Search This Blog

Tuesday 12 December 2017

ಬಾದಾಮಿಗೆ ಹೋದರೆ ಇದನ್ನೊಮ್ಮೆ ದಯವಿಟ್ಟು ನೋಡಿ...

ಹೌದು ಈ ಶಾಸನ ಬಾದಾಮಿಯನ್ನು ಸಂದರ್ಶಿಸುವವರಿಗೆ ಆಶ್ಚರ್ಯವನ್ನು ತಂದೊಡ್ಡುತ್ತದೆ. ಬಾದಾಮಿಯ ಉತ್ತರ ಕೋಟೆಯಲ್ಲಿ ಕಾಣ ಸಿಗುವ ಈ ಶಾಸನ. ಸಂಸ್ಕೃತ ಭಾಷೆ ಮತ್ತು ಕನ್ನಡ ಲಿಪಿಯಲ್ಲಿದೆ. ಶಾಸನ ಕೇವಲ ಐದು ಸಾಲುಗಳಲ್ಲಿ ಬರೆಯಲ್ಪಟ್ಟಿದೆ. ಈ ಶಸನವನ್ನು ನೆಲ ಮಟ್ಟದಿಂದ ೫೦ ಅಡಿ ಮೇಲಕ್ಕೆ ಮತ್ತು ಮೇಲಿನಿಂದ ಐವತು ಅಡಿಗಳಷ್ಟು ಕೆಳಕ್ಕೆ ಅಂದರೆ ಮಧ್ಯದಲ್ಲಿ ಬರೆಯಲಾಗಿದೆ. ಇದನ್ನು ಈಗ ಎದುರು ನಿಂತು ಫೋಟೋ ತೆಗೆಯುವುದಂತೂ ಬಹಳ ಕಷ್ಟ. ನೇರ ಎದುರಿನಿಂದ ನೋಡಲು ಸಾಧ್ಯವೇ ಇಲ್ಲ. ಆಧುನಿಕ ಪರಿಕರದಿಂದ ಸಾಧ್ಯವೇನೋ. ಆದರೂ ಶಸನ ಶಿಲ್ಪಿ ಯಾಕೆ ಹಾಗೆ ಬರೆದನೋ ತಿಳಿಯುತ್ತಿಲ್ಲ. ಪ್ರಾಯಶ: ಶಸನ ಬರೆಯುವಾಗ ಅಲ್ಲಿತನಕ ನೆಲಮಟ್ಟ ಇದ್ದಿರಬಹುದು ಆಮೇಲೆ ಕೆಳಗೆ ಕೊರೆದಿರಲೂ ಬಹುದು ಆದರೂ ಇದೊಂದು ಮಹತ್ವದ ಶಾಸನ. ಇದು ಒಂದನೇ ಪೊಲೆಕೇಶಿಯ ಶಾಸನ ಮತ್ತು ಚಳುಕ್ಯರ ಕಾಲದ ಮೊದಲ ಶಾಸನ.
ಮೊದಲನೇ ಪುಲಕೇಶಿ ರಣರಾಗನ ಮಗ ಈತನನ್ನು ಚಾಳುಕ್ಯ ಮನೆತನದ ಮೂಲಪುರುಷನೆಂದು ಪರಿಗಣಿಸಲಾಗಿದೆ. ಬಾದಾಮಿ ಚಳುಕ್ಯರ ಸ್ವತಂತ್ರವಾದ ರಾಜ್ಯಕ್ಕೆ ಭದ್ರ ಬುನಾದಿ ಹಾಕಿದವನು ಈತ. ಕದಂಬರನ್ನು ಸೋಲಿಸಿದ ಬಳಿಕ ಇವನು ಬಾದಾಮಿಯನ್ನು ತನ್ನ ರಾಜಧಾನಿಯನ್ನಾಗಿ ಆರಿಸಿಕೊಂಡು, ಬಾದಾಮಿಯ ಗುಡ್ಡದ ಮೇಲೆ ಕೋಟೆಯೊಂದನ್ನು ಕಟ್ಟಿಸಿದ. ಬಾದಾಮಿಯಲ್ಲಿ ದೊರೆತ ಶಕವರ್ಷ 465 ಅಂದರೆ ಕ್ರಿ.. 543ಇವನ ಶಾಸನ ಈತನನ್ನು ಚಲಿಕ್ಯವಲ್ಲಭೇಶ್ವರನೆಂದು ಕರೆದಿದೆ. ಳುಕ್ಯ ಅರಸರು ಅನಂತರದ ಕಾಲದಲ್ಲಿ ವಲ್ಲಭನೆಂಬ ಬಿರುದು ಪಡೆದು ಬಿರುದಿನಿಂದಲೇ ಪ್ರಸಿದ್ಧರಾದರು. ಪೃಥ್ವೀವಲ್ಲಭ ಎಂಬುದು ಸಹ ಅವರ ಬಿರುದುಗಳಲ್ಲಿ ಒಂದು. ವಲ್ಲಭನೆಂಬ ಬಿರುದನ್ನು ಮೊದಲು ಧರಿಸಿದವನೇ ಪೊಲೆಕೇಶಿ ಎಂಬುದು ಇದರಿಂದ ಈಗ ತಿಳಿದಿದೆ. ರಣವಿಕ್ರಮನೆಂಬುದು ಈತನ ಇನ್ನೊಂದು ಹೆಸರು.

ಪೊಲೆಕೇಶಿ ಅಶ್ವಮೇಧಾದಿ ಯಾಗಗಳನ್ನು ಮಾಡಿದನೆಂದು ಅವನ ಬಾದಾಮಿ ಶಾಸನ ಸಾರುತ್ತದೆ. ಮಂಗಲೇಶನ ಮಹಾಕೂಟ ಶಾಸನದಲ್ಲಿ ಈತ ಅಗ್ನಿಷ್ಟೋಮ. ಅಗ್ನಿಚಯನ, ವಾಜಪೇಯ, ಬಹುಸುವರ್ಣ. ಪೌಂಡರೀಕ ಮತ್ತು ಹಿರಣ್ಯಗರ್ಭ ಯಜ್ಞಗಳನ್ನು ಮಾಡಿದನೆಂದು ಹೇಳಿದೆ. ಇದು ಬಾದಾಮಿಯ ಶಾಸನದಲ್ಲಿಯ ಹೇಳಿಕೆಯನ್ನು ಸಮರ್ಥಿಸುತ್ತದೆ. ಈ ಒಂದು ದೃಷ್ಟಿಯಿಂದ ನೋಡುವುದಾದರೆ ಕದಂಬರನ್ನು ಸೋಲಿಸಿದ ಪೊಲೆಕೇಶಿ ತನ್ನ ರಾಜ್ಯವನ್ನು ವಿಸ್ತರಿಸಲು ಇತರ ಯತ್ನಗಳನ್ನೂ ಮಾಡಿದನೆನ್ನಬಹುದು. ಸೇಂದ್ರಕರ ಶ್ರೀವಲ್ಲಭ ಅಲ್ಲಶಕ್ತಿ ಈತನ ಕಿರಿಯ ಸಮಕಾಲೀನನಾಗಿದ್ದ. ಇವನ ಸಾಮಂತರಲ್ಲೊಬ್ಬನಾಗಿದ್ದ. ಪೊಲೆಕೇಶಿಗೆ ಒಪ್ಪುರ ಕುಲದ ದುರ್ಲಭದೇವಿ ಮತ್ತು ಇಂದುಕಾಂತಿ ಎಂಬಿಬ್ಬರು ಪತ್ನಿಯರಿದ್ದರು. ಕೀರ್ತಿವರ್ಮ ಮತ್ತು ಮಂಗಲೇಶ ಇವನ ಮಕ್ಕಳು. ಮುಧೋಳ ತಾಮ್ರಶಾಸನದ ಕರ್ತೃವಾದ ಪೂಗವರ್ಮ ಈತನ ಇನ್ನೊಬ್ಬ ಮಗನೆಂದೂ ಇವನೇ ಹಿರಿಯನಾಗಿದ್ದನೆಂದೂ ತಂದೆ ಜೀವಿಸಿದ್ದಾಗಲೇ ಇವನು ಮರಣಹೊಂದಿದರಿಂದ ಅನಂತರದ ವಂಶಾವಳಿಗಳಲ್ಲಿ ಇವನ ಉಲ್ಲೇಖ ಕಂಡುಬರುವುದಿಲ್ಲವೆಂದೂ ಕೆಲವರ ಅಭಿಪ್ರಾಯ. ಆದರೆ ಪೂಗವರ್ಮ ಎಂಬುದು ಕೀತಿವರ್ಮನ ಇನ್ನೊಂದು ಹೆಸರಾಗಿರಬಹುದೆಂದು ಅನೇಕರು ಹೇಳುತ್ತಾರೆ.



No comments:

Post a Comment