Search This Blog

Thursday 14 December 2017

ವಾಕ್ಪತಿ ರಾಜನೇ ಕವಿಮುಂಜ - ಭೋಜ.

ಯಾಕೋ ಮೊನ್ನೆಯಿಂದ ಭೋಜನ ನೆನಪು ಕಾಡುತ್ತಿತ್ತು ಇತಿಹಾಸದಲ್ಲಿ ಸುಪಾರಿ ಕೊಟ್ಟು ಕೊಲ್ಲಿಸುವ ಘಟನೆಗಳು ಬಂದು ಸುಳಿದಾಡುತ್ತವೆ ಆದರೆ ಅವು ಯಶಸ್ಸು ಕಾಣ್ಭಿವುದಿಲ್ಲ ಹಾಗಂತ ಕೊಟ್ಟವರೂ ದೊಡ್ದವರಾದರು ಬದುಕಿದವರೂ ದೊಡ್ದವರಾದರು ಚಲುಕ್ಯರ ಕಾಲದಲ್ಲೂ ಸಹ ಕಾಣ ಸಿಗುತ್ತದೆ. ಈ ಪರಮಾರರಲ್ಲೂ ಸಿಗುತ್ತದೆ. ಮುಂಜ ಸ್ವತಃ ಕವಿ ಸಾಹಿತಿ. ಆದರೆ ಭೋಜ ಇನ್ನೂ ದೊಡ್ಡ ಸಾಹಿತಿಯಾಗಿ ಬೆಳೆದ. ಇತಿಹಾಸವೇ ಹಾಗೇ...........
ಆದರೆ ಬೇಸರವಾಗುವುದು ರಾಜಕುಮಾರ್ ಅಭಿನಯದ ಕಾಳಿದಾಸ ನೋಡಿದಮೇಲೆ. ಒಂದಕ್ಕೊಂದು ಸಂಬಂಧವೇ ಇಲ್ಲದ ಕಟ್ಟು ಕಥೆಗಳ ಹಂದರ. ಹಾಗಂತ ಭೋಜನ ಕಾಲದಲ್ಲಿ ಶಿಲ್ಪಿಯೊಬ್ಬ ಕಾಳಿದಾಸ ನೆಂದು ಇದ್ದ !!!!! ಆದರೆ ಆತ ಶಾಕುಂತಲೆಯ ಕಾಳಿದಾಸಲ್ಲ. ಸ್ವಲ್ಪ ಮುಂದೆ ಓದಿ .....
ಅಸ್ತ್ಯೂರ್ವಿಘ್ನಂ ಪ್ರತೀಚ್ಯಾಂ ಹಿಮಗಿರಿ ತನಯಃ ಸಿದ್ಧ ದಾಂಪತ್ಯ ಸಿದ್ಧೇಃ| 
ಸ್ಥಾನಂ ಚ ಜ್ಞಾನಭಾಜಾಮಭಿಮತ ಫಲದೋ ಖರ್ವಿರಃ ಸೋರ್ಬುಧಾಖ್ಯಃ || 
ವಿಶ್ವಾಮಿತ್ರ ವಶಿಷ್ಠಾದಹರತ ಬಲತೋ ಯತ್ರಗಾಂ ತತ್ಪ್ರಭಾವಾ | 
ಜ್ಞಜ್ಞೇ ವೀರೋಗ್ನಿ ಕುಂಡಾದ್ರಿಪುಬಲ ನಿಧನಂ ಯಶ್ಚ ಕಾರೈಕ ಏವಂ || 
ಮಾರಯಿತ್ವಾ ಪರಾನ್ ಧೇನು ಮಾನಿನ್ಯೇ ಸ ತತೋ ಮುನಿಃ 
ಉವಾಚ ಪರಮಾರಾಖ್ಯಃ ಪಾರ್ಥಿವೇಂದ್ರೋ ಭವಿಷ್ಯಸಿ || ಹೀಗೆ ಪರಮಾರ ವಂಶದ ಬಗ್ಗೆ ಉದಯಪುರದಲ್ಲಿರುವ ಶಾಸನದಲ್ಲಿ ಮತ್ತು "ಪದ್ಮಗುಪ್ತ"ನಿಂದ ಬರೆಯಲ್ಪಟ್ಟ "ಪರಿಮಳಾ"ಎನ್ನುವ ಗ್ರಂಥದ ನವಸಾಹಸಾಂಕ ಚರಿತದ ೧೧ನೇ ಸರ್ಗದಿಂದ ಪರಮಾರರು ವಶಿಷ್ಠಕುಲ(ಗೋತ್ರ)ದವರೆಂದು ತಿಳಿದು ಬರುತ್ತದೆ. 
