Search This Blog

Sunday 3 June 2018

ಸಾಲಂಕಾಯನರು ಲಿಪಿ ಮತ್ತು ಭಾಷೆಯ ಸಂಕ್ರಮಣಕಾರರು.


ತಾನು ಕಟ್ಟಿ ಬೆಳೆಸಿದ ಸಾಮ್ರಾಜ್ಯ ಅಷ್ಟೇ ಬೇಗ ನೆಲಕಚ್ಚಿದ ನಂತರ ಅಂದರೆ ಲಿಪಿ ಮತ್ತು ಭಾಷೆಯ ಸಾಮ್ರಾಜ್ಯ ಮಾತ್ರ ವಿಕಾಸದ ಪಥದಲ್ಲಿ ಮುಂದೆ ಸಾಗಿತು. ಚಪಡ ತನ್ನ ಜ್ಞಾನವನ್ನು ನಮಗೆ ಕೊದಲು ಅಸಮರ್ಥನಾದರೂ ನಮಗೆ ಲಿಪಿಗಳನ್ನು ಪರಿಚಯ ಮಾಡಿಸಿದ್ದಂತೂ ನಿಜ. ಲಿಪಿ ಕ್ಷೇತ್ರದಲ್ಲಿ ದೊಡ್ದ ಪರಿವರ್ತನೆಯಾಯಿತು. ಲಿಪಿಯ ವಿಕಾಸಕ್ಕೆ ಅಂದರೆ ಲಿಪಿಯನ್ನು ಮುಂಚೂಣಿಗೆ ತರುವಲ್ಲಿ ಶ್ರಮಿಸಿದವರಲ್ಲಿ ಸಾಲಂಕಾಯನರು ಒಬ್ಬರು.
ಸಾಲಂಕಾಯನ ಹೆಸರೇ ಸಂಸ್ಕೃತದ್ದು ಸುಮಾರು ಒಂದನೇ ಶತಮಾನದಿಂದಲೂ ಇವರು ನಮ್ಮ ದೇಶದ ದಕ್ಷಿಣ ಭಾಗದ ಪೂರ್ವಪ್ರಾಂತ್ಯದಲ್ಲಿ (ಆಂಧ್ರ)ಕಾಣಿಸಿಕೊಂಡರು. ಸುಮಾರು ಆರನೇ ಶತಮಾನದವರೆಗೂ ಇವರ ಅಸ್ತಿತ್ವ ಕಾಣಿಸಿಕೊಳ್ಳುತ್ತದೆ. ಸಾಲಂಕಾಯನ ಹಸ್ತಿವರ್ಮ ಇವರಲ್ಲಿ ಅತ್ಯಂತ ಪ್ರಸಿದ್ಧ ಎನ್ನುವುದು ಅಲ್ಲಹಾಬಾದ್ ಸ್ತಂಭ ಶಾಸನದಿಂದ ತಿಳಿದು ಬರುತ್ತದೆ. ಆ ಶಾಸನದಲ್ಲಿ ಹಲವು ಪ್ರಮುಖ ವಂಶಗಳನ್ನು ಗುರುತಿಸಿ ಅಲ್ಲಿ ರಾಜರುಗಳನ್ನು ಹೇಳುವಾಗ ವೈಂಗೇಯಕ ಹಸ್ತಿವರ್ಮ ಎಂದು ಇವನನ್ನು ಕರೆಯಲಾಗಿದೆ.
'ಸಾಲಂಕಾಯನ' ಪದದ ಕುರಿತು ಮಹಾಭಾರತದ ಅನುಶಾಸನಪರ್ವದ ನಾಲ್ಕನೇ ಅಧ್ಯಾಯ ದಲ್ಲಿ ಸಾಲಂಕಾಯನ ಶಬ್ದ ಕಾಣಿಸಿಕೊಳ್ಳುತ್ತದೆ. ಅಲ್ಲಿ ಋಚೀಕನೆನ್ನುವ ಮಹರ್ಷಿಯ ಅನುಗ್ರಹದಿಂದ ಯಶೋವತಿಯಾದ ಗಾಧಿಯ ಪತ್ನಿಯು ಬ್ರಹ್ಮತೇಜೋಪುಂಜನಾದ ವಿಶ್ವಾಮಿತ್ರನನ್ನು ಹಡೆದಳು. ಈ ಕಾರಣದಿಂದಲೇ ಮಹಾತಪಸ್ವಿಯಾದ ವಿಶ್ವಾಮಿತ್ರನು ಕ್ಷತ್ರಿಯಕುಲದಲ್ಲಿಯೇ ಹುಟ್ಟಿದರೂ ಬ್ರಾಹ್ಮಣತ್ವವನ್ನು ಹೊಂದಿ ಬ್ರಾಹ್ಮಣ ವಂಶದ ಪ್ರವರ್ತಕನೂ ಆದನು. ಮಹಾತಪಸ್ವಿಯಾದ ವಿಶ್ವಾಮಿತ್ರನ ಮಕ್ಕಳು ಕೂಡ ಮಹಾತ್ಮರೂ, ಬ್ರಾಹ್ಮಣವಂಶವರ್ಧಕರೂ, ಗೋತ್ರಪ್ರವರ್ತಕರೂ ಆದರು.
ವಲ್ಗುಜಙ್ಘಶ್ಚ ಭಗವಾನ್ಗಾಲವಶ್ಚ ಮಹಾನೃಷಿಃ |
ಋಷಿರ್ವಜ್ರಸ್ತಥಾ ಖ್ಯಾತಃ ಸಾಲಂಕಾಯನ ಏವ ಚ || 52 ||
ಪೂಜ್ಯನಾದ ವಲ್ಗುಜಂಘ, ಮಹರ್ಷಿಯಾದ ಗಾಲವ, ವಜ್ರಮುನಿ, ವಿಖ್ಯಾತನಾದ ಸಾಲಂಕಾಯನ, ಇವರೆಲ್ಲರೂ ಮುನಿಗಳೂ ಬ್ರಹ್ಮವಾದಿಗಳೂ ಆದ ವಿಶ್ವಾಮಿತ್ರನ ಮಕ್ಕಳು. ಎನ್ನುತ್ತದೆ ಅಂದರೆ ಸಾಲಂಕಾಯನ ಎನ್ನುವವರು ವಿಶ್ವಾಮಿತ್ರ ಗೋತ್ರದ ಅನುಸರಣೆಯವರು ಎನ್ನುವುದು ತಿಳಿದು ಬರುತ್ತದೆ.
ಅಲ್ಲಹಾಬಾದ್ ಸ್ತಂಭ ಶಾಸನದಲ್ಲಿ ವೈಂಗೇಯಕ ಎನ್ನುವುದು ವೆಂಗಿನಾಡು ಎಂದರೆಪಶ್ಚಿಮ ಗೋದಾವರಿಯ ಎಲ್ಲೋರ ಎನ್ನುವಲ್ಲಿಂದ ಉತ್ತರಕ್ಕಿರುವ ಪೆದ್ದವೇಗಿ ಪ್ರದೇಶವನ್ನು ಆಳಿಕೊಂಡಿದ್ದ ಸಾಲಂಕಾಯನ ವಂಶಸ್ಥರನ್ನು. ಹರಿಷೇಣನು ಕೃಷ್ಣಾ ಮತ್ತು ಗೋದಾವರಿ ನಡುವೆ ಇರುವ ಪ್ರದೇಶ ವೆಂಗಿ ಎಂದು ಕರೆದಿದ್ದಾನೆ. ಇದನ್ನು ಪಲ್ಲವ ಶಾಸನಗಳಲ್ಲಿ ವೆಂಗಿರಾಷ್ಟ್ರ ಎಂದೂ ಕರೆಯಲಾಗಿದೆ. ವೆಂಗಿ ಎಂಬ ಹೆಸರು ನಿರ್ದಿಷ್ಟ ಅರ್ಥದಲ್ಲಿ ರಾಜಧಾನಿಗೂ ವಿಶಾಲಾರ್ಥದಲ್ಲಿ ಒಂದು ರಾಷ್ಟ್ರ, ದೇಶ, ಮಂಡಲಕ್ಕೂ ಅನ್ವಯಿಸುತ್ತಿದ್ದಂತೆ ಕಾಣುತ್ತದೆ. ಗೋದಾವರಿ ಮತ್ತು ಕೃಷ್ಣಾನದಿಗಳ ನಡುವೆ ಇರುವ ಪ್ರದೇಶಕ್ಕೆ ಮಾತ್ರ ವೆಂಗಿಯೆಂದೂ ಗೋದಾವರಿಯಿಂದ ಕಳಿಂಗದವರೆಗಿರುವ ಪ್ರದೇಶಕ್ಕೆ ಆಂಧ್ರವೆಂದೂ ಕರೆಯುತ್ತಿದ್ದರೆಂದುತಿಳಿದು ಬರುತ್ತದೆ. ವೆಂಗಿಯನ್ನು ಸಾತವಾಹನರ ಸಾಮಂತ ಅರಸನಾದ ಸಾಲಂಕಾಯನ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ. ವಿಜಯದೇವ ವರ್ಮ ವೆಂಗಿಯಲ್ಲಿ ಅಧಿಕಾರ ಸ್ಥಾಪಿಸಿದ. ಅವನ ಅನಂತರ ಸಮುದ್ರಗುಪ್ತನ ಸಮಕಾಲೀನನಾದ ಹಸ್ತಿವರ್ಮ ಮೊದಲಾದವರು ಆಳಿದ ತರುವಾಯ ವಿಜಯ ಸ್ಕಂದನ ಆಳಿಕೆಯಲ್ಲಿ ಪಲ್ಲವರಿಂದ ಸೋಲಿಸಲ್ಪಟ್ಟರು. ಅನಂತರ ಪಲ್ಲವರಿಂದ ವಿಷ್ಣುಕುಂಡಿ ವಂಶಜರು ವೆಂಗಿಯ ಸ್ವಾತಂತ್ರ್ಯ ಪಡೆದು 5ನೆಯ ಶತಮಾನದ ಆದಿ ಭಾಗದವರೆಗೂ ಲೆಂಡಲೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ ವಿಷಯ ಅನೇಕ ಶಾಸನಗಳಿಂದ ತಿಳಿಯುತ್ತದೆ. ಇವರು ವೆಂಗಿಯನ್ನು 150 ವರ್ಷಗಳವರೆಗೂ ಆಳಿದರು. ಚಳುಕ್ಯರ ಎರಡನೇ ಪೊಲೆಕೇಶಿ ವಿಷ್ಣುಕುಂಡಿ 4ನೆಯ ಮಾಧವನನ್ನು ಸೋಲಿಸಿ ವೆಂಗಿ ರಾಜ್ಯವನ್ನು ವಶಪಡಿಸಿಕೊಂಡು ಅಲ್ಲಿ ತನ್ನ ತಮ್ಮ ಕುಬ್ಜವಿಷ್ಣುವರ್ಧನನನ್ನು ನೇಮಿಸಿದ. ಎಂದು ತಿಳಿದು ಬರುತ್ತದೆ.
ಸು. ನಾಲ್ಕನೇ ಶತಮಾನದಿಂದ ಆರಂಭಗೊಂಡು ಆರನೇ ಶತಮಾನದ ಅವಧಿಯಲ್ಲಿ ಕರ್ನಾಟಕವನ್ನೊಳಗೊಂಡುಕ್ಷಿಣದಲ್ಲಿ ಎಲ್ಲಾ ಭಾಷಾ ವಿಕಾಸ ಅತ್ಯಂತ ಚುರುಕಾಗಿ ನಡೆಯಿತು. ಸುಮಾರು ಮೂರು-ನಾಲ್ಕನೇ ಶತಮಾನದಲ್ಲಿ ಹೆಚ್ಚಿನವರೆಲ್ಲಾ ಬೌದ್ಧಧರ್ಮಕ್ಕೆ ಬದ್ಧರಾಗಿ, ಬ್ರಾಹ್ಮೀಲಿಪಿಯನ್ನು ಬಳಸಿ, ಪ್ರಾಕೃತದಲ್ಲಿ ಶಿಲಾಶಾಸನಗಳನ್ನು ಹಾಕಿಸಿದರು. ಆದರೆ ಅದು ಹೆಚ್ಚು ಸಮಯ ನಡೆಯಲೇ ಇಲ್ಲ. ಕೆಲವು ದಶಕಗಳು ಕಳೆಯುವುದರೊಳಗೆ ಈ ಬೌದ್ಧಧರ್ಮದಿಂದ ದೂರ ಸರಿದು ಸಾಹಿತ್ಯಿಕ ಮತ್ತು ರಾಜಕೀಯ ಆಡಳಿತಾತ್ಮಕ ಶಾಸನಗಳನ್ನು ಹಾಕಿಸ ತೊಡಗಿ ವ್ಯವಹಾರ ಮಾಧ್ಯಮವನ್ನೂ ಸಂಸ್ಕೃತಕ್ಕೆ ಬದಲಿಸಿಕೊಂಡರು.ಆದರೆ ಪ್ರಾಕೃತ ಭಾಶಃಎಯನ್ನು ಬರೆಯಲಿಕ್ಕೆ ಬಳಸುತ್ತಿದ್ದ ಬ್ರಾಹ್ಮೀಲಿಪಿಯನ್ನು ಶಿವಸ್ಕಂಧವರ್ಮನ ಕಾಲದ ತನಕ ಮುಂದುವರಿಸಿ ನಾಲ್ಕನೇ ಶತಮಾನದಲ್ಲಿ ಅದನ್ನು ಕೈಬಿಟ್ಟು, ಬ್ರಾಹ್ಮೀಯಿಂದ ಸ್ವತಂತ್ರವಾಗುತ್ತಿದ್ದ ಸ್ಥಳೀಯ ಲಿಪಿಯನ್ನು ಇವರು ಬಳಸತೊಡಗಿದರು. ಅಂದರೆ ಅಶೋಕನ ಕಾಲದಲ್ಲಾದ ಅಥವಾ ಅನಂತರ ಧರ್ಮ ಭೀರುಗಳಾದ ಅರಸರಿಂದ ಭಾರತೀಯ ಸಂಸ್ಕೃತಿ ವಿಕಾಸಹೊಂದದೇ ಕೇವಲ ಧಾರ್ಮಿಕತೆ ಬೆಳೆಯಿತು. ಆದರೆ ಇತಿಹಾಸದಲ್ಲಿ ನಮಗೆ ಆಮೇಲೆ ಸಿಗುವುದು ಮೊಘಲರ ಕಾಲದಲ್ಲಿ ಉತ್ತರ ಭಾರತದಲ್ಲಿ ಸಂಪೂರ್ಣವಾಗಿ ನಮ್ಮ ಸಂಸ್ಕೃತಿ , ಆಚಾರ ವಿಚಾರಗಳು ನೆಲಕಚ್ಚಿತು ಅನ್ನ ಬಹುದು. ಆದರೂ ಅಸ್ತಿತ್ವ ಕಳೆದುಕೊಳ್ಳಲಿಲ್ಲ ಪ್ರತಿಭಟನೆ ನಡೆಯುತ್ತಲೇ ಬಂದದ್ದು ಇತಿಹಾಸದಲ್ಲಿ ಕಾಣ ಸಿಗುತ್ತದೆ. ಅದೇನೇ ಇರಲಿ ದಕ್ಷಿಣದಲ್ಲಿ ಬ್ರಾಹ್ಮಿ ತನ್ನ ಅಸ್ತಿತ್ವವನ್ನು ಅತಿ ಶೀಘ್ರದಲ್ಲಿ ಕಳೆದುಕೊಂಡು ಸ್ಥಳೀಯ ಪ್ರಾದೇಶಿಕ ಭಾಷೆಯನ್ನು ಬೆಳೆಸುತ್ತಾ ಬಂದಿತು. ಸಾಲಂಕಾಯನರು ಪ್ರಾಕೃತವನ್ನು ಕಳಚಿಕೊಂಡು ಸಂಸ್ಕೃತಕ್ಕೆ ಪರಿವರತನೆ ಮಾಡಿಕೊಂಡು ಆಮೇಲೆ ಸ್ಥಳೀಯತೆಯನ್ನು ಪ್ರತಿನಿಧಿಸುವಲ್ಲಿ ಮಹತ್ವದ ಪಾತ್ರವಹಿಸಿರುವುದರಿಂದ ಅವರು ಸಂಕ್ರಮಣಕಾರರು ಅನ್ನಿಸಿಕೊಳ್ಳುತ್ತಾರೆ.


No comments:

Post a Comment