Search This Blog

Wednesday 29 November 2017

ಯಶೋವರ್ಮ ದೇವ ಭಾರತದ ಭಾರತೀಯರ ಅಸ್ತಿತ್ವದ ಕುರುಹು.


ಸುಮಾರು 9ನೆಯ ಶತಮಾನದಲ್ಲಿ ಪ್ರತೀಹಾರ ವಂಶಸ್ಥರ ಆಳ್ವಿಕೆಯ ನಂತರ ಉತ್ತರ ಭಾರತದ ಮಧ್ಯಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಒಂದು ರಾಜಮನೆತನದವರು ಎಂದರೆ ಚಂಡೇಲರು. ಇವರು ಬುಂದೇಲಖಂಡ ಎನ್ನುವ ಪ್ರದೇಶದವರು. ಚಂದ್ರವಂಶಕ್ಕೆ ಸೇರಿದ ಋಷಿ ಚಂದ್ರಾತ್ರೇಯನಿಂದ ಜನಿಸಿದವರೆಂದು ಚಂದೇಲರು ಹೇಳಿಕೊಂಡಿದ್ದಾರೆ. 36 ಪ್ರಸಿದ್ಧ ರಾಜವಂಶಗಳಲ್ಲಿ ಚಂಡೇಲರದೂ ಒಂದು-ಎಂದು ಆ ವಂಶಸ್ಥರ ಆಸ್ಥಾನ ಕವಿಗಳು ಹೇಳಿದ್ದಾರೆ. ಅವರ ಅತಿಪ್ರಾಚೀನವೆನಿಸಿದ, 954ನೇ ಇಸವಿಯ ಶಾಸನದಲ್ಲಿ ಅರಸರು ಚಂದ್ರಾತ್ರೇಯ ವಂಶದವರೆಂದು ಬಣ್ಣಿಸಿದೆ. ಸು.1098 ಕೀರ್ತಿವರ್ಮನ ದೇವಗಢದ ಶಾಸನ ಒಂದರಲ್ಲಿ ಚಂದೆಲ್ಲ ಎಂಬ ಹೆಸರೂ ಸಹ ಕಾಣಸಿಗುತ್ತದೆ. ಚಂಡೇರ ಆಳ್ವಿಕೆ ಒಳಪಟ್ಟ ಪ್ರದೇಶವನ್ನು ಜೇಜಭುಕ್ತಿ, ಜೇಜಕಭುಕ್ತಿ, ಜೇಜಕಭುಕ್ತಿ ಮಂಡಲ ಎಂಬ ಮೂರು ಹೆಸರುಗಳಲ್ಲಿ ಶಾಸನಗಳಲ್ಲಿ ಹೇಳಲಾಗಿದೆ. ಇದು ಕ್ರಮೇಣ ಅನಂತರ ಬುಂದೇಲ್ ಖಂಡವೆನಿಸಿಕೊಂಡಿತು. 10ನೆಯ ಶತಮಾನದಿಂದ 13ನೆಯ ಶತಮಾನದವರೆಗೆ ಇವರ ರಾಜ್ಯ ಖಜುರಾಹೊ, ಕೌಲಂಜರ, ಮಹೊಬಾ ಹಾಗೂ ಅಜಗಢಗಳನ್ನೊಳಗೊಂಡಿತ್ತು. ಸು. 9ನೆಯ ಶತಮಾನದ ಮೊದಲಾರ್ಧಭಾಗದಲ್ಲಿ ನನ್ನುಕ ಚಂಡೇಲನೆಂಬವನು ಖಜುರಾಹೊ ಎಂಬಲ್ಲಿ ಚಂಡೇಲರಾಜ್ಯದ ಸ್ಥಾಪನೆ ಮಾಡಿದ. ಚಂದ್ರವರ್ಮನೆಂಬ ಬಿರುದನ್ನು ಹೊಂದಿದ್ದ ಈತ ಪ್ರತೀಹಾರ ನಾಗಭಟನ ಸಾಮಂತನಾಗಿ ರಾಜ್ಯಭಾರ ಮಾಡಿದ. ಈತನ ಅನಂತರ ಅಧಿಕಾರಕ್ಕೆ ಬಂದ ವಾಕ್ಪತಿರಾಜ, ಆತನ ಇಬ್ಬರು ಮಕ್ಕಳಾದ ಜಯಶಕ್ತಿ ಮತ್ತು ವಿಜಯಶಕ್ತಿ, ವಿಜಯಶಕ್ತಿಯ ಮಗ ರಾಹಿಲ-ಇವರು ಪ್ರತೀಹಾರರಿಗೆ ಸಾಮಂತರಾಗಿ ಆಳುತ್ತಿದ್ದರು. ರಾಹಿಲನ ಮಗನೇ ಹರ್ಷ.
ಹರ್ಷ : - ಸುಮಾರು ೯೦೦ ರಿಂದ ೯೨೫ ತನಕ ರಾಜ್ಯವಾಳಿದ ಹರ್ಷನ ಕಾಲದಲ್ಲಿ ಚಂಡೇ ರಾಜ್ಯವು ಮಹಾನ್ ಶಕ್ತಿಯಾಗಿ ಬೆಳೆಯಿತು. ಅದೇ ಕಾಲದಲ್ಲಿ ರಾಷ್ಟ್ರಕೂಟರ 3ನೆಯ ಇಂದ್ರನಿಂದ ಸ್ಥಾನ ಪಲ್ಲಟಗೊಂಡು ಸ್ಥಾನಚ್ಯುತನಾದ ಪ್ರತೀಹಾರವಂಶದ ಮಹೀಪಾಲ ತನ್ನ ಸಿಂಹಾಸನವನ್ನು ಪುನಃ ಪಡೆದುಕೊಳ್ಳಲು ಚಂಡೇಲರ ಹರ್ಷ ಸಹಾಯ ಮಾಡಿದ.
