Search This Blog

Sunday 7 January 2018

ಗೋನಂದ ವಂಶದವರನ್ನು ಹೂಣರೆಂದು ಬಿಂಬಿಸಿದ ವಿದೇಶಿ ಇತಿಹಾಸಕಾರರು..

ಜುಗೋಪಿ ಗೋಪಾದಿತ್ಯಾಖ್ಯ ಕಾಶ್ಮೀರೇಂದ್ರ ಜಿಗೀಷಯಾ | 
ಯುಧಿಷ್ಠಿರ ಪ್ರಪೌತ್ರಂ ಹಿ ಗಾಂಧಾರಾಧಿಪತಿಸ್ತದಾ | 2 : 145
ವಸನ್ನ ಪ್ರಾಪ್ತ ಸಾಮ್ರಾಜ್ಯಃ ಸ ತತ್ರ ತನಯಂ ಕ್ರಮಾತ್ |
ಅವಾಪ ಲಕ್ಷಣೈರ್ದಿವ್ಯೈರಮೋಘಂ ಮೇಘವಾಹನಮ್ || 2 : 146 - ಕಲ್ಲಣನ ರಾಜತರಂಗಿಣೀ
ವಿದೇಶೀ ಇತಿಹಾಸಕಾರರ ದಾಳಿ ವಿದೇಶೀ ರಾಜರುಗಳ ದಾಳಿಗಿಂತ ಹೆಚ್ಚು ಘಾಸಿಗೊಳಿಸಿದ್ದು ನಮ್ಮ ಇತಿಹಾಸಗಳಿಂದ ಕಂಡು ಬರುತ್ತದೆ. ಭಾರತದ ಇತಿಹಾಸವನ್ನು ಪ್ರಾಚೀನತೆಯಿಂದ ಎಳೆದು ತಂದು ಸಾವಿರಾರು ವರ್ಷಗಳಷ್ಟು ಅರ್ವಾಚೀನಗೊಳಿಸಿದ್ದು ಇದೇ ಯಾತ್ರಿಕರು. ಭಾರತದ ರಾಜರುಗಳ ಹೆಸರನ್ನು ತಮಗೆ ಬೇಕಾದಂತೆ. ತಮ್ಮ ಉಚ್ಚಾರಣೆಗೆ ತಕ್ಕುದಾದಂತೆ ಅಪಭ್ರಂಶಗೊಳಿಸಿ. ಅತ್ಯಂತ ಸಮೃದ್ಧ ನಾಗರಿಕತೆಯ ಇತಿಹಾಸವನ್ನು ತಮಗೆ ತೋಚಿದಂತೆ ಬರೆದು ಇಂದಿನ ನಮ್ಮ ಜನಾಂಗ ಅದನ್ನೇ ಉರು ಹೊಡೆದುಕೊಳ್ಳುವಂತೆ ಮಾಡುವುದರಲ್ಲಿ ಮೆಗಾಸ್ತನೀಸ್ ನಂತವರು ಶ್ರಮಿಸಿದರು.
ಶ್ರೇಷ್ಟ ಕ್ಷತ್ರಿಯ ಗೋನಂದ ವಂಶದ 80ನೇ ದೊರೆ ಮೇಘವಾಹನ, ಇವನ ಮಗ 81ನೇ ದೊರೆ ಪ್ರವರಸೇನ. ಈ ಪ್ರವರಸೇನನನ್ನು ಶ್ರೇಷ್ಠಸೇನ ಅಥವಾ ತುಂಜೀನ ಎನ್ನುವುದಾಗಿ ಕರೆಯುತ್ತಿದ್ದರು ಎಂದು ಕಲ್ಲಣನ ರಾಜತರಂಗಿಣಿಯಿಂದ ತಿಳಿದು ಬರುತ್ತದೆ. (ಕಲ್ಲಣನ ರಾಜತರಂಗಿಣೀ ೩ : ೩೧.). ಈ ಪ್ರವರಸೇನನಿಗೆ ಇಬ್ಬರು ಮಕ್ಕಳು ಹಿರಣ್ಯ ಮತ್ತು ತೋರಮನ. ಇವರಲ್ಲಿ ಹಿರಿಯನಾದ ಹಿರಣ್ಯನು ಕ್ರಿಸ್ತ ಪೂರ್ವ 16 ರಿಂದ ಕ್ರಿ ಶ 14ರ ತನಕ ರಾಜ್ಯಭಾರ ಮಾಡಿದ ಎಂದು ವಿದೇಶೀ ಇತಿಹಾಸಕಾರರ ಬಣ್ಣನೆ. (ಆದರೆ ಕ್ರಿಸ್ತಪೂರ್ವ 704ರಿಂದ ಕ್ರಿ.