Search This Blog

Wednesday 22 November 2017

ಮಕುಟ ತಟಘಟಿತ ಹಟನ್ಮಣಿಗಣ - ಪುಲಕೇಶಿಯ ಶಾಸನದಲ್ಲಿ; ಕಟಿ ಘಟಿತ ಮೇಖಲಾ ಕಚಿತಮಣಿ ಖಣ್ಡಿಕಾ ಅಣ್ಣಮಾಚಾರ್ಯರ ಕೃತಿಯಲ್ಲಿ

ಲಂಡನ್ ನ ಬ್ರಿಟೀಷ್ ಮ್ಯೂಸಿಯಂ ನಲ್ಲಿರುವ ಪುಲಕೇಶಿಯ ಈ ಶಾಸನದ ಸಾಲುಗಳನ್ನು ಓದುತ್ತಿದ್ದರೆ. ಅದು ಯಾಕೋ ಎಂ ಎಸ್. ಸುಬ್ಬುಲಕ್ಷ್ಮಿಯವರು ಯಮುನಾ ಕಲ್ಯಾಣಿ ರಾಗದಲ್ಲಿ ಹಾಡಿರುವ ಭಾವಯಾಮಿ ಗೋಪಾಲ ಬಾಲಮ್ ಎನ್ನುವ ಅಣ್ಣಮಾಚಾರ್ಯರ ಕೃತಿಯ ನೆನಪಾಗುತ್ತದೆ. ಇದರ ಅಕ್ಷರ ೪೮೯-೪೯೦ನೇ ಇಸವಿಗೆ ಹೊಂದಿರದಿದ್ದರೂ ಇದು ಆ ಕಾಲಕ್ಕೆ ಸೇರಿರಬಹುದು. ಇದನ್ನು ಒಂದು ಕೂಟ ಶಾಸನವೆಂದು ಕರೆಯಲಾಗಿದೆ. ಅದೇನೇ ಇರಲಿ ಈ ಶಾಸನದ ಸಾಹಿತ್ಯ ಮಾತ್ರ ಮನಸ್ಸನ್ನು ಹಿಡಿದಿಡುತ್ತದೆ. ಯಾಕೋ ಈ ಶಾಸನದ "ಮಕುಟ ತಟಘಟಿತ ಹಟನ್ಮಣಿಗಣ ಕಿರಣ" ಪುನಃ ಪುನಃ ಓದಿಸುತ್ತದೆ.

ಅಣ್ಣಮಾಚಾರ್ಯರ ಕೃತಿ
ಭಾವಯಾಮಿ ಗೋಪಾಲಬಾಲಂ ಮನಸ್ಸೇವಿತಂ ತತ್ಪದಂ ಚಿಂತಯೇಹಂ ಸದಾ
ಕಟಿ ಘಟಿತ ಮೇಖಲಾ ಕಚಿತಮಣಿ ಖಣ್ಡಿಕಾ ಪಟಲ ನಿನದೇನ ವಿಭ್ರಾಜಮಾನಮ್
ಕುಟಿಲ ಪದ ಘಟಿತ ಸಂಕುಲ ಚಿಂತಿತೇನತಂ ಚಟುಲ ನಟನಾ ಸಮುಜ್ವಲ ವಿಲಾಸಮ್
ನಿರತ ಕರ ಕಲಿತ ನವನೀತಂ ಬ್ರಹ್ಮಾದಿ ಸುರ ನಿಕರ ಭಾವನಾ ಶೋಭಿತ ಪದಮ್
ತಿರುವೇಂಕಟಾಚಲ ಸ್ತಿಥಮ್ ಅನುಪಮಂ ಹರಿಂ ಪರಮ ಪುರುಷಂ ಗೋಪಾಲಬಾಲಮ್

ಶಾಸನ ಪಾಠ:
ಪ್ರಣತ ಪರ ನೃಪತಿ ಮಕುಟ ತಟಘಟಿತ ಹಟನ್ಮಣಿಗಣ
ಕಿರಣವಾರ್ದ್ಧಾರಾಧೌತ ಚಾರುಚರಣಕಮಳಯುಗಳೇ
https://www.youtube.com/watch?v=wj_I6YOOnI8



No comments:

Post a Comment