Search This Blog

Friday 16 March 2018

ಭಾರತೀಯರಾದ ನಾವು ಆರ್ಯರೆನ್ನಲು ಹೆಮ್ಮೆಪಡಬಾರದೇ ????

ತ್ರಯಃ ಕೃಣ್ವಂತಿ ಭುವನೇಷು ರೇತಸ್ತಿಸ್ರಃ ಪ್ರಜಾ ಆರ್ಯಾ ಜ್ಯೋತಿರಗ್ರಾಃ |
ತ್ರಯೋ ಘರ್ಮಾಸ ಉಷಸಂ ಸಚಂತೇ ಸರ್ವಾಗುಂ ಇತಾಗುಂ ಅನು ವಿದುರ್ವಶಿಷ್ಠಾಃ || ಋಗ್ವೇದ ೭ : ೩೩ : ೭
ಋಗ್ವೇದದ ಏಳನೆ ಮಂಡಲದಲ್ಲಿ ಬರುವ ಸೂಕ್ತಗಳ ಕರ್ತೃ ವಶಿಷ್ಟ, ವೇದಗಳಲ್ಲೆಲ್ಲ ಅತ್ಯಂತ ಪ್ರಸಿದ್ಧನಾಗಿ ಕಾಣಿಸಿಕೊಳ್ಳುವ ಋಷಿ ಈತ. ದಾಶರಾಜ್ಞ ಪ್ರಸಂಗದಲ್ಲಿ ಹತ್ತು ಜನ ರಾಜರ ಒಕ್ಕೂಟವನ್ನು ಯುದ್ಧದಲ್ಲಿ ಸೋಲಿಸಿದ ಸುದಾಸನಿಗೆ ಸಲಹೆಗಾರನಾಗಿಯೂ ಮತ್ತು ಮುಖ್ಯ ಪುರೋಹಿತನಾಗಿಯೂ ಇದ್ದವನು. ಈ ದಾಶರಾಜ್ಜ ಯುದ್ಧ ನಡೆದಿರುವುದು ಇಂದಿಗೆ ಸುಮಾರು ೫೭೭೮ ವರ್ಷಗಳ ಹಿಂದೆ ಎನ್ನುವುದು ಐತಿಹಾಸಿಕ ಮತ್ತು ಸಾಹಿತ್ಯಿಕವಲ್ಲದೇ ಖಗೋಲಶಾಸ್ತ್ರದ ಅಧಾರಗಳಿಂದಲೂ ಸಿದ್ಧವಾಗಿದೆ ಎನ್ನಬಹುದು.
ಹೌದು ಇದನ್ನು ಹೇಳುವುದಕ್ಕೆ ಒಂದು ಕಾರಣವಿದೆ. ೧೯೫೮ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಿಂದ ಹ್ಯಾರಿ ಹಿಕ್ಸ್ ಎನ್ನುವ ಪ್ರಾಚ್ಯವಸ್ತು ಸಂಗ್ರಾಹಕನೊಬ್ಬ ಭಾರತದ ಭೇಟಿಗೆ ಬರುತ್ತಾನೆ. ಆತನಿಗೆ ಹಳೆಯ ವಸ್ತುಗಳನ್ನು ಮಾರಾಟ ಮಾಡುವ ಗುಜರಿ ಅಂಗಡಿಯೊಂದರಲ್ಲಿ ಒಂದು ಕಂಚಿನಿಂದ ತಯಾರಿಸಲಾದ ಒಂದು ತಲೆಯ ಪ್ರತಿಮೆ ದೊರಕುತ್ತದೆ. ಆತ ಅದನ್ನು ಪಡೆದು ಆಶ್ತ ಮತ್ತು ಇನ್ನೊಬ್ಬ ಸುಪ್ರಸಿದ್ಧ ಭೌತ ಶಾಸ್ತ್ರಜ್ಜ ರಾಬರ್ಟ್ ಆಂಡರ್ಸನ್ ಎನ್ನುವವನ ಜೊತೆ ಅದನ್ನು ಅಮೇರಿಕಾ ಮತ್ತು ಸಿಟ್ಜರ್ ಲ್ಯಾಂಡಿನ ನ್ಯೂಕ್ಲಿಯರ್ ಫಿಸಿಕ್ಸ್ ಪ್ರಯೋಗಾಲಯಕ್ಕೆ ಕಳಿಸುತ್ತಾನೆ. ಅಲ್ಲಿ ಸುದೀರ್ಘವಾಗಿ ನಡೆಸಿದ ಪ್ರಯೋಗದಿಂದಾಗಿ ಅದರ ಕಾಲಮಾನ ಕ್ರಿಸ್ತ ಪೂರ್ವ ೩೭೦೦ ಎಂದು ತಿಳಿದು ಬರುತ್ತದೆ. ಈ ಶಿಲ್ಪ ವೈದಿಕ ಆರ್ಯ ಲಕ್ಷಣಗಳುಳ್ಳದ್ದು ಆದುದರಿಂದ ಇದು ೩೭೬೦ರ ಆಸುಪಾಸಿನಲ್ಲಿದ್ದ ವಶಿಷ್ಟ ಮಹರ್ಷಿಯದ್ದೇ ಇರಬಹುದು ಎನ್ನುವ ಊಹೆಗೆ ಬರಲಾಗುತ್ತದೆ. ಅಲ್ಲಿಗೆ ವೇದಗಳ ಕಾಲವನ್ನು ಕ್ರಿಸ್ತ ಪೂರ್ವ ೩೭೦೦ ವರ್ಷಗಳಿಗೂ ಹಿಂದಕ್ಕೆ ಹಾಕುವುದು ಅನಿವಾರ್ಯವಾಗುತ್ತದೆ. ಅಲ್ಲಿಗೆ ಆರ್ಯರು ಭಾರತಕ್ಕೆ ಹೊರಗಿನಿಂದ ಬಂದವರು ಅನ್ನುವುದು ನಿರಾಧಾರ ಎನ್ನುವುದು ಕಂಡು ಬರುತ್ತದೆ. ಹಾಗಂತ ನಾನಿದನ್ನು ವಶಿಷ್ಟನದ್ದೇ ಪ್ರತಿಮೆ ಎಂದು ಹೇಳುತ್ತಿಲ್ಲ ಆದರೆ ಯಾವುದೋ ಮಹರ್ಷಿಯ ಚಿತ್ರಣವಂತೂ ಕೊಡುತ್ತದೆ ಮತ್ತು ಕಾಲವನ್ನೂ ನಿರ್ಧರಿಸುತ್ತಿದೆ. ಕ್ರಿ. ಪೂ ನಾಲ್ಕು ಸಾವಿರದಷ್ಟು ಹಿಂದೆ ಈ ನೆಲದಲ್ಲಿ ಆರ್ಯ ವೈದಿಕ ಪ್ರಂಪರೆಯೊಂದಿತ್ತು ಎನ್ನುವುದಕ್ಕೆ ಬೇರೆ ಉದಾಹರಣೆ ಬೇಕಿಲ್ಲ. ಇದೇ ಕಾಲ ನಿರ್ಣಯವನ್ನು ವೇದಗಳು ಸಹ ಸಮರ್ಥಿಸುತ್ತವೆ. ಅದೂ ಅಲ್ಲದೇ ಈ ಕಾಲಘಟ್ಟದಲ್ಲಿಯೇ ಅವರು ಉಚ್ಚ್ರಾಯ ಹಂತ ತಲುಪಿಯಾಗಿತ್ತು.
ಅಮರಕೋಶದಲ್ಲಿ ಆರ್ಯ ಶಬ್ದಕ್ಕೆ
ರಾಜಬೀಜೀ ರಾಜವಂಶ್ಯೋ ಬೀಜಸ್ತು ಕುಲಸಂಭವಃ |
ಮಹಾಕುಲ ಕುಲೀನಾರ್ಯ ಸಭ್ಯ ಸಜ್ಜನ ಸಾಧವಃ || ೨ : ೭ ಎನ್ನುವ ಅರ್ಥ ಕೊಡುತ್ತಾನೆ, ರಾಜ ಕುಲ ರಾಜ ಶ್ರೇಷ್ಠ, ಸತ್ಕುಲಪ್ರಸೂತ, ಸಭ್ಯನಾದವ, ಸಾಧು ಸಜ್ಜನ ಎನ್ನುವುದಾಗಿ ಹೇಳುತ್ತದೆ. ಇದನ್ನು ಹೇಳಿಕೊಳ್ಳಲು ನಾವು ಹೆಮ್ಮೆ ಪಡಬೇಕೇ ವಿನಃ ಇದನ್ನು ಹೇಳಲು ಹಿಂಜರಿಯಬೇಕೇ ? ರಾಮಾಯಣದ ಬಾಲಕಾಂಡದ ಪ್ರಥಮ ಸರ್ಗದಲ್ಲಿ

ಆರ್ಯಃ ಸರ್ವಸಮಶ್ಚೈವ ಸದೈವ ಪ್ರಿಯದರ್ಶನಃ |
ಸ ಚ ಸರ್ವಗುಣೋಪೇತಃ ಕೌಸಲ್ಯಾನನ್ದವರ್ಧನಃ || ೧೬ ||
ರಾಮನನ್ನು ಇಲ್ಲಿ ಸರ್ವಗುಣಗಳಿಂದಲೂ ಕೂಡಿರುವ ಆರ್ಯನಾದ ಕೌಸಲ್ಯಾ ದೇವಿಯ ಮಗ ಎನ್ನುವುದಾಗಿ ಹೇಳಲಾಗಿದೆ.
ಋಗ್ವೇದದಲ್ಲಿ ಸುಮಾರು ೩೬ಕ್ಕೂ ಹೆಚ್ಚು ಕಡೆಗಳಲ್ಲಿ ಆರ್ಯ ಎನ್ನುವ ಪದ ಬರುತ್ತದೆ
ಆರ್ಯಂ ಸಹೋ ವರ್ಧಯಾ ದ್ಯುಮ್ನಂ ಇಂದ್ರ ಎನ್ನುವುದಾಗಿ ೧ : ೧೦೩ :೩
ಆರ್ಯಮಣಂ ಅದಿತಿಂ ವಿಷ್ಣುಮೇಷಾಂ ೭ : ೩೯ ; ೫
ಪ್ರಜಾ ಆರ್ಯಾ ಜ್ಯೋತಿರಗ್ರಾಃ ೭ : ೩೩ : ೭ ಎನ್ನುವುದಾಗಿ ಉಲ್ಲಿ ಉದಾಹರಣೆಗಾಗಿ ತೆಗೆದುಕೊಂಡಿರುವೆನು. ಎಲ್ಲಾ ಕಡೆಯಲ್ಲಿಯೂ ಉಚ್ಚ ಮಟ್ಟ್ದ ಸಂಸ್ಕೃತಿಯ ರಾಯಭಾರಿಗಳಾಗಿ ಹೊರಹೊಮ್ಮುತ್ತಾರೆಯೇ ವಿನಃ ಆರ್ಯ ಎನ್ನುವ ಪದವೇ ಅಂತಹ ಅರ್ಥವನ್ನು ಕೊಡುವುದಲ್ಲದೇ ಹೆಮ್ಮೆ ಎನ್ನಿಸುತ್ತದೆ.
ಆರ್ಯ ಶಬ್ದವನ್ನರಸುತ್ತಾ
ಅಮರಕೋಶದಲ್ಲಿ ಆರ್ಯ ಶಬ್ದಕ್ಕೆ
ರಾಜಬೀಜೀ ರಾಜವಂಶ್ಯೋ ಬೀಜಸ್ತು ಕುಲಸಂಭವಃ |
ಮಹಾಕುಲ ಕುಲೀನಾರ್ಯ ಸಭ್ಯ ಸಜ್ಜನ ಸಾಧವಃ || ೨ : ೭ ಎನ್ನುವ ಅರ್ಥ ಕೊಡುತ್ತಾನೆ, ರಾಜ ಕುಲ ರಾಜ ಶ್ರೇಷ್ಠ, ಸತ್ಕುಲಪ್ರಸೂತ, ಸಭ್ಯನಾದವ, ಸಾಧು ಸಜ್ಜನ ಎನ್ನುವುದಾಗಿ ಹೇಳುತ್ತದೆ. ಇದನ್ನು ಹೇಳಿಕೊಳ್ಳಲು ನಾವು ಹೆಮ್ಮೆ ಪಡಬೇಕೇ ವಿನಃ ಇದನ್ನು ಹೇಳಲು ಹಿಂಜರಿಯಬೇಕೇ ? ರಾಮಾಯಣದ ಬಾಲಕಾಂಡದ ಪ್ರಥಮ ಸರ್ಗದಲ್ಲಿ
ಆರ್ಯಃ ಸರ್ವಸಮಶ್ಚೈವ ಸದೈವ ಪ್ರಿಯದರ್ಶನಃ |
ಸ ಚ ಸರ್ವಗುಣೋಪೇತಃ ಕೌಸಲ್ಯಾನನ್ದವರ್ಧನಃ || ೧೬ ||
ರಾಮನನ್ನು ಇಲ್ಲಿ ಸರ್ವಗುಣಗಳಿಂದಲೂ ಕೂಡಿರುವ ಆರ್ಯನಾದ ಕೌಸಲ್ಯಾ ದೇವಿಯ ಮಗ ಎನ್ನುವುದಾಗಿ ಹೇಳಲಾಗಿದೆ.
ಋಗ್ವೇದದಲ್ಲಿ ಸುಮಾರು ೩೬ಕ್ಕೂ ಹೆಚ್ಚು ಕಡೆಗಳಲ್ಲಿ ಆರ್ಯ ಎನ್ನುವ ಪದ ಬರುತ್ತದೆ
ಆರ್ಯಂ ಸಹೋ ವರ್ಧಯಾ ದ್ಯುಮ್ನಂ ಇಂದ್ರ ಎನ್ನುವುದಾಗಿ ೧ : ೧೦೩ :೩
ಆರ್ಯಮಣಂ ಅದಿತಿಂ ವಿಷ್ಣುಮೇಷಾಂ ೭ : ೩೯ ; ೫


