Search This Blog

Tuesday 23 January 2018

ಕಾವ್ಯಮೀಮಾಂಸೆಯ - ರಾಜಶೇಖರ

ವಿದ್ಧಶಾಲಭಂಜಿಕೆಯ ವ್ಯಾಖ್ಯಾನಕಾರ ನಾರಾಯಣ ದೀಕ್ಷಿತನು ತನ್ನ ವ್ಯಾಖ್ಯಾನದಲ್ಲಿ ಸ್ಮೃತಿಕಾರ ದೇವಲನ ಕುರಿತಾಗಿ ಹೇಳುವಾಗ ಯಾಯಾವರೇಣ ದ್ವಿವಿಧೋ ಗೃಹಸ್ಥೋ ಯಾಯಾವರಃ ಶಾಲೀನಶ್ಚೇತಿ ತಯೋರ್ "ಯಾಯಾವರ:" ಗೃಹಸ್ಥಾಶ್ರಮದಲ್ಲಿ ಎರಡು ವಿಧ. ಯಾಯಾವರ ಮತ್ತು ಶಾಲೀನ ಎಂದು ಹೇಳುತ್ತಾನೆ. ವೈಶ್ವದೇವಾಗ್ನಿ ಅಥವಾ ಧಾರ್ಯಾಗ್ನಿಯನ್ನು ಇಟ್ಟುಕೊಂಡವರು ಯಾಯಾವರರು, ಅಕಾಲಜಲದನಿಂದ ನಾಲ್ಕನೆಯನಾದ ದೌರ್ದುಕಿ ಮತ್ತು ಶೀಲವತಿಯರ ಮಗನೇ ರಾಜಶೇಖರ. ಈತ ತನ್ನನ್ನು ರಾಜಶೇಖರ ಎನ್ನುವ ಬದಲು ತಾನು ಯಾಯಾವರೀಯ ಎನ್ನುವುದಾಗಿ ಕಾವ್ಯಮೀಮಾಂಸೆಯಲ್ಲಿ ಹೇಳಿಕೊಂಡಿದ್ದಾನೆ. ಇವುಗಳಲ್ಲದೇ ರಾಜಶೇಖರನಿಗೆ ರಜನೀವಲ್ಲಭಶಿಖಂಡ, ಸರ್ವಭಾಷಾವಿಚಕ್ಷಣ, ಸರ್ವಭಾಷಾಚತುರ. ಎನ್ನುವುದಾಗಿಯೂ ಹೆಸರುಗಳಿದ್ದುದಾಗಿ ಕರ್ಪೂರ ಮಂಜರಿ ಮತ್ತು ತಿಲಕಮಂಜರಿಯಿಂದ ತಿಳಿದು ಬರುತ್ತದೆ. ಅಪರಾಜಿತ, ಶಂಕರವರ್ಮ, ದೈವಜ್ಞ ಎನ್ನುವ ಈ ಮೂವರು ಕವಿಗಳು ರಾಜಶೇಖರನ ಸಮಕಾಲೀನರು. ರಾಜಶೇಖರನ ತಂದೆ ಚೇದಿರಾಜರ ಅಮಾತ್ಯನಾಗಿದ್ದುದಾಗಿ ತಿಳಿದು ಬರುತ್ತದೆ.   
ಸಂಸ್ಕೃತ ಸಾಹಿತ್ಯದಲ್ಲಿ ಪ್ರೌಢಮಹಾಕವಿಗಳಲ್ಲಿ ಮೂರ್ಧನ್ಯನೂ,  ಗಂಭೀರ ಸಾಹಿತ್ಯದಲ್ಲಿ ವಿದ್ವಾಂಸನೂ, ಅಲಂಕಾರಿಕರಲ್ಲಿ ಪ್ರಮುಖನಾಗಿದ್ದವನು ರಾಜಶೇಖರ. ಬಾಲಭಾರತವೆಂಬ ನಾಟಕವನ್ನೂ, ವಿದ್ದಸಾಲಭಂಜಿಕಾ ಎಂಬ ನಾಟಿಕೆಯನ್ನೂ, ಕರ್ಪೂರಮಂಜರಿ ಎಂಬ ಪ್ರಾಕೃತ ಭಾಷೆಯಲ್ಲಿ ಸಟ್ಟಿಕೆಯನ್ನೂ ರಚಿಸಿದ ರಾಜಶೇಖರ ಪ್ರಖ್ಯಾತನಾಗಿರುವುದು ಹರವಿಲಾಸವೆಂಬ ಮಹಾಕಾವ್ಯ (ಇದು ಈ ತನಕವೂ ದೊರೆತಿಲ್ಲ) ಮತ್ತು ಕಾವ್ಯಮೀಮಾಂಸೆಯೆಂಬ ಸಂಸ್ಕೃತದ ಅಪ್ರತಿಮ ಅಲಂಕಾರಿಕ ಶಾಸ್ತ್ರೀಯ ಗ್ರಂಥದಿಂದ.