ಭೋಜನು ತನ್ನ "ಸರಸ್ವತೀ ಕಂಠಾಭರಣ"ದ ನಾಯಕಗುಣದಲ್ಲಿ ಮಹಾಕುಲೀನತ್ವದ ಉದಾಹರಣೆಗೆ ತನ್ನ ವಂಶವನ್ನೇ ಉದಾಹರಿಸಿಕೊಂಡಿದ್ದಾನೆ. 
ಪರಮಾರ ವಂಶವು ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಮರೆಯಲು ಸಾಧ್ಯವೇ ಇಲ್ಲ ಅನ್ನುವಷ್ಟು. ಆ ವಂಶಸ್ಥ ರಾಜರೆಲ್ಲರೂ ಭಾಷಾಭಿಮಾನಿಗಳೂ ಸಾಹಿತ್ಯಾಭಿಮಾನಿಗಳಾಗಿದ್ದರು ಎನ್ನುವುದು ಧರ್ ಮತ್ತು ಉದಯಪುರ ಶಾಸನಗಳಿಂದ ತಿಳಿದು ಬರುತ್ತದೆ. ಇವರ ವಂಶದ ಮುಂಜ(ವಾಕ್ಪತಿ ರಾಜ) ಸ್ವತಃ ಸಾಹಿತಿಯಾಗಿದ್ದ ಈತನ ಆಸ್ಥಾನ ಕವಿ ಧನಪಾಲ ಎನ್ನುವವನು "ತಿಲಕ ಮಂಜರಿ" ಎನ್ನುವ ಸಂಸ್ಕೃತ ಗ್ರಂಥ ರಚಿಸಿದ್ದ ಎನ್ನುವುದು ತಿಳಿದು ಬರುತ್ತದೆ. ಈತನ ತಮ್ಮನ ಮಗನೇ ಪ್ರಸಿದ್ಧನಾದ ಭೋಜರಾಜ. ಭೋಜನ ತಂದೆ ಸಿಂಧುಲ ಅಥವಾ ಸಿಂಧುರಾಜ. ಈತ ಹರ್ಷನ ಮೊಮ್ಮಗ. ಶೈವ ಪರಂಪರೆಯಲ್ಲಿ ಆಕ್ತನಾಗಿದ್ದ ಈತ ಅನೇಕ ಶಿವ ಮಂದಿರಗಳನ್ನು ಕಟ್ಟಿಸಿದ ಉದಾಹರಣೆಗಳು ಸಿಗುತ್ತವೆ. ಅವುಗಳಲ್ಲಿ ಭೋಜ್ಪುರದ ಭೋಜೇಶ್ವರ ದೇವಾಲಯ ಅತ್ಯಂತ ಪ್ರಸಿದ್ಧವಾದದ್ದು. ಭೋಜನಿಂದ ಬರೆಯಲ್ಪಟ್ಟ "ಯೋಗಸೂತ್ರವೃತ್ತಿ"ಯಲ್ಲಿ "ಶ್ರೀ ರಣರಂಗಮಲ್ಲ ನೃಪತೇಃ " ಎಂದಿರುವುದು ಈತನ ಬಿರುದುಗಳಲ್ಲಿ ಒಂದು.
ಭೋಜನು ಕ್ರಿ. ಶ. ೧೦೪೨ರಲ್ಲಿ "ರಾಜ ಮೃಗಾಂಕ" ಎನ್ನುವ ಗ್ರಂಥವನ್ನು ಬರೆದುದಾಗಿ ಆ ಗ್ರಂಥದ ಪ್ರಾರಂಭಶ್ಲೋಕದಿಂದ ತಿಳಿದು ಬರುತ್ತದೆ. 
ಬಲ್ಲಾಳ ಸೇನನ "ಭೋಜ ಪ್ರಬಂಧ" ದಲ್ಲಿ ಸಿಂಧುಲನು ಭೋಜನ ತಂದೆಯಾಗಿರದೇ ಅಣ್ಣನಾಗಿದ್ದು ಅವನು ಸಾಯುವ ಸಮಯದಲ್ಲಿ ತಮ್ಮನಾದ ಮುಂಜನ ವಶಕ್ಕೆ ಚಿಕ್ಕವನಾದ ಭೋಜನನ್ನು ಒಪ್ಪಿಸಿ ರಕ್ಷಿಸ ತಕ್ಕದೆಂದು ಹೇಳಲಾಗಿದೆ. ಆದರೆ ಭೋಜನ ಆಡಳಿತದ ಆರಂಭಿಕ ಸಮಯವೇ ಗೊಂದಲವಾಗಿದ್ದು ಅದು ಭೋಜ ಪ್ರಬಂಧವನ್ನು ಇತಿಹಾಸದಿಂದ ಬೇರ್ಪಡಿಸಿ ಅದೊಂದು ಪ್ರಬಂಧವಷ್ಟೇ ಅನ್ನುವುದು ತಿಳಿದು ಬರುತ್ತದೆ.
ಭೋಜನು ಜ್ಯೋತಿಷ್ಯ, ಶಿಲ್ಪ ಶಾಸ್ತ್ರ , ಮತ್ತು ಕಾವ್ಯಗಳ ಕುರಿತಾಗಿ ಅನೇಕ ಗ್ರಂಥ ಬರೆದ ಕುರಿತು ತಿಳಿದು ಬರುತ್ತದೆ. ಶಾಸನಗಳಿಂದ ತಿಳಿದು ಬರುವ ಅನೇಕ ಗ್ರಂಥಗಳು ಈಗ ಉಪಲಬ್ದವಿರುವುದಿಲ್ಲ. ಆದರೆ ಶಿಲ್ಪ ಶಾಸತ್ರ ಬರೆದವನು ಬೇರೆಯವನು ಎನ್ನುವ ವಾದವೂ ಇದೆ ಅದಿನ್ನೂ ಪೂರ್ಣಗೊಂಡಿಲ್ಲ. ಮತ್ತು ಅದನ್ನಿಲ್ಲಿ ನಾನು ಪ್ರ್ಸ್ತಾಪಿಸುತ್ತಿಲ್ಲ ಅದರ ಬಗ್ಗೆ ದೀರ್ಘ ಲೇಖನದ ನಿರೀಕ್ಷೆ.
