Search This Blog

Thursday 23 November 2017

ಲಕ್ಷ್ಮೀರ್ಭಾವಿತಚಾಪಲಾಪಿಚಕೃತಾ


ಆರ್ಯಪುರ, ಅಯ್ಯಾವೊಳೆ, ಅಯ್ಯಾಹೊಳೆ ಐಹೊಳೆಯಾಗಿ ಇಂದು ನಿಂತಿದೆ. ಕಲಾ ಇತಿಹಾಸಕ್ಕೆ ಅತ್ಯದ್ಭುತ ಸಾಕ್ಷಿಯಾಗಿ ಸಿಗುವ ತಾಣಗಳಲ್ಲಿ ಐಹೊಳೆ ಮಹತ್ವವನ್ನು ಪಡೆಯುತ್ತದೆ. ನಾನಿಲ್ಲಿ ತೆಗೆದು ಕೊಂಡಿರುವುದು ಐಹೊಳೆಯಲ್ಲಿರುವ ರವಿಕೀರ್ತಿಯ ಶಾಸನದ ಎರಡನೇ ಸಾಲಿನ ಉತ್ತರಾರ್ಧ ಮತ್ತು ಮೂರನೇ ಸಾಲಿನ ಮೊದಲರ್ಧ.
ಚಾಲುಕ್ಯರಲ್ಲಿ ಅತ್ಯಂತ ಪ್ರಭಾವ ಶಾಲಿ ಮತ್ತು ಪರಾಕ್ರಮಿಯಾಗಿದ್ದ ಎರಡನೇ ಪುಲಿಕೇಶಿಗೆ ಸಂಬಂಧಿಸಿದ ಶಾಸನವಿದು. ಈ ಶಾಸನ ಕೇವಲ ಶಾಸನವಾಗಿಯಷ್ಟೇ ಓದಿಸಿಕೊಂಡು ಹೋಗುವುದಿಲ್ಲ. ಇದು ಸಾಹ್ಯಿತ್ಯಿಕವಾದ ಅಂಶಗಳನ್ನು ಮೈಗೂಡಿಸಿಕೊಂಡಿವೆ. ಈ ಶಾಸನದ ಕುರಿತಾಗಿ ಮತ್ತು ಇದರ ಶಾಹಿತ್ಯದ ಅಂಶಗಳ ಕುರಿತಾಗಿ ಮುಂದಕ್ಕೆ ವಿವರಿಸುತ್ತೇನೆ. ಆದರೆ ಇದಕ್ಕೂ ಮೊದಲು ಅಂದರೆ ಸುಮಾರು ೩೦ ವರ್ಷಗಳಷ್ಟು ಪೂರ್ವದಲ್ಲಿ ಮಹಾಕೂಟದಲ್ಲಿ ಶಾಸನ ಬರೆಸಲಾಗಿದೆ ಅದು ದಾಟ ಎನ್ನುವ ಕವಿಯ ಕೊಡುಗೆ ಆತನ ಕಾಲಕ್ಕೂ ಮತ್ತು ಈ ರವಿಕೀರ್ತಿಯ ಕಾಲಕ್ಕೂ ನಡೆದ ಅಗಾಧ ವ್ಯತ್ಯಾಸಗಳನ್ನು ಮುಂದಕ್ಕೆ ವಿವರಿಸಲು ಪ್ರಯತ್ನಿಸುತ್ತೇನೆ.

ಪೃಥಿವೀವಲ್ಲಭ ಶಬ್ದೋಯೇಷಾಮನ್ವರ್ತ್ಥ ತಾಂಚಿರಂಜಾತಃ |
ತದ್ವಂಶೇಷುಜಿಗೀಷುಷು ತೇಷು ಬಹುಷ್ವಪ್ಯತೀತೇಷು ||

ನಾನಾಹೇತಿ ಶತಾಭಿಘಾತ ಪತಿತ ಭ್ರಾನ್ತಾಶ್ವ ಪತ್ತಿ ದ್ವಿಪೇ ನೃತ್ಯದ್ಬೀಮ ಕವ(ಬ)ನ್ಧ ಖಡ್ಗ ಕಿರಣ ಜ್ವಾಲಾ ಸಹಸ್ರೇ ರಣೇ
ಲಕ್ಷ್ಮೀರ್ಭಾವಿತಚಾಪಲಾಪಿಚಕೃತಾ ಶೌರ್ಯ್ಯೇಣ ಯೇನಾತ್ಮಸಾತ್ ರಾಜಾಸೀಜ್ಜಯ ಸಿಙ್ಘ್ಹವಲ್ಲಭ ಇತಿ ಖ್ಯಾತಶ್ಚಲುಕ್ಯಾನ್ವಯಃ ||



No comments:

Post a Comment