       ಕಾವ್ಯಮೀಮಾಂಸೆಯ ಪ್ರಕಾರ ಪರಮೇಶ್ವರನು ಕಾವ್ಯವಿದ್ಯೆಯನ್ನು ಪ್ರಪ್ರಥಮವಾಗಿ ತನ್ನ ಮೊದಲ ಶಿಷ್ಯನಾದ ಸ್ವಯಂಭೂ ಬ್ರಹ್ಮನ ಮಾನಸಪುತ್ರನಾದ ಕಾವ್ಯಪುರುಷನಿಗೆ ಉಪದೇಶಿಸಿದನು. ಕಾವ್ಯಪುರುಷನನ್ನು ಕಾವ್ಯವಿದ್ಯೆಯ ಪ್ರವರ್ತಕನೆಂದು ಭಾವಿಸಲಾಗುತ್ತದೆ. ಕಾವ್ಯಪುರುಷನು ಕಾವ್ಯವಿದ್ಯೆಯನ್ನು ಸ್ವರ್ಗದಲ್ಲಿರುವ ತನ್ನ ಹದಿನೆಂಟು ಶಿಷ್ಯರಿಗೆ ಹದಿನೆಂಟು ಭಾಗವಾಗಿ ಉಪದೇಶಿಸಿದನು. ಶಿಷ್ಯರು ಹದಿನೆಂಟು ಭಾಗವುಳ್ಳ ಕಾವ್ಯವಿದ್ಯೆಯ ಒಂದೊಂದು ಭಾಗದಲ್ಲಿ ವಿಶೇಷಜ್ಞಾನವನ್ನು ಪಡೆದು ಪ್ರತ್ಯೇಕವಾದ ಗ್ರಂಥಗಳನ್ನು ರಚಿಸಿದರು. ಅವರಲ್ಲಿ ಸಹಸ್ರಾಕ್ಷನುಕವಿರಹಸ್ಯಎಂಬ ಗ್ರಂಥವನ್ನೂ, ಉಕ್ತಿಗರ್ಭನುಉಕ್ತಿವಿಚಾರವನ್ನೂ, ಸುವರ್ಣನಾಭನುರೀತಿನಿರ್ಣಯವನ್ನೂ, ಪ್ರಚೇತನುಅನುಪ್ರಾಸವನ್ನೂ, ಚಿತ್ರಾಂಗನುಯಮಕ ಮತ್ತು ಚಿತ್ರಕಾವ್ಯವನ್ನೂ, ಆದಿಶೇಷನುಶಬ್ದಶ್ಲೇಷವನ್ನೂ, ಪುಲಸ್ತ್ಯನುಸ್ವಭಾವೋಕ್ತಿಯನ್ನೂ, ಔಪಕಾಯನನುಉಪಮೆಯನ್ನೂ, ಪಾರಾಶರನುಅತಿಶಯೋಕ್ತಿಯನ್ನೂ, ಉತಥ್ಯನುಅರ್ಥಶ್ಲೇಷವನ್ನೂ, ಕುಬೇರನುಉಭಯಾಲಂಕಾರವನ್ನೂ, ಕಾಮದೇವನುವಿನೋದ ತತ್ತ್ವವನ್ನೂ, ಭರತನುನಾಟ್ಯಶಾಸ್ತ್ರವನ್ನೂ, ನಂದಿಕೇಶ್ವರನುರಸಸಿದ್ಧಾಂತವನ್ನೂ, ಬೃಹಸ್ಪತಿಯುದೋಷಪ್ರಕರಣವನ್ನೂ, ಉಪಮನ್ಯುವುಗುಣಸಿದ್ಧಾಂತವನ್ನೂ, ಕುಚುಮಾರನುರಹಸ್ಯ ತಂತ್ರವನ್ನೂ ರಚಿಸಿದರು. ವಿಭಿನ್ನ ವಿಷಯಗಳನ್ನು ನಿರೂಪಿಸುವ ಗ್ರಂಥ ರಚನೆಗಳಿಂದ ಕಾವ್ಯವಿದ್ಯೆಯು ಅನೇಕ ವಿಭಾಗಗಳಲ್ಲಿ ವಿಭಕ್ತವಾಗಿರುವುದರಿಂದ ನಿರೂಪಣೆಯು ನಷ್ಟವಾಯಿತು. ಆದ್ದರಿಂದ ಕಾವ್ಯಶಾಸ್ತ್ರದ ಎಲ್ಲಾ ವಿಚಾರಗಳನ್ನೂ ಸಂಕ್ಷೇಪಿಸಿ ಹದಿನೆಂಟು ಅಧಿಕರಣಗಳುಳ್ಳ ಕಾವ್ಯಮೀಮಾಂಸೆಯನ್ನು ರಚಿಸಿರುವುದಾಗಿ ರಾಜಶೇಖರ ಹೇಳಿಕೊಂಡಿದ್ದಾನೆ.
       ಕಾವ್ಯಮೀಮಾಂಸೆಯ ಹದಿನೆಂಟು ಭಾಗಗಳಲ್ಲಿ ಮೊದಲನೇಯದಾದ ಕಾವ್ಯಪುರುಷೋತ್ಪತ್ತಿ ಪ್ರಕರಣದಲ್ಲಿ ಒಂದು ಕಥಾನಕವಿದೆ. ಬ್ರಹ್ಮನ ವರದಿಂದ ಸರಸ್ವತಿಯು ಕಾವ್ಯಪುರುಷನಿಗೆ ಜನ್ಮವಿತ್ತಳಂತೆ. ಹುಟ್ಟಿದ ಕೂಡಲೇ ಕಾವ್ಯಪುರುಷನು ಸರಸ್ವತಿಯ ಪಾದಗಳಿಗೆ ನಮಸ್ಕರಿಸಿ ಛಂದೋಬದ್ಧವಾದ ವಾಣಿಯಲ್ಲಿ ಹೀಗೆ ಹೇಳಿದನು.
ಯದೇತದ್ವಾಙ್ಮಯಂ ವಿಶ್ವಮರ್ಥಮೂರ್ತ್ಯಾ ವಿವರ್ತತೇ |
ಸೋಽಸ್ಮಿ ಕಾವ್ಯಪುಮಾನಂಬ ಪಾದೌ ವಂದೇಯ ತಾವಕೌ ||
- ಅಮ್ಮಾ, ಸಕಲ ವಾಞ್ಮಯ ಪ್ರಪಂಚವನ್ನು ಅರ್ಥರೂಪದಲ್ಲಿ ಪರಿಣಿತವನ್ನಾಗಿ ಮಾಡುವ ಕಾವ್ಯಪುರುಷನು ನಿನ್ನ ಚರಣಗಳಿಗೆ ವಂದಿಸುತ್ತಾನೆ.