ವಾತಾಭ್ರವಿಭ್ರಮಮಿದಂ ವಸುಧಾಧಿಪತ್ಯಮಾಪಾತ ಮಾತ್ರ ಮಧುರೋವಿಷಯೋಪಭೋಗಃ |
ಪ್ರಾಣಸ್ತೃಣಾಗ್ರ ಜಲಬಿಂದು ಸಮಾನರಾಣಾಂ ಧರ್ಮಸ್ಸಖಾಪರಮಹೋ ಪರಲೋಕಯಾನೇ ||

ಈ ಅರಸುತನವು (ರಾಜಭೋಗ) ಧೋ ಎಂದು ಬೀಸುವ ಗಾಳಿಗೆ ಸಿಲುಕಿದ ಮೋಡಗಳ ಮಾಲೆಯಂತೆ ಕ್ಷಣಾರ್ಧದಲ್ಲಿ ಬಿದ್ದು ಕರಗಿ ಹೋಗಬಹುದು. (ಪ್ರಭುತ್ವವು ಅಸ್ಥಿರವಾದುದು). ಇಂದ್ರಿಯ ಸುಖಗಳು ಆ ಕ್ಷಣಕ್ಕೆ ರುಚಿಸತಕ್ಕವು. ನಮ್ಮ ದೇಹದಲ್ಲಿರುವ ಪ್ರಾಣವು ನೀರಿನ ಮೇಲಿರುವ ಗುಳ್ಳೆಯಂತೆ ಕ್ಷಣಿಕ. ಮೋಕ್ಷದ ಆಕಾಂಕ್ಷಿಗಳಾದ ಸಾಧಕರಿಗೆ ಪರಲೋಕದ ಸಾಧನೆಗೆ ಹೊರಟಿರುವವರಿಗೆ ಧರ್ಮವೇ ಸರ್ವಸ್ವ ಎನ್ನುವುದಾಗಿ ತನ್ನ ದಾನ ಶಾಸನ ಒಂದರಲ್ಲಿ ಹೇಳಿಕೊಂಡಿದ್ದಾನೆ. ಇವತ್ತಿಗೂ ಸಹ ಭೋಜ ಸಾಹಿತ್ಯಾಸಕ್ತರಿಗೆ ಸಾಹಿತಿಯಾಗಿ. ಶಾಸನ ಅಧ್ಯಯನ ಮಾಡುವವರಿಗೆ ವಿಸ್ಮಯ ಮತ್ತು ಬಲವಾನ್ ರಾಜನಾಗಿ ಕಂಗೊಳಿಸುತ್ತಾನೆ.  

ಪರಮಾರ ಬಗ್ಗೆ ಇನ್ನೊಂದಿಷ್ಟು - ಮಾಲ, ಮೌಂಟ್ ಅಬು, ವಾಗಡ, ಜಾಲೋರ್, ಭಿನ್ಮಾಲ್ ಗಳಲ್ಲೂ ಆಳಿದ ರಾಜರ ವಂಶ. ಮಾಲ ಪರಮಾರರ ಮೂಲಸ್ಥಾನ ರಾಜಪುಟಾಣದ(ರಾಜಸ್ಥಾನ್) ಮೌಂಟ್ ಅಬು ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ. ಅಭಿಪ್ರಾಯವನ್ನು ಹೊಂದಿರುವುದು ಪದ್ಮಗುಪ್ತನುನಿರೂಪಿಸಿದ ಕಥೆಯೇ ಪ್ರಮುಖ ಆಧಾರ. ಅನಂತರದ ಕಾಲದ ಪರಮಾರರ ಸಾಹಿತ್ಯ ಮತ್ತು ಶಾಸನಗಳು ಕೂಡ ಅಭಿಪ್ರಾಯವನ್ನೇ ಹೇಳುತ್ತವೆ. ಕಥೆಯ ಪ್ರಕಾರ ವಸಿಷ್ಠಮುನಿಯ ಬಳಿ ಇದ್ದ ಕಾಮಧೇನುವನ್ನು ವಿಶ್ವಾಮಿತ್ರ ಕಳವು ಮಾಡಿದನೆಂದೂ ಅದನ್ನು ಮರಳಿ ಪಡೆಯಲು ವಶಿಷ್ಠ ಈಗ ಮೌಂಟ್ ಅಬು ಎಂಬುದು ಕರೆಸಿಕೊಳ್ಳುವಲ್ಲಿ ಯಜ್ಞ ಮಾಡಿದಾಗ ಯಜ್ಞಕುಂಡದಿಂದ ಅಪ್ರತಿಮ ವೀರನೊಬ್ಬ ಎದ್ದು ಬಂದು ಕಾಮಧೇನುವನ್ನು ವಿಶ್ವಾಮಿತ್ರನಿಂದ ಬಲಾತ್ಕಾರವಾಗಿ ಬಿಡಿಸಿ ತಂದು ವಸಿಷ್ಠರಿಗೆ ಒಪ್ಪಿಸಿದನೆಂದೂ ಮುನಿ ವೀರನ ಸಾಹಸವನ್ನು ಮೆಚ್ಚಿ ಪರಮಾರ (ಶತ್ರುನಾಶಕ) ಎಂದು ನಾಮಕರಣ ಮಾಡಿ ಅವನಿಗೆ ರಾಜ್ಯವನ್ನು ಅನುಗ್ರಹಿಸಿದನೆಂದೂ ವರ್ಣಿಸಲಾಗಿದೆ. ಕೃಷ್ಣರಾಜ ಅಥವಾ ಉಪೇಂದ್ರ ಎಂಬವನು ವಂಶದ ಮೂಲಪುರಷ ಎನ್ನಲಾಗುತ್ತದೆ. ವರ್ಣನೆ ಆರಂಭಕಾಲದ ಶಾಸನಗಳಲ್ಲಿ ಕಂಡುಬರುವುದಿಲ್ಲ. ಇವರ ಅತ್ಯಂತ ಪ್ರಾಚೀನ ಶಾಸನದ ಪ್ರಕಾರ ಇವರು ರಾಷ್ಟ್ರಕೂಟ ಸಂಬಂದಿಗಳೆಂದು ತಿಳಿದುಬರುತ್ತದೆ. ಇವರು ಆರಂಭದಲ್ಲಿ ರಾಷ್ಟ್ರಕೂಟರ ಸಾಮಂತರಾಗಿದ್ದರು.
2ನೆಯ ಸೀಯಕ ಪರಮಾರ ಸಿಂಹಾಸನವನ್ನೇರಿದ. ಇವನಿಗೆ ಸ್ವತಂತ್ರ ಪರಮಾರ ರಾಜ್ಯವನ್ನು ನಿರ್ಮಿಸಲು ಸನ್ನಿವೇಶ ಅನುಕೂಲವಾಗಿತ್ತು. ಇವನು ಮುಮ್ಮಡಿ ಕೃಷ್ಣನಿಗೆ ವಿಧೇಯನಾಗಿದ್ದ. ಆದರೆ ಪ್ರತೀಹಾರ ಪ್ರಭುತ್ವ ಕ್ರಮೇಣ ಅವನತಿ ಹೊಂದುತ್ತಿದ್ದುದರಿಂದ ಸ್ವತಂತ್ರನಾಗಲು ಇವನಿಗೆ ಅವಕಾಶ ದೊರಕಿತು. ಇವನ ಆಳ್ವಿಕೆಯ ಉತ್ತರಾರ್ಧದಲ್ಲಿ ಮುಮ್ಮಡಿ ಕೃಷ್ಣ ಮರಣಹೊಂದಿದ್ದರಿಂದ, ರಾಷ್ಟ್ರಕೂಟರಿಂದ ಸ್ವತಂತ್ರನಾಗಲು ಇವನಿಗೆ ಅವಕಾಶ ದೊರಕಿತು. ಇವನು ಕೃಷ್ಣನ ಉತ್ತರಾಧಿಕಾರಿ ಖೊಟ್ಟನಿಗೆ ವಿಧೇಯನಾಗಿರಲು ಒಪ್ಪದೆ ದಂಗೆಯೆದ್ದ. ಪರಮಾರ ಸೈನ್ಯ ರಾಷ್ಟ್ರ ಕೂಟರ ಸೈನ್ಯವನ್ನು ಸೋಲಿಸಿ ಹಿಮ್ಮೆಟ್ಟಿಸಿತು. ಇದರ ಪರಿಣಾಮವಾಗಿ ಮಾಲವರಾಜ್ಯದ ದಕ್ಷಿಣದ ಗಡಿ ತಪತಿ ನದಿಯ ವರೆಗೂ ವಿಸ್ತರಿಸಿತು. ಸ್ವತಂತ್ರ ಪರಮಾರ ರಾಜ್ಯವನ್ನು ನಿರ್ಮಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಇವನು ಸುಮಾರು 948 ರಿಂದ 974 ವರೆಗೆ ಆಳಿದ. ಇವನ ಮಕ್ಕಳಾದ ಮುಂಜ ಅಥವಾ 2ನೆಯ ವಾಕ್ಪತಿ ಮತ್ತು ಸಿಂಧುರಾಜರು ಅನುಕ್ರಮವಾಗಿ ಮಾಲವವನ್ನು ಆಳಿದರು. ಮುಂಜ ರಾಜ 974ರಿಂದ 995 ವರೆಗೆ ಆಳಿದ. ಇವನಿಗೆ ಶ್ರೀವಲ್ಲಭ, ಪೃಥ್ವೀವಲ್ಲಭ, ಅಮೋಘವರ್ಷ ಎಂಬ ಬಿರುದುಗಳಿದ್ದುವು. ಸ್ವತಂತ್ರ ಮಾಲವ ರಾಜ್ಯಕ್ಕೆ ಉತ್ತರಾಧಿಕಾರಿಯಾಗಿ ಇವನು ಅಧಿಕಾರಕ್ಕೆ ಬಂದಾಗ ಮಾಲವ ರಾಜ್ಯ ಉತ್ತರದಲ್ಲಿ ಜಾಲೋರ್ವರೆಗೂ ಪೂರ್ವದಲ್ಲಿ ಬಿಲ್ಸ ದಕ್ಷಿಣದಲ್ಲಿ ತಪತಿ ಮತ್ತು ಪಶ್ಚಿಮದಲ್ಲಿ ಸಾಬರಮತಿಯವರೆಗೂ ವ್ಯಾಪಿಸಿತ್ತು. ಇವನು ಇದನ್ನು ಮತ್ತಷ್ಟು ವಿಸ್ತರಿಸಲು ತನ್ನ ಶಕ್ತಿಸಾಮರ್ಥ್ಯಗಳನ್ನು ವಿನಿಯೋಗಿಸಿದ. ಮೇರುತುಂಗನ "ಪ್ರಬಂಧಚಿಂತಾಮಣಿ"ಯಲ್ಲಿ ಮುಂಜನ ಸಾಹಸವನ್ನು ವೈಭವಯುತವಾಗಿ ವರ್ಣಿಸಲಾಗಿದೆ. ಇವನು ಅನೇಕ ಸಂಸ್ಕೃತ ಕವಿಗಳಿಗೆ ಆಶ್ರಯ ನೀಡಿದ್ದನಲ್ಲದೆ, ತಾನೇ, ಸ್ವತಃ ಕವಿಯಾಗಿದ್ದ; ಸಮರ ಮತ್ತು ಶಾಂತಿಯಲ್ಲಿ ಸಮನಾಗಿ ಪ್ರಸಿದ್ಧಿ ಗಳಿಸಿದ್ದ. ಕಳಚುರಿಗಳು, ಹೂಣರು, ಗುಹಿಲರು ಮತ್ತು ಚಾಹಮಾನರ ಮೇಲೆ ಯಶಸ್ವಿ ಹೋರಾಟ ನಡೆಸಿದ. ತಾನು ಗೆದ್ದ ಪ್ರದೇಶಗಳ ಮೇಲೆ ಪರಮಾರ ವಂಶದ ರಾಜಕುಮಾರರನ್ನು ಆಡಳಿತಾಧಿಕಾರಿಗಳಾಗಿ ನೇಮಿಸಿದ. ರಾಜಕುಮಾರರು ಕಾಲಕ್ರಮದಲ್ಲಿ ಪ