Search This Blog

Tuesday, 21 November 2017

ಕನ್ನಡ ಭಾಷೆಯ ಶಬ್ದ ಸಂಪತ್ತನ್ನು ಹಿರಿದಾಗಿಸಿದ ಶಾಸನ ಕವಿ


ಸುಮಾರು ೫೭೮ ನೇ ಇಸವಿಯ ಈ ಶಾಸನ ಚಾಲುಕ್ಯ ರಾಜ ಮಂಗಲೇಶನಿಗೆ ಸೇರಿದ್ದು. ಕನ್ನಡ ಅಕ್ಷರದೊಂದಿಗೆ ಕನ್ನಡ ಭಾಷೆಯಲ್ಲಿಯೇ ಬರೆದ ಶಾಸನವಿದು. ದಾನ ಶಾಸನವೆನ್ನಿಸಿಕೊಳ್ಳುವ ಈ ಶಸನ ಬಾದಾಮಿಯ ಮೂರನೇ ಗುಹೆಯಲ್ಲಿ ಕಾಣಸಿಗುತ್ತದೆ. ಶಸನದಲ್ಲಿ ಬರುವ ವಿಶೇಷ ಪದಗಳಲ್ಲಿ ಕಲ್ಮನೆ ಪ್ರಮುಖವಾದದ್ದು. ಇದರ ಪ್ರಯೋಗ ಕನ್ನಡದಲ್ಲಿ ಇದೇ ಮೊದಲಿರಬಹುದು ಅನ್ನಿಸುತ್ತದೆ. ಅಂತೂ ಕನ್ನಡವು ಬೇರೆಲ್ಲಾ ಭಾಷೆಗಳಿಂದ ಕಳಚಿಕೊಂಡು ಇಲ್ಲಿ ಅಚ್ಚ ಕನ್ನಡ ಮೈದಳೆದಿದೆ. ಗುಹಾ ಎನ್ನುವ ಸಂಸ್ಕೃತ ರೂಪಕ್ಕೆ ಕನ್ನಡ ರೂಪವನ್ನು ಶಾಸನ ಕವಿ ಕಲ್ಮನೆ ಎಂದು ರೂಪಾಂತರಿಸಿದ್ದಾನೆ. ವೀಸದಿ ಎನ್ನುವುದು ವೀಸ ಅಂದರೆ ಒಂದು ಮಾಪನ ಅಥವಾ ಅಳತೆಯನ್ನು ನಿರ್ದೇಶಿಸುತ್ತದೆ. ದೇವರಿಗೆ ಹೂವುಗಳನ್ನು ಮಾಲೆ ಕಟ್ಟಿಕೊಡುವ ಮಾಲೆಕಾರನಿಗೆ ಕೊಡುವ ದಾನವನ್ನು ನಿರ್ದೇಶಿಸುತ್ತದೆ. ಅಂತೂ ಕನ್ನಡ ಶಬ್ದಕೋಶಕ್ಕೊಂದು ಅಚ್ಚ ಕನ್ನಡದ ಪದ ಕೊಟ್ಟ ಶಾಸನ ಕವಿಗೆ ಧನ್ಯವಾದ ಸಲ್ಲಲೇ ಬೇಕು.

1. ಸ್ವಸ್ತಿ ಶ್ರೀಮತ್ ಪ್ರಿಥಿವಿವಲ್ಲಭ ಮಂಗಲೇಸನಾ
2. ಕಲ್ಮನೆಗೆ ಇತ್ತೋದು ಲಂಜಿಗೇಸರಂ ದೇವರ್ಕ್ಕೆ ಪೂನಿಱುವ
3. ಮಾಲಕಾರರ್ಗ್ಗೆ ಅರ್ದ್ಧ ವೀಸದಿ ಇತ್ತೊದಾನೞಿವೋನ್
4. ಪಞ್ಚಮಹಾ ಪಾತಕನಕುಂ ಏೞನೆಯಾ ನರಕದಾ ಪುೞು ಅಕುಮ್


No comments:

Post a Comment