Search This Blog

Thursday 8 March 2018

ಉಪಕಾರಿಕ – ಉಪಕಾರ್ಯ


ಸುಮಾರು ಹನ್ನೊಂದನೆ ಶತಮಾನದಲ್ಲಿ ಕೋಲ್ಕೋತಾ ಸಮೀಪದ ಬಕ್ ಪುರದಲ್ಲಿ ವಿಜಯಸೇನ ಎನ್ನುವ ರಾಜ ಒಂದು ತಾಮ್ರ ಶಾಸನವನ್ನು ಬರೆಸುತ್ತಾನೆ. ಅದು ಒಂದು ದಾನ ಶಾಸನ ಸುಮಾರು ೫೦ಸಾಲುಗಳಲ್ಲಿ ಬರೆಯಲಾಗಿದೆ. ಈ ಶಾಸನದ ೩೯ ಮತ್ತು ೪೦ನೇ ಸಾಲುಗಳು ನಾನು ಈಗ ಪ್ರಸ್ತಾವಿಸುವ ವಿಷಯಕ್ಕೆ ಸಂಬಂಧಿಸಿವೆ. "ಋಗ್ವೇದ ಆಶ್ವಲಾಯನ ಶಾಖಾ ಷಡಂಗಾಧ್ಯೈನೇ ಶ್ರೀ ಉದಯಕರ ದೇವ ಶರ್ಮಣೇ ವಿಕ್ರಮಪುರೋಪಕಾರಿಕಾ ಮಧ್ಯೇ ಸತಿ ಸೋಮಗ್ರಹೇ" ಎನ್ನುವುದಾಗಿ ಬರುತ್ತದೆ.
ಉಪಕಾರಿಕಾ ಎನ್ನುವ ಪದ ನಮಗೆ ಮೊತ್ತ ಮೊದಲು ಶಾಸನದಲ್ಲಿ ಕಾಣ ಸಿಗುತ್ತದೆ. ಇಲ್ಲಿ ಉಪಕಾರಿಕ ಎನ್ನುವುದು ಯಾವ ಅರ್ಥವನ್ನು ಕೊಡುತ್ತದೆ ಎನ್ನುವುದು ಸ್ವಲ್ಪ ಗೊಂದಲಕಾರಿಯಾಗಿ ಕಾಣಿಸುತ್ತದೆ. ವಿಕ್ರಮಪುರದ ಉಪಕಾರಿಕಾ, ಅಂತ ಅರ್ಥೈಸುವಾಗ ವಿಕ್ರಮಪುರದ ಅರಮನೆಯನ್ನು ಕುರಿತಾಗಿಯೇ ಹೇಳುತ್ತಿರಬಹುದು ಎನ್ನುವ ಅನಿಸಿಕೆ. ಶಾಸನದ ಮುಂದಿನ ಭಾಗ ಮತ್ತು ಹಿಂದಿನ ಭಾಗದಲ್ಲಿ ಬಂದಿರುವ ಅಂಶವನ್ನು ಗಮನಿಸಿದರೆ ಇಲ್ಲಿ ಅರಮನೆಯನ್ನು ಇದು ಅರಮನೆಗೆ ಮಾತ್ರವಲ್ಲ ಅರಮನೆಗೆ ಸಂಬಂಧಿಸಿದ ಬೇರೆ ಮಂದಿರ ಅಥವಾ ಆಡಳಿತ ವರ್ಗವನ್ನೋ ಆಡಳಿತ ಘಟಕವನ್ನೋ ಸೂಚಿಸುತ್ತದೆ. ಅದೇ ಶಾಸನದಲ್ಲಿ ವಿಕ್ರಮಪುರದ ವಾಸಸ್ಥಾನವನ್ನು ಕುರಿತು ಹೇಳುವಾಗ "ಸ ಖಲು ಶ್ರೀ ವಿಕ್ರಮಪುರ ಸಮಾವಾಸಿತ ಶ್ರೀಮಜ್ಜಯಸ್ಕಂಧವಾರಾತ್" ಎನ್ನುವುದಾಗಿ ಬರುತ್ತದೆ". ಅಲ್ಲಿಗೆ ಇದು ಅರಮನೆಯನ್ನು ಕುರಿತಾಗಿಯೇ ಹೇಳಿರುವ ಪದ ಎನ್ನುವುದು ಸ್ಪಷ್ಟಗೊಳ್ಳುತ್ತದೆ. ಆದರೆ ಶಬ್ದಕೋಶಗಳಲ್ಲಿ ಉಪಕಾರಿಕ ಅನ್ನುವುದು ಸೇವಕಿಯರನ್ನು ಉದ್ದೇಶಿಸಿ ಹೇಳಲಾಗಿದೆ. ಇದನ್ನು ಒಂದು ಆಡಳಿತ ಘಟಕ ಎನ್ನುವುದಾಗಿಯೂ "Territorial, Unit" ಎನ್ನುವುದಾಗಿಯೂ ಕೆಲವು ಕಡೆ ಅರ್ಥೈಸಲಾಗಿದೆ. ಇದು ಕೇವಲ ಆಡಳಿತ ಘಟಾಕವೆಂದರೆ ಸಾಲದು ಇದೊಂದು ಆಡಳಿತದ ಪ್ರಧಾನ ಘಟಕ ಎನ್ನುವ ಅರ್ಥವನ್ನೂ ಈ ಉಪಕಾರಿಕ ಕೊಡುತ್ತದೆ.
