Search This Blog

Thursday 18 January 2018

ಬಾಣೋಚ್ಛಿಷ್ಟಂ ಜಗತ್ಸರ್ವಮ್

ಪ್ರಭಾಕರವರ್ಧನನಿಗೆ ಮೂವರು ಮಕ್ಕಳು ರಾಜ್ಯವರ್ಧನ, ಹರ್ಷವರ್ಧನ ಮತ್ತು ರಾಜ್ಯಶ್ರೀ. ಮೌಖರೀ ವಂಶದ ಆವಂತೀವರ್ಮನ ಮಗ ಗೃಹವರ್ಮನ ಹೆಂಡತಿಯಾಗಿ ರಾಜ್ಯಶ್ರೀ ತೆರಳಿದಳು. ಹರ್ಷವರ್ಧನನು ಯಶೋಮತಿ ಎನ್ನುವವಳನ್ನು ವಿವಾಹವಾದ ಬಗ್ಗೆ ತಿಳಿದು ಬರುತ್ತದೆ. ಪ್ರಭಾಕರ ವರ್ಧನ ವಯಸ್ಸಿನ ಪ್ರಭಾವದಿಂದ ಮುದುಕನಾಗಿ ದುರ್ಬಲನಾಗುತ್ತ ಬಂದಾಗ ಅದನ್ನೇ ಕಾಯುತ್ತಾ ಕುಳಿತಿದ್ದ ಹೂಣರು ದಂಡೆತ್ತಿ ಬರುತ್ತಾರೆ, ಆಗ ರಾಜ್ಯವರ್ಧನ ಅವರನ್ನು ಎದುರಿಸಲು ತೆರಳುತ್ತಾನೆ ರಾಜ್ಯವರ್ಧನನ ಜೊತೆ ಹರ್ಷನೂ ತೆರಳುತ್ತಾನೆ. ಇಬ್ಬರೂ ಬಹುದೂರದ ಹಿಮಾಲಯದ ತಪ್ಪಲಿನ ತನಕ ಹೋಗಿ ಅಲ್ಲಿಂದ ರಾಜ್ಯವರ್ಧನ ಒಬ್ಬನೇ ಮುಂದಕ್ಕೆ ಸಾಗಿದನು . ಅಣ್ನನ ಬರುವಿಕೆಯನ್ನು ನೋಡುತ್ತಾ ದಿನಕಳೆದ ಹರ್ಷ ಒಂದು ದಿನ ಆಯಾಸದಿಂದ ಬಳಲಿ ಮಲಗಿರುವಾಗ ಕುರಂಗಕನೆನ್ನುವ ದೂತನಿಂದ ತನ್ನ ತಂದೆ ರೋಗಿಯಾಗಿ ಹಾಸಿಗೆ ಹಿಡಿದ ಬಗ್ಗೆ ತಿಳಿಯುತ್ತಾನೆ.
ಹರ್ಷನು ಬರುತ್ತಿರುವಾಗಲೇ ಹರ್ಷನ ತಾಯಿ ತನ್ನ ಗಂಡನ ಪ್ರಿಸ್ತಿತಿಯಿಂದ ಮಮನೊಂದು ಚಿತಾರೋಹಣ ಮಾಡುತ್ತಾಲೆ ಅದನ್ನು ತಡೆಯಲು ಸಫಲನಾಗಲೇ ಇಲ್ಲ. ಅದೇ ದುಃಖದಿಂದ ಪ್ರಭಾಕರವರ್ಧನನೂ ಸಾಯುತ್ತಾನೆ. ಸರಸ್ವತೀ ನದೀ ದಡದಲ್ಲಿ ಪ್ರಭಾಕರವರ್ಧನನ ಸಂಸ್ಕಾರ ನಡೆಯಿತು ಎನ್ನುವುದಾಗಿ ತಿಳಿದುಬರುತ್ತದೆ. ಆದರೆ ಈ ಸರಸ್ವತಿ ಕನೌಜ್ ಪ್ರದೇಶದಲ್ಲಿ ಹರಿಯುತ್ತಿದ್ದ ಯಾವುದೋ ನದಿ ಇರಬಹುದು. ಅದೇ ಸಮಯಕ್ಕೆ ಹರ್ಷನ ಅಣ್ಣ ರಾಜ್ಯವರ್ಧನ ತಿರುಗಿ ಬರುತ್ತಾನೆ. ಆದರೆ ಅಷ್ಟರಲ್ಲಿಯೇ ತಂಗಿ ರಾಜ್ಯಶ್ರೀಯ ಪರಿಚಾರಕನು ಬಂದು ಗೃಹವರ್ಮನನ್ನು ಮಾಲವದ ದೊರೆಯು ಕೊಂದು ರಾಜ್ಯಶ್ರೀಯನ್ನು ಬಂಧಿಸಿರುವುದನ್ನು ಹೇಳುತ್ತಾನೆ. ರಾಜ್ಯವರ್ಧನನು ಪುನಃಅ ಮಾಲವದ ಮೇಲೆ ಯುದ್ಧ ಮಾಡಿ ಮಾಲವದ ದೊರೆಯನ್ನು ಸೋಲಿಸಿದನು ಆಗ ಮಾಲವದ ದೊರೆ ಉಪಾಯದಿಂದ ರಾಜ್ಯವರ್ಧನನನ್ನು ತನ್ನ ಅರಮನೆಗೆ ಕರೆಸಿ ಅಲ್ಲಿ ಆತನನ್ನು ಕೊಲ್ಲುತ್ತಾನೆ ಆಗ ಅದೇ ಸಮಯದಲ್ಲಿ ಭಂಡಿ ಎನ್ನುವವನು ಮಾಲವದ ರಾಜನನ್ನೂ ಕೊಲ್ಲುತ್ತಾನೆ. ಹರ್ಷನಿಗೆ ಇವೆಲ್ಲವೂ ತಿಳಿದು ತನ್ನ ತಂಗಿಯ ಬಗ್ಗೆ ವಿಚಾರಿಸಿದರೆ ಅಲ್ಲಿ ತಂಗಿ ತಪ್ಪಿಸಿಕೊಂಡಿರುವುದು ತಿಳಿದು ಹುಡುಕಲು ತೆರಳುತ್ತಾನೆ. ಮುಂದೆ ಆತ ಹುಡುಕುತ್ತಾ ಸಾಗುವಾಗ ಶಬರನಾಯಕ ವ್ಯಾಘ್ರಕೇತುವನ್ನು ಮಿತ್ರನನ್ನಾಗಿ ಸಂಪಾದಿಸಿಕೊಳ್ಳುತ್ತಾನೆ. ಮುಂದೆ ಹರ್ಷನ ಬಾಲ್ಯ ಮಿತ್ರ ಮಹಾ ಪಂಡಿತ ಬದ್ಧ ಭಿಕ್ಷು ದಿವಾಕರ ಮಿತ್ರನ ಆಶ್ರಮ್ಕ್ಕೆ ತೆರಳಿ ಅಲ್ಲಿ ತನ್ನ ಎಲ್ಲಾ ವೃತ್ತಾಂತವನ್ನೂ ಹೇಳುತ್ತಾನೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಯುವಕನು ಅಲ್ಲಿ ಅಗ್ನಿಪ್ರವೇಶಮಾದಲು ಯುವತಿಯೊಬ್ಬಳು ನಿಂತಿರುವಳು ಎಂದಾಗ ಹರ್ಷ ಅಲ್ಲಿಗೆ ತೆರಳಿ ತಪ್ಪಿಸಿ ತನ್ನ ತಂಗಿಯನ್ನು ಬದುಕಿಸುತ್ತಾನೆ. ತಂಗಿಯನ್ನು ಸಂತೈಸಿ ದಿವಾಕರ ಮಿತ್ರನ ಆಶ್ರಮದಲ್ಲಿರಿಸಿ ತಾನು ಯುದ್ಧಕ್ಕೆ ತೆರಳಿ ಪುನಃ ಬಂದು ಸ್ವಲ್ಪ ಸಮಯ ಧ್ಯಾನಾಸಕ್ತನಾಗುತ್ತಾನೆ ಎಂದು ತಿಳಿದು ಬರುತ್ತದೆ. ಇಲ್ಲಿ ಹರ್ಷನು ತನ್ನ ಮಗನಿಗೆ ತನ್ನ ರಾಜ್ಯವನ್ನು ವಹಿಸಿದನೆಂದು ತಿಳಿಯುತ್ತದೆಯೇ ಹೊರತು ಮಗನ ಹೆಸರು ತಿಳಿಯುವುದಿಲ್ಲ. ಇದು ಬಾಣನ ಹರ್ಷಚರಿತದಲ್ಲಿನ ಕಥೆ.
ಹರ್ಷಚರಿತ ಒಂದು ಚಾರಿತ್ರಿಕ ಗ್ರಂಥ ಇದರಲ್ಲಿ ಶೃಂಗಾರ ರಸ ಬರುವುದೇ ಇಲ್ಲವೆನ್ನುವಷ್ಟು ಅಪರೂಪ. ಇದರಲ್ಲಿ ರಾಜ್ಯವರ್ಣನೆ ಕಾನಾಸಿಗುತ್ತದೆ, ತುರಗವರ್ಣನೆಯೂ ಸಿಗುತ್ತದೆ, ಹರ್ಷನ ಮಡದಿ ಯಶೋಮತಿಯ ಗರ್ಭವರ್ಣನೆ ಬರುತ್ತದೆ. ರಾಜ್ಯೋಪದೇಶ ವರ್ಣನೆ. ದಿವಾಕರ ಮಿತ್ರನ ಆಶ್ರಮವರ್ಣನೆ, ವಿಂದ್ಯಾಟವಿಯ ವರ್ಣನೆಯೂ ಸಿಗುತ್ತದೆ. ಇಡೀ ಗ್ರಂಥದಲ್ಲಿ ಹರ್ಷನ ವಂಶ ಚರಿತ್ರೆ ಬಂದರೂ ತನ್ನ ಮುಂದಿನ ವಂಶದ ಕುರಿತು ಎಲ್ಲಿಯೂ ಉಲ್ಲೇಖಿಸದಿರುವುದು ವಿಚಿತ್ರವೆನ್ನಿಸುತ್ತದೆ. ಹರ್ಷ ಚರಿತದಲ್ಲಿ ಒಟ್ಟೂ 8 ಉಚ್ಛ್ವಾಸಗಳಿವೆ ಶಂಕರನಾಮ ಕಶ್ಚಿತ್ ಶ್ರೀಮತ್ ಪುಣ್ಯಾಕರಾತ್ಮಜೋವ್ಯಲಿಖತ್|
ಶಿಷ್ಟೋಪರೋಧವಶತಃ ಸಂಕೇತಂ ಹರ್ಷ ಚರಿತಸ್ಯ || ಈ ಹರ್ಷ ಚರಿತಕ್ಕೆ ಮಹಾ ಕವಿ ಶಂಕರ ಎನ್ನುವವನು ಸಂಕೇತ ಎನ್ನುವ ವ್ಯಾಖ್ಯಾನವನ್ನು ಬರೆದಿದ್ದಾನೆ ಎಂದೂ ತಿಳಿದು ಬರುತ್ತದೆ.

