Search This Blog

Thursday 1 February 2018

ಆರ್ಯರೆಂದಿಗೂ ವಿದೇಶೀಯರಲ್ಲ.

ಆರ್ಯರು ಮಧ್ಯ ಏಷಿಯಾದಿಂದ ಭಾರತದೊಳಕ್ಕೆ ಬಂದ ಪರಕೀಯರಲ್ಲ. ಅವರೂ ಸಹ ಭಾರತದ ಮೂಲನಿವಾಸಿಗಳೇ, ಕ್ರಿ. ಪೂ. 1500ಕ್ಕೂ ಮೊದಲೇ ಪಂಜಾಬ್ ಮತ್ತಿತರ ಕಡೆಗಳಲ್ಲಿ ಇದ್ದರು ಎನ್ನುವುದಕ್ಕೆ ಹರಪ್ಪ, ಮೊಹೆಂಜೋದಾರೋ, ರಂಗಪುರ, ಲೋಥಲ್, ಕಾಲಿಬಂಗನ್, ಧೋಲಾವೀರ, ಪದ್ರಿ ಮೊದಲಾದ ಸಿಂಧೂ ಸಂಸ್ಕೃತಿಗಳಲ್ ನೆಲೆಗಳ ಅಧ್ಯಯನದಿಂದ ತಿಳಿದು ಬಂದಿದೆ. ವ್ಹೀಲರ್ ಹೇಳುವಂತೆ ದ್ರಾವಿಡರಮೇಲೆ ಮತ್ತು ಪರಕೀಯ ಆರ್ಯರ ಆಕ್ರಮಣದಿಂದ ದ್ರಾವಿಡರು ತಮ್,ಮ ನೆಲೆಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಕೊಂಡರು ಎನ್ನುವುದಕ್ಕೆ ಯಾವ ಸಮರ್ಥನೀಯ ಪುರಾವೆಗಳಿಲ್ಲ. ಪ್ರೊಫೆಸರ್ ಕೆನಡಿಯವರು ಹೇಳುವುದು ಹೊಡೆದಾಡಿಕೊಂಡರು ಎನ್ನುವ ಜನರು ಒಂದೇ ನೆಲೆಯ ಮೂಲವಾಸಿಗಳು. ಹಾಗಿರುವಾಗ ಆರ್ಯರ ದಾಳಿ ಎನ್ನುವುದು ಆಮೇಲಿನ ಕಟ್ಟು ಕಥೆ.
ಇನ್ನು ಪುರಾಣಗಳನ್ನೇ ಗಮನಿಸಿದರೂ ವೇದಗಳಲ್ಲಿ ಭಾರತ ಯುದ್ಧದ ವಿಷಯಗಳು ಇಲ್ಲದಿರುವುದರಿಂದ ಆ ಯುದ್ಧವೇ ನಡೆದಿಲ್ಲ ಎನ್ನುವುದು ಮೂರ್ಖತನವಾಗುತ್ತದೆ. ವೇದಗಳು ಅಪೌರುಷೇಯ ಮತ್ತು ಅವುಗಳು ಐತಿಹಾಸಿಕ ಗ್ರಂಥಗಳಾಗುವುದಿಲ್ಲ. ಮಹಾಭಾರತ ಯುದ್ಧ ನಡೆದದ್ದು ವೇದಗಳ ನಂತರ, ಅದಕ್ಕೂ ಪೂರ್ವದಲ್ಲಿಯೇ ನೆಲೆಗೊಂಡಿದ್ದ ವೇದಗಳಲ್ಲಿ ಮಹಾಭಾರತದ ವಿಷಯ ಉಲ್ಲೇಖಗೊಂಡಿರುವುದು ಅಸಾಧ್ಯ. ಆದರೂ ಸಹ ಯಜುರ್ವೇದದ ಕಾಠಕ ಸಂಹಿತೆಯಲ್ಲಿ - "ನೈಮಿಷ್ಯಾವೈ ಸತ್ರಮಾಸತ ಉತ್ಥಾಯ ಸಪ್ತವಿ ಗುಂ ಶತಿಂ ಕುರುಪಾಂಚಾಲೇಷು ವತ್ಸತರಾನನ್ವತ ........ ಕೃಷ್ಣಾನಾಂ ವ್ರೀಹೀಣಾಂ ತಸ್ಯ ಯತ್ ಕಿಂಚ ಧೃತರಾಷ್ಟ್ರಾಸೀತ್ ತತ್ಸರ್ವ ಮವಕರ್ಣಂ" - ಕಾಠಕ ಸಂಹಿತದ ದಶಮ ಸ್ಥಾನಕ -ಆಗ್ನಾವೈಷ್ಣವಂ ೬ರಲ್ಲಿ ವಿಚಿತ್ರವೀರ್ಯನ ಮಗ ಧೃತರಾಷ್ಟ್ರನನ್ನು ಉಲ್ಲೇಖಿಸಲಾಗಿದೆ. ಛಾಂದೋಗ್ಯ ಉಪನಿಷತ್ತಿನಲ್ಲಿ "ತದ್ಧೈತದ್ಘೋರ ಆಂಗಿರಸಃ ಕೃಷ್ಣಯ ದೇವಕೀಪುತ್ರಾಯೋಕ್ತ್ವೋವಾಚಾ ಪಿಪಾಸ ಏವ ಬಭೂವ" ಛಾಂದೋಗ್ಯೋಪನಿಷತ್ ತೃತೀಯ ಅಧ್ಯಾಯದ ಸಪ್ತದಶ ಖಂಡದ ಆರನೇ ಶ್ಲೋಕದಲ್ಲಿ ದೇವಕಿಯ ಮಗನಾದ ವಾಸುದೇವ ಕೃಷ್ಣನನ್ನು ಉಲ್ಲೇಖಿಸಲಾಗಿದೆ. ಮಹಾಭಾರತ ಒಂದು ಬೃಹದ್ಗ್ರಂಥದ ಸಾಲಿಗೆ ಸೇರುತ್ತದೆ ಎನ್ನುವುದು ಆಶ್ವಲಾಯನ ಮತ್ತು ಪಾಣಿನಿಯ ಸೂತ್ರಗಳು ಹೇಳುತ್ತವೆ. ಅದಕ್ಕೆ ನಿದರ್ಶನವಾಗಿ ಪಾಣಿನಿ ಮತ್ತು ಸಾಂಖ್ಯಾಯನರು ತಮ್ಮ ಸೂತ್ರಗಳಲ್ಲಿ "ವಾಸುದೇವಾರ್ಜುನಾಭ್ಯಾಂ ಉಣ್" ಎನ್ನುವುದನ್ನು ಹೇಳುತ್ತಾ ವ್ಯಾಕರಣದ ನಿಯಮದಂತೆ ಅರ್ಜುನನ ಹೆಸರು ಮೊದಲು ಪ್ರಸ್ತಾಪವಾಗಬೇಕಿದ್ದಲ್ಲಿ ದೈವತ್ವದ ದ್ಯೋತಕಕ್ಕಾಗಿ ವಾಸುದೇವನಲ್ಲಿ ದೇವರನ್ನು ಕಂಡು ಗೌರವಿಸುವ ಸಲುವಾಗಿ ಮೊದಲು ವಾಸುದೇವ ಇಡಲಾಗಿದೆ. ಅಂದರೆ ಪಾಣಿನಿಯ ಕಾಲಕ್ಕೂ ಪೂರ್ವದಲ್ಲಿಯೇ ಶ್ರೀ ಕೃಷ್ಣನನ್ನು ದೇವರೆಂದು ಭಾವಿಸಲಾಗಿತ್ತು.
ಕ್ರಿ. ಪೂ ಆರನೆಯ ಶತಮಾನಕ್ಕೂ ಪೂರ್ವದಲ್ಲಿ ಪಾಣಿನಿ ನೆಲೆಸಿದ್ದ ಮತ್ತು ದೊಡ್ದ ವಯ್ಯಾಕರಣಿಯಾಗಿದ್ದ. ಆತ ಭಾರತದ ದಕ್ಷಿಣದ ಕಡೆ ಬರಲೇ ಇಲ್ಲ ದಕ್ಷಿಣ ಭಾರತದ ಪರಿಚಯವೇ ಇಲ್ಲ ಯಾಕೆಂದರೆ ಆತ ಆರ್ಯ ಎನ್ನುವ ವಾದವಿದೆ. ಆದರೆ ಆತನಿಗಿಂತಲೂ 2000ಕ್ಕೂ ಪೂರ್ವದಲ್ಲಿಯೇ ಮಹಾಭಾರತ ರಚನೆಗೊಂಡಿದ್ದು ಅದರಲ್ಲಿ ದಕ್ಷಿಣದ ಉಲ್ಲೇಖಗಳು ಸಿಗುತ್ತವೆ ಹಾಗಿರುವಾಗ ಪಾಣಿನಿ ಉದಾಹರಿಸಿಲ್ಲ ಎನ್ನುವ ವಾದ ಸರಿಯಲ್ಲ. ಅಷ್ಟಕ್ಕೂ ಮಹಾಭಾರತವನ್ನು ಐತಿಹಾಸಿಕ ಗ್ರಂಥ ಎಂದು ಭಾವಿಸಬೇಕಾಗಿಯೂ ಇಲ್ಲ.