ಪ್ರಜಾ ಆರ್ಯಾ ಜ್ಯೋತಿರಗ್ರಾಃ ೭ : ೩೩ : ೭ ಎನ್ನುವುದಾಗಿ ಇಲ್ಲಿ ಉದಾಹರಣೆಗಾಗಿ ತೆಗೆದುಕೊಂಡಿರುವೆನು. ಎಲ್ಲಾ ಕಡೆಯಲ್ಲಿಯೂ ಉಚ್ಚ ಮಟ್ಟದ ಸಂಸ್ಕೃತಿಯ ರಾಯಭಾರಿಗಳಾಗಿ ಹೊರಹೊಮ್ಮುತ್ತಾರೆಯೇ ವಿನಃ ಆರ್ಯ ಎನ್ನುವ ಪದವೇ ಅಂತಹ ಅರ್ಥವನ್ನು ಕೊಡುವುದಲ್ಲದೇ ಹೆಮ್ಮೆ ಎನ್ನಿಸುತ್ತದೆ. ಉನ್ನತವಾದ ಸಂಸ್ಕೃತಿಯನ್ನು ಆಚಾರವನ್ನು ತ್ಯಜಿಸಿದ ಕಾರಣವೇ ಆನಾರ್ಯರಾಗಿ ಆರ್ಯಕ್ಷತ್ರಿಯತ್ವದಿಂದ ಅನೇಕ ರಾಜರು ಸ್ಥಾನ ಭೃಷ್ಟರಾಗಿದ್ದು ನಮ್ಮ ಕಣ್ಣಮುಂದೆಯೇ ಸಿಗುತ್ತವೆ. ಆರ್ಯದ್ರಾವಿಡ ವೆನ್ನುವ ಸಂಕುಚಿತ ಜನಾಂಗೀಯ ಅರ್ಥ ಇತ್ತೀಚಿನ ಕೊಡುಗೆಯೇ ಹೊರತು ಪ್ರಾಚೀನವಲ್ಲ.

No comments:

Post a Comment