ಯಶೋವರ್ಮ ; - ಹರ್ಷನ ಮಗನೇ ಯಶೋವರ್ಮ. ಈತ ಕಾಲದಲ್ಲಿ ಪ್ರತೀಹಾರರು ತಮ್ಮೆಲ್ಲ ಶಕ್ತಿಯನ್ನೂ ಕಳೆದುಕೊಂಡು ಹೆಸರಿಗೆ ಮಾತ್ರ ಅರಸರಾಗಿ ಉಳಿದಿದ್ದರು. ಇದೇ ಸಮಯದಲ್ಲಿ ಈ ಅವಕಾಶವನ್ನು ಬಳಸಿಕೊಳ್ಳಲು ರಾಷ್ಟ್ರಕೂಟ ಮುಮ್ಮಡಿ ಕೃಷ್ಣನಿಂದ ಇನ್ನೊಮ್ಮೆ ಪ್ರತೀಹಾರ ರಾಜ್ಯವನ್ನು ಹಿಂದಕ್ಕೆ ಪಡೆಯುವ ಸಂದರ್ಭದಲ್ಲಿ ಯಶೋವರ್ಮನು ಕಾಲಂಜರ ಮುಂತಾದ ಕೋಟೆಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿಕೊಂಡ. ಇದಲ್ಲದೆ ಈತ ಕಳಚುರಿ ವಂಶದ ಯುವರಾಜದೇವನನ್ನು, ಪರಮಾರ ಮನೆತನದ ಸೀಯಕನನ್ನು ಮತ್ತು ಬಂಗಾಲದ ಪಾಲಮನೆತನದ ವಿಗ್ರಹಪಾಲನನ್ನು ಸೋಲಿಸಿ ತನ್ನ ಕೀರ್ತಿಯನ್ನು ಇಮ್ಮಡಿಗೊಳಿಸಿಕೊಂಡ. ಯಶೋವರ್ಮ ಒಬ್ಬ ದಕ್ಷ ಸೇನಾಪತಿಯಾಗಿದ್ದಂತೆ ದೈವಭಕ್ತನೂ ಆಗಿದ್ದ. ಇವನ ಕಾಲದಲ್ಲಿ ಕಟ್ಟಲು ಆರಂಭಿಸಲಾದ ಖಜುರಾಹೋದ ಚತುರ್ಭುಜ ದೇವಾಲಯ ಈತನ ನಂತರದ ಧಂಗನ ಆಳ್ವಿಕೆಯ ಕಾಲದಲ್ಲಿ ಪುರ್ಣಗೊಂಡಿತು.ಈತನ ಕಾಲದಲ್ಲಿದ್ದ ಮಾಧವ ಎನ್ನುವ ಕವಿ ಸಮ್ಸ್ಕೃತದ ದೊಡ್ಡ ಕವಿಯಾಗಿದ್ದ. ಈತನಿಗೆ ಯಶೋವರ್ಮನ ಮಗ ದಂಗನು ಪ್ರಶಸ್ತಿಯನ್ನು ನೀಡುತ್ತಾನೆ ಅದನ್ನು ಆತ ಖಜರಾಹೋದ ದೇವಾಲಯದ ಶಾಸನದಲ್ಲಿ ಹಾಕಿಸಿದ್ದಾನೆ .
"ಯಸ್ತ್ಯಾಗ ವಿಕ್ರಮ ವಿವೇಕ ಕಲಾ ವಿಲಾಸ ಪ್ರಜ್ಞಾಪ್ರತಾಪ ವಿಭವ ಪ್ರಭವಶ್ಚರಿತ್ರಾತ್ ಚಕ್ರೇ ಕೃತೀ
ಸುಮನಸಾಂ ಮನಸಾಮಕಸ್ಮಾದಸ್ಮಾದಕಾಲ ಕಲಿಕಾಲ ವಿರಾಮ ಶಂಕಾಂ
ಶಬ್ದಾನುಶಾಸನ ವಿದಾಪಿತ್ರಮಾನ್ತ್ರ್ಯ ತ್ತ ದದ್ದೇನ ಮಾದವ ಕವಿಃ ಸ ಇಮಾಂ ಪ್ರಶಸ್ತಿಂ
ಯಸ್ಯಾಮಲಂಕವಿ ಯಶಃ ಕೃತಿನಃ ಕಯಾಸು ರೋಮಾಂಚ ಕಂಚಕ ಜುಷಃ ಪರಿಕೀರ್ತಯನ್ತೀ
ಸಂಸ್ಕೃತ ಭಾಷಾ ವಿದುಷಾ ಜಯಗುಣ ಪುತ್ರೇಣ ಕೌತುಕಾ ಲಿಖಿತಾ" ಎನ್ನುವುದಾಗಿ ಶಾಸನವನ್ನು ಹಾಕಿಸುತ್ತಾನೆ.
ಯಶೋವರ್ಮನ ಮಗನಾದ ಧಂಗ ಕೂಡಾ ಚಂದೇಲರ ವಂಶದ ಪ್ರಸಿದ್ಧ ಅರಸರಲ್ಲಿ ಒಬ್ಬನೆಂದು ಪರಿಗಣಿಸಲ್ಪಟ್ಟಿದ್ದಾನೆ. ಇದೇ ಯಶೋವರ್ಮನ

