪವತ್ಯಃ ಸ್ವಲಂಕೃತಾಃ |
ಉದ್ಯಾನಭೂಮಿಮಾಗಮ್ಯ ಪ್ರಾವೃಷೀವ ಶತಹ್ರದಾಃ || 12 ||
ಈ ಭೂಮಿಯು ಒಳ್ಳೆಯ ಕ್ಷೇತ್ರಗಳಿಂದ ಕೂಡಿ, ಕಂಗೊಳಿಸುವ ಸಸ್ಯಗಳ ಮಾಲೆಯನ್ನು ಧರಿಸಿದೆ. ಈ ಪ್ರದೇಶದಲ್ಲಿ ನಾನು ಹಿಂದೆ ಹಲವು ಬಾರಿ ಸಂಚರಿಸಿದ್ದೇನೆ. ಕುಶಪುತ್ರನಾದ, ರಾಜರ್ಷಿಯಾದ ಕುಶನಾಭನು ಘೃತಾಚೀ ಎಂಬ ಅಪ್ಸರೆಯಲ್ಲಿ ನೂರು ಮಂದಿ ಶ್ರೇಷ್ಠರಾದ ಹೆಣ್ಣು ಮಕ್ಕಳನ್ನು ಪಡೆದನು.
ಗಾಯನ್ತ್ಯೋ ನೃತ್ಯಮಾನಾಶ್ಚ ವಾದಯನ್ತ್ಯಶ್ಚ ಸರ್ವಶಃ |
ಆಮೋದಂ ಪರಮಂ ಜಗ್ಮುರ್ವರಾಭರಣಭೂಷಿತಾಃ || 13 ||
ಕುಂಕುಮ-ಕಸ್ತೂರಿಗಳೇ ಮೊದಲಾದ ಸುಗಂಧದ್ರವ್ಯಗಳಿಂದಲೂ ಬಗೆಬಗೆಯ ಒಡವೆಗಳಿಂದಲೂ ತಮ್ಮ ಶರೀರ ವನ್ನು ಅಲಂಕರಿಸಿಕೊಂಡು ಉದ್ಯಾನವನಕ್ಕೆ ಹೋಗಿವರ್ಷರ್ತುವಿನಲ್ಲಿ ಮಿಂಚುಗಳು ಥಳಥಳಿಸುವಂತೆ-ಉದ್ಯಾನವನದಲ್ಲಿ ಹಾಡುತ್ತಲೂ, ನೃತ್ಯ ಮಾಡುತ್ತಲೂ, ಕೆಲವರು ವೀಣಾದಿ ವಾದ್ಯಗಳನ್ನು ಬಾರಿಸುತ್ತಲೂ ಇದ್ದರು. ಇವುಗಳು ರಾಮಾಯಣದ ಉಲ್ಲೇಖವಾದರೆ ಮಹಾಭಾರತದಲ್ಲಿ ಮುಂದೆ ನೋಡೋಣ..........
ಮಹಾಭಾರತದ ಸಭಾಪರ್ವ-ಅಧ್ಯಾಯ-14 ರಲ್ಲಿ "ಸತ್ಯವಂತನಾದ ಪರಶುರಾಮನಿಂದ ವಧಿಸಲ್ಪಟ್ಟ ಕ್ಷತ್ರಿಯರಲ್ಲಿ ಅಳಿದು-ಉಳಿದವರ ಸಂತತಿಯವರು. ರಾಜಸೂಯಯಾಗವನ್ನು ಕ್ಷತ್ರಿಯನಾದವನು ಮಾಡಬೇಕೆಂದು ಆದೇಶರೂಪವಾಗಿ ಕ್ಷತ್ರಿಯಪರಂಪರೆಯಲ್ಲಿ ಹೇಳುವ ರೂಢಿಯು ಬೆಳೆದುಬಂದಿರುವ ವಿಷಯವು ನಿನಗೂ ತಿಳಿದಿರುವುದು. ಈ ಕ್ಷತ್ರಿಯರು ತಾವೆಲ್ಲರೂ ಐಲ ಮತ್ತು ಇಕ್ಷ್ವಾಕುವಂಶಗಳವರೆಂದು ಹೇಳಿಕೊಳ್ಳುತ್ತಾರೆ. ಐಲ ಮತ್ತು ಇಕ್ಷ್ವಾಕುವಂಶಗಳಲ್ಲಿಯೂ ನೂರಾರು ಕವಲುಗಳೊಡೆದು ಹೋಗಿರುವುದು. ಯಯಾತಿ ಮತ್ತು ಭೋಜವಂಶಗಳ ಕೀರ್ತಿಯು ಶಾಶ್ವತವಾಗಿ ಉಳಿದಿರುವುದು ಮತ್ತು ಆ ಪೀಳಿಗೆಯವರೂ ಇಂದು ಅನೇಕ ಜನರಿದ್ದಾರೆ. ಎಲ್ಲ ಕ್ಷತ್ರಿಯರೂ ಆ ವಂಶದವರ ಇತಿಹಾಸಗಳನ್ನೇ ಹೇಳುತ್ತಾ ಶ್ಲಾಘನೆಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಜರಾಸಂಧನೆಂಬ ರಾಜನು ಹಿಂದಿನ ರಾಜರ ಕೀರ್ತಿಯನ್ನು ತಿರಸ್ಕರಿಸುತ್ತಾ, ಅನೇಕದೇಶಗಳನ್ನು ಆಕ್ರಮಿಸಿ, ಅನೇಕರಾಜರ ತಲೆಗಳನ್ನು ಮೆಟ್ಟಿ, ಜಗತ್ತಿನ ಮಧ್ಯಭಾಗದಲ್ಲಿರುವ ಗಿರಿವ್ರಜಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದಾನೆ. ಎಂದು ಗಿರಿವ್ರಜದ ವಿವರ ಬರುತ್ತದೆ.
ಸಭಾಪರ್ವದ 21ನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನಿಂದ ಮಗಧರಾಜಧಾನಿಯ ಪ್ರಶಂಸೆ ಬರುತ್ತದೆ. ಆಗ ಶ್ರೀಕೃಷ್ಣನು ನೋಡು, ಪಾರ್ಥ! ಈ ಪಟ್ಟಣದ ಸೊಬಗು ಹೇಗಿದೆ! ಜನರಿಂದಲೂ, ಹಸು ಮುಂತಾದ ಪ್ರಾಣಿಗಳಿಂದಲೂ ನಿಬಿಡವಾಗಿದೆ. ನೀರಿಗಾಗಲೀ, ಆಹಾರಕ್ಕಾಗಲೀ ಈ ಪಟ್ಟಣದಲ್ಲಿ ಕ್ಷಾಮವೆಂಬುದೇ ಇಲ್ಲ. ಸೌಧಗಳೆಲ್ಲವೂ ಸಾಲು-ಸಾಲಾಗಿ ಕಟ್ಟಲ್ಪಟ್ಟು ನೇತ್ರಾನಂದವನ್ನುಂಟುಮಾಡುತ್ತಿವೆ. ಈ ಪಟ್ಟಣದಲ್ಲಿ ಯಾವ ವಿಧವಾದ ಈತಿಬಾಧೆಗಳೂ ಇರುವುದಿಲ್ಲ. ಪಟ್ಟಣದ ಸುತ್ತಲೂ ಎತ್ತರವಾದ ಶಿಖರಗಳಿಂದಲೂ, ಅನೇಕವೃಕ್ಷಗಳಿಂದಲೂ, ಲತೆಗಳಿಂದಲೂ ನಿಬಿಡವಾಗಿರುವಒಂದನ್ನೊಂದು ಸೇರಿಕೊಂಡಂತೆಯೇ ಇರುವ ವೈಹಾರ, ವರಾಹ, ವೃಷಭ, ಋಷಿಗಿರಿ ಮತ್ತು ಚೈತ್ಯಕಪರ್ವತಗಳು ಈ ಗಿರಿವ್ರಜಪಟ್ಟಣವನ್ನು ಸಂರಕ್ಷಿಸುತ್ತಿರುವಂತೆ ಕಾಣುತ್ತಿವೆಯಲ್ಲವೇ? ಈ ಪರ್ವತಗಳ ಮಧ್ಯಭಾಗದಲ್ಲಿ ಸುಂದರವಾದ ಕಾನನಗಳಿವೆ. ಆ ಕಾಡುಗಳಲ್ಲಿ ಸುಗಂಧವನ್ನು ಹೊರಸೂಸುವ ಲೋಧ್ರವೃಕ್ಷಗಳಿದ್ದು, ಆ ವೃಕ್ಷಗಳೆಲ್ಲವೂ ನಯನಾನಂದಕರವಾದ, ಸುವಾಸನೆಯಿಂದ ಕೂಡಿರುವ ಪುಷ್ಪಗುಚ್ಛವನ್ನು ಹೊಂದಿ ಪ್ರೇಕ್ಷಕರಿಗೆ ಅತ್ಯಾನಂದವನ್ನುಂಟುಮಾಡುತ್ತಿವೆ. ಇದೇ ಸ್ಥಳದಲ್ಲಿಯೇ ಮಹರ್ಷಿಗಳಾದ ಗೌತಮರು ಶೂದ್ರಸ್ತ್ರೀಯಾದ ಔಶೀನರಿಯಲ್ಲಿ ಕಾಕ್ಷೀವಂತನೇ ಮೊದಲಾದ ಸುಪ್ರಸಿದ್ಧರಾದ ಮಕ್ಕಳನ್ನು ಪಡೆದರು. ಮಹಾತ್ಮರಾದ ಗೌತಮರು ರಾಜನ ವಿಶ್ವಾಸಕ್ಕೆ ಕಟ್ಟುಬಿದ್ದು ಇಲ್ಲಿಯೇ ಆಶ್ರಮದಲ್ಲಿ ವಾಸವಾಗಿದ್ದುಕೊಂಡು ಮಗಧವಂಶದ ರಾಜರನ್ನು ಅನುಗ್ರಹಿಸುತ್ತಿದ್ದಾರೆ. ಅವರು ಇಲ್ಲಿ ಉಪಸ್ಥಿತರಾಗಿರುವುದೇ ಮಗಧವಂಶದ ಅರಸರಿಗೆ ಅನುಗ್ರಹರೂಪವಾಗಿದೆ. ಗೌತಮರ ಆಶ್ರಮಕ್ಕೆ ಹಿಂದಿನ ಕಾಲದಲ್ಲಿ ಅಂಗ, ವಂಗ ಮುಂತಾದ ದೇಶಗಳ ಅರಸರು ಬಂದು ಅನೇಕ ದಿನಗಳು ವಿಶ್ರಾಂತಿಸುಖವನ್ನನುಭವಿಸುತ್ತಾ ಇರುತ್ತಿದ್ದರು. ಎಂದು ವರ್ಣಿಸುತ್ತಾನೆ.
ಮಹಾಭಾರತದ ಕಾಲದಲ್ಲಿ ಮಗಧದ ರಾಜಧಾನಿಯಾಗಿ ಗುರುತಿಸಿಕೊಂಡಿದ್ದ ಈ ನಗರ ಯುದ್ಧದ ನಂತರ ಆಡಳಿತಕ್ಕೆ ಬಂದ, ಬೃಹದೃಥ, ಪ್ರದ್ಯೋಥ, ಶಿಶುನಾಗ, ನಂದ, ಮೌರ್ಯ, ಶುಂಗ, ಕಣ್ವ ಮತ್ತು ಆಂಧ್ರಬೃತ್ಯರು, ಇದನ್ನೇ ಮುಂದುವರೆಸಿಕೊಂಡು ಬಂದು ಆಂದ್ರಭೃತ್ಯರಿಂದ ಕೊನೆಗೊಂಡಿತು ಎಂದು ತಿಳಿದು ಬರುತ್ತದೆ. ಪಾಟಲೀಪುತ್ರವನ್ನು ಈ ರಾಜವಂಶಗಳು ಎಂದೂ ರಾಜಧಾನಿಯನ್ನಾಗಿ ಮಾಡಿಕೊಂಡಿರಲಿಲ್ಲ.