       ರೀತಿಯ ಛಂದೋಬದ್ಧವಾದ ವಾಣಿಯು ಇಲ್ಲಿಯವರೆಗೆ ವೇದಗಳಲ್ಲಿ ಮಾತ್ರ ಉಪಲಬ್ಧವಿದ್ದರೂ, ಈಗ ಅದಕ್ಕೆ ಸಮಾನವಾಗಿ ಸಂಸ್ಕೃತದಲ್ಲಿ ಶ್ರುತವಾದುದಕ್ಕೆ ಸರಸ್ವತಿ ಹರ್ಷಗೊಂಡು ಕಾವ್ಯಪುರುಷನನ್ನು ಛಂದೋಬದ್ಧವಾಣಿಯ ಆದ್ಯಪ್ರವರ್ತಕನಾಗೆಂದು ಹರಸಿದಳು. ಹೀಗೆ ಸರಸ್ವತಿಯು ತನ್ನ ಪುತ್ರನಿಗೆ ಆಶೀರ್ವದಿಸಿ ಒಂದು ವೃಕ್ಷದ ಕೆಳಗೆ ಶಿಶುವನ್ನು ಮಲಗಿಸಿ ಆಕಾಶಗಂಗೆಯಲ್ಲಿ ಸ್ನಾನಕ್ಕೆ ತೆರಳಿದಳಂತೆ.(ಪಾರ್ವತಿಯ ಕಥೆಯೂ ಅದೇ. ಮಣ್ಣಿನಿಂದ ಬಾಲಕನನ್ನು ಸೃಷ್ಟಿಸಿ ಸೀದಾ ಮೀಯಲು ಹೋದಳು.) ವೇಳೆಗೆ ನಿತ್ಯಕರ್ಮಾಚರಣೆಗಾಗಿ ಹೊರಟಿದ್ದ ಶುಕ್ರಾಚಾರ್ಯನು ಸೂರ್ಯತಾಪದಿಂದ ಬಳಲಿದ್ದ ಅನಾಥ ಶಿಶುವನ್ನು ಕಂಡು ತನ್ನ ಆಶ್ರಮಕ್ಕೆ ತೆಗೆದುಕೊಂಡು ಹೋದನು. ಕಾವ್ಯಪುರುಷನ ಪ್ರೇರಣೆಯಿಂದ ಶುಕ್ರನ ಹೃದಯದಿಂದ ಸ್ತುತಿಯೊಂದು ಹೊರಟಿತಂತೆ.
ಯಾ ದುಗ್ಧಾಪಿ ದುಗ್ಧೇನ ಕವಿದೋಗ್ಧೃಭಿರನ್ವಹಮ್ |
ಹೃದಿ ನಃ ಸನ್ನಿಧತ್ತಾಂ ಸಾ ಸೂಕ್ತಿಧೇನುಃ ಸರಸ್ವತೀ ||
- ಪ್ರತಿನಿತ್ಯವೂ ಕವಿಗಳೆಂಬ ಗೋಪಾಲಕರು ಹಾಲು ಕರೆಯುವ ಸೂಕ್ತಿಗಳೆಂಬ ಕಾಮಧೇನುವಾದ ಸರಸ್ವತಿಯು ನಮ್ಮ ಹೃದಯದಲ್ಲಿ ವಾಸಿಸಲಿ.
       ಅದು ಕಡೆಯ ಕಥೆಯಾದರೆ, ಈಚೆ ಸರಸ್ವತಿಯು ಮಿಂದು ಬಂದಾಗ ತನ್ನ ಪುತ್ರನನ್ನು ಕಾಣದೇ ದುಃಖದಿಂದ ಪರಿತಪಿಸಿದಳು. ವೇಳೆಗೆ ಅಲ್ಲಿಗಾಗಮಿಸಿದ ವಾಲ್ಮೀಕಿಯು ನಡೆದ ವಿಷಯವನ್ನು ತಿಳಿಸಿ ಭಾರ್ಗವನ ಆಶ್ರಮದ ಮಾರ್ಗವನ್ನು ಸರಸ್ವತಿಗೆ ತಿಳಿಸಿದ. ತನ್ನ ಪುತ್ರನಿರುವ ಸ್ಥಾನವನ್ನು ಹೇಳಿರುವ ಕಾರಣದಿಂದ, ಸರಸ್ವತಿ ಕೃತಜ್ಞತಾಭಾವದಿಂದ ವಾಲ್ಮೀಕಿಗೆ ಛಂದೋಮಯ ವಾಣಿಯಲ್ಲಿ ಕಾವ್ಯರಚನೆ ಮಾಡಲು ವರವಿತ್ತಳು. ಸರಸ್ವತಿಯ ಆದೇಶವನ್ನು ಪಡೆದು ತನ್ನ ಆಶ್ರಮಕ್ಕೆ ಬರುತ್ತಿರುವಾಗ ಬೇಡನೊಬ್ಬನ ಬಾಣದಿಂದ ಹೆಣ್ಣು ಕ್ರೌಂಚ ಪಕ್ಷಿ ಹತವಾದದ್ದನ್ನೂ, ಅದನ್ನು ನೋಡಿ ದುಃಖದಿಂದ ಆಕ್ರಂದಿಸುವ ಗಂಡುಪಕ್ಷಿಯನ್ನು ಕಂಡು ಶೋಕತಪ್ತಗೊಂಡ ವಾಲ್ಮೀಕಿಯ ಮುಖದಿಂದ ಶೋಕಮಯ ವಾಣಿಯು ಹೊರಹೊಮ್ಮಿತು.
