Search This Blog

Saturday 6 January 2018

ಏಕಷಷ್ಟಿರಾತ್ರ ಯಾಗ - ಯೂಪಸ್ತಂಭ

ಏಕಷಷ್ಟಿರಾತ್ರ ಯಾಗ - ಯೂಪಸ್ತಂಭ
ಮಾಲವದ ಸೋಮ(ಶ್ರೀ)ಯ ಯೂಪಸ್ತಂಭದ ಶಾಸನ ಇದು, ಕ್ರಿಸ್ತ ಶಕ 282 ನೇ ಇಸವಿಯ ಶಾಸನ. ಇದು ನಾಂದ್ಸಾ ಎನ್ನುವ ಗ್ರಾಮದಲ್ಲಿದೆ. ಚೈತ್ರಪೌರ್ಣಮಿಯದಿನ ನಡೆಸಿದ ಯಾಗವೊಂದರ ಕುರಿತು ಈ ಶಾಸನ ತಿಳಿಸುತ್ತದೆ. ಏಕಷಷ್ಟಿರಾತ್ರ ಎನ್ನುವ ಯಾಗವೊಂದನ್ನು ಮಾಡಲಾಗಿತ್ತು. ಈ ಯಾಗದ ಮೊದಲ ದಿನ "ಪ್ರಾಯಣೀಯ ಯಾಗ" ಎರಡನೇ ದಿನ "ಚತುರ್ವಿಂಶ ಯಾಗ" ಮೂರನೆಯ ದಿನದಿಂದ 20ನೇ ದಿನದ ತನಕ "ತ್ರಯೋ ಅಭಿಪ್ಲವಯಾಗ" ಆರುದಿನಗಳಿಗೊಮ್ಮೆ ಕೊನೆಗೊಳ್ಳುವ ಯಾಗ ಇದು. 21 ರಿಂದ 26 ದಿನಗಳವರೆಗೆ "ಪೃಷ್ಟ್ಯಯಾಗ". 27 ರಿಂದ 35ನೇ ದಿನದವರೆಗೆ "ನವರಾತ್ರ ಯಾಗ" 36 ರಿಂದ 41 ದಿನಗಳ ತನಕ "ಪ್ರತಿಲೋಮ ಪೃಷ್ಟ್ಯಾಯಾಗ" 42 ರಿಂದ 47ನೇ ದಿನದವರೆಗೆ "ಅಭಿಪ್ಲವ ಯಾಗ" 48ನೇ ದಿನ "ಆಯುಷ್ ಯಾಗ" 49ನೇ ದಿನ "ಗೋ ಯಾಗ" 50 ರಿಂದ 59ನೇ ದಿನದ ತನಕ "ದಶರಾತ್ರ ಯಾಗ" 60ನೇ ದಿನ ಮಹಾವ್ರತಯಾಗ. 61ನೇ ದಿನ ಉದಾಯನೀಯ ಯಾಗವನ್ನು ಮಾಡಲಾಗುತ್ತದೆ. ಇದರಲ್ಲಿ ಪಂಚವಿಂಶ ಬ್ರಾಹ್ಮಣದಲ್ಲಿ ಕೊನೆಯದಿನದ ಉದಾಯನೀಯವನ್ನು ಹೇಳಗಿದ್ದು, ಅದೇ ಯಾಗದ ವಿವರಣೆ ಕಾತ್ಯಾಯನ ಶ್ರೌತ ಸೂತ್ರದ ೨೫, ೧೮ : ೨೭ - ೨೪ ರಲ್ಲಿ ಹೇಳಲಾಗಿದೆ. ಕೌಶೀತಕೀ ಬ್ರಾಹ್ಮಣ ಮತ್ತು ಐತರೇಯ ಬ್ರಾಹ್ಮಣ, ಶಾಂಖಾಯನ ಶ್ರೌತಸೂತ್ರದ ೯: ೨೨ ಈ ಯಾಗಗಳಕುರಿತಾಗಿ ಬಂದಿದೆ. ಇದು ಇದ್ದದ್ದರಲ್ಲಿ ಅತ್ಯಂತ ದೀರ್ಘವಾದ ಸತ್ರವಾಗಿದ್ದು ದ್ವಾದಶರಾತ್ರಯಾಗವನ್ನು ಮಥುರಾ ಸಮೀಪದ ಇಸಾಪುರದಲ್ಲಿ ಹುವಿಷ್ಕನು ದ್ರೋಣಲ ಎನ್ನುವ ಋತ್ವಿಜನಿಂದ ಮಾಡಿಸಿದನೆಂದು ತಿಳಿದು ಬರುತ್ತದೆ.
ಈ ಶಾಸನದ ಮೊದಲ ಸಾಲಿನಲ್ಲಿ ಅವತಾರಯಿತ್ವಾ ಎಂದು ಬಂದಿದ್ದು ಅವತಾರ್ಯ ಎಂದಾಗಬೇಕು.

No comments:

Post a Comment