Search This Blog

Saturday 12 May 2018

ಇಂದು - ನಾಳೆ ಇದೆಯೇ ????


ಇದು ಋಗ್ವೇದದ ಒಂದು ಋಕ್ಕು. ಎಂತಹ ವಾಸ್ತವ. ಇದು ಎಂದೆಂದಿಗೂ ಸರಿಹೊಂದುವ ಸಂದೇಶ.
ನ ನೂನಮಸ್ತಿ ನೋ ಶ್ವಃ ಕಸ್ತದ್ವೇದ ಯದದ್ಭುತಂ |
ಅನ್ಯಸ್ಯ ಚಿತ್ತಮಭಿ ಸಂ ಚರೇಣ್ಯ ಮುತಾಧೀತಂ ವಿನಶ್ಯತಿ ||
ಈ ದಿನ ಅಥವಾ ಈಗ ವರ್ತಮಾನದಲ್ಲಿ ಏನು ನಡೆಯುತ್ತಿದೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ, ನಾಳೆ ಏನು ನಡೆಯುತ್ತದೆ ಅಥವಾ ನಡೆಯಬಹುದು ಎನ್ನುವುದೂ ಸಹ ತಿಳಿಯಲಾರದು. ಇದೊಂದು ಆಶ್ಚರ್ಯ. ವರ್ತಮಾನ ಮತ್ತು ಭವಿಷ್ಯತ್ಕಾಲದ ಸಂಭವಿಸುತ್ತಿರುವ ಮತ್ತು ಸಂಭವಿಸಬಹುದಾದ ವಿಷಯಗಳನ್ನು ಕರಾರುವಾಕ್ಕಾಗಿ ತಿಳಿದು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಎಷ್ಟೇ ಕಠಿಣ ಪರಿಶ್ರಮದಿಂದ ಕಲಿತ ವಿದ್ಯೆಯಾದರೂ ಕಾಲಾನುಕ್ರಮದಲ್ಲಿ ಮರೆತು ಹೋಗಬಹುದು.
ಇಂದ್ರನು ಒಮ್ಮೆ ಸಂಚಾರ ಮಾಡುತ್ತಿದ್ದಾಗ ಮರುದ್ದೇವತೆಗಳನ್ನು ಕಾಣುತ್ತಾನೆ. ಆಗ ಇಂದ್ರನು ಮರುದ್ದೇವತೆಗಳನ್ನು ಸ್ತುತಿಸುತ್ತಾನೆ. ಮರುದ್ದೇವತೆಗಳೂ ಸಹ ಇಂದ್ರನನ್ನು ಸ್ತುತಿಸುತ್ತಾರೆ. ಮರುತ್ತುಗಳಿಗೂ ಮತ್ತು ಇಂದ್ರನಿಗೂ ನಡೆದ ಸಂಭಾಷಣೆಯನ್ನು ಅಗಸ್ತ್ಯನು ತನ್ನ ತಪೋ ಮಹಿಮೆಯಿಂದ ಕೇಳಿಸಿಕೊಳ್ಳುತ್ತಾನೆ. ಇಂದ್ರನನ್ನು ನೋಡಿದ ಅಗಸ್ತ್ಯನು ಅವನಿಗಾಗಿ ಹವಿಸ್ಸನ್ನು ತಯಾರಿಸುತ್ತಾನೆ. ಆದರೆ ಮರುದ್ದೇವತೆಗಳ ಸಂಭಾಷಣೆಯನ್ನು ಕೇಳಿಸಿಕೊಂಡಿದ್ದ ಆದುದರಿಂದ ಇಂದ್ರನ ಹವಿಸ್ಸನ್ನು ಮರುದ್ದೇವತೆಗಳಿಗೆ ಕೊಡಲು ಇಚ್ಚಿಸುತ್ತಾನೆ. ಆಗ ಇಂದ್ರನು ಅದಕ್ಕೆ ಆಕ್ಷೇಪಿಸಿ ತನ್ನ ಹವಿಸ್ಸನ್ನು ಮರುದ್ದೇವತೆಗಳಿಗೆ ಕೊಡಕೂಡದು ಅವರಿಗೆ ನಾಳೆಯೇ ಕೊಡು ಎಂದಾಗ ಅಗಸ್ತ್ಯ ಮಹರ್ಷಿಯು "ನ ನೂನಮಸ್ತಿ ನೋ ಶ್ವಃ ಕಸ್ತದ್ವೇದ" ನಾಳೆ ಎನ್ನುವುದು ಯಾವುದೂ ಇಲ್ಲ. ಈಗ ಎನ್ನುವುದೂ ಇಲ್ಲ ಎನ್ನುತ್ತಾನೆ. ಯಾರ ಉದ್ದೇಶವು ಸ್ತಿಮಿತವಾಗಿರದಿದ್ದಲ್ಲಿ, ಅವನ ಮನಸ್ಸಿನ ಉದ್ದೇಶ ಅಥವಾ ನಿಶ್ಚಯವೇ ನಾಶವಾಗುತ್ತದೆ. ಎಂದು ಮುಂದಿನ ಸೂಕ್ತದಲ್ಲಿ ಹೇಳಲ್ಪಡುತ್ತದೆ. ಆ ಮರುತ್ತುಗಳು ಸಹ ನಿನ್ನ ಸಹೋದದರೇ ಅಲ್ಲವೇ (ಬಂಧು)ಗಳು ಆದುದರಿಂದ ಅವರಲ್ಲಿ ದ್ವೇಷ ಬೇಡ. ಎಂದು ಸಮಾಧಾನ ಪಡಿಸಿ ಹವಿಸ್ಸನ್ನು ಮರುತ್ತುಗಳಿಗೆ ಹವಿಸ್ಸನ್ನು ಅರ್ಪಿಸಿದನು. ಮುಂದೆ ಇಂದ್ರನಿಗೆ ಸೋಮವನ್ನು ಅರ್ಪಿಸುವಾಗ ಮರುತ್ತುಗಳಿಗೂ ಹವಿಸ್ಸನ್ನು ಅರ್ಪಿಸಲು ಆರಂಭಿಸಲಾಯಿತು.
ಕಿಂ ನ ಇಂದ್ರ ಜಿಘಾಂಸಸಿ ಭ್ರಾತರೋ ಮರುತಸ್ತವ |
ತೇಭಿಃ ಕಲ್ಪಸ್ವ ಸಾಧುಯಾ ಮಾ ನಃ ಸಮರಣೇ ವಧೀಃ ||
ಆ ಮರುತ್ತುಗಳು ಸಹ ನಿನ್ನ ಸಹೋದದರೇ ಅಲ್ಲವೇ (ಬಂಧು)ಗಳು ಆದುದರಿಂದ ಅವರಲ್ಲಿ ದ್ವೇಷ ಬೇಡ.
ಯಾರ ಉದ್ದೇಶವು ಸ್ತಿಮಿತವಾಗಿರದಿದ್ದಲ್ಲಿ, ಅವನ ಮನಸ್ಸಿನ ಉದ್ದೇಶ ಅಥವಾ ನಿಶ್ಚಯವೇ ನಾಶವಾಗುತ್ತದೆ.
ಹೌದು ಇದು ಎಂತಹ ವಾಸ್ತವ. ನಾಳೆ ಇದೆಯೇ ? ಇದೆ ಎಂದು ಆಶಾಭಾವದಿಂದ ಆತ್ಮ ವಿಶ್ವಾಸದಿಂದ ನಾವು ಜೀವಿಸುತ್ತೇವೆ. ಇಂದು ?

No comments:

Post a Comment