ಮಾ ನಿಷಾದ ಪ್ರತಿಷ್ಠಾಂ ತ್ವಮಾಗಮಃ ಶಾಶ್ವತೀಃ ಸಮಾಃ |
ಯತ್ ಕ್ರೌಂಚಮಿಥುನಾದೇಕಮವಧಿಃಕಾಮಮೋಹಿತಮ್ ||
      ಇದು ಛಂದಸ್ಸಿನ ದೃಷ್ಟಿಯಿಂದ ನಿರ್ದುಷ್ಟವೆನಿಸಿದರೂ, ಅರ್ಥದ ದೃಷ್ಟಿಯಿಂದ ಅಪೂರ್ವ ಮಹತ್ವದ್ದೆಂದೇನೂ ಭಾಸವಾಗುವುದಿಲ್ಲ. ಗೋವಿಂದರಾಜನೇ ಇತ್ಯಾದಿ ಕೆಲ ವ್ಯಾಖ್ಯಾನಕಾರರುಮಾಎಂದರೆ ಲಕ್ಷ್ಮಿಯೆಂದೂ, ಮಾನಿಷಾದ ಎಂದರೆ ಲಕ್ಷ್ಮಿನಿವಾಸನಾದ ವಿಷ್ಣುವೆಂದೂ ಬಗೆಬಗೆಯ ಅರ್ಥಗಳನ್ನು ತೋರಿಸಿ ರಾಮಾಯಣಕ್ಕೆ ಮಂಗಳಶ್ಲೋಕವೆನಿಸುವ ಔಚಿತ್ಯ ಅದರಲ್ಲುಂಟೆಂದು ವಿವರಣೆ ನೀಡಿದ್ದಾರೆ. ಇದು ಪಂಡಿತರ ವ್ಯಾಖ್ಯಾನಕೌಶಲವೇ ಹೊರತೂ ಮತ್ತೇನೂ ಅಲ್ಲ. ಅದೇನೇ ಇದ್ದರೂ ಹೀಗೆ ಸ್ವಾಭಾವಿಕ ವಾಣಿಯು ಹೊರಹೊಮ್ಮಿದ ನಂತರ ವಾಲ್ಮೀಕಿ ಭೂಲೋಕದಲ್ಲಿ ಕಾವ್ಯಪರಂಪರೆಯ ಪ್ರಥಮ ಪ್ರವರ್ತಕನೆಂದು ಹೆಸರಾಗಿ ಆದಿಕವಿಯೆಂದು ಪ್ರಸಿದ್ಧನಾದನು.
       ಇದೇ ವೇಳೆ ಅತ್ತ ಬ್ರಹ್ಮಲೋಕದಲ್ಲಿ ಋಷಿಗಳಿಗೂ ದೇವತೆಗಳಿಗೂ ಯಾವುದೋ ವಿಷಯದಲ್ಲಿ ವಿವಾದವುಂಟಾಯಿತಂತೆ. ಆಗ ಬ್ರಹ್ಮನು ಸರಸ್ವತಿಯನ್ನು ವಿವಾದ ನಿರ್ಣಾಯಕಳಾಗಿ ನೇಮಿಸಲುದ್ದೇಶಿಸಿದ. ಕಾರಣ, ಸರಸ್ವತಿಯು ಕಾವ್ಯಪುರುಷನನ್ನು ಭೂಲೋಕದಲ್ಲಿಯೇ ಬಿಟ್ಟು ಬ್ರಹ್ಮಲೋಕಕ್ಕೆ ಹೊರಟಳು. ತನ್ನನ್ನು ಒಬ್ಬಂಟಿಯಾಗಿ ಬಿಟ್ಟುಹೋದುದರಿಂದ ಸಿಟ್ಟಿಗೆದ್ದ ಕಾವ್ಯಪುರುಷ ತನ್ನ ಸ್ಥಾನವನ್ನು ಬಿಟ್ಟು ಹೊರಟು ಹೋದನಂತೆ.