ಅಮರಕೋಶದಲ್ಲಿ
ಸೌಧೋಸ್ತ್ರೀ ರಾಜಸದನಮುಪಕಾರ್ಯೋಪಕಾರಿಕಾ|
ಸ್ವಸ್ತಿಕಸ್ಸರ್ವತೋಭದ್ರೋ ನಂದ್ಯಾವರ್ತಾದಯೋಪಿಚ || ೨: ೨: ೧೧ ||
ಸೌಧ, ಅರಮನೆ, ಉಪಕಾರ್ಯ ಉಪಕಾರಿಕಾ ಎನ್ನುವುದು ರಾಜರು ತಂಗುವ ಸ್ಥಳ, ಸ್ವಸ್ತಿಕ ಸರ್ವತೋ ಭದ್ರ, ನಂದ್ಯಾವರ್ತ, ವಿಚ್ಚಂದಕ ಎನ್ನುವುದು ಬೇರೆ ಬೇರೆ ಆಕೃತಿಗಳುಳ್ಳದೊಡ್ಡ ಮನೆಗಳು, ಹೀಗೆ ಅಮರ ಕೋಶವು ಸಹ ರಾಜನ ಮನೆ ಅಥವಾ ಆತ ವಿಶಾಂತಿಗಾಗಿ ತಂಗುವ ಸಧವನ್ನು ಹೇಳುತ್ತಿದೆ. ಅಮರಕೋಶಕ್ಕೆ ಟೀಕೆ ಬರೆದ ಕ್ಷೀರಸ್ವಾಮಿಯವರು ಹೇಳುವಂತೆ "ಉಪಕ್ರಿಯತೇ - ಉಪಕರೋತಿ ಚ ಮಂಡಪಾದಿ ರಾಝಸದನಂ" ಹೀಗೆ ಉಪಕಾರ್ಯ ಮತ್ತು ಉಪಕಾರಿಕಾಗಳ ಪರ್ಯಾಯಗಳನ್ನು ಗಮನಿಸಿದಾಗ ಇದೊಂದು ಬಟ್ಟೆಯಿಂದ ಮಾಡಿದ ಅರಮನೆಯಂತಹ ತಂಗುದಾಣವಿರಬಹುದೆನ್ನುವುದು ಇನ್ನು ಕೆಲವರ ಅಭಿಪ್ರಾಯ.
ಅಮರ ಕೋಶದ ಇನ್ನೊಬ್ಬ ಟೀಕಾಕಾರ ಲಿಂಗಯಸೂರಿ ಹೇಳುವಂತೆ "ಉಪ ಸಮೀಪೇ ಕ್ರಿಯತ ಇತ್ಯುಪಕಾರ್ಯ ಅಥವಾ ಪರಾದಿಭಿರುಪಕ್ರಿಯತೇ ಇತಿ ಉಪಕಾರ್ಯ" ಮತ್ತು "ಪ್ರಯಾಣೇ (ಪ್ರಯಾಣಾಯ) ಉಪಕರೋತಿ ಇತಿ ಉಪಕಾರಿಕ" ಅರಮನೆಯ ಸಮೀಪವೇ ಇರುವ ಬಟ್ಟೆಯಿಂದ ಮಾಡಲ್ಪಡುವ ಒಂದು ಮನೆ. ಇದು ರಾಜ ತನ್ನ ಪ್ರಯಾಣ ಕಾಲದಲ್ಲಿಯೂ ನಿರ್ಮಿಸಿಕೊಳ್ಳುತ್ತಿದ್ದ ಎಂದು ಹೇಳುತ್ತಾರೆ. ಇಂತವುಗಳನ್ನು ಉಪಕಾರಿಕ ಎಂದು ಹೇಳುತ್ತಾರೆ.
ಇಷ್ಟರ ತನಕ ಉಪಕಾರಿಕ ಎನ್ನುವುದನ್ನು ಗಮನಿಸುತ್ತಾ ಇದು ಅರಮನೆಯ ತದ್ರೂಪದ ಪಕ್ಕದಲ್ಲೇ ಇರುವ ಮನೆ ಎನ್ನುವುದಾಗಿಯೂ ಮತ್ತು ಆಡಳಿತ ಘಟಕ ಎನ್ನುವುದಾಗಿಯೂ ಶಾಸನ ಮತ್ತು ಅಮರ ಕೋಶಗಳಿಂದ ತಿಳಿದುಕೊಂಡೆವು, ಆದರೆ ಇದು ಸಾಹಿತ್ಯದ ಕ್ಷೇತ್ರದಲ್ಲಿ ಕಾಳಿದಾಸನ ರಘುವಂಶದಲ್ಲಿ
"ತಸ್ಯೋಪಕಾರ್ಯಾರಚಿತೋಪಚಾರಾ ವನೇತರ ಜಾನಪದೋಪದಾಭಿಃ ಮಾರ್ಗೇ ನಿವಾಸಾ ಮನುಜೇಂದ್ರ ಸೂನೋರ್ಭಬೂವುರುದ್ಯಾನ ವಿಹಾರ ಕಲ್ಪಃ " - ೫: ೪೧ ರಲ್ಲಿ ಹೇಳುತ್ತಾ ಇದು ರಾಜನ ವಾಸ್ತವ್ಯಕ್ಕಾಗಿ ಮಾಡಿಕೊಂಡ ಡೇರೆಯಂತಹ ಅರಮನೆ ಎನ್ನುತ್ತಾನೆ. ಕಾಳಿದಾಸ ಹಾಗೇಯೇ ಮುಂದುವರಿದು ಹೇಳುತ್ತಾ ಅನೇಕ ಡೇರೆಗಳ ಮಧ್ಯೆ ರಾಜ ಭಟರಿಂದ ರಕ್ಷಿಸಲ್ಪಡುತ್ತಿರುವ ಡೇರೆಯನ್ನು ಉಪಕಾರ್ಯ ಅಥವಾ ಉಪಕಾರಿಕ ಎನ್ನಬಹುದು ಎನ್ನುತ್ತಾನೆ.
"ತಸ್ಯಾಧಿಕಾರ ಪುರುಷೈಃ ಪ್ರಣತೈಃ ಪ್ರದಿಷ್ಟಾಂ |
ಪ್ರಾಗ್ದ್ವಾರ ವೇದಿ ವಿನಿವೇಶಿತ ಪೂರ್ಣಕುಂಭಾಮ್ ||
ರಮ್ಯಾಂ ರಘು ಪ್ರತಿನಿಧಿಃ ಸ ನವೋಪಕಾರ್ಯಾಂ |
ಬಾಲ್ಯಾತ್ಪರಾಮಿವ ದಶಾಂ ಮದನೋಧ್ಯುವಾಸ || ೫: ೪೧||
ಇಲ್ಲಿಯೂ ಸಹ ಅರಮನೆಯ ಸಮೀಪದಲ್ಲಿ ನಿರ್ಮಿಸಿದ ತಾತ್ಕಾಲಿಕ ಮಂದಿರವನ್ನು ಕುರಿತು ಕಾಳಿದಾಸ ಹೇಳುತ್ತಾನೆ. ಉಪ ಎನ್ನುವುದು ಸಮೀಪವನ್ನು ಕುರಿತು ಹೇಳುತ್ತದೆ, ಕ್ರಿಯತ ಇತಿ ಎನ್ನುವುದಾಗಿ ವಿವರಿಸುತ್ತಾನೆ. ರಾಮನು ತನ್ನ ವನವಾಸವನ್ನು ಪೂರೈಸಿಕೊಂಡು ಬರುವ ತನಕವೂ ಶತ್ರುಘ್ನನು ಅರಮನೆಯ ಸಮೀಪವೇ ಒಂದು ಉಪಕಾರ್ಯವನ್ನು ನಿರ್ಮಿಸಿಕೊಂಡಿದ್ದನಂತೆ.
ಮಲ್ಲಿನಾಥ ಮತ್ತು ಹೇಮಾದ್ರಿ ಎನ್ನುವವರು ರಘುವಂಶದ ಮೇಲೆ ಬರೆದ ಟೀಕೆಗಳಲ್ಲಿ ಅರಮನೆಯಿಂದ ಅರ್ಧ ಕ್ರೋಶ ದೂರದಲ್ಲಿ ಉಪಕಾರ್ಯ ಇತ್ತಂತೆ.