ಪೂ.634ರ ತನಕ ಆಡಳಿತ ನಡೆಸಿದ್ದರು. ಅಂದರೆ ಅಲ್ಲಿಗೆ ಸುಮಾರು 600ಕ್ಕೂ ಹೆಚ್ಚು ವರ್ಷಗಳನ್ನು ಎಳೆದು ತಂದು ಬಿಟ್ಟರು.) ಆಗ ಎರಡನೆಯವನಾದ ತೋರಮನ ಯುವರಾಜನಾಗಿದ್ದ. ಬಲನ ಮುದ್ರೆಯನ್ನು ಹೊಂದಿದ್ದ ನಾಣ್ಯದ ಬದಲಾಗಿ ತನ್ನ ಚಿತ್ರದ ನಾಣ್ಯವನ್ನು ಚಲಾವಣೆಗೆ ತಂದ. ಇದು ಹಿರಣ್ಯನಿಗೆ ಗೊತ್ತಾಗಿ ತೋರಮನನನ್ನು ಜೈಲಿಗೆ ಹಾಕಿದ. ಆತ ಅಲ್ಲಿಯೇ ಸತ್ತು ಹೋದ. ವಿದೇಶೀ ಇತಿಹಾಸಕಾರರಿಗೆ ಇದೇ ಅತ್ಯಂತ ಆಕರ್ಷಕವಾಗಿ ಇತಿಹಾಸದ ಅಧ್ಯಯನಕ್ಕೆ ನಾಂದಿಯಾಯಿತು. (ತೋರಮನನ ಮುದ್ರೆ ಇರುವ ನಾಣ್ಯ ಅಳಿಸದೇ ಹಾಗೇ ಉಳಿದಿರುವುದು ನಮ್ಮ ತಥಾಕಥಿತ ಮೆಗಾಸ್ತನೀಸನಂತಹವರಿಗೆ ಸಿಕ್ಕಿತು ) ಅವರು ಈ ಗೋನಂದ ವಂಶೀಯರನ್ನೇ ಹೂಣರೆಂದು ತಿಳಿದು ಇತಿಹಾಸವನ್ನೇ ಬದಲಾಯಿಸಿ ಬಿಟ್ಟರು. ಇಷ್ಟಕ್ಕೆ ಬಿಡದ ಅವರು ತೋರಮಾನನನ್ನೇ ಹೂಣ ವಂಶದವನೆಂದು ಮಿಹಿರಕುಲದ ಸ್ಥಾಪಕನೆಂದು, ಪ್ರಚಾರಗೊಳಿಸಿದರು. ಈತ ಮಧ್ಯ ಭಾರತ ಅಥವಾ ಪಶ್ಚಿಮ ಭಾರತದ ದೊರೆ ಎಂದು ಬಿಟ್ಟರು ಆದರೆ ಗೋನಂದ ವಂಶ ಇದ್ದದ್ದು ಕಾಶ್ಮೀರದಲ್ಲಿ. ಇವರೆಲ್ಲಾ ಕಾಶ್ಮೀರದ ದೊರೆಗಳು. ಹಿರಣ್ಯನು ಮಿಹಿರಕುಲದ 19ನೇ ಯವನೂ, 64ನೇ ಕಾಶ್ಮೀರದ ದೊರೆಯಾಗಿದ್ದ. ಕ್ರಿ.ಪೂ 704 ರಿಂದ ಕ್ರಿ.ಪೂ.634ರ ತನಕ ಆಳಿದ. ಆದರೆ ಎಂದಿಗೂ ತೋರಮನ ರಾಜ್ಯವಾಳಲೇ ಇಲ್ಲ. ತೋರಮನನ ಮಡದಿ ಅಂಜನಾ ದೇವಿ ಮತ್ತು ಆತನ ಮಗ ವ್ರಜೇಂದ್ರ. ಅಂಜನಾ ದೇವಿ ಇಕ್ಷ್ವಾಕು ವಂಶದವಳಾಗಿದ್ದಳು ಎಂದು ತಿಳಿದು ಬರುತ್ತದೆ. ಆದರೆ ನಮ್ಮ ಇತಿಹಾಸಕಾರರ ಕಪೋಲಕಲ್ಪಿತ ಇತಿಹಾಸ ನಮಗಿಂದು ಅಧಿಕೃತ ಇತಿಹಾಸವಾಗಿದೆ.

No comments:

Post a Comment