Search This Blog

Monday 13 November 2017

ಕನ್ನಡದ ಮೊದಲ ಕವಿ ಪ್ರಣವೇಶ್ವರನ ಭಕ್ತ ಕುಬ್ಜಕವಿ

ತಾಳಗುಂದದ ಪ್ರಣವೇಶ್ವರ ಹೆಸರಿಗಷ್ಟೇ ಪ್ರಣವನಾಗಿರಲಿಲ್ಲ. ಕನ್ನಡಿಗರ ಪಾಲಿಗೆ ಈತ ಆದಿದೈವ. ಈ ದೇವಲಯದ ಎದುರಿಗೆ ನಿಲ್ಲಿಸಿದ ಸ್ತಂಬಶಾಸನದ ಹೇಳಿಕೆಯಂತೆ ಈ ಪ್ರಣವೇಶ್ವರನನ್ನು ಕೇವಲ ಕದಂಬ ವಂಶೀಯರು ಮಾತ್ರವೇ ಪೂಜಿಸುತ್ತಿರಲಿಲ್ಲ. ಇದನ್ನು ಸಾತಕರ್ಣಿಗಳೂ ಆರಾಧಿಸುತ್ತಿದ್ದರು ಎನ್ನುವುದಾಗಿ ತಿಳಿದು ಬರುತ್ತದೆ. ಈ ಸ್ತಂಬ ಶಾಸನವನ್ನು ಕೆಲವರು ಕಾಕುಸ್ಥ ವರ್ಮನೆಂದು ಹೇಳಿದರೆ ಇನ್ನು ಕೆಲವರು ಶಾಂತಿವರ್ಮನದ್ದು ಎಂದು ಹೇಳುತ್ತಾರೆ. ಅದೇನೇ ಇರಲಿ ಕಾಕುಸ್ಥವರ್ಮ ಮತ್ತು ಶಾಂತಿವರ್ಮನ ಕಾಲದ ಸ್ತಂಬ ಶಾಸನವೆಂದು ನಾವು ತಿಳಿದುಕೊಳ್ಳುವುದು ಉತ್ತಮ
ನಾನು ಗಮನಿಸಿದ ಶಾಸನಗಳಲ್ಲಿ ಕಾವ್ಯಾತ್ಮಕವಾಗಿ ಛಂದಸ್ಸನ್ನು ಎಲ್ಲವನ್ನೂ ಬಳಸಿಕೊಂಡ ಶಾಸನಗಳಲ್ಲಿ ಇದು ಅಗ್ರಗಣ್ಯ ಎನ್ನಬಹುದು. ಈ ಶಾಸನಕವಿಯನ್ನು ಅವಲೋಕಿಸಿದರೆ ಈತ ಕಾಕುಸ್ಥವರ್ಮನ ಮಗ ಶಾಂತಿವರ್ಮನ ಆಳ್ವಿಕೆಯಲ್ಲಿ ಮಾನ್ಯತೆ ಪಡೆದ ವಿದ್ವತ್ಕವಿಯಾಗಿದ್ದಿರಬಹುದು. ಈತನಂತೂ ಕನ್ನಡಿಗ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈತ ಉಭಯ ಭಾಶಃಎಯಲ್ಲಿ ವಿದ್ವತ್ತನ್ನು ಹೊಂದಿದ್ದ.
ಈ ಶಾಸನದಲ್ಲಿ ಕನ್ನಡ ನಾಡಿನ ಪ್ರಪ್ರಥಮ ರಾಜವಂಶವಾದ ಕದಂಬ ವಂಶದ ಸ್ಥಾಪನೆ, ಶಾಂತಿವರ್ಮನ ವರೆಗಿನ ವಂಶಾವಳಿಯ ವಿಚಾರ, ಉತ್ತರದ ಗುಪ್ತರಿಗೂ ಕದಂಬರಿಗೂ ಸಂಬಂಧವೇರ್ಪಟ್ಟ ವಿಚಾರ, ಆ ಕಾಲದ ವೈದಿಕ ಧರ್ಮದ ಸ್ವರೂಪ, ವಿದ್ಯಾಭ್ಯಾಸ ಪದ್ಧತಿ ಮುಂತಾದ ಸಂಗತಿಗಳನ್ನೊಳಗೊಂಡ ತಾಳಗುಂದ ಸ್ತಂಬಶಾಸನದ ಮುಖ್ಯ ಉದ್ದೇಶ ಕದಂಬ ಕಾಕುಸ್ಥವರ್ಮ ತಾಳಗುಂದದಲ್ಲಿ ಬಹು ಪ್ರಾಚೀನ ಕಾಲದಿಂದ ಪ್ರಸಿದ್ಧವಾಗಿದ್ದ ಪ್ರಣವೇಶ್ವರಸ್ವಾಮಿ ದೇವಾಲಯದ ಉಪಯೋಗಕ್ಕೆಂದು ಕೆರೆಯೊಂದನ್ನು ತೋಡಿಸಿದ ವಿಷಯವನ್ನು ತಿಳಿಸುವುದಾಗಿದೆ. ಹೀಗೆ ಇದು ಕಾಕುಸ್ಥನ ಗುಣಕಾರ್ಯಗಳನ್ನು ಬಣ್ಣಿಸುವ ಶಾಸನ.
