Search This Blog

Wednesday 6 December 2017

ಸಂಸ್ಕೃತ ಸಾಹಿತ್ಯದ ಪೋಷಕ ಆರಾಧಕ ವಡ್ಡಕಥೆಯ ದುರ್ವಿನೀತ - ಸದ್ಯೋಜಾತ ಭಟ್ಟ


ಭಾರವಿ ಸಂಸ್ಕೃತದ ಕವಿ. ಈತನ ಕಾಲ ಕ್ರಿ. . 6ನೇ ಶತಮಾನ ಎನ್ನಲಾಗುತ್ತದೆ. ಸಾಹಿತ್ಯ ಕ್ಷೇತ್ರಕ್ಕೆ, ಕಾವ್ಯ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿ ಹೆಸರಾದ ಕಾಳಿದಾಸ ಮತ್ತು ಅಶ್ವಘೋಷರ ನಂತರದ ಕವಿ. ಕ್ರಿ. . 634 ಐಹೊಳೆಯ ರವಿಕೀರ್ತಿಯ ಶಾಸನದಲ್ಲಿ "ಯೇನಾಯೋಜಿನ ವೇಶ್ಮ ಸ್ಥಿರಮರ್ಥ ವಿಧೌ ವಿವೇಕಿನಾ ಜಿನವೇಶ್ಮ | ಸ ವಿಜಯತಾಂ ರವಿಕೀರ್ತ್ತಿಃ ಕವಿತಾ ಶ್ರಿತ ಕಾಳಿದಾಸ ಭಾರವಿ ಕೀರ್ತಿಃ ||" ಎನ್ನುವುದಾಗಿ ಕಾಳಿದಾಸನ ಹೆಸರಿನ ಜತೆಯಲ್ಲೇ ಭಾರವಿಯ ಹೆಸರಿನ ಉಲ್ಲೇಖವಿದೆ ಕ್ರಿ. . 673ರಲ್ಲಿ ಭಾರತದಲ್ಲಿ ಯಾತ್ರೆಗಾಗಿ ಬಂದ ಇತ್ಸಿಂಗ್ ಎಂಬ ಚೀನಿಯಾತ್ರಿಕ ತನ್ನ ಗ್ರಂಥದಲ್ಲಿ ಉಲ್ಲೇಖಿಸಿರುವ ಜಯಾದಿತ್ಯನ ಕಾಶಿಕಾವೃತ್ತಿಯಲ್ಲಿ "ಪ್ರಕಾಶ ಸ್ಥೇಯಾಖ್ಯಯೋಶ್ಚ" ಎಂಬ ಪಾಣಿನಿ ಸೂತ್ರದ ವೃತ್ತಿಯಲ್ಲಿ ಭಾರವಿಯ ಕಿರಾತಾರ್ಜುನೀಯದ 'ಸಂಶಯ್ಯ ಕರ್ಣಾದಿಷು ಶಿಷ್ಠತೇಯಃ' ಎಂಬ ಪದ ಪ್ರಯೋಗ ಉದಾಹರಿಸಿರುವುದರಿಂದಲೂ ಭಾರವಿ ಕ್ರಿ.. ಆರನೆಯ ಶತಮಾನಕ್ಕಿಂತ ನಂತರದವನಲ್ಲ. ದಂಡಿಯಿಂದ ಬರೆಯಲ್ಪಟ್ಟಿದೆ ಎನ್ನಲಾದ 'ಅವಂತಿ ಸುಂದರೀಕಥೆ' ಉಪಕ್ರಮ ಶ್ಲೋಕಗಳಲ್ಲಿ ಭಾರವಿಗೆದಾಮೋದರ’ನೆಂಬ ಹೆಸರು ಇತ್ತೆಂದೂ ಅವನ ಮಗನ ಮೊಮ್ಮಗನೇ ದಂಡಿಯೆಂದೂ ಅವನು ಕೌಶಿಕ ಗೋತ್ರದ ಬ್ರಾಹ್ಮಣನೆಂದೂ ಅವನ ಪೂರ್ವಜರು ಆರ್ಯಾವರ್ತದ ವಾಯವ್ಯದಲ್ಲಿದ್ದ ಆನಂದಪುರದಿಂದ ದಕ್ಷಿಣಾಪಥದ ಅಚಲಪುರಕ್ಕೆ ವಲಸೆ ಬಂದಿದ್ದವರೆಂದೂ ಭಾರವಿಯು ಚಾಲುಕ್ಯರಾಜನಾದವಿಷ್ಣುವರ್ಧನ”ನ ಗೆಳೆಯನಾಗಿದ್ದ ಮತ್ತು ಕಾಲಕ್ರಮೇಣ ಕೊಂಕಣ ಪ್ರದೇಶದ ಗಂಗ ದೊರೆ ದುರ್ವಿನೀತನೆಂಬ ರಾಜನ ಆಸ್ಥಾನ ಕವಿಯಾದನೆಂದು ಹೇಳಿದೆ. ದುರ್ವಿನೀತನು ಕಿರಾತಾರ್ಜುನೀಯದ 15ನೆಯ (ಚಿತ್ರಬಂಧಗಳ) ಸರ್ಗಕ್ಕೆ ವಾಖ್ಯಾನ ಬರೆದುದಾಗಿ ಗುಮ್ಮಾರೆಡ್ಡಿಪುರದ ತಾಮ್ರಪತ್ರ ಶಾಸನದಿಂದ ತಿಳಿದುಬರುತ್ತದೆ. ಅದನ್ನು ಪುನಃ ಮುಂದೆ ಪ್ರಸ್ತಾಪಿಸಿರುವೆನು. ವ್ಯಾಖ್ಯಾನ ಈಗ ಉಪಲಬ್ಧವಾಗಿಲ್ಲದಿದ್ದರೂ ದುರ್ವಿನೀತನ ಕಾಲ ಸುಮಾರು 469 ರಿಂದ 529 ಎಂದು ನಂಬಲಾಗಿದೆಯಾದ್ದರಿಂದ ಭಾರವಿ 6ನೆಯ ಶತಮಾನದ ಉತ್ತರಾರ್ಧದವನೆಂದು ಹೇಳಬಹುದಾಗಿದೆ. ಆದರೆ ಅವಂತಿಸುಂದರೀ ಕಥೆ ದಂಡಿ ವಿರಚಿತ ಎಂಬುದನ್ನು ಪಂಡಿತರನೇಕರು ಒಪ್ಪುತ್ತಿಲ್ಲ.
ಭಾರವಿ ತನ್ನ ಕಿರಾತಾರ್ಜುನೀಯ ಕಾವ್ಯದ 18 ನೆಯ ಸರ್ಗದ 4 ಮತ್ತು 5 ನೆಯ ಶ್ಲೋಕದಲ್ಲಿಶಿವನ ಎದೆಯ ಮೇಲೆ ಅರ್ಜುನನೆಸಗಿದ ಮುಷ್ಟಿಪ್ರಹಾರವನ್ನು ಸಹ್ಯಾದ್ರಿಯ ವಿಶಾಲವಾದ ತಪ್ಪಲು ಪ್ರದೇಶದ ಮೇಲೆ ಅಪ್ಪಳಿಸಿ ಹಿಂದೂಡಲ್ಪಡುವ ಸಮುದ್ರದ ಅಲೆಗಳಿಗೆ ಹೋಲಿಸಿರುವುದರಿಂದಲೂ ಮತ್ತು ಮೊದಲನೆಯ ಸರ್ಗದ ಕೊನೆಯ ಶ್ಲೋಕದಲ್ಲೂ 9ನೆಯ ಸರ್ಗದ 2 ಮತ್ತು 5ನೆಯ ಶ್ಲೋಕಗಳಲ್ಲೂ ಸೂರ್ಯಾಸ್ತಮಾನವನ್ನು ನಿರೂಪಿಸಿರುವುದರಿಂದಲೂ ಈತ ಪಶ್ಚಿಮದ ಅರಬ್ಬೀ ಸಮುದ್ರತೀರದಲ್ಲಿ ನೆಲಸಿದ್ದವನಾಗಿರಬೇಕೆಂದು ಊಹಿಸಬಹುದು.
