Search This Blog

Thursday 4 January 2018

ಪಂಚಾಯತನ ಪೂಜಾ ವಿಧಾನ.

ಹದಿನೈದನೇ ಶತಮಾನದ ಈ ಶಾಸನದ ಲಿಪಿ ಬಂಗಾಳಿ. ಇದು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ವಾರಿಯಲ್ಲಿನ ಶಾಸನ. ಪಂಚಾಯತನ ಪೂಜಾವಿಧಾನದಲ್ಲಿ ನಿರ್ಮಿಸಲಾದ ಮಠ ಒಂದರಲ್ಲಿರುವ ದೇವಾಲಯವನ್ನು ನಿರ್ದೇಶಿಸಲಾಗಿದೆ . ಪಂಚಾಯತನದ ಬಗೆಗೆ ನನಗೆ ಹೆಚ್ಚೇನೂ ತಿಳಿದಿಲ್ಲ. ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು , ಈ ಐದೂ ದೇವತೆಗಳ ಮೂರ್ತಿಗಳಿದ್ದಲ್ಲಿ ಅಥವಾ ಶಿಲೆಗಳಿದ್ದಲ್ಲಿ ಅವರ ಮನೆ ದೇವತೆಯ ಮೂರ್ತಿ ಯಾ ಶಿಲೆಯನ್ನು ಮಧ್ಯದಲ್ಲಿಟ್ಟು ಉಳಿದವುಗಳನ್ನು ಈ ಕೆಳಗಿನ ಕ್ರಮದಲ್ಲಿಡುವುದು ಶಾಸ್ತ್ರ ಪದ್ದತಿ. ಪೂಜೆಗೆ ಸಾಮಾನ್ಯವಾಗಿ ಉತ್ತರ ಅಥವಾ ಪೂರ್ವಕ್ಕೆ ಅಭಿಮುಖವಾಗಿ ಕುಳಿತುಕೊಳ್ಳುವುದು. ದೇವರ ಮಂಟಪ ಪಶ್ಚಿಮ ಅಭಿಮುಖವಾಗಿದ್ದರೆ ಮಂಟಪಕ್ಕೇ ಎದುರಾಗಿ ಪಶ್ಚಿಮಕ್ಕೆ ಆಭಿಮುಖವಾಗಿ ಕುಳಿತುಕೊಳ್ಳಬೇಕಾಗುತ್ತೆ. ಆದ್ದರಿಂದ ದೇವರ ಮಂಟಪವು ಪೂರ್ವ ಅಥವಾ ಉತ್ತರ ಅಭಿಮುಖವಾಗಿ ಇರುವುದು ಒಳ್ಳೆಯದು. ಆಗ ದೇವರ ಮಂಟಪವು ಎಡಕ್ಕೆ ಬರುವಂತೆ ಇದ್ದು ಪೂಜೆಗೆ ಅನುಕೂಲವಾಗುವುದು
ಪಂಚಾಯತನ ದೇವತೆಗಳು ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು. ಇವುಗಳಲ್ಲಿ ಆಯಾ ದೇವತೆಗಳ ಭಕ್ತರು ಮುಖ್ಯ ದೇವತೆಯನ್ನು ಮಧ್ಯದಲ್ಲಿಟ್ಟು ಉಳಿದ ದೇವತೆಗಳನ್ನು ಸುತ್ತಲೂ ಇಟ್ಟು ಪೂಜಿಸಬೇಕು. ಈ ಐದೂ ದೆವತೆಗಳಿಗೆ ಬೇರೆ ಬೇರೆ ಬಗೆಯ ಶಿಲೆಗಳಿವೆ. ಮೂರ್ತಿಗಳ ಬದಲು ಅವುಗಳನ್ನಿಟ್ಟು ಅಭಿಷೇಕ ಪೂಜೆ ಮಾಡುವ ಪದ್ಧತಿಗಳಿವೆ.

ವಿಷ್ಣು ಕೇಂದ್ರ : ಶಿವ -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಗಣಪತಿ ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಸೂರ್ಯ ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ
ಶಿವ ಕೇಂದ್ರ : ವಿಷ್ಣು ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಸೂರ್ಯ- ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಗಣಪತಿ -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.
ಸೂರ್ಯಕೇಂದ್ರ : ಶಿವ -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಗಣಪತಿ -ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; -ವಿಷ್ಣು -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.
ಅಂಬಿಕಾ ಕೇಂದ್ರ : ವಿಷ್ಣು -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಶಿವ -ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಗಣಪತಿ -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ;: ಸೂರ್ಯ- ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.
ಗಣಪತಿ ಕೇಂದ್ರ : ವಿಷ್ಣು -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಶಿವ -ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಸೂರ್ಯ -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ ; ಅಂಬಿಕಾ - ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.

ಶಾಕಾಬ್ದೇ ಲಿಖ್ಯಮಾನೇ ಮುನಿ ರಸ ಮನುಭಿರ್ಮಂಡಪಂ ಶೈಲ ಸಾರೈರ್ಮುಕ್ತೈ ನಿರ್ಮಾಯ ಭ
ಕ್ತ್ಯಾಧೃತ ವಿಬುಧ ಗಣಂ ಶ್ರೀ ಮಹೇಂದ್ರೋತ್ರ ಸಾಕ್ಷಾತ್ ಮಧ್ಯೇ ವಿಷ್ಣುಂ ಕೃಶಾನೋರ್ದ್ದಿ
ಶಿ ದಿವಸ್ಕರಂ ನೈರೃತೇ ವಿಘ್ನರಾಜಂ ವಾಯವ್ಯೇ ಶೈಲಪುತ್ರೀಂ ಹರಹರಿತಿ ಸೌರೈರ್ವಂದಿ
ತಂ ವಿಶ್ವನಾಥಂ ಶ್ರೀ ಗೋವಿಂದ ಮಿಶ್ರಸ್ಯ ನೀಲೋಪಲೇನ ಘಟಿತೋ ಮಠ ಏಶ ಯ
ಸ್ಯ ಸಂಘರ್ಷ್ಣಾದುಪಚಿತಾ ಕಿಲ ನೀಲ ಮೂರ್ತಿಃ ಅತನ್ವತೀ ವತ ವೃತೈವ ಕಲಂಕ ವಾದಂ 
ವಿಂಬೇ ವಿಧೋರ್ವಿಮಲ ಭಾಸಿ ವಿಭಾತಿ ರೇಖಾ || ಶ್ರೀ ಶತಾವಧಾನಸ್ಯ ||

ಇದು ಈ ಮೊದಲೊಮ್ಮೆ ಹಾಕಿದ್ದೆ ಸ್ವಲ್ಪ ಬೇರೆ ರೀತಿಯಲ್ಲಿ.............


No comments:

Post a Comment