Search This Blog

Saturday 25 November 2017

ವಾತಾಪಿಪುರಿ ವಧೂವರತಾಮ್

ಬಾದಾಮಿ ಚಳುಕ್ಯರ ಮೊದಲ ದೊರೆ ಜಯಸಿಂಹ, ಜಯಸಿಂಹನ ಮಗ ರಣರಾಗ, ಅವನ ಮಗ ಒಂದನೇ ವಲ್ಲಭೇಶ್ವರ ಪೊಲೆಕೇಶಿ , ಅವನಿಗೆ ಮೂರು ಜನ ಮಕ್ಕಳು ಪೂಗವರ್ಮ, ಮೊದಲ ಕೀರ್ತಿವರ್ಮ, ಮತ್ತು ಮಂಗಲೇಶ. ಆದರೆ ಇಲ್ಲಿ ಪೂಗವರ್ಮ ನೆನ್ನುವ ದೊರೆ ಇದ್ದಿರುವ ಬಗ್ಗೆ ಸಂಶಯಗಳಿವೆ. ಇವರಲ್ಲಿ ಒಂದನೇ ಕೀರ್ತಿವರ್ಮನ ಮಗ ಎರಡನೇ ಪೊಲೆಕೇಶಿ, ಮತ್ತು ಕುಬ್ಜವಿಷ್ಣುವರ್ಧನ.
ಎರಡನೇ ಪೊಲೆಕೇಶಿ ಅತ್ಯಂತ ಪ್ರಸಿದ್ಧನಾಗಿದ್ದ.

ಬಾದಾಮಿ ಈ ಅರಸುಗಳ ಆಡಳಿತದ ಪ್ರಮುಖ ಕೇಂದ್ರವಾಗಿತ್ತು ಮತ್ತು ಇದು ರಾಜಧಾನಿಯಾಗಿತ್ತು, ಇದನ್ನು ವಾತಾಪಿ ಎಂದು ಕರೆಯಲಾಗುತ್ತಿತ್ತು. ಬಾದಾಮಿಯ ಚಾಳುಕ್ಯರ ಶಾಸನಗಳ ಪೈಕಿ ಬಾದಾಮಿಯಲ್ಲಿ ದೊರೆತ ಮೊದಲನೆಯ ಪುಲಕೇಶಿಯ ಶಾಸನ, ಕಾಲದ ದೃಷ್ಟಿಯಿಂದ ಮುಖ್ಯವಾದ್ದು. ಐದು ಸಾಲುಗಳುಳ್ಳ ಶಾಸನ ಶಕ ಕಾಲದ ಅತಿ ಪ್ರಾಚೀನ ಉಲ್ಲೇಖವನ್ನೊಳಗೊಂಡ ಶಾಸನಗಳಲ್ಲಿ ಎರಡನೆಯದು.
1 ಸ್ವಸ್ತಿ ಶಕವರ್ಷೇಷು ಚತುಃಶತೇಷು ಪಂಚಷಷ್ಠಿಯತೇಷು
2 ಸ್ವಮೇಧಾದಿಯಜ್ಞಾನಾಂ ಯಜ್ವಾ ಶ್ರೌತವಿಧಾನತಃ
3 ಹಿರಣ್ಯಗರ್ಭಸಮ್ಭೂತಶ್ಚಲಿಕ್ಯೋ ವಲ್ಲಭೇಶ್ವರಃ
4 ಧರಾಧರೇನ್ದ್ರ ವಾತಾಪಿಮಜೇಯಂ ಭೂತಯೇ ಭುವಃ
5 ಅಧಸ್ತಾದುಪರಿಷ್ಟೌಚ್ಚ ದುರ್ಗಮೇತದಚೀಕರತ್
ಎಂದಿರುವ ಶಾಸನದ ಕಾಲ ಶಕ 465ಕ್ಕೆ ಸಮನಾದ ಕ್ರಿ.. 543. ಪುಲಕೇಶಿ ರಾಜ್ಯವಾಳತೊಡಗಿದ್ದು ಕ್ರಿ..ಸು. 540ರಿಂದ ಎಂದು ಶಾಸನದಿಂದ ಗೊತ್ತಾಗುತ್ತದೆ. ಅಲ್ಲದೆ ಅಜೇಯವಾದ ವಾತಾಪಿಯ (ಬಾದಾಮಿ) ದುರ್ಗವನ್ನು ಕಟ್ಟಲು ಈತ ಕಾರಣನೆಂದೂ ತಿಳಿದುಬರುತ್ತದೆ. ಹೀಗೆ ಬಾದಾಮಿಯನ್ನು ವಾತಾಪಿ ಎಂದು ಕರೆದದ್ದು ತಿಳಿದು ಬರುತ್ತದೆ.
ಪೊಲೆಕೇಶಿ ಇಲ್ಲಿ ಪೊಲಿಕೇಶಿ ಎಂದು ಈ ಕೆಳಗಿನ ಸಾಲುಗಳಲ್ಲಿ ವಿವರಿಸಲಾಗಿದೆ.

ತಸ್ಯಾಭವತ್ತನೂಜಱ್ಪೊಲಿಕೇಶಿ ಯ ಶ್ರಿತೇನ್ದುಕಾನ್ತಿರಪಿ |

ಶ್ರೀವಲ್ಲಭೋಪ್ಯಯಾಸೀದ್ವಾತಾಪಿ ಪುರಿ ವಧೂವರತಾಮ್ ||  



No comments:

Post a Comment