ಬಾಣ ಪ್ರಾಚೀನ ಭಾರತದ ಶ್ರೀಮಂತ ಕವಿ ಎನ್ನುವ ಮಾತೊಂದಿದೆ ಹೌದು ಆತ ಯಾವುದೇ ರಾಜ ಕುಮಾರರ ಪರಿವಾರಕ್ಕೆ ಕಡಿಮೆ ಇಲ್ಲದಂತೆ ತನ್ನದೇ ಪರಿವಾರ ಕಟ್ಟಿಕೊಂಡು ಬೆಳೆದಾತ. ಬಾಣನ ಸಾಹಿತ್ಯ ರಚನೆಗಳಲ್ಲಿಯೂ ಸಹ ಅನುಭವ ಜನ್ಯವಾದ ಸಾಹಿತ್ಯ ಹೊರಹೊಮ್ಮಿತ್ತು. ಜೈನ ಕವಿಗಳ ಪರಂಪರಾಗತ ಉಲ್ಲೇಖಗಳ ಜೊತೆಗೆ ಮಯೂರ , ಮತಂಗ ಮತ್ತು ಬಾಣನ ಹೆಸರು ಸೇರಿಕೊಂಡಿರುತ್ತದೆ. ಬಾಣನ ಸಮಕಾಲೀನ ಕವಿ ಮತ್ತು ಒಂದು ಊಹೆಯಂತೆ ಬಾಣನು ಮಯೂರನಿಗೆ ಹೆಣ್ಣುಕೊಟ್ಟ ಮಾವ, ಇಬ್ಬರೂ ಪರಮ ದೈವ ಭಕ್ತರು ಇಬ್ಬರೂ ಸ್ಪರ್ಧೆಗೆ ಇಳಿದರು. ಮಯೂರನು ಸೂರ್ಯ ಶತಕವನ್ನು ತನ್ನ ಪ್ರೌಢ ಶೈಲಿಯಲ್ಲಿ ಬರೆದು ತನಗಿದ್ದ ಕುಷ್ಟರೋಗದಿಂದ ನಿವೃತ್ತಿ ಹೊಂದಿದನಂತೆ ಅದೇ ರೀತಿ ಚಂಡೀ ಶತಕವನ್ನು ಬರೆದ ಬಾಣ ತಾನು ಸ್ವತಃ ತನ್ನ ಕಾಲುಗಳನ್ನು ಕಡಿದು ಕೊಂಡದ್ದನ್ನು ಪುನಃ ಪಡೆದ ಎನ್ನುವ ಒಂದು ದಂತ ಕಥೆಯೂ ಇದೆ. ಆದರೆ ಹರ್ಷಚರಿತ ಬರೆದ ಬಾಣ ಮುಂದೆ ತನ್ನ ಸೋಮಾರಿತನದಿಂದ ರಾಜನಿಂದ ದೂರವಾಗಿದ್ದ ಕಥೆ ಬರುತ್ತದೆ. ಅದು ಆತನ ಶ್ರೀಮಂತಿಕೆಗೂ ನಂಟು ಕಲ್ಪಿಸುತ್ತದೆ.

No comments:

Post a Comment