       ಕಾವ್ಯಪುರುಷ ಮರ್ತ್ಯಲೋಕವನ್ನು ತೊರೆದು ಹೋಗುತ್ತಿರುವುದನ್ನು ಕಂಡ ಪಾರ್ವತಿ ಅವನನ್ನು ವಶಪಡಿಸಿಕೊಳ್ಳಲು ಸಾಹಿತ್ಯವಧುವೆಂಬ ಸ್ತ್ರೀಯನ್ನು ಸೃಷ್ಟಿಸಿ ಕಾವ್ಯಪುರುಷನನ್ನು ಮರಳಿ ತಿರುಗಿ ಬರುವಂತೆ ಮಾಡೆಂದು ಆದೇಶಿಸಿದಳು. ಇನ್ನೊಂದೆಡೆ ಮುನಿಗಳನ್ನು ಕುರಿತು ಕಾವ್ಯಪುರುಷನನ್ನು ತೃಪ್ತಗೊಳಿಸಲು ಅವನನ್ನು ಹಿಂಬಾಲಿಸಿ ಸ್ತುತಿಸುವಂತೆ ಹೇಳಿದಳು.
ಸಾಹಿತ್ಯವಧುವಿನಿಂದ ಹಿಂಬಾಲಿಸಲ್ಪಟ್ಟ ಕಾವ್ಯಪುರುಷನು ಪೂರ್ವ ದಿಕ್ಕಿಗೆ ಸಂಚರಿಸಿದನು. ಅಂಗ, ವಂಗ, ಬ್ರಹ್ಮ, ಪುಂಡ್ರ ಮೊದಲಾದ ಜನಪದಗಳು ದಿಕ್ಕಿನಲ್ಲಿದ್ದವು. ಕಾವ್ಯಪುರುಷನನ್ನು ಪ್ರಸನ್ನಗೊಳಿಸಲು ಸಾಹಿತ್ಯವಧುವು ಆಯಾ ಜನಪದಗಳ ವೇಷವನ್ನು ಧರಿಸಿದಳು. ಪ್ರಾಂತ್ಯದ ರಚನಾ ಪ್ರವೃತ್ತಿಓಢ್ರಮಾಗಧಿಎಂದು ಹೆಸರು ಪಡೆಯಿತು. ಸಾಹಿತ್ಯ ವಧುವು ದೇಶದಲ್ಲಿ ಪ್ರದರ್ಶಿಸಿದ ನೃತ್ಯಗಾನಾದಿಗಳುಭಾರತೀ ವೃತ್ತಿಎಂದು ಹೆಸರಾದವು. ಪೂರ್ವದೇಶದಲ್ಲಿ ಸಾಹಿತ್ಯವಧುವು ವೇಷರಚನಾದಿಗಳ ಮೂಲಕ ಎಷ್ಟೇ ಪ್ರಯತ್ನಪಟ್ಟರೂ ಕಾವ್ಯಪುರುಷ ಅವಳೆಡೆ ಆಕರ್ಷಿತನಾಗಲಿಲ್ಲ. ಆಗ ಅವಳು ದೀರ್ಘಸಮಾಸ, ಅನುಪ್ರಾಸ, ಯೋಗವೃತ್ತಿಗಳಿಂದ ಹೇಳಿದ ವಚನವುಗೌಡೀಶೈಲಿಯೆಂದು ಪ್ರಸಿದ್ಧವಾಯಿತು. ಆಯಾ ದೇಶದ ವೇಷವಿನ್ಯಾಸ ಕ್ರಮವನ್ನುಪ್ರವೃತ್ತಿಎಂದೂ, ನೃತ್ಯಗಾನಾದಿ ವಿನ್ಯಾಸಗಳನ್ನುವೃತ್ತಿಎಂದೂ, ಕಾವ್ಯರಚನಾವಿನ್ಯಾಸವನ್ನುರೀತಿ ಅಥವಾ ಶೈಲಿಎಂದೂ ಅಲಂಕಾರಿಕರು ಕರೆದಿದ್ದಾರೆ.

(**ನನ್ನದು ಮಾತ್ರವಲ್ಲ ............)

No comments:

Post a Comment