ಕವಿ ಮೊದಲು ತೀರ ಬಡವನಾಗಿದ್ದನೆಂದೂ ಅವನ "ಸಹಸಾವಿಧದೀತನ ಕ್ರಿಯಾಂ" ಎಂಬ ಕಿರಾತಾರ್ಜುನೀಯದ ಶ್ಲೋಕವೊಂದು ಈತನಿಗೆ ರಾಜಾಶ್ರಯ ದೊರಕಿಸಿಕೊಟ್ಟಿತೆಂದೂ ಮುಂತಾಗಿ ಹೇಳುವ ಕೆಲವು ದಂತಕಥೆಗಳನ್ನು ಬಿಟ್ಟರೆ ಈತನ ಜೀವನ ವೃತ್ತಾಂತದ ಬಗೆಗೆ ವಿಶೇಷ ಮಾಹಿತಿ ಸಿಗುವುದೇ ಇಲ್ಲ. ಈತನಿಗೆ ಮಹಾಶೈವ, ಮಜಹಾಪ್ರಭಾವ ಪ್ರದೀಪ್ತಭಾಸ ಎಂಬ ಹೆಸರುಗಳಿದ್ದುವಾಗಿ ಅವಂತಿಸುಂದರೀ ಕಥೆಯಲ್ಲಿ ಹೇಳಿದೆ. ಆದರೆ ಅವುಗಳೆಲ್ಲಾ ಬಿರುದುಗಳಾಗಿರಲೂ ಬಹುದು.
ಭಾರವಿ ರಚಿತವೆಂದು ಪರಿಚಿತವಾಗಿರುವ 18 ಸರ್ಗಗಳ ಕಿರಾತಾರ್ಜುನೀಯ ಮಹಾಕಾವ್ಯ. ಮಹಾಭಾರತದ ಒಂದು ಪ್ರಸಿದ್ಧ ಆಖ್ಯಾನದ ಮೇಲೆ ರಚಿಸಿರುವುದಾಗಿದೆ. ದ್ಯೂತದಲ್ಲಿ ಸೋತ ಯುಧಿಷ್ಠಿರ ಸಹೋದರರ ಸಮೇತ ದ್ವೈತ ವನದಲ್ಲಿರುವಾಗ ಅಲ್ಲಿಗೆ ಬಂದ ವೇದವ್ಯಾಸರ ಹೇಳಿಕೆಯಂತೆ ಅರ್ಜುನ ಈಶ್ವರನಿಂದ ನಿಂದ ಪಾಶುಪತಾಸ್ತ್ರ ಪಡೆಯಲಿಕ್ಕಾಗಿ ಇಂದ್ರಕೀಲಪರ್ವತದಲ್ಲಿ ತಪಸ್ಸುಮಾಡಲು ಹೋಗುತ್ತಾನೆ. ಅರ್ಜುನನ ಕಠಿಣ ತಪಸ್ಸನ್ನು ಭಂಗಪಡಿಸಲು ಅಪ್ಸರ ಸ್ತ್ರೀಯರೇ ಮೊದಲಾದವರು ಯತ್ನಿಸುತ್ತಾರೆ. ಆದರೆ ಅರ್ಜುನ ಮತ್ತಷ್ಟು ಏಕಾಗ್ರ ಮನಸ್ಸಿನಿಂದ ಈಶ್ವರನ ಉಪಾಸನೆಗೆ ತೊಡಗುತ್ತಾನೆ. ಈತನ ತಪೋಬಲವನ್ನು ಪರೀಕ್ಷಿಸುವುದಕ್ಕಾಗಿ ಈಶ್ವರ ಕಿರಾತ ವೇಷಧರಿಸಿ ಬರುತ್ತಾನೆ. ಒಂದು ಹಂದಿಯನ್ನು ಅರ್ಜುನ ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಕಳುಹಿಸುತ್ತಾನೆ ಅರ್ಜುನ ಹಂದಿಯ ಮೇಲೆ ಬಾಣ ಬಿಡುತ್ತಾನೆ. ಅರ್ಜುನನ ಬಾಣದಿಂದ ಹಂದಿ ಸಾಯುತ್ತದೆ. ಆದರೆ ಬಿಟ್ಟ ಬಾಣದ ವಿಷಯದಲ್ಲಿ ಕಿರಾತ ಹಾಗೂ ಅರ್ಜುನರಲ್ಲಿ ಜಗಳ ಆರಂಭವಾಗುತ್ತದೆ. ಒಂದು ಸಲ ಅರ್ಜುನ ವಿಜಯಿಯಾದರೆ ಮತ್ತೊಂದು ಸಲ ಕಿರಾತವಿಜಯಿ ಎನಿಸಿಕೊಳ್ಳುತ್ತಾನೆ. ಕೊನೆಯಲ್ಲಿ ಇಬ್ಬರೂ ಮಲ್ಲಯುದ್ಧಕ್ಕೆ ನಿಲ್ಲುತ್ತಾರೆ. ಗಾಂಡೀವಿಯ ಬಲಕ್ಕೆ ಪ್ರಸನ್ನನಾದ ಶಂಕರ ತನ್ನ ನಿಜಸ್ವರೂಪ ತೋರಿಸಿ ಪಾಶುಪತಾಸ್ತ್ರ ಕೊಟ್ಟು ಅರ್ಜುನನ ಅಭಿಲಾಷೆಯನ್ನು ಪೂರ್ಣಗೊಳಿಸುತ್ತಾನೆ. ಅರ್ಜುನ ಪಾಶುಪತಾಸ್ತ್ರ ಪಡೆಯಲು ಹೊರಡುವ ಸನ್ನಿವೇಶ, ಅವನ ತಪಸ್ಸು ಅದರ ಸಿದ್ಧಿ ಹಿನ್ನೆಲೆಯಲ್ಲಿ ಅರ್ಜುನನಿಗೂ ಕಿರಾತರೂಪಿ ಶಿವನಿಗೂ ನಡೆದ ಯುದ್ಧ - ಇದು ಕಿರಾತಾರ್ಜುನೀಯದ ಕಥಾವಸ್ತು. ಮಹಾಭಾರತದ ವನಪರ್ವದಲ್ಲಿ ಬರುವ ಕಥೆಗೂ ಕಾವ್ಯದ ಕಥೆಗೂ ವಿಶೇಷ ವ್ಯತ್ಯಾಸವಿಲ್ಲ. ಲಕ್ಷಣಬದ್ಧವಾಗಿರುವ ಕಾವ್ಯವನ್ನು ಪರಿಶೀಲಿಸಿದವರಿಗೆ ಲಾಕ್ಷಣಿಕರು ಇದನ್ನೇ ಆದರ್ಶವಾಗಿಟ್ಟುಕೊಂಡು ಮಹಾಕಾವ್ಯಲಕ್ಷಣಗಳನ್ನು ರಚಿಸಿರಬೇಕೆಂದು ತೋರದೆ ಇರದು. ಕಾವ್ಯದ 18ಸರ್ಗಗಳಲ್ಲಿ ಅಡಕವಾಗಿರುವ 18 ವರ್ಣನೆಗಳೂ ಮನೋಹರವಾಗಿವೆ. ಪಾತ್ರ ಚಿತ್ರಣದಲ್ಲೂ ವಿಷಯನಿರೂಪಣೆಯಲ್ಲೂ ಭಾರವಿಯ ಕೌಶಲ ಅಪ್ರತಿಮ; ಪ್ರತಿಭೆ ಉಜ್ವಲ. ಉಪಮಾನಗಳಿಗೆ ಕಾಳಿದಾಸ ಪ್ರಸಿದ್ಧನಾಗಿರುವಂತೆ ಅರ್ಥಗೌರವಕ್ಕೆ ಭಾರವಿ ಹೆಸರಾಗಿದ್ದಾನೆ. ಕಾಳಿದಾಸನ ಶೈಲಿ ಲಲಿತವೂ ಸುಕುಮಾರವೂ ಆಗಿದ್ದರೆ ಭಾರವಿಯದು ಗಂಭೀರ ಮತ್ತು ಪ್ರೌಢ. “ಪ್ರಕೃತಿಮಧುರಾ ಭಾರವಿಗಿರಃ” ಎಂಬುದು ಸದುಕ್ತಿಕರ್ಣಾಮೃತದ ಒಂದು ಶ್ಲೋಕದಲ್ಲಿ ಬರುವ ಭಾರವಿ ಪ್ರಶಸ್ತಿ.