ಕ್ರೋಶಾರ್ಧಮ್ ಪ್ರಕೃತಿಪುರಸ್ಸರೇಣ ಗತ್ವಾ
ಕಾಕುತ್ಸಃ ಸ್ತಿಮಿತ ಜವೇನ ಪುಷ್ಪಕೇನ
ಶತ್ರುಘ್ನ ಪ್ರತಿವಿಹಿತೋಪಕಾರ್ಯಮಾರ್ಯಃ ಸಾಕೇತೋಪವನಮುದಾರ್ಯಮದ್ಯುವಾಸಃ " ಎಂದು ಬಟ್ಟೆಗಳನ್ನು ಬಳಸಿ ಅರಮನೆಗೆ ಸಾಗುವ ಮಾರ್ಗದಲ್ಲಿ ಅರಮನೆಯಿಂದ ಸ್ವಲ್ಪವೇ ದೂರದಲ್ಲಿ ನಿರ್ಮಿಸಿದ ತಾತ್ಕಾಲಿಕ ಅರಮನೆಯನ್ನು ಉಪಕಾರ್ಯ ಎನ್ನುವುದಾಗಿ ಮಲ್ಲಿನಾಥನು ಸ್ಪಷ್ಟಪಡಿಸುತ್ತಾನೆ.
ಪಂಚತಂತ್ರದ ಕಥೆಯಲ್ಲಿಯೂ ಸಹ ಉಪಕಾರ್ಯವನ್ನು ಬಳಸಲಾಗಿದೆ. "ಆಶೀವಿಷ ಜಾತಿರಿವ ದುರುಪಕಾರ್ಯಾ" ಇಲಿಗಳ ಬಿಲವನ್ನು ಮತ್ತು ಹಾವು ತನ್ನ ಅಡುಗುದಾಣವನ್ನು ಇದೇ ರೀತಿಯಲ್ಲಿ ಉಪಕಾರ್ಯವನ್ನಾಗಿ ಮಾಡಿಕೊಳ್ಳುತ್ತದೆ ಎನ್ನುತ್ತಾನೆ. ಇಲ್ಲಿ ಪಂಚತಂತ್ರದಲ್ಲಿ ದುರುಪಕಾರ್ಯ ಎಂದೂ ಬಳಕೆಯಾಗುತ್ತಾದೆ. ಇಲ್ಲಿಯೂ ಇದೊಂದು ಡೇರೆಯಾಗಿಯೇ ಹೇಳಲ್ಪಟ್ಟಿದೆ.
ಯಾದವಾಚಾರ್ಯನ ವೈಜಯನ್ತೀಕೋಶ ಮತ್ತು ಹಲಾಯುಧ ಭಟ್ಟನ ಅಭಿದಾನರತ್ನಮಾಲಾದಲ್ಲಿಯೂ ಸಹ ಅದೇ ಅರ್ಥವನ್ನು ಸೂಚಿಸುವಂತೆ ವ್ಯಾಖ್ಯಾನಿಸಲಾಗಿದೆ.
ಅತ್ರ ಮುಖ್ಯಾರ್ಥಸ್ಯ ರಾಜವಿಷಯಾಯಾಃ ಕವಿರತೇರುಪಕಾರಕಸ್ಯ ಯದೈವ ತವ
ಇಲ್ಲಿ ವಿಜಯ ಸೇನ ಮಹಾರಾಜನೂ ಸಹ ತಾನು ಕೊಡುತ್ತಿರುವ ದಾನದ ಕುರಿತಾಗಿ ಹೇಳುವಾಗ ಅದು ವಾಸಸ್ಥಳದ ಮಧ್ಯದಲ್ಲಿ ಇದೆ ಎನ್ನುವುದಾಗಿ ಹೇಳುವುದರಿಂದ ಇಲ್ಲಿ ಉಪಕಾರಿಕ ಬಂದಿದೆ. ಆದುದರಿಂದಲೇ "ಉಪಕಾರಿಕ ಮಧ್ಯೇ ಸತಿ" ಎಂದಿರುವುದು. ಹೀಗೆ ಒಂದು ಪದವನ್ನು ಹುಡುಕುತ್ತಾ ಹೋದಾಗ ಪರಿಚಿತ ಶಬ್ದವೊಂದು ವಿಧವಿಧದ ಅರ್ಥವನ್ನು ಕೊಡುತ್ತಾ ಸಾಗುವುದು ನಿಜಕ್ಕೂ ಆಶ್ಚರ್ಯವೆನ್ನಿಸುತ್ತದೆ.
ಜಗನ್ನಾಥ ಪಂಡಿತ ತನ್ನ ಪ್ರಾಣಾಭರಣ ಎನ್ನುವ ಗ್ರಂಥದಲ್ಲಿ
ಕೋಪೋದಯಸ್ತದೈವ ತವ ರಿಪೂಣಾಂ ಸಂಪದೋ ಭಸ್ಮಸಾದ್ಭವಿಷ್ಯಂತೀತಿ ವಸ್ತುನ
ಉಪಕಾರಿಕಾ ನಯನಕೋಣಶೋಣದ್ಯುತೇರ್ಯುಗಾಂತದಹನೋಪಮಾ

No comments:

Post a Comment