Search This Blog

Saturday 25 November 2017

ನಾಗತ್ತರನಿಗೆ - ಬೆಂಗಳೂರಿನ ಸಮೀಪದ ಬೇಗೂರಿನ ಪಟ್ಟ


ಬೆಂಗಳೂರಿನ ಸಮೀಪದ ಬೇಗೂರಿನ ಗಂಗ ಎರೆಯಪ್ಪನ ಶಾಸನ ಇದು. ಸುಮಾರು ೮೯೦ನೇ ಇಸವಿಯ ಶಾಸನ. ತನ್ನ ಹಗೆಗಳನ್ನೆಲ್ಲಾ ಸಂಹರಿಸಿ ವೈರಿಗಳ ಉಪಟಳವನ್ನು ನಿಲ್ಲಿಸಿ, ಲಕ್ಷ್ಮೀಯೇ ತಾನಾಗಿ ವರಿಸಿದ ಪತಿ, ತಾಳವೇ ಮೊದಲಾದ ಅಸಂಖ್ಯ ಗುಣಸಮೂಹಗಳೆಂಬ ಆಭರಣಗಳಿಂದ ಭೂಷಿತನಾದ, ಶ್ರೇಷ್ಟ ಪುರುಷ ಶ್ರೀಮತ್ ಎರೆಯಪ್ಪ ರಾಜರು ತನ್ನ ವೈರಿಗಳನ್ನೆಲ್ಲ ನಿರ್ಮೂಲ ಮಾಡಿ ಗಂಗವಾಡಿ ತೊಂಭತ್ತಾರು ಸಾವಿರವನ್ನು ಏಕಚ್ಛತ್ರದಡಿಯಲ್ಲಿ ಆಳುತ್ತ ಪ್ರಜಾಜನರನ್ನು ಸುಖದಿಂದ ಆಳುತ್ತಿದ್ದ ಅರಸು ಎರೆಯಪ್ಪ ಅರಸ. ತನ್ನ ಅಪ್ಪಣೆಯಂತೆ ವೀರ ಮಹೇಂದ್ರ ಎನ್ನುವವನು ತುಂಬೆಪಾದಿಯಲ್ಲಿ ಹೋರಾಡಿ ವೀರ ಮರಣವನ್ನು ಹೊಂದಿರುವುದನ್ನು ಕೇಳಿ ತಾನು ಮೆಚ್ಚಿ ನಾಗತ್ತರನಿಗೆ ಪಟ್ಟವನ್ನು ಕಟ್ಟಿ ಬೆಂಪೂರು ಹನ್ನೆರಡು ಎನ್ನುವ ಪ್ರದೇಶವನ್ನು ಶಾಸನಬದ್ಧವಾಗಿ ಕಲ್ನಾಡಾಗಿ ನೀಡಿದ ಎನ್ನಲಾಗಿದೆ. ಇರುಗನು ಹೋರಾಡಿ ಮಡಿದ ಉಲ್ಲೇಖವಿದ್ದು ಅವನು ಅಯ್ಯಪದೇವನ ಮಗನಿರಬಹುದು. ಎರೆಯಪ್ಪನು ಮೆಚ್ಚಿ ಇರುಗನಿಗೆ, ನಾಗತ್ತರ ಪಟ್ಟ ಕಟ್ಟಿ, ಬೆಂಪೂರು ಹನ್ನೆರಡನ್ನು ಅವು (ಹನ್ನೆರಡು)ಯಾವುವೆಂದರೆ ಬೆಂಪೂರು, ತೊವೆಗೂರು, ಹೂವಿನಪುಲ್ಲಿಮಂಗಳ, ಕೂತನಾಡು, ನಲ್ಲೂರು. ಕೊಮರಂಗಂದು ,ಇಗ್ಗಲೂರು, ದುಗ್ಮೊನೆಲ್ಮಲ್ಲಿ, ಗಳಂಜವಾಗಿಲೂ, ಸಾರಮು, ಎಳ್ಕುಂಟೆ, ಪರವೂರು ಮತ್ತು ಕೂಡಲು). ನಾಗತ್ತರನು ಬೇಗೂರು ಪ್ರಾಂತ್ಯದ ಅಧಿಕಾರಿಯಾಗಿದ್ದನು ಎನ್ನುವುದು ತಿಳಿಯುವುದು. ಆನೆಯೊಳಾಂತಿರುದು ಸಾಯುವ ವಿಷಯ ಬಂದಿರುವುದರಿಂದ ಆನೆಯ ಜೊತೆ ಕಾಳಗ ನಡೆದಿರುವುದು ತಿಳಿಯುವುದಲ್ಲದೇ, ಕಲ್ನಾಡು ಮುಂತಾದ ಪದ ಬಳಕೆ ಕಂಡು ಬರುತ್ತದೆ.
ಶಾಸನ ಪಾಠ :
1. ಸ್ವಸ್ತಿಸಮಸ್ತಭುವನವಿನೂತಗಙ್ಗಕುಳಗಗನನಿರ್ಮ್ಮಳತಾರಾಪತಿಜಳಧಿಜಳವಿಪುಳವಳಯಮೇಖಳ ಕಳಾಪಾಳಂ
2. ಕ್ರಿತ್ಯೈಳಾಧಿಪತ್ಯಲಕ್ಷ್ಮೀಶ್ವಯಂವೃತಪತಿತಾಳ್ವಾದ್ಯಗಣಿತಗುಣಗಣವಿಭೂಷಣವಿಭೂಷಿತವಿಭೂತಿ ಶ್ರೀಮದೆಱೆಯಪ್ಪ ರಸರ್
3. ಪಗೆವರೆಲ್ಲಮಂನಿಕ್ಷತ್ರಮ್ಮಾಡಿಗಙ್ಗವಾಡಿತೊಮ್ಭತ್ತಱುಸಾಸಿರಮುಮನೇಕಛತ್ರಚ್ಛಾಯೆಯೊಳಾಳುತ್ತಮೀೞ್ದು ಬೀರಮ
4. ಹೇನ್ದ್ರನೊಳ್ಕಾದಲೆನ್ದುಅಯ್ಯಪದೇವಂಗೆಸಾಮನ್ತಸಹಿತಂನಾಗತ್ತರನಂದಣ್ಡುವೇೞ್ದೊಡೆ ತುಮ್ಬೆಪಾದಿಯೊಳ್ಕಾದಿಕಾಳೆಗಮಿಮ್ಬ
5. ೞಿದೊಡೆಆನೆಯೊಳಾನ್ತಿಱಿದುಸತ್ತೊಡದಂಕೇಳ್ದೆಱೆಯಪಂಮೆಚ್ಚಿಇರುಗಂಗೆಗನಾಗತ್ತರವಟ್ಟಂಗಟ್ಟಿ ಬೆಂಪೂರ್ಪ್ಪನ್ನೆರಡು
6. ಮಂಸಾಸನಬದ್ಧಂಕಲ್ನಾಡಿತ್ತನವಾವುವೆನ್ದೊಡೆಬೆಂಪೂರುತೊವಗೂರುಪೂವಿನಪುಲ್ಲಿಮಙ್ಗಲಕೂತನಿಡು ನಲ್ಲೂರು
7. ನಲ್ಲೂರುಕೊಮ
8. ರಙ್ಗುನ್ದುಇ
9. ಗ್ಗಲೂರುದು
10. ಗ್ಮೊನೆಲ್ಮಲ್ಲಿ
11. ಗಳಂಜವಾ
12. ಗಿಲೂ
13. ಸಾಱಮು
14. ಎೞ್ಕುಣ್ಡೊಪರವೂರು
15. ಕೂಡಲೆಇನಿತುಮ
16. ಪೊಲಮೇರೆಸಹಿತ
17. ಮಿತ್ತನೆಱೆಯಪಂ
18. ಶವುಚರನ್ನಾಗರಂ
19. ಗೆಮಙ್ಗಳಮಹಾಶ್ರೀ



No comments:

Post a Comment