ಭಾರವಿಯು ಇನ್ಯಾವುದೇ ಕಾವ್ಯಗಳನ್ನೂ ರಚಿಸಲೇ ಇಲ್ಲವೇ ಅಥವಾ ರಚಿಸಿದ್ದು ಈಗ ಅವು ಲುಪ್ತವಾಗಿಬಿಟ್ಟಿವೆಯೇ ಎಂಬುದನ್ನು ತಿಳಿಯಲು ಯಾವ ಆಧಾರವೂ ದೊರತಿಲ್ಲ. ಕಾಳಿದಾಸನ ಕಾವ್ಯಗಳಿಗೆ ಸಂಜೀವಿನಿ ವ್ಯಾಖ್ಯಾನ ಬರೆದಿರುವ ಮಲ್ಲಿನಾಥನೇ ಕಿರಾತಾರ್ಜುನೀಯಕ್ಕೆಘಂಟಾಪಥವ್ಯಾಖ್ಯಾನ” ಬರೆದಿದ್ದಾನೆ. ಭಾರವಿಯ ಕಾವ್ಯವನ್ನು ನಾರಿಕೇಳಪಾಕದಂತೆ ಎಂದು ಹೊಗಳಿದ್ದಾನೆ. ಕಾಳಿದಾಸ ಮತ್ತು ಅಶ್ವಘೋಷರಲ್ಲಿ ಕಾಣಸಿಗುವ ಚಿತ್ರಬಂಧಾದಿ ಶಬ್ಧ ಚಮತ್ಕಾರಗಳು ಭಾರವಿಯ ಕಾವ್ಯದಲ್ಲಿವೆ. ಕಿರಾತಾರ್ಜುನೀಯದ 15ನೆಯ ಸರ್ಗದ 22ನೆಯ ಶ್ಲೋಕವನ್ನು ಕೊನೆಯಿಂದ ಹಿಂದಕ್ಕೆ ಓದಿದರೆ ಅದೇ 23ನೆಯ ಶ್ಲೋಕ. ಸಂದರ್ಭಾನುಸಾರ ಅರ್ಥವೂ ಸರಿಹೋಗುತ್ತದೆ. ಒಂದು ಅಥವಾ ಎರಡೇ ಅಕ್ಷರಗಳನ್ನು ಬಳಸಿಕೊಂಡು ರಚಿತವಾದ ಶ್ಲೋಕಗಳು 16 ಬೇರೆ ಬೇರೆ ವೃತ್ತಗಳಲ್ಲಿವೆ. ಇವೆಲ್ಲವನ್ನೂ ಗಮನಿಸಿದರೆ ಭಾರವಿ ಕಾವ್ಯರಚನೆ ಮಾಡುವ ವೇಳೆಗೆ ಪಾಂಡಿತ್ಯಪ್ರದರ್ಶನ ಕವಿಗೆ ಅವಶ್ಯಗುಣವೆಂಬ ಭಾವನೆ ಬೇರು ಬಿಟ್ಟಿತ್ತೆಂದು ಕಾಣುತ್ತದೆ.

ನಿಶಿತಾಸಿರತೋಭೀಕೋ ನ್ಯಜತೇ ಮರಣಾರುಚಾ |
ಸಾರತೋ ನವಿರೋಧೀ ನಃ ಸ್ವಭಾಸೋ ಭರವಾನುತ || 15 : 22
ತನುವಾರಭಸೋ ಭಾಸ್ವಾನಧೀರೋ ವಿನತೋರಸ |
ಚಾರುಣಾ ರಮತೇ ಜನ್ಯೇ ಕೋಭೀತೋ ರಶಿತಾಶಿನಿ || 15 : 23
ಇನ್ನು ನಮ್ಮ ಕನ್ನಡ ದಲ್ಲಿನ ಶ್ರೀವಿಜಯನ ಕವಿರಾಜಮಾರ್ಗಕಾರ ಗ್ರಂಥಾರಂಭಕ್ಕೆ ಮುನ್ನ ಭಾರವಿಯನ್ನು ಸ್ಮರಿಸಿರುವುದನ್ನೂ ಇಲ್ಲಿ ಉಲ್ಲೇಖಿಸಬಹುದು. 
