Search This Blog

Friday 4 May 2018

"ದ್ವಿರದದಾನವ" ಎಂದರೆ ಗಜಾಸುರ.


ದಿತಿಯ ಮಕ್ಕಳನ್ನೆಲ್ಲಾ ಇಂದ್ರ ಸಂಹಾರ ಮಾಡುತ್ತಾನೆ. ಈ ರೀತಿ ಮಾಡಿದ ನಂತರ ದಿತಿ ತನಗೆ ಮಕ್ಕಳೇ ಇಲ್ಲದಾಗ ಸುಪಾರ್ಶ್ವ ಮುನಿಯ ಆಶ್ರಮದ ಬಳಿಯಲ್ಲಿ ಎಮ್ಮೆಯಂತೆ ನಿಂತು ತಪ್ಪಸ್ಸು ಮಾಡುತ್ತಾಳೆ. ತಪಸ್ಸಿಗೊಳಿದ ಬ್ರಹ್ಮ "ನಿನಗೆ ಮಹಾಶಕ್ತಿಶಾಲಿಯದ ಮಗ ಜನಿಸುತ್ತಾನೆ ಎಂದು ಹೊರಟು ಹೋಗುತ್ತಾನೆ. ಆಗ ಸುಪಾರ್ಶ್ವನು ಅದನ್ನು ಕೇಳಿಸಿಕೊಂಡು ಕೋಣನಂತಿರುವ ಮಗ ಹುಟ್ಟುತ್ತಾನೆ ಎನ್ನುತ್ತಾನೆ. ದಿತಿಗೆ ಬೇಸರವಾಗುತ್ತದೆ. ಚಿಂತಾಕ್ರಾಂತಳಾಗಿ ಪುನಃ ಬ್ರಹ್ಮನನ್ನು ಕೇಳಿದಾಗ ಬ್ರಹ್ಮ ಕೋಣದಂತೆ ಮುಖಮಾತ್ರ ಇರುತ್ತದೆ ದೇಹವೆಲ್ಲಾ ಮನುಷ್ಯರದ್ದು ಎನ್ನುತ್ತಾನೆ. ಮಹಿಷ ಜನಿಸುತ್ತಾನೆ. ಲೋಕ ಕಂಟಕನಾಗಿ ಬೆಳೆದು ಶಿವನಿಂದ ಹೆಂಗಸಿನಿಂದ ಮರಣ ಬರುವಂತೆ ಅನುಗ್ರಹ ಪಡೆದು ತ್ರಿಪುರವಾಸಿನಿಯಿಂದ ಮರಣ ಹೊಂದುತ್ತಾನೆ. ಆತನ ಮಗ ಗಜಾಸುರ. ಈತನೂ ತಪಸ್ಸುಮಾಡಿ ಶಿವನನ್ನು ಪ್ರಸನ್ನ ಗೊಳಿಸಿ ಅನೇಕ ವರಗಳನ್ನು ಪಡೆದು ದೇವತೆಗಳಿಗೆ ಹಿಂಸೆ ಕೊಡುತ್ತಿದ್ದ. ಈತನ ಕಾಟ ತಡೆಯಲಾರದೆ ದೇವತೆಗಳೆಲ್ಲ ಸೇರಿ ಶಿವನನ್ನು ಮೊರೆಹೊಕ್ಕರು. ದೇವತೆಗಳಿಗೆ ಅಭಯ ನೀಡಿದ ಶಿವ ಈತನ ಮೇಲೆ ಯುದ್ಧಕ್ಕೆ ಬಂದ. ಸ್ವಯಂ ಶಿವನೇ ತನ್ನ ಮೇಲೆ ಯುದ್ಧಕ್ಕೆ ಬಂದುದನ್ನು ಕಂಡ ಗಜಾಸುರ ತಾನು ಪರಶಿವನಿಂದಲೇ ಸಾಯಬೇಕೆಂದು ಸಂಕಲ್ಪಿಸಿ ಆವರೆಗೂ ದೇವತೆಗಳಿಗೆ ಹಿಂಸೆ ಕೊಡುತ್ತಿದ್ದುದಾಗಿಯೂ ತನ್ನನ್ನು ಕೊಂದು ತನ್ನ ಚರ್ಮವನ್ನು ಶಿವ ಧರಿಸುವುದಾದರೆ ತಾನು ಸಾಯಲು ಸಿದ್ಧವೆಂದೂ ತಿಳಿಸಿದಾಗ ಶಿವ ಅದಕ್ಕೆ ಸಮ್ಮತಿ ನೀಡಿ ಗಜಾಸುರನ ಬಯಕೆಯನ್ನು ಈಡೇರಿಸಿದ. ಮತ್ಸ್ಯಪುರಾಣ ಹಾಗೂ ಸ್ಕಾಂದಪುರಾಣಗಳಲ್ಲಿ ಇವನ ಉಲ್ಲೇಖ ಸಿಗುತ್ತದೆ. ಮಾರ್ಕಾಂಡೇಯ ಪುರಾಣದ ದೇವೀ ಮಹಾತ್ಮೆಯಲ್ಲಿ ಮಹಿಷಾಸುರ ವರ್ಣನೆ ಬಹಳ ಮಹತ್ವದ್ದು. ಇದು ಪುರಾಣದ ಕಥೆ. ನಾನೀಗ ಹೇಳ ಹೊರಟಿರುವ ವಿಷಯ ಭಾರತದ ಉತ್ತರ ಫಿಲಿಬಿಟ್ ಸಮೀಪವಿರುವ ಊರಿನ ಶಾಸನವೊಂದರ ಎರಡನೇ ಸಾಲಿನಲ್ಲಿ ಈ ವರ್ಣನೆ ಬರುತ್ತದೆ. ಶಾಸನ ಸಂಪೂರ್ಣ ಸಂಸ್ಕೃತದಲ್ಲಿದ್ದು ಪ್ರಾಚೀನ ನಾಗರೀ ಲಿಪಿಯನ್ನು ಹೊಂದಿದೆ. ಇಲ್ಲಿ ಗಜಾಸುರನನ್ನು "ದ್ವಿರದ ದಾನವ" ಎನ್ನುವುದಾಗಿ ಸಂಬೋಧಿಸಲಾಗಿದೆ. "ದ್ವಿರದ" ಎನ್ನುವುದು ಆನೆಗೆ.
ಪರ್ವತ ರಾಜನ ಮಗಳಾದ ಗಿರಿಜೆಯು ಈ ಜಗತ್ತಿಗೆ ಮಂಗಳವನ್ನುಂಟುಮಾಡಲಿ. ಎನ್ನುತ್ತಾ ಪರ್ವತ ರಾಜನ ಮಗಳನ್ನು ವರ್ಣಿಸಲಾಗಿದೆ. ಶಿವನು ಗಜಾಸುರ ಸಂಹಾರದಲ್ಲಿ ಗಜಾಸುರನಿಗೆ ಬಿಟ್ಟ ಬಾಣದಿಂದ ಗಜಾಸುರನ ಹಣೆಯಿಂದ ಉದುರಲ್ಪಟ್ಟ ಮುತ್ತುಗಳಿಂದ ತಯಾರಿಸಿರುವ ಕಂಠಾಭರಣವನ್ನು ಧರಿಸಿದ್ದಾಳೆ. ಆದರೆ ಆ ಕಂಠಾಭರಣದ ಪ್ರಭೆಯು ಚಂದ್ರನ ಕಾಂತಿಯನ್ನು ಮೀರಿಸಿದಂತಿದೆ. ಆದರೆ ಈ ಪ್ರಭೆಗಳನ್ನು ಮೀರಿಸಿದ ಕಾಂತಿಯು ಪರಿಶುದ್ಧಳಾದ ಗಿರಿಜೆಯ ಕಾಂತಿ ಮೀರಿಸಿದೆ ಅನ್ನುವುದಾಗಿ ಶಾಸನ ಕವಿ ವರ್ಣಿಸುತ್ತಾನೆ.
ಶೂಲಕ್ಷತ ದ್ವಿರದದಾನವ ಕುಂಭ ಮುಕ್ತ ಮುಕ್ತಾಕಲಾಪ ಕಲಿತಾಮಲಕಣ್ಠ ಕಾಂತಿಃ |
ವಿಶ್ವಂ ಪುನಾತು ಗಿರಿಜಾ ವದನಾವಧೂತ ಚಂದ್ರೋಪನೀತ ಪರಿವೇಷಮಿವೋದ್ವಹಂತೀ ||
 
ಎಂತಹ ಸುಂದರವಾದ ಶ್ಲೋಕವನ್ನು ರಚನೆ ಮಾಡಿದ್ದಾನೆ. ಉತ್ಕೀರ್ಣ ಸೋಮದೇವೇನ ಟಂಕ ವಿಜ್ಞಾನ ಶಾಲಿನಾ ಎನ್ನುತ್ತಾನೆ, ಶಾಸನ ಬರೆದು ಕೊಟ್ಟವನು ಬೇರೆ. ಆದರೆ ಅದನ್ನು ಕಂಡರಿಸಿದವನು ತಾನು ಕಂಡರಣೆಯ ಕಲೆಯನ್ನು ಅದೊಂದು ವಿಜ್ಜಾನ ಎಂದು. ಅದನ್ನು ತಾನು ಬಲ್ಲೆನೆಂದು ಹೆಮ್ಮೆಯಿಂದ ಹೇಳಿಕೊಂಡಿರುವುದು ಕಂಡು ಬರುತ್ತದೆ.


No comments:

Post a Comment