Search This Blog

Monday 5 February 2018

"ದಿವ್ಯಾನುಭಾವೋ ಜಗದೇಕನಾಥಃ"


ಇತ್ಥಂ ದ್ವಿಜೇನ ದ್ವಿಜರಾಜಕಾಂತಿರಾವೇದಿತೋ ವೇದ ವಿದಾಂವರೇಣ |
ಏನೋನಿವೃತ್ತೇಂದ್ರಿಯ ವೃತ್ತಿರೇನಂ ಜಗಾದಭೂಯೋ ಜಗದೇಕನಾಥಃ || ೨೩
ಇದು ಕಾಳಿದಾಸನ ರಘುವಂಶದಲ್ಲಿ ಬರುವ ಶ್ಲೋಕ ೫ನೇ ಸರ್ಗದ ೨೩ನೇ ಶ್ಲೋಕ ಇದು. ಚಂದ್ರನ ಕಾಂತಿಯನ್ನು ಹೊಂದಿರತಕ್ಕ ರಘುವಿನ ಕುರಿತಾಗಿ ಹೇಳುವ ಶ್ಲೋಕ ಇದು ಜಗದೇಕನಾಥನಾದ ರಘುವಿನ ಕುರಿತಾಗಿರುವುದು ಇದರಲ್ಲಿನ ಜಗಾದಭೂಯೋ ಜಗದೇಕನಾಥಃ ಎನ್ನುವುದನ್ನೇ ಐಹೊಳೆಯ ರವಿಕೀರ್ತಿ ತನ್ನ ಶಾಸನದಲ್ಲಿ "ದಿವ್ಯಾನುಭಾವೋ ಜಗದೇಕನಾಥಃ" ಎಂದು ಉಸುರಿದ್ದಾನೆ. ಕದಂಬರ ತಾಳಗುಂದದ ಸ್ತಂಬ ಶಸನದಲ್ಲಿ ಕುಬ್ಜ ಸ್ವತಃ ತಾನೇ ಬರೆದದ್ದು ಅನ್ನುತ್ತಾನೆ. ಕುಬ್ಜಸ್ವಕಾವ್ಯಮಿದಂ ಅಶ್ಮತಲೇ ಲಿಲೇಖ ಎನ್ನುತ್ತಾನೆ. ಆದರೆ ರವಿಕೀರ್ತಿ ಇಲ್ಲಿ ತಾನು ರಚಿಸಿದ ಕಾವ್ಯ ಅನ್ನುತ್ತಾನೆ ಅಂದರೆ ಬೇರೆ ಶಿಲ್ಪಿ ಇದನ್ನು ಕಂಡರಿಸಿರಬಹುದು ಇಲ್ಲಿ ಲಿಪಿದೋಷಗಳು ಕಾಣಿಸಿಕೊಳ್ಳುತ್ತವೆ. ತದಾತ್ಮಜೋ ಭೂದ್ ರಣರಾಗನಾಮಾ ಎನ್ನುವುದು ತದಾತ್ಮಜೋ ಭೂದ್ರ ರಣರಾಗನಾಮಾ ಆಗಿದೆ ಅಂದರೆ ಲಿಪಿಕಾರನ ಅಚಾತುರ್ಯದಿಂದ ಆಗಿರ ಬಹುದು ಎನ್ನುವುದು ನನ್ನ ಊಹೆ.


No comments:

Post a Comment