Search This Blog

Sunday 24 December 2017

ಜ್ಯೋತಿರ್ಮಯಂ ಬ್ರಹ್ಮ ವಿದಾಂ ಶರಣ್ಯಂ - ದ್ಯಾವಾ ಪೃಥಿವ್ಯೋ ಪೃಥಿತ ಪ್ರಭಾವಃ

ಬ್ರಾಹ್ಮಿಯಿಂದ ಕಳಚಿಕೊಂಡು ಸಂಸ್ಕೃತಭಾಷೆ ಮತ್ತು ಕನ್ನಡ ಲಿಪಿಗೆ ಬಂದ ಕದಂಬರ ಭಾಷಾ ಮತ್ತು ಲಿಪಿ ಮಾಧ್ಯಮದಲ್ಲಿ ಶಾಸನಗಳಂತೂ ಸಾಹಿತ್ಯಾಸಕ್ತರಿಗೆ ದೊಡ್ದ ಆಕರವನ್ನೇ ಸೃಷ್ಟಿಸಿತು.
ಕದಂಬರ ಶಾಸನಗಳನ್ನು ಒಮ್ಮೆ ಓದಿಕೊಂಡರೆ ಸಾಲದು ಅದು ಪುನಃ ಪುನಃ ಓದಿದಾಗ ಅದರ ಅರ್ಥವೇ ವಿಸ್ತಾರವಾಗುತ್ತಾ ಸಾಗುತ್ತದೆ. ಈ ಶಾಸನ ಕುಬ್ಜನಿಗಿಂತ ಮೊದಲೇ ಬಂದಿರುವ ಶಾಸನ. ಮಹಾವಿಷ್ಣುವಿನ ಶ್ಲೋಕದಿಂದ ಆರಂಭವಾಗುವ ಈ ಶಾಸನ ದ್ಯಾವಾಪೃಥಿವಿಗೆ ಕದಂಬರ ರಾಜ್ಯವನ್ನು ಹೋಲಿಸುತ್ತದೆ.

ಜ್ಯೋತಿರ್ಮಯಂ ಬ್ರಹ್ಮ ವಿದಾಂ ಶರಣ್ಯಂ ವಿಶ್ವಸ್ಯಕರ್ತಾರಮನೇಕರೂಪಂ |
ವಿಭುಂಪತಿಂ ಸ್ಥಾವರ ಜಂಗಮಾನಾಂ ವಿಷ್ಣುಂನಮಸ್ಯಾಮಿ ತದೇಕ ಚಿತ್ತಂ ||

ಹಾರಿತ್ಯುದಿತಾದಿ ಸರ್ಗೇ ಕದಂಬ ವಂಶೇ ನಭಸೀವ ಸೂರ್ಯಃ |
ಕಾಕುಸ್ಥ ವರ್ಮೇತಿ ನೃಪೋ ಬಭೂವ ದ್ಯಾವಾ ಪೃಥಿವ್ಯೋ ಪೃಥಿತ ಪ್ರಭಾವಃ ||


ಕ್ರಿ. ಶ. ೫ನೇ ಶತಮಾನದ ಬನವಾಸಿಯ ಕದಂಬರ ಮೃಗೇಶವರ್ಮನ ಶಾಸನದ ಸಾಲು. ಈ ಸಾಲುಗಳು ಎಷ್ಟು ಸುಂದರವೋ ಈ ಲಿಪಿಯೂ ಸಹ ಅತ್ಯಂತ ಸುಂದರ. ಸಮ ಸಾಲುಗಳಲ್ಲಿ ಬರೆಯಲಾಗಿದೆ. ನಾನು ಗಮನಿಸಿದಂತೆ ಕದಂಬರ ಕಾಲದಲ್ಲಿ ಲಿಪಿಯ ಬಗ್ಗೆ ಹೆಚ್ಚು ಆಸ್ಥೆ ವಹಿಸಿದಂತೆ ಕಾಣುತ್ತದೆ. ತಾಳಗುಂದದ ಸ್ತಂಬ ಶಾಸನ ಇರಬಹುದು ಗುಡ್ನಾಪುರ ಶಾಸನ ಇರಬಹುದು ಸಾಹಿತ್ಯಿಕ ದೃಷ್ಟಿಯಿಂದ ಎಷ್ಟು ಮುಖ್ಯವೋ ಲಿಪಿಯ ದೃಷ್ಟಿಯಿಂದಲೂ ಅಷ್ಟೆ ಪ್ರಾಧಾನ್ಯತೆ ಪಡೆಯುತ್ತದೆ. ಇದು ಕೂಡಾ ಕುಬ್ಜನ ತಾಳಗುಂದ ಶಾಸನದಂತೆಯೇ ಅಕ್ಷರ ಖಂಡರಿಸಲಾಗಿದೆ. ಪ್ರತಿಯೊಂದು ಅಕ್ಷರ ಬರೆಯುವಾಗಲೂ ಬಹಳ ಜಾಗ್ರತೆ ವಹಿಸಿ ಸ್ವಲ್ಪವೂ ಮೇಲಕ್ಕೆ ಕೆಳಕ್ಕೆ ಬರದಂತೆ ಸುಂದರವಾಗಿ ಖಂಡರಿಸಲಾಗಿದೆ. ಆದರೆ ಸಾಲುಗಳು ಮಾತ್ರ ಗುಡ್ನಾಪುರ ಶಾಸನದಂತೆಯೇ ಸಾಲುಗಳು ಅಸ್ತವ್ಯಸ್ತವಾಗಿವೆ. ತುಂಬಾ ಅದ್ಭುತ ಸಾಲುಗಳು. ಸ್ವರ್ಗದ ಮತ್ತು ಭೂಮಿಯಲ್ಲಿ ಪ್ರಭಾವ ಉಳ್ಳವನು. ಆಕಾಶದ ಸೂರ್ಯನಂತೆ ಕದಂಬ ವಂಶದ ಸೂರ್ಯ ಹಾರೀತ ಗೋತ್ರದ ಕಾಕುಸ್ಥವರ್ಮ.


No comments:

Post a Comment