Search This Blog

Monday 20 November 2017

ವೇದ ವೇದಾಂಗ ವಿದ್ಯಾ ವಿಶಾರದಃ - ಮಯೂರಃ

ಇದು ಗುಡ್ನಾಪುರ ಶಾಸನದ ಕುರಿತಾದದ್ದು. ಲಿಪಿಯ ಆಧಾರದಿಂದ ಇದು ೫ ಮತ್ತು ಆರನೇ ಶತಮಾನದ ನಡುವಿನದ್ದು ಎಂದು ಗುರುತಿಸಬಹುದು. ಕುಬ್ಜನ ನಂತರದ ಅತ್ಯಂತ ಸುಂದರ ಶಾಸನ ಇದು ಎಂದರೆ ತಪ್ಪಾಗಲಾರದು ಕದಂಬರ ಕುರಿತಾಗಿ ಲಭಿಸುವ ಮಾಹಿತಿಗಳಿಗಾಗಿ ಇದು ಕುಖ್ಯವೆನ್ನಿಸುತ್ತದೆ, ಮೊದಲ ಸಾಲಿನಲ್ಲಿ ಬರುವ ಮೊದಲ ಶ್ಲೋಕ ಅಕ್ಷರಗಳು ಅಳಿಸಿ ಹೋಗಿದ್ದು ಅದನ್ನು ಮಾಲಿನೀ ವೃತ್ತದಲ್ಲಿ ಬರೆಯಲಾಗಿದ್ದು ಮುಂದಿನ ೨ನೇ ಶ್ಲೋಕದಿಂದ ೨೯ನೇ ಶ್ಲೋಕದ ತನಕ ಮಾತ್ರಾಸಮಕವನ್ನೇ ಉಪಯೋಗಿಸಲಾಗಿದೆ.
ವೀರ ಶರ್ಮನ ಹಿರಿಯ ಮಗ ಬಂಧುಷೇಣ ಈ ಬಂಧುಷೇಣನ ಮಗನೇ ಕ್ಷಾತ್ರವೃತ್ತಿಯನ್ನು ಸ್ವೀಕರಿಸಿದ (ರಾಜಧರ್ಮ)ವನ್ನು ಸ್ವೀಕರಿಸಿದ "ವೇದವೇದಾಂಗ ವಿದ್ಯಾ ವಿಶಾರದ"ನಾದ ಮಯೂರ ಶರ್ಮನು. ಈತನು ಶುಭ ಲಕ್ಷಣ ಲಕ್ಷ್ಯನಾಗಿದ್ದ. ಸೆನಾನಿಗಳಿಂದ ಅಭಿಷಿಕ್ತನಾಗಿದ್ದ ಮಯೂರ ಈ ಶಾಸನದಲ್ಲಿ ಕೂಡಾ ಅತಿಶಯವಾಗಿ ಕದಂಬರ ಆಡಳಿತವನ್ನು ವರ್ಣಿಸಿದ್ದಲ್ಲದೇ. ರಾಜನಾದವ ಸಂಗೀತ, ಶಾಸ್ತ್ರ, ಕಲೆ , ವೇದ ವೇದಾಂಗಾದಿಗಳನ್ನು ಕಲಿತಿರುವುದಲ್ಲದೇ ಚಾಣಕ್ಯನ ನೀತಿಯನ್ನು ತಮ್ಮ ಆಡಳಿತಗಳಲ್ಲಿ ಅನುಸರಿಸಿದ್ದರು ಎಂದು ಹೇಳಲಾಗುತ್ತದೆ.
'ತತ್ರಪಲ್ಲವಾಶ್ವ ಸಂಸ್ಥೇನ ಕಲಹೇನ ತೀವ್ರೇಣ ರೋಷಿತಃ ಎಂದು ಕುಬ್ಜನ ಕಾವ್ಯಮಯವಾದ ತಾಳಗುಂದ ಶಾಸನದಲ್ಲಿ ಹೇಳಿದ್ದರೆ ಇಲ್ಲಿ "ಭುಜಗರಾಜ ಭೋಗ ದೀರ್ಘ ಭುಜಃ ಸುಹೃದಾತ್ತ ಭೋಗೋ ಭುವಃ ಪತಿ:" ಯಾಗಿದ್ದನು.

ಯೋಥ ವೀರಶರ್ಮಣೋ ಜ್ಯೇಷ್ಠಃ ಶ್ರೀಬಂಧುಷೇಣಃ ಪ್ರಿಯಾತ್ಮಜಃ |
ಸ ಹಿ ಬಭೂವ ಕ್ಷತ್ರವೃತ್ತಿ ಲತಾಮೂಲ ಗುಣಾಂಬು ಪ್ರಸೇಚಿತಃ ||
ತತ್ಸುತೋ ಮಯೂರವರ್ಮೇತಿ ವೇದ ವೇದಾಂಗ ವಿದ್ಯಾ ವಿಶಾರದಃ |
ನೃಪತಿರಾಸ ವಿಕ್ರಮೈಕರಸಃ ಶುಭಲಕ್ಷಣ ಲಕ್ಷ್ಯ ವಿಗ್ರಹಃ ||

ಯೋಭಿಷಿಕ್ತಸ್ತ್ರಿದಶ ಸೇನಾನ್ಯಾ ರಾಜ್ಯೇ . .ಕೈಕಬಂಧುನಾ |
ಭ್ರಮರಕಾಂತಾ ಬೃಂದ ಸಂಗೀತ ವಿಕಸನ್ನವಾಂಭೋಜಯೋನಿನಾ ||
ಭುಜಗರಾಜಭೋಗ ದೀರ್ಘ ಭುಜಃ ಸುಹೃದಾತ್ತ ಭೋಗೋ ಭುವಃ ಪತಿಃ |
ತತ್ತನೂಜಷ್ಕುಂಗವರ್ಮಾ ಸ ರಾಜ್ಯಾಂಗ ಭಂಗಸ್ಸದಾ ದ್ವಿಷಾಮ್ ||

ಈ ಸಾಲುಗಳಲ್ಲಿ ಕಂಗವರ್ಮನ ತನಕ ಹೇಳಲಾಗಿದೆ. ಆದರೆ ಕದಂಬರ ಕಾಲದಲ್ಲಿ ಕಂಗವರ್ಮ ಅಂತಹ ಹೆಸರು ಪಡೆಯಲೇ ಇಲ್ಲ.

"ನೃಪತಿರಾಸ ವಿಕ್ರಮೈಕರಸಃ ಶುಭಲಕ್ಷಣ ಲಕ್ಷ್ಯ ವಿಗ್ರಹಃ" ಈ ಸಾಲುಗಳ ಅರ್ಥವನ್ನು ನನಗೆ ಗೃಹಿಸಲಾಗಿಲ್ಲ. ರಾಸ - ಮತ್ತು ರಸ ಇವೆರಡನ್ನೂ ವಿವರಿಸಬೇಕಾಗಿದೆ. 



No comments:

Post a Comment