ಒಟ್ಟು 34 ಪದ್ಯಗಳಿರುವ ಈ ಪದ್ಯಶಾಸನದಲ್ಲಿ ಕೆಲವು ಅಪೂರ್ವ ಛಂದಸ್ಸುಗಳನ್ನು ಬಳಸಲಾಗಿದೆ. ಪದ್ಯ 1ರಿಂದ 24 ರ ವರೆಗೆ ಬಳಸಿದ ಅಪೂರ್ವ ಛಂದಸ್ಸು ಮಾತ್ರಾಸಮಕವಿಶೇಷವೆಂದು ಕೀಲ್ ಹಾರ್ನ್ಹೇಳಿದ್ದಾರೆ ಆದರೆ ಇದನ್ನು ಮಿಶ್ರಗಣ ಗೀತಿಕೆ ಎಂದು ವೆಂಕಟಸುಬ್ಬಯ್ಯ ಹೇಳಿದ್ದಾರೆ. ಇದಲ್ಲದೆ ಪ್ರಾಚೀನ ಕನ್ನಡ ಕವಿಗಳಿಗೆ ಪರಿಚಿತವಾಗಿದ್ದ ಶಾರ್ದೂಲವಿಕ್ರೀಡಿತ, ವಸಂತತಿಲಕ, ಪುಷ್ಟಿತಾಗ್ರ , ದಂಡಕ ಮುಂತಾದ ಛಂದಸ್ಸುಗಳನ್ನು ಅತ್ಯಂತ ಶುದ್ಧವಾಗಿ ಬಳಸಲಾಗಿದೆ. ಈ ಶಾಸನದ ಭಾಷೆ ಸಂಸ್ಕೃತ, ಶಾಸನದ ಶೈಲಿ ಪ್ರೌಢವೂ ಕಾವ್ಯಮಯವಾದದ್ದು. ಸೊಗಸಾದ ಪದಮೈತ್ರಿ. ಮನೋಹರವಾದ ಶಬ್ದಾಲಂಕಾರ ವೈಚಿತ್ರ್ಯ. ರೂಪಕ, ಉಪಮಾದಿ ಅರ್ಥಾಲಂಕಾರಗಳ ಉಚಿತ ಬಳಕೆ ಅಲ್ಲಲ್ಲಿ ಕಂಡುಬರುತ್ತದೆ. ಅಂತೂ ಕಬ್ಜ ನೆನ್ನುವ ಶಸನ ಕವಿಯ ಅಪ್ರತಿಮ ಕೊಡುಗೆ ಇದು ಆತ ಬೇರಾವ ಕಾವ್ಯವನ್ನೋ ಕೃತಿಯನ್ನೋ ಬರೆದ ಬಗ್ಗೆ ತಿಳಿಯುತ್ತಿಲ್ಲ. ಅಂತೂ ಕುಬ್ಜ ಹೆಸರಿಗೆ ಕುಬ್ಜನೇ ಹೊರತು ಕಾವ್ಯದಲ್ಲಿ ದಿಗ್ಗಜ. ಈ ಶಾಸನದ ಪ್ರತಿಯೊಂದು ಶ್ಲೋಕವನ್ನೂ ಪ್ರತಿಯೊಂದು ಸಾಲನ್ನೂ ಲಿಪ್ಯಂತರಣಗೊಳಿಸಿ ಈ ತನಕ ಬರೆದಿರುವೆ. ಧನ್ಯವಾದಗಳು.

ಸುಕೃತಿಭಿರವನೀಶ್ವರೈರಾತ್ಮನಿಶ್ರೇಯಸಂ ಪ್ರೇಪ್ಸುಭಿಸ್ಸಾತಕರ್ಣ್ಯಾದಿಭಿಃ ಶ್ರದ್ಧಯಾಭ್ಯರ್ಚ್ಚಿತೇ |
ಇದಮುರು ಸಲಿಲೋಪಯೋಗಾಶ್ರಯಂ ಭೂಪತಿಕಾರಯಾಮಾಸ ಕಾಕುಸ್ಥವರ್ಮ್ಮಾ ತಡಾಕಮ್ಮಹತ್ ||


ಶ್ರೀ ಶಾಂತಿವರ್ಮ ನೃಪತೇರ್ವರಶಾಸನಸ್ಥಃ ಕುಬ್ಜಸ್ವಕಾವ್ಯಮಿದಮಶ್ಮತಲೇ ಲಿಲೇಖ ||

No comments:

Post a Comment