"ನೈಮಿಷಾ ವೈ ಸತ್ರಮಾಸತ ತ ಉತ್ಥಾಯ ಸಪ್ತವಿಗುಂ ಶತಿಂ ಕುರು ಪಾಂಚಾಲೇಷು ವತ್ಸತರಾನವನ್ವತ ತಾನ್ವಕೋ ದಾಲ್ಭಿರಭ್ರವೀದ್ಯೂಯಮೇವೈತಾನ್ ವಿಭಜಧ್ವ ಮಿಮಮಹಂ ಧೃತರಾಷ್ಟೃಂ ವೈಚಿತ್ರವೀರ್ಯಂ ಸ ಮಹ್ಯಂ ಗ್ರಹಾನ್" ಎಂದು ಕೃಷ್ಣ ಯಜುರ್ವೇದದ ಕಾಠಕ ಸಂಹಿತೆಯ 10 : 6 ರಲ್ಲಿ ಧೃತ ರಾಷ್ಟ, ವಿಚಿತ್ರ ವೀರ್ಯ ಮತ್ತು ಶಂತನುವಿನ ಹೆಸರಿನ ಉಲ್ಲೇಖ ಸಿಗುತ್ತದೆ. ಇದು ವೇದಗಳ ಉಲ್ಲೇಖವಾಗಿದೆ. ಇದರ ತರುವಾಯ ಬಂದ ಪುರಾಣಗಳಲ್ಲಿ ಇವರೆಲ್ಲರು ಶ್ರೇಷ್ಠ ವ್ಯಕ್ತಿತ್ವವನ್ನು ಪಡೆದುಕೊಂಡಿದ್ದಾರೆ. ಮತ್ತು ಮಹಾಭಾರತದ ಮಹಾನ್ ವ್ಯಕ್ತಿಗಳ ಪೂರ್ವಿಕರು ಎಂದು ಹೆಸರು ಗಳಿಸಿದ್ದಾರೆ.
ಅಥಾತಃ ಕೈಶಿನೀ ದೀಕ್ಷಾ ಕೇಶೀ ಧರ್ಮ್ಯೋ . . . . .ತಥೇತ್ಯುವಾಚ ತೌ ಸಂಪ್ರೋಚಾತೇ ಆಸೋಲೋ ವಾ ವಾರ್ಷ್ಣಿವೃದ್ಧ ಇಟನ್ವಾ ಕಾವ್ಯಃ ಶಿಖಂಡೀ ವಾ ಯಜ್ಞಸೇನೋ ಯೋ ವಾ ಆಸ - ಇದು ಕೌಶೀತಕೀ ಬ್ರಾಹ್ಮಣದ ಸಪ್ತಮ ಅಧ್ಯಾಯದ ನಾಲ್ಕನೇ ಶ್ಲೋಕ ಇದು. ಇದರಲ್ಲಿ ಯಜ್ಞ ಸೇನ ಮತ್ತು ಶಿಖಂಡಿಯ ಉಲ್ಲೇಖ ಕಾಣಸಿಗುತ್ತದೆ.

ಸಂಖ್ಯಾಯನ ಶ್ರೌತ ಸೂತ್ರದಲ್ಲಿ (3:14:6) ರಲ್ಲಿ ಕೌರವರು ಯಜ್ಞವೊಂದನ್ನು ಮಾಡುತ್ತಾರೆ. ಆ ಯಜ್ಞದಲ್ಲಿ ಅಚಾತುರ್ಯದಿಂದ ಲೋಪವಾಗುತ್ತದೆ. ಆದ ಕಾರಣ ಅವರು ಕುರುಕ್ಷೇತ್ರವನ್ನು ತೊರೆದು ಹೋಗಬೇಕಾಯಿತು ಎನ್ನುವ ಉಲ್ಲೇಖ ಸಿಗುತ್ತದೆ. ಆಶ್ವಲಾಯನ ತನ್ನ ಗೃಹ್ಯ ಸೂತ್ರದಲ್ಲಿ ವೈಶಂಪಾಯನನನ್ನು ಭಾರತಾಚಾರ್ಯ ಎಂದು ಕರೆದಿರುವುದರಿಂದ ಆಶ್ವಲಾಯನನಿಗೂ ಭಾರತ ಯುದ್ಧದ ವಿವರ ಗೊತ್ತಿದ್ದಿರಬಹುದು ಎನ್ನುವ ಸಂದೇಹ ಬರುತ್ತದೆ. ಪಾಣಿನಿಯಂತೂ ಮಹಾಭಾರತದ ಮಹನೀಯರೆಲ್ಲರ ಉದಾಹರಣೆ ಕೊಡುಇತ್ತಾನೆ ಪತಂಜಲಿಯೂ ಸಹ ತನ್ನ ಯೋಗ ಶಾಸ್ತ್ರದ 4 ; 6 : 4 ರಲ್ಲಿ ಉಲ್ಲೇಖಿಸುತ್ತಾನೆ. ಇನ್ನು ಕೌಟಿಲ್ಯನ ಅರ್ಥ ಶಾಸ್ತ್ರದ ಮೊದಲ ಅಧ್ಯಾಯದ ಆರ್ನೇ ಶ್ಲೋಕದಲ್ಲಿ ದುರ್ಯೋದನ ತನ್ನ ಸರ್ವಸ್ವವನ್ನು ಕಳೆದುಕೊಂಡದ್ದು ಇತರರ ಮೇಲಿನ ದ್ವೇಷ ಮತ್ತು ರಾಜ್ಯ ಅಪಹರಣದಿಂದ ಅನ್ನುತ್ತಾನೆ. ವಾಯು ಪುರಾಣ ಮತ್ತು ಮತ್ಸ್ಯ ಪುರಾಣಗಳಂತೂ ಮಹಾಭಾರತ ಯುದ್ಧ ದ್ವಾಪರ ಮತ್ತು ಕಲಿಯುಗದ ಮಧ್ಯರೇಖೆ ಎನ್ನುತ್ತದೆ. ಹೀಗೆ ಮುಂದೆ ಕುರುವಂಶ ಅರ್ಜುನನ ಸಂತತಿಯಿಂದ ಮುಂದುವರಿಯುತ್ತದೆ. ಹೌದು ಇಂತಹ ಅಗಾಧ ನೈತಿಕ ಬಲವಿದ್ದ ಸಾಂಸ್ಕೃತಿಕ ಸೊಬಗಿದ್ದ ಸುಂದರ ಸಮೃದ್ಧ ಭಾರತವನ್ನು ಹಾಳುಮಾಡಿದ್ದು ವಿದೇಶಿ ವಿದ್ವಾಂಸರು ಎನ್ನದೇ ವಿಧಿ ಇಲ್ಲ. ಆರ್ಯರು ಪರದೇಶ ದಿಂದ ಬಂದವರೆಂದು ಗುಲ್ಲೆಬ್ಬಿಸಿ ಮಹಾಭಾರತ ಒಂದು ಕಾಲ್ಪನಿಕ ಕಟ್ಟುಕಥೆ ಎಂದು ಹೇಳಿ ನಮ್ಮ ಸಂಸ್ಕೃತಿಯನ್ನು ಹಾಳುಮಾಡಿ ನಮ್ಮ ನೆಲ ನಮ್ಮ ಭಾಷೆ ಸಂಸ್ಕೃತಿಯಿಂದ ನಾವು ಹೊರಬಂದು ವಿದೇಶೀ ಸಂಸ್ಕೃತಿ ಅಳವಡಿಸುವ ಉದ್ದೇಶದೊಂದಿಗೆ ನಮ್ಮ ಇತಿಹಾಸವನ್ನು ಅಲ್ಲೆಲ್ಲೋ ಇತ್ತಿಚೆಗೆ ತಂದು ನಿಲ್ಲಿಸುವ ಉದ್ದೇಶವೂ ಅಡಗಿದ್ದು ನಿಜ. ಋಗ್ವೇದದಲ್ಲಿ ಬರುವ ಇಂದ್ರನಿಗೆ ಪುರಂದರ ಹೆಸರನ್ನು ಮಾಕ್ಸ್ ಮುಲ್ಲರ್, ವ್ಹೀಲರ್ ನಂತವರು ಪುರ ಎನ್ನುವುದು ಕೋಟೆ. ಇಂದ್ರ ಹರಪ್ಪಾದ ಕೋಟೆಯನ್ನು ಒಡೆದು ಅಲ್ಲಿನ ಮೂಲನಿವಾಸಿ ದ್ರಾವಿಡರನ್ನು ಓಡಿಸಿದ ಎನ್ನುವ ಕಥೆ ಕಟ್ಟಿ ಇತಿಹಾಸ ತಿರುಚುವ ವ್ಯವಸ್ಥಿತ ತಂಡಗಳಿಗೆ ಕಡಿಮೆ ಇಲ್ಲ. ಆದರೆ ನಮ್ಮಲ್ಲಿರುವ ಬಾಲಬಡುಕುವ ಮತ್ತು ಎಲ್ಲಾ ಕಡೆ ವಿವಾದಿಗಳಾಗುವ ಜನರಿಗೆ ಏನು ಹೇಳೋಣ ???

No comments:

Post a Comment