Search This Blog

Tuesday 15 May 2018

ಅವಧೇಶ್ವರಿಯ ವೃಶಜಾನ ಮತ್ತು ತ್ರಸದಸ್ಯು ವೇದದಲ್ಲಿಯೂ….


ವೃಶಜಾನ ಅಥವಾ ವೃಶ ಭಟ್ಟ ಮತ್ತು ತ್ರಸದಸ್ಯುವಿನ ಕಥೆ ಬಹಳ ರೋಚಕವಾದದ್ದು. ಚುಟುಕಾಗಿ....
ತ್ರಸದಸ್ಯುವು ಒಮ್ಮೆ ನಗರ ಸಂಚಾರಕ್ಕಾಗಿ ತಾನೇ ಸ್ವತಃ ರಥವನ್ನು ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗದಲ್ಲಿ ವೃಶಭಟ್ಟ ಎದುರಾಗುತ್ತಾನೆ. ಒಬ್ಬನೇ ಹೋಗುತ್ತಿದ್ದ ತ್ರಸದಸ್ಯುವಿನ ರ್ತಹವನ್ನು ಕೈ ಮಾಡಿ ನಿಲ್ಲಿಸಿ ತಾನೂ ಕುಳಿತುಕೊಳ್ಳುತ್ತಾನೆ. ವೃಶ ಮತ್ತು ತ್ರಸದಸ್ಯು ಆತ್ಮೀಯರು ಎಲ್ಲಿಗೆ ಹೋಗುವುದಿದ್ದರೂ ಜೊತೆಗೆ ರಥದಲ್ಲಿ ಹೋಗುತ್ತಿದ್ದರೂ ಬಹಳ ಸಮಯ ಎಲ್ಲಿಗೂ ಹೋಗಿರಲಿಲ್ಲ ಅದಕ್ಕಾಗಿ ಇಂದು ಸಿಕ್ಕಿದ ವೃಶನನ್ನು ರಥದಲ್ಲಿ ಕುಳ್ಳಿರಿಸಿಕೊಂಡುದಲ್ಲದೇ ರಥದ ಲಗಾಮನ್ನು ಸಹ ವೃಶನೇ ಹಿಡಿದುಕೊಂಡು ಮುಂದೆ ಸಾಗಿದ. ಇಲ್ಲಿ ವೃಶನಿಗೂ ತ್ರಸದ್ಸ್ಯುವಿಗೂ ಬಹಳ ಮಾತಾಗುತ್ತದೆ. ಕತ್ತಲೆಯಲ್ಲಿ ಶಂಬರನನ್ನು ಹಿಡಿದದ್ದು, ಎಷ್ಟೇ ಜನಸಂದಣಿ ಇದ್ದರೂ ವೇಗವಾಗಿ ರಥ ಮುನ್ನುಗ್ಗಿಸುವ ಕಲೆ ಗೊತ್ತಿರುವ ಕುರಿತಾಗಿ ಬಹಳ ಮಾತಾಗುತ್ತದೆ. ಈ ರಥ ಮಾಮೂಲಿನಂತಲ್ಲ. ಇದರ ಕುದುರೆಗಳು ಮಾಮೂಲಿನಂತಿಲ್ಲ ಎಂದೆಲ್ಲ ತ್ರಸದಸ್ಯು ಹೇಳುತ್ತಾ ಲಗಾಮನ್ನು ವೃಶನಿಗೆ ಕೊಡುತ್ತಾನೆ. ವೃಶ ಒಮ್ಮೆಲೆ ಹಿಡಿದದ್ದರಿಂದ ಕುದುರೆಗಳ ಹತೋಟಿ ತಪ್ಪಿದಂತಾಗುತ್ತದೆ. ಆಗ ತ್ರಸದಸ್ಯು ಇದು ನಾಲ್ಕು ಕುದುರೆಗಲ ರಥ ಎಮ್ದು ಎಚ್ಚರಿಸುತ್ತಾನೆ. ಆಗ ಸಡಿಲಬಿಟ್ತ ಲಗಾಮಿನಿಂದಾಗಿ ಕುದುರೆಗಳು ಓಟ ಕಿತ್ತವು. ಅದೇ ಸಮಯಕ್ಕೆ ಒಂದು ಚಿಕ್ಕ ಮಗು ತನ್ನ ತಂದೆ ತಾಯಿಯರ ಕೈ ತಪ್ಪಿಸಿ ಅಡ್ದ ಬಂದಾಗ ಅದರ ಕಾಲಿನ ಮೇಲೆ ಈ ರಥ ಹರಿದು ಮಗು ಕಿರುಚಾಡುತ್ತದೆ. ರಾಜ ರಥವನ್ನು ನಿಲ್ಲಿಸಿ ಆಮಗು ಮತ್ತು ಪೋಷಕರನ್ನು ರಥದಲ್ಲಿ ಕುಳ್ಳಿರಿಸಿ೮ ವೈದ್ಯರ ಮನೆಗೆ ಕೊಂಡೊಯ್ಯುತ್ತಾನೆ. ಮುಂದೆ ತಪ್ಪಿನ ಶಿಕ್ಷೆಗೆ ನ್ಯಾಯ ನಿರ್ಣಯಕ್ಕೆ ತನ್ನ ಆಸ್ಥಾನದ ನ್ಯಾಯಾಧೀಶರನ್ನು ಕರೆಯದೇ ಕಾಶಿ ರಾಜರನ್ನು ಕರೆಸಿ ನ್ಯಾಯ ನಿರ್ಣಯ ಕೈಗೊಳ್ಲಲಾಗುತ್ತದೆ. ಮಗು ಸತ್ತಿದೆ ಎಂದೆ ಭಾವಿಸಿದ್ದ ರಾಜ ಆದರೆ ಮಗು ಬದುಕಿತ್ತು. ಇದು ಶಂಕರ ಮೊಕಾಶಿ ಪುಣೇಕರ ಅವರ ಅವಧೇಶ್ವರಿಯಲ್ಲಿ ಬರುವ ಕಥೆ. ಈ ಕಥೆ ಅತ್ಯಂತ ರೋಚಕವಾಗಿ ಮನಮುಟ್ಟುವಂತೆ ಅವಧೇಶ್ವರಿಯಲ್ಲಿ ಹೆಣೆದಿದ್ದಾರೆ. ಅದು ಕಾದಂಬರಿಯ ಕಥೆ ಅಲ್ಲಿ ಓದುಗನನ್ನು ಹಿಡಿದಿಟ್ಟುಕೊಂಡು ಅವನು ಕಾದಂಬರಿಯ ವ್ಯಕ್ತಿಯಾಗುವಷ್ಟು ಕೌಶಲ್ಯ ಹೊಂದಿರಬೇಕಾಗುತ್ತದೆ. ಈ ಕಥೆ ಋಗ್ವೇದದಲ್ಲಿ ಕೂಡಾ ಬರುತ್ತದೆ.