ಗುಪ್ತ ವಂಶದ ಚಂದ್ರಗುಪ್ತನು ಆಂದ್ರಭೃತ್ಯವಂಶದ ಚಂದ್ರ ಶ್ರೀ ಮತ್ತು ಅವನ ಚಿಕ್ಕ ಮಗ ೩ನೇ ಪುಲೋಮನನ್ನು ಕೊಂದು ಆಂಧ್ರಭೃತ್ಯ ವಂಶವನ್ನು ಕೊನೆಗಾಣಿಸಿದ. ಪಾಟಲೀಪುತ್ರದ ಸ್ವಲ್ಪಭಾಗವನ್ನು ವಶಪಡಿಸಿಕೊಂಡರೂ ಮಗಧ ಮತ್ತು ಗಿರಿವ್ರಜ ತನ್ನ ವಶದಲ್ಲೇ ಇದ್ದರೂ ಪಾಟಲೀ ಪುತ್ರವನ್ನೋ ಅಥವಾ ಗಿರಿವ್ರಜವನ್ನೋ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಳ್ಲಲು ಸಾಧ್ಯವಾಗಲೇ ಇಲ್ಲ, ಚಂದ್ರಗುಪ್ತ ಮೌರ್ಯ, ಬಿಂದುಸಾರ, ಅಶೋಕ ಮತ್ತು ಇತರ ಮೌರ್ಯ ರಾಜರುಗಳು ಗಿರಿವ್ರಜದ ಆಡಳಿತ ಹೊಂದಿದ್ದರೂ ಪಾಟಲಿಪುತ್ರವನ್ನು ಅವರ ರಾಜಧಾನಿಯಾಗಿ ಮಾಡಿಕೊಂಡಿರಲಿಲ್ಲ. ಆದರೆ ಪುರಾಣಗಳು ಮಾತ್ರ ಗಿರಿವ್ರಜ - ಮಗಧವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದವು. ನಂದರಿಂದ ತನಗಾದ ಅವಮಾನಕ್ಕೆ ಪ್ರತೀಕಾರವಾಗಿ ಚಾಣಕ್ಯನು ನಂದರ ಕೊನೆಯ ಅರಸ ಧನನಂದನನ್ನು ಚಂದ್ರಗುಪ್ತ ಮೌರ್ಯನೆಂಬ ಯುವರಾಜನ ಸಹಾಯದಿಂದ ಕೊಲ್ಲಿಸಿದಆಮೇಲೆ ಚಂದ್ರಗುಪ್ತ ಮರ್ಯನನ್ನೇ ಕ್ರಿ.ಪೂ 1534ರಲ್ಲಿ ಮಗಧದ ಸಿಂಹಾಸನವನ್ನೇರಿಸಿದ. 316 ವರ್ಷಗಳ ಮೌರ್ಯವಂಶದ ಆಳ್ವಿಕೆಯ ನಂತರ ಮುಂದಿನ 891 ವರ್ಷಗಳು ಶುಂಗ, ಕಾಣ್ವ ಮತ್ತು ಆಂಧ್ರ ವಂಶಗಳು ಮಗಧವನ್ನಾಳಿದವು. ಆಂಧ್ರವಂಶದ ಕೊನೆಯ ರಾಜ ಚಂದ್ರಶ್ರೀ ಆಡಳಿತ ನಡೆಸುತ್ತಿರುವಾಗಲೇ ಕ್ರಿ.ಪೂ 327 ರಲ್ಲಿಯೇ ಅಲೆಕ್ಸಾಂಡರ್ ನ ದಂಡಯಾತ್ರೆ ಭಾರತದ ಮೇಲೆ ನಡೆಯಿತು. ಈ ಚಂದ್ರಶ್ರೀಯನ್ನೇ ಗ್ರೀಕ್ ಲೇಖಕರು Xandramus(ಚಂದ್ರಮಸು) ಎಂದು ಕರೆದಿದ್ದಾರೆ. ಮೊದಲನೇ ಚಂದ್ರಗುಪ್ತನು ಅದೇ ವರ್ಷ ಚಂದ್ರಶ್ರೀಯನ್ನೂ ಅವನ ಮಗ ಇನ್ನು ಪ್ರಾಯಪ್ರಬುದ್ಧನಾಗಿರದ ೩ನೇ ಪುಲೋಮನನ್ನೂ ಹತ್ಯೆಗೈದು ಆಂಧ್ರ ಭೃತ್ಯ ವಂಶವನ್ನು ಸ್ಥಾಪಿಸಿ ಪಾಟಲೀಪುತ್ರದ ಸ್ವಲ್ಪ ಭಾಗವನ್ನು ತನ್ನ ರಾಜಧಾನಿಯನ್ನಾಗಿಸಿ ಅಧಿಕಾರಕ್ಕೇರಿದನು. ಈ ಆಂಧ್ರಭೃತ್ಯರೇ ಭಾರತೀಯ ಇತಿಹಾಸ ಕಂಡ ಸ್ವರ್ಣಯುಗದ ನಿರ್ಮಾತೃರೆನಿಸಿಕೊಂಡ ಗುಪ್ತರು. ವಿಷ್ಣುಪುರಾಣದಲ್ಲಿ ಆಂಧ್ರಭೃತ್ಯಾಸ್ಸಪ್ತಃಎಂದು ಕರೆಸಿಕೊಂಡಿದ್ದರೆ, ಮತ್ಸ್ಯ ಪುರಾಣದಲ್ಲಿ
"ಆಂಧ್ರಾಣಾಂ ಸಂಸ್ಥಿತಾರಾಜ್ಯೇತೇಷಾಂ ಭೃತ್ಯಾನ್ವಯೇ ಸಪ್ತೈವಾಂಧ್ರಾ ಭವಿಷ್ಯಂತಿಎಂದು ಆಂಧ್ರರ ರಾಜ್ಯಾಡಳಿತದ ತರುವಾಯ ಆಂಧ್ರಭೃತ್ಯವಂಶದ ಏಳು ರಾಜರುಗಳು ರಾಜ್ಯವಾಳಿದ್ದನ್ನು ತಿಳಿಸುತ್ತದೆ. ಗುಪ್ತರ ಚಂದ್ರಗುಪ್ತನ ಕಾಲದಲ್ಲಿ ಗ್ರೀಕ್ ರಾಜ ಸೆಲ್ಯುಕಸ್ ನ ರಾಯಭಾರಿಯಾಗಿ ಮೆಗಸ್ತನೀಸ್ ಭಾರತಕ್ಕೆ ಬಂದನು. ಈ ಚಂದ್ರಗುಪ್ತನ ಮಗನೇ ಇತಿಹಾಸ ಕಂಡ ಅಪ್ರತಿಮ ದಂಡನಾಯಕನೆಂದು ಹೊಗಳಲ್ಪಟ್ಟ ಸಮುದ್ರಗುಪ್ತ. ಈ ರಾಜರ ವಂಶಕ್ರಮವನ್ನು ಹಿಂದೂ ಪುರಾಣಗಳು ಮಾತ್ರವಲ್ಲದೇ, ಪ್ರಾಚೀನ ಬೌದ್ಧ ಸಾಹಿತ್ಯಗಳು, ವಿಲಿಯಂ ಜೋನ್ಸ್ ನಂಥಹ ಮಹಾನ್ ಇತಿಹಾಸಕಾರರೂ ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲಾ ಪ್ರಮಾಣಗ್ರಂಥಗಳಿದ್ದರೂ ಸಹ ಕ್ರಿ.ಪೂ 1534ರಲ್ಲಿದ್ದ ಚಂದ್ರಗುಪ್ತ ಮೌರ್ಯನನ್ನು ಕ್ರಿ.ಪೂ 327ಕ್ಕೆ ನಮ್ಮ ಇತಿಹಾಸಕಾರರು ತಂದು ನಿಲ್ಲಿಸಿಬಿಡುತ್ತಾರೆ. ಈ ಚಂದ್ರಗುಪ್ತ ಮೌರ್ಯನನ್ನೇ ಅಲೆಕ್ಸಾಂಡರ್ ನ ಸಮಕಾಲೀನನ್ನಾಗಿಸಿ ಭಾರತದ ಚರಿತ್ರೆಯ ಸಾವಿರದೈನೂರು ವರ್ಷಗಳನ್ನೇ ಬ್ರಿಟೀಷರು ಇಲ್ಲವಾಗಿಸಿದರು. ಪರಮ ನೀಚ ಬ್ರಿಟಿಷರು ಮಾಡಿಟ್ಟುಹೋದ ತಪ್ಪು ಕಾಲನಿರ್ಣಯಗಳನ್ನೇ ಸರಿಯೆಂದುಕೊಂಡು ಅವರು ಹೋದ ನಂತರವೂ ನಾವು ಒಪ್ಪಿ ಅಪ್ಪಿಕೊಂಡು ಕುಣಿದಾಡುತ್ತಿದ್ದೇವೆ. ಹಾಗೆಂದು ಬ್ರಿಟೀಷರು ಸುಮ್ಮನೆ ಊಹಿಸಿ ಕಾಲಗಣನೆ ಮಾಡಲಿಲ್ಲ. ಅವರಿಗಿದ್ದ ಆಧಾರ ಗ್ರೀಕ್ ಲೇಖಕರು ಉಲ್ಲೇಖಿಸಿದ ಸ್ಯಾಂಡ್ರೋಕಾಟಸ್’(Sandracottus) ಎಂಬ ಹೆಸರು. ಮೆಗಸ್ತನೀಸ್ ಮಾತ್ರವಲ್ಲದೇ ಡಿಯೋಡೊರಸ್, ಕರ್ಟಿಯಸ್ ನಂಥ ಗ್ರೀಕ್ ಲೇಖಕರೇ ಕ್ಸಂಡ್ರಮಸ್ನನ್ನು ಕೊಂದು ಸ್ಯಾಂಡ್ರೋಕಾಟಸ್ ಪಟ್ಟಕ್ಕೇರಿದನೆಂದೂ, ಆತನ ನಂತರ ಅವನ ಮಗ ಸ್ಯಾಂಡ್ರೋಸಿಪ್ಟಸ್ರಾಜ್ಯವಾಳಿದನೆಂದೂ ಹೇಳಿದ್ದಾರೆ. ಚಂದ್ರಗುಪ್ತ ಮೌರ್ಯ ಧನನಂದನನ್ನು ಕೊಂದು ಸಿಂಹಾಸನಕ್ಕೇರಿದ, ಅವನ ನಂತರ ಆಳಿದವನು ಚಂದ್ರಗುಪ್ತನ ಮಗ ಬಿಂದುಸಾರ. ಚಂದ್ರಗುಪ್ತನು ಚಂದ್ರಮಸುವನ್ನು ಕೊಂದು ಗುಪ್ತ ವಂಶವನ್ನು ಸ್ಥಾಪಿಸಿದ್ದು. ಅವನ ನಂತರ ಅವನ ಮಗ ಸಮುದ್ರಗುಪ್ತ ರಾಜನಾದ. ಇದನ್ನೇ ಕ್ಸಂಡ್ರಮಸ್ಮತ್ತು ಸ್ಯಾಂಡ್ರೋಸಿಪ್ಟಸ್ಹೆಸರುಗಳು ಧನನಂದ ಮತ್ತು ಬಿಂದುಸಾರನ ಗ್ರೀಕ್ ಅಪಭೃಂಶದ ಹೆಸರುಗಳಾಗಿರಬೇಕು ಅಥವಾ ಚಂದ್ರಮಸ್ ಮತ್ತು ಸಮುದ್ರಗುಪ್ತರದ್ದೋ ಇರಬೇಕು ಸ್ಯಾಂಡ್ರೋಕಾಟಸ್ ಆ ಕಾಲದ ಭಾರತೀಯ ರಾಜರಲ್ಲೇ ಶ್ರೇಷ್ಟನೆಂದೂ, ಕುಲೀನ ಮನೆತನದವನೆಂದೂ, ದೊಡ್ಡ ಸೈನ್ಯದೊಂದಿಗೆ ಇಡೀ ಭಾರತವನ್ನೇ ಗೆದ್ದನೆಂದೂ ಗ್ರೀಕ್ ಇತಿಹಾಸಕಾರ ರಾಯಭಾರಿಗಳ ಮಾತು. ಚಾಣಕ್ಯನ ಬೆಂಬಲದಿಂದ ಶೂದ್ರ ಸ್ತ್ರೀಯ ಮಗನಾದ ಚಂದ್ರಗುಪ್ತ ಮೌರ್ಯ ಕೋಸಲ, ವಿದೇಹದಂಥ ಅಕ್ಕಪಕ್ಕದ ರಾಜರ ಸಹಾಯದಿಂದ ಅಧಿಕಾರವುಳಿಸಿಕೊಂಡಿದ್ದನ್ನು ಬಿಟ್ಟರೆ ಅವನು ಅಂಥಹ ಶ್ರೇಷ್ಟ ರಾಜ ಅಲ್ಲ. ಆದರೆ ಮೊದಲನೇ ಚಂದ್ರಗುಪ್ತ ಹಾಗಲ್ಲ. ಸೂರ್ಯವಂಶಕ್ಕೆ ಸೇರಿದ ಇವನಿಗೆ ವಿಜಯಾದಿತ್ಯನೆಂಬ ಬಿರುದಿತ್ತು. ಇವನ ಮಗ ಸಮುದ್ರಗುಪ್ತನು ಅಶೋಕಾದಿತ್ಯನೆಂದೂ, ಮೊಮ್ಮಗ ಎರಡನೇ ಚಂದ್ರಗುಪ್ತನು ವಿಕ್ರಮಾದಿತ್ಯನೆಂದೂ ಬಿರುದಾಂಕಿತನಾಗಿದ್ದನು.


No comments:

Post a Comment