Search This Blog

Sunday 17 December 2017

ಮಧುಪಾನ ಮುದಿತ ಮಧುಕರ - ಕುಮಾರ ಗುಪ್ತನ ದಶಪುರ

ಮಧುಪಾನಮುದಿತ ಮಧುಕರ ಕುಲೋಪಗೀತ ನಗನೈಕ ಪೃಥುಶಾಖೇ |
ಕಾಲೇ ನವಕುಸುಮೋದ್ಗಮ ದಂತುರಕಾಂತ ಪ್ರಚುರ ರೋದ್ಧ್ರೇ || ಈ ಸಾಲುಗಳು ಅದೇಕೋ ನನ್ನನ್ನು ಕಟ್ಟಿಹಾಕುತ್ತವೆ. ಜೇನಿನ ಸವಿಯನ್ನು ಕುಡಿದು ಸವಿಯಾದ ......................ಮಾಂಡಸೋರ್ ನ ಶಾಸನದ ಸಾಲುಗಳಿವು.
ಮೊದಲನೇ ಕುಮಾರಗುಪ್ತನು ಗುಪ್ತ ಸಾಮ್ರಾಜ್ಯದಲ್ಲಿ ಪ್ರಸಿದ್ಧನಾದ ಎರಡನೆಯ ಚಂದ್ರಗುಪ್ತ ಮತ್ತು ಆತನ ಪಟ್ಟದ ರಾಣಿ ಧ್ರುವಾ ದೇವಿಯ ಮಗ. ಇವನಿಗೆ ಮಹೇಂದ್ರಾದಿತ್ಯನೆಂಬ ಬಿರುದಿತ್ತು. ತನ್ನ ತಂದೆಯ ತರುವಾಯ ಈತ ಸಿಂಹಾಸನವನ್ನೇರಿ 415 ರಿಂದ 455 ವರೆಗೆ 40 ವರ್ಷಕಾಲ ರಾಜ್ಯವಾಳಿದ. ಈತ ಸ್ಕಂಧ ಕಾರ್ತಿಕೇಯನ ಪರಮಭಕ್ತ. ಆ ದೇವತೆಯ ಚಿತ್ರವಿದ್ದ ನಾಣ್ಯಗಳು ಅವನ ಕಾಲದಲ್ಲಿಯೇ ಹೊರಡಿಸಿದ. ಕಾಳಿದಾಸ ಮಹಾಕವಿಯ ಕುಮಾರಸಂಭವ ಕಾವ್ಯದ ನಾಯಕ ಕುಮಾರಗುಪ್ತನೆಂಬುದು ವಿದ್ವಾಂಸರ ಅಭಿಪ್ರಾಯ. ಕಾಳಿದಾಸನ ಕಾವ್ಯದಲ್ಲಿ ದಶಪುರದ ವರ್ಣನೆ ಕಂಡುಬರುತ್ತದೆ. ಇವನು ಅನೇಕ ದಂಡಯಾತ್ರೆಗಳನ್ನು ಕೈಗೊಂಡು ಅಶ್ವಮೇಧ ಯಾಗ ಮಾಡಿದ. ಕುಮಾರಗುಪ್ತನ ಆಡಳಿತ ಕಾಲದಲ್ಲಿ ಶಾಂತಿ ಸುಭದ್ರತೆಗಳು ನೆಲಸಿದ್ದುವು. ಆದರೆ ಇವನ ಆಳ್ವಿಕೆಯ ಕೊನೆಯ ಭಾಗದಲ್ಲಿ ಹೂಣರ ದಾಳಿ ಆರಂಭವಾಯಿತು. ಇವನೂ ಇವ ಮಗ ಸ್ಕಂಧಗುಪ್ತನೂ ಪರಾಕ್ರಮದಿಂದ ಹೋರಾಡಿ ಹೂಣರ ದಾಳಿಯನ್ನು ಹಿಮ್ಮೆಟ್ಟಿಸಿದರು. ಕುಮಾರ ಗುಪ್ತನ ಮರಣಾನಂತರ ಸ್ಕಂಧಗುಪ್ತ ಪಟ್ಟಕ್ಕೆ ಬಂದ. 
ಈಗ ಪ್ರಸ್ತುತ ಶಾಸನ ಮಾಂಡಸೋರ್ ಶಾಸನದ ಸಾಲುಗಳು ಇದರಲ್ಲಿ ಮೊದಲಿನ ೨೩ಶ್ಲೋಕಗಳು. ಕುಮಾರಗುಪ್ತನಿಗೆ ಸೇರಿದ್ದು ೨೪ ಮತ್ತು ೨೫ನೇ ಶ್ಲೋಕಗಳು ಬಂಧುವರ್ಮನಿಗೆ ಸೇರಿವೆ. ೩೦ನೇ ಶ್ಲೋಕವು ಈತ ಕಟ್ಟಿಸಿದ ಸೂರ್ಯದೇವಾಲಯದ ಕುರಿತು ಬೆಳಕು ಚೆಲ್ಲುತ್ತದೆ. ಈತನ ಶಾಸನದ ಸಾಲುಗಳಂತೂ ಎಲ್ಲವೂ ಕಾವ್ಯಮಯವಾಗಿದೆ.
ಇದು ದಶಪುರದ ಸೂರ್ಯ ದೇವಾಲಯದ ಸೂರ್ಯನನ್ನು ಸ್ತುತಿಸುವ ಶ್ಲೋಕ, ಈ ಶಾಸನವನ್ನು ಕ್ರಿ ಶ ೪೯೩ ಮತ್ತು ೫೨೯ ರಲ್ಲಿ ಖಂಡರಿಸಿದ್ದು. ವತ್ಸ ಭಟ್ಟನೆನ್ನುವ ಕವಿಯಿಂದ ರಚಿಸಲ್ಪಟ್ಟ ಶಾಸನ ಪಾಠ.
ಇದು ದಶಪುರದಕುರಿತಾದ ಶ್ಲೋಕ.
ತೇ ದೇಶ ಪಾರ್ತ್ಥಿವ ಗುಣಾಪ ಹೃತಾಃ ಪ್ರಕಾಶಮದ್ಪ್ವಾಧಿಜಾನ್ಯ ವಿರಲಾನ್ಯ ಸುಖಾನ್ಯಪಾಸ್ಯ |
ಜಾತಾದರಾ ದಶಪುರಂ ಪ್ರಥಮಂ ಮನೊಭಿರನ್ವಾಗತಾಸ್ಸಸುತ ಬಂಧು ಜನಸ್ಸಮೇತ್ಯ ||

ಇದು ಹೇಮಂತ ಋತುವಿನ ಚಳಿಗಾಲದ ವರ್ಣನೆ
ಸ್ಪಷ್ಟೈರಶೋಕತರು ಕೇತಕ ಸಿಂಧುವಾರ ಲೋಲಾತಿಮುಕ್ತಕಲತಾ ಮದಯಂತಿಕಾನಾಂ |
ಪುಷ್ಪೋದ್ಗಮೈರಭಿನವೈರಧಿಗಮ್ಯನೂನಮೈಕ್ಯಂ ವುಜ್ರಂಭಿತಶರೇ ಹರಪೂತ ದೇಹೇ

ಇದು ದಶಪುರದ ಸೂರ್ಯ ದೇವಾಲಯದ ಸೂರ್ಯನ ಕುರಿತಾದ ಶ್ಲೋಕ
"ಶಶಿನೇವ ನಭೋ ವಿಮಲಂ ಕೌಸ್ತುಭ ಮಣಿನೇವ ಶಾಂರ್ಗಿಣೋ ವಕ್ಷಃ |
ಭವನ ವರೇಣ ತಥೇದಂ ಪುರಮಖಿಲಮಲಂಕೃತ ಮುದಾರಂ ||
ಅಮಲಿನ ಶಶಿಲೇಖಾದಂತುರಂ ಪಿಂಗಲಾನಾಂ ಪರಿವಹತಿ ಸಮೂಹಂ ಯಾವದೀಶೋ ಜಟಾನಾಂ |
ವಿಕಚಕಮಲಮಾಲಾಮಂಸಸಕ್ತಾಂ ಚ ಶಾಂರ್ಗೀ ಭವನಮಿದಮುದಾರಂ ಶಾಶ್ವತಂ ತಾವದಸ್ತು || "

ಮಧುಪಾನಮುದಿತ ಮಧುಕರ ಕುಲೋಪಗೀತ ನಗನೈಕ ಪೃಥುಶಾಖೇ |
ಕಾಲೇ ನವಕುಸುಮೋದ್ಗಮ ದಂತುರಕಾಂತ ಪ್ರಚುರ ರೋದ್ಧ್ರೇ ||








No comments:

Post a Comment