ಒಂದಾನೊಂದು ದಿನ ಇಕ್ಷ್ವಾಕು ವಂಶದ ತ್ರಿವೃಷ್ಣ ಎನ್ನುವ ರಾಜನ ಮಗನಾದ ತ್ರ್ಯರುಣ ಅಥವಾ ತ್ರಯ್ಯಾರುಣ (ತ್ರಸದ್ಸ್ಯು)ಎಂಬ ರಾಜನು ರಥದಲ್ಲಿ ಕುಳಿತು ಸಂಚರಿಸುತ್ತಿದ್ದನು. ಆಗ ಅವನ ಮನೆಯ ಪುರೋಹಿತನಾದ "ಜನ" ಎನ್ನುವ ಋ‍ಷಿಯ ಪುತ್ರನಾದ "ವೃಶ"ನೆನ್ನುವವನು ಅಶ್ವಗಳಿಂದ ಕೂಡಿದ ರಥದ ಸಾರಥಿಯಾಗಿ ರಥದ ಲಗಾಮನ್ನು ಹಿಡಿದು ರಥವನ್ನು ನಡೆಸುತ್ತಿದ್ದನು. ಆಗ ಅದೊಂದು ಸಂಪ್ರದಾಯವೂ ಆಗಿತ್ತು. (ವೃಶನನ್ನು ವೃಶಜಾನ ಎಂತಲೂ ಕರೆಯಲಾಗುತ್ತದೆ) ಹೀಗೇ ಪುರೋಹಿತನು ರಥವನ್ನು ನಡೆಸುತ್ತಿರುವಾಗ ಒಬ್ಬ ಬ್ರಾಹ್ಮಣ ಬಾಲಕ ಆಟವಾಡುತ್ತಾ ರಥದ ಚಕ್ರಕ್ಕೆ ಸಿಲುಕಿ ತಲೆ ಕತ್ತರಿಸಿ ಹೋಗಿ ಮೃತನಾಗುತ್ತಾನೆ. ಆಗ ಅವರಿಬ್ಬರಲ್ಲೂ ಮೃತ ಜನ್ಯ ಪಾಪಕ್ಕೆ ಕಾರಣ ಯಾರು ಎನ್ನುವ ಕುರಿತಾಗಿ ಚರ್ಚೆ ನಡೆಯುತ್ತದೆ. ಈ ವಾದವನ್ನು ಇಕ್ಷ್ವಾಕು ಪರಿಷತ್ತಿಗೆ ಒಪ್ಪಿಸಲಾಗುತ್ತದೆ. ಅಲ್ಲಿ ರಥದ ಸಾರಥ್ಯ ವಹಿಸಿದವರದ್ದೇ ತಪ್ಪು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತದೆ. ಆಗ ವೃಶನು "ವಾರ್ಶ-ಸಾಮ" ಎನ್ನುವ ಸಾಮ ಮಂತ್ರದ ದರ್ಶನವನ್ನು ಪಡೆದು ಮಗುವನ್ನು ಬದುಕಿಸುತ್ತಾನೆ ಎನ್ನುವುದಾಗಿ ಮತ್ತು ಅದರಿಂದ ಕ್ರದ್ಧನಾಗಿದ್ದ ವೃಶನು ತನ್ನ ವಿರುದ್ಧ ಅನ್ಯಾಯವಾಗಿ ದೋಷಾರೋಪ ಮಾಡಿದ್ದ ಇಕ್ಷ್ವಾಕುಗಳನ್ನು ಶಪಿಸುತ್ತಾನೆ. ಇಕ್ಷ್ವಾಕುಗಳ ಯಜ್ಞ ಶಾಲೆಗಳಲ್ಲಿ ಅಗ್ನಿ ಲುಪ್ತವಾಗುವಂತೆ ಶಪಿಸಿದ್ದರಿಂದ ಅವರ ಯಜ್ಞ ಶಾಲೆಯಲ್ಲದೇ ಮನೆಯಲ್ಲೂ ಯಜ್ಞವಿಲ್ಲದೇ ಪರಿತಪಿಸುತ್ತಾರೆ (ಅಗ್ನೌ ಪ್ರಾಸ್ತಾನಿ ಹವ್ಯಾನಿ ನ ಹ್ಯಪಚ್ಯಂತ ಕಾನಿಚಿತ್) ಆಗ ಪುನಃ ವೃಶನನ್ನು ಹುಡುಕಿಕೊಂಡು ಹೋಗಿ ಅವನನ್ನು ಕಂಡು ಪ್ರಾರ್ಥಿಸಿದಾಗ ಆತ ಪುನಃ ಬಂದು "ವಾರ್ಶ - ಸಾಮ" ಮಂತ್ರವನ್ನೆ ಪಠಿಸಿ ಅಗ್ನಿ ಜನನ ಮಾಡುತ್ತಾನೆ. ಇದು ಒಂದು ಕಡೆಯ ಉಲ್ಲೇಖವಾದರೆ, ಬೃಹದ್ದೇಶಿಯಲ್ಲಿ "ಮಹಾರಾಜ ತ್ರ್ಯರುಣನು ವೃಶಜಾನ ಪುರೋಹಿತನೇ ನೀನೇ ಈ ಬಾಲಕನನ್ನು ಕೊಂದು ಮಹಾ ಪಾಪ ಮಾಡಿರುವೆ ಎಂದು ಹೇಳಿದನು.