ಇಂತಹ ಒಂದು ಪ್ರಸಿದ್ಧ ಮನೆತನ ರಾಜನ ಆಳ್ವಿಕೆ ಕಂಡ ಈ ಭೂಮಿಗೆ ಅದ್ಯಾವ ಶಪವೋ ತಿಳಿಯುತ್ತಿಲ್ಲ ಚಂಡೇಲ ವಂಶದ ಕಾಲದಲ್ಲಿಯೇ ಭವಭೂತಿ ವಾಕ್ಪತಿಯಂತಹ ಅನೇಕ ದೊಡ್ದ ದೊಡ್ಡ ಕವಿಗಳು ಉದಿಸಿಹೋದರು. ಉತ್ತರರಾಮಚರಿತದಂತಹ ಕೃತಿಗಳು ಹೊರಬಂದವು. ಆದರೆ ಅಂತಹ ಉಚ್ಚ ವಂ<ಶದ ಅವನತಿಯಾಗಿದ್ದು ದುಷ್ಟ ಮ್ಲೇಚ್ಚ ಮತಾಂಧ ಅಲ್ಲಾವುದ್ದೀನ್ ಖಿಲ್ಜಿ ಎನ್ನುವ ನಾಮರ್ಧನಿಂದ. ಭಾರತದ ಬಾಹ್ಯ ಪ್ರಪಂಚಕ್ಕೆ ಎಷ್ಟೇ ಹೊಡೆತಕೊಟ್ಟರೂ ಇಂದಿಗೂ ಭಾರತೀಯರಲ್ಲಿ ಭಾರತೀಯತೆ ಉಳಿದುಕೊಂಡಿರುವುದು ಆಗಿಹೋದ ಇಂತಹ ಮಹಾನ್ ವಂಸಸ್ಥರಾದ ಚಂಡೇಲ, ಪಾರಾಮಾರ ಮುಂತಾದವರಿಂದ.  

No comments:

Post a Comment