ಕವಿರಾಜಮಾರ್ಗ :
ಪ್ರಣುತ ಗುಣಸೂರಿ ನಾರಾ
ಯಣ ಭಾರವಿ ಕಾಳಿದಾಸ ಮಾಘಾದಿಗಳೀ
ಗಣಿದದೊಳೆ ಮಹಾಕಾವ್ಯ
ಪ್ರಣಯಮನಾಗಿಸಿದರಮಳ ಕವಿ ವೃಷಭರ್ಕಳ್ [1 : 31]
ಗಂಗ ದೊರೆಗಳಲ್ಲಿ ಅತ್ಯಂತ ಪ್ರಸಿದ್ಧರಾದವರಲ್ಲಿ ದುರ್ವಿನೀತ ಪ್ರಮುಖ. ಈತ ಸುಮಾರು ಕ್ರಿ. . 469ನೇ ಇಸವಿಯಿಂದ 529ನೇ ಇಸವಿಯ ವರೆಗೆ ಆಡಳಿತ ನಡೆಸಿದ್ದ. ಸುಮಾರು 6ನೇ ಶತಮಾನದ ಹೊತ್ತಿಗೆ ನೆಲದಲ್ಲಿ ಇದ್ದ ಕವಿಗಳಿಗೆ ಆಶ್ರಯದಾತನೂ ಮತ್ತು ಸ್ವತಃ ವಿದ್ವತ್ತುಳ್ಳ ಪ್ರಬುದ್ಧ ರಾಜನಾಗಿದ್ದ ಎನ್ನುವುದು ಗಂಗರ ಅನೇಕ ಶಾಸನಗಳಿಂದ ತಿಳಿದು ಬರುತ್ತದೆ. “ವಿದ್ವತ್ಸು ಪ್ರಥಮ ಗಣಸ್ಯ ಶ್ರೀಮತ್‍ಕೊಂಗುಣಿ ಮಹಾರಾಜಾಧಿರಾಜಸ್ಯ ಅವಿನೀತ ನಾಮ್ನಾಃಎಂದು ಶಾಸನಗಳು ಹೇಳುವುದರಿಂದ ದುರ್ವಿನೀತನ ತಂದೆ ಅವಿನೀತನೂ ಸಹ ಸ್ವತಃ ವಿದ್ವತ್ತುಳ್ಳ ರಾಜ ಎನ್ನುವುದಾಗಿ ತಿಳಿದು ಬರುತ್ತದೆ. ಆದರೆ ಅವಿನೀತನÀ ಕುರಿತಾಗಿ ಒಂದು ದಂತಕಥೆ ಇದ್ದು, ಅವಿನೀತ ತನ್ನ ಮಗ ದುರ್ವಿನೀತನನ್ನು ರಾಜ್ಯದಿಂದ ಹೊರಹಾಕಿದ ಎನ್ನುವ ಒಂದು ಕಥೆ ಪ್ರಚಲಿತದಲ್ಲಿದೆ. ಆದರೆ ಅದೇನೇ ಇರಲಿ ಅವಿನೀತನಿಗಿಂತಲೂ ಪ್ರಬುದ್ಧನಾದ ಆಡಳಿತಗಾರ ಮತ್ತು ಅವನಿಗಿಂತ ಹೆಚ್ಚು ಪಾಂಡಿತ್ಯ ಹೊಂದಿದ್ದು ತಿಳಿದು ಬರುತ್ತದೆ.

ದುರ್ವಿನೀತನು ತನ್ನ ಆಡಳಿತದ ಇಪ್ಪತ್ತನೇ ವರ್ಷದಲ್ಲಿ ಪುದಲ್ನಾಡ ರಾಷ್ಟ್ರದ ಕೋಳಿ¾್ತೂರು ಗ್ರಾಮವನ್ನುನಲ್ವತ್ತೆಂಟುವೈದಿಕ ಬ್ರಾಹ್ಮಣರಿಗೆ ಮೂವತ್ತೆರಡು ಬಗೆಯ ಪರಿಹಾರಗಳೊಂದಿಗೆ ಕೊಟ್ಟನು. ರೇಡಿಯೂರಗ್ರಾಮದಕ್ಷೇತ್ರದಾರರಿಗೆಯಾವ ತೊಂದರೆಯೂ ಆಗದಂತೆ ಗ್ರಾಮದ ಕೆರೆಯಿಂದ ನೀರು ಹಾಯಿಸುವ ಕ್ಷೇತ್ರಗಳಿಗೆ ಸೀಮಿತಗೊಳಿಸಿ, ಕೆರೆಯನ್ನು ಬಳಸಬೇಕೆಂಬುದನ್ನು ಇಲ್ಲಿ ಸ್ಪಷ್ಟಪಡಿಸಲಾಗಿದೆ. ಆರಂಭಕಾಲದ ಕನ್ನಡಲಿಪಿಯಲ್ಲಿ ಕೂನಾಚಾಯ್ರ್ಯನ ವಂಶದವನಾದ ಕೊಂಗಣಿ ಪೆಂದಟ್ಟಾರನು ಬರೆದನು. ಶಾಸನಕವಿಯು ದುರ್ವಿನೀತನಕುರಿತಾಗಿ ವಿಶೇಷ ಮಾಹಿತಿಯನ್ನು ಮೊದಲ ಬಾರಿಗೆ ಕೊಡುತ್ತಾ ದುರ್ವಿನೀತನುಶಬ್ದಾವತಾರಎನನುವ ಗ್ರಂಥವೊಂದರÀ ಕರ್ತೃವೆಂದು, ಮತ್ತುವಡ್ಡಕಥಾಮತ್ತುಕಿರಾತಾರ್ಜುನೀಯ ಹದಿನೈದನೆಯ ಸರ್ಗಕ್ಕೆ ಟೀಕೆಗಳನ್ನು ಬರೆದನೆಂದೂ ಹೇಳುವನು.ದುರ್ವಿನೀತನುಕಿರಾತಾರ್ಜುನೀಯಕ್ಕೆ ಬರೆದ ಟೀಕೆಯ ಬಗ್ಗೆ ಅನೇಕ ಕಡೆಗಳಲ್ಲಿ ಉಲ್ಲೇಖಗಳಿದ್ದರೂವಡ್ಡಕಥಾಮತ್ತುಶಬ್ದಾವತಾರ ಪ್ರಸ್ತಾಪ ಉತ್ತನೂರಿನ ತಾಮ್ರಪಟದಲ್ಲಿ ಮೊದಲ ಬಾರಿಗೆ ಬರುತ್ತದೆ. ಇವುಗಳಲ್ಲಿ ಸಂಸ್ಕøತದಲ್ಲಿಕೀರಾತಾರ್ಜುನೀಯದ ಹದಿನೈದನೆಯ ಸಗ್ರ್ಗಕ್ಕೆ ಟೀಕೆ ಬರೆದ ಬಗ್ಗೆ ಮತ್ತು ಮೂಲ ಪೈಶಾಚಿ ಬಾಷೆಯಲ್ಲಿ ಗುಣಾಡ್ಯನುಬರೆದ ಬೃಹತ್ಕಥೆಯನ್ನು ಸಂಸ್ಕøತದಲ್ಲಿ ವಡ್ಡಕಥಾ ಬರೆದ ಬಗ್ಗೆ ಉಲ್ಲೇಖಗಳು ಸಿಗುತ್ತವೆ. “ಶಬ್ದಾವತಾರ ಕಾರೇಣ ದೇವಭಾರತೀ ನಿಬದ್ಧ ವಡ್ಡಕಥೇನ ಕಿರಾತಾರ್ಜುನೀಯ ಪಂಚದಶ ಸರ್ಗ ಟೀಕಾಕಾರೇಣ ದುರ್ವಿನೀತ ನಾಮಧೇಯೇನಎಂದು ಬರೆಯಲ್ಲಟ್ಟಿದೆ.
ದೀವೆ ಆಗರದ ಶಾಸನದಲ್ಲಿಯೂ ಸಹ ಕಿರಾತಾರ್ಜುನೀಯದ ಹದಿನೈದನೆಯ ಸರ್ಗಕ್ಕೆ ಟೀಕೆ ಬರೆದಿರುವ ಬಗ್ಗೆ ಉಲ್ಲೇಖಿಸಿದ್ದಾನೆ.
ಗುಮ್ಮರೆಡ್ಡಿ ತಾಮ್ರಪಟದಲ್ಲಿ ದುರ್ವಿನೀತನು ತನ್ನ ಆಳ್ವಿಕೆಯ ನಲ್ವತ್ತನೇ ವರ್ಷ ಮತ್ತು ತನ್ನ ಹುಟ್ಟುಹಬ್ಬದ ಸಂದರ್ಭದಲಿ ಅಂದರೆ ಸಾಮಾನ್ಯವಾಗಿ 569ನೇ ಇಸವಿಯ ಆಸುಪಾಸಿನಲ್ಲ್ಲಿ ಇನ್ನೊಂದು ಬ್ರಹ್ಮದೇಯವನ್ನು ನಿರ್ಮಾಣಮಾಡಿದನು. ಶಾಸನದಲ್ಲಿ ಸಹ ಕಿರಾತಾರ್ಜುನೀಯದ ಹದಿನೈದನೆಯ ಸರ್ಗಕ್ಕೆ ಟೀಕೆ ಬರೆದಿರುವ ಬಗ್ಗೆ ಉಲ್ಲೇಖಿಸಿದ್ದಾನೆ.


No comments:

Post a Comment