"ಸೋಥರ್ವಾಂಗೀರಸಾನ್ ಮಂತ್ರಾನ್ ದೃಷ್ಟ್ವಾ ಸಂಜೀವ್ಯ ತಂ ಶಿಶುಂ
ಕ್ರೋಧಾತ್ಸಂತ್ಯಜ್ಯ ರಾಜಾನಮನ್ಯದೇಶ ಸಮಾಶ್ರಿತಃ"
ಇದರಿಂದ ಕೋಪಗೊಂಡ ವೃಶಜಾನ ತನಗೆ ಬರುತ್ತಿದ್ದ ಅಥರ್ವಾಂಗೀರಸ ಮಂತ್ರದಿಂದ ಬಾಲಕನನ್ನು ಬದುಕಿಸಿ ರಾಜ್ಯ ಬಿಟ್ಟು ಹೊರಟುಹೋದನು ಎಮ್ದು ಬರುತ್ತದೆ. ಇಲ್ಲಿಯ ವರೆಗಿನ ಕಥೆ ಅವಧೇಶ್ವರಿಯಲ್ಲಿ ತುಸು ಭಿನ್ನವಾಗಿ ಬಂದಿದೆ. ಅಲ್ಲಿ ಮಗು ಸತ್ತಿದೆ ಎಂದು ಭ್ರಮಿಸಿದ್ದರು ಆದರೆ ಸತ್ತಿಲ್ಲ ಔಷಧೋಪಚಾರದಿಂದ ಬದುಕಿದೆ ನ್ಯಾಯ ನಿರ್ಣಯವೂ ಆಗಿದೆ. ಆದರೆ ಇಲ್ಲಿ ಹಾಗಾಗಿಲ್ಲ ಇಲ್ಲಿ ಸತ್ತ ಮಗುವನ್ನು ಬದುಕಿಸಲಾಗಿದೆ. ಕೋಪಗೊಂಡ ವೃಶಜಾನ ದೇಶಬಿಟ್ಟು ಹೋಗಿದ್ದಾನೆ. ಮುಂದೆ ಪುರೋಹಿತನಾಗಿದ್ದ ವೃಶಜಾನ ಬಿಟ್ಟು ಹೋಗಿದ್ದರಿಂದ ರಾಜನ ಯಜ್ಞಗೃಹದಲ್ಲಿದ್ದ ಯಜ್ಞದ ಸುಡುವ ಶಕ್ತಿಯು (ಉಷ್ಣವು) ಕುಂಠಿತವಾಗುತ್ತದೆ. ಅಗ್ನಿಯಲ್ಲಿ ಹೋಮ ಮಾಡಿದ ಹವಿಸ್ಸಿನ ಪಕ್ವವು ಸುಡದೇ ಹಾಗೇ ಉಳಿದಿದ್ದವು. ಇದರಿಂದ ಬೇಸರಗೊಂಡ ತ್ರಯ್ಯಾರುಣ ವೃಶನನ್ನು ಹುಡುಕಿ ಪುನಃ ಅರಮನೆಗೆ ಕರೆತರುತ್ತಾನೆ. ಈ ಕಥೆ ಮತ್ತು ಮುಂದುವರೆದು ಅದು ಬೇರೆ ಬೇರೆ ದಿಕ್ಕಿನಲ್ಲಿ ಅಲ್ಲಿ ಸಾಗುತ್ತದೆ.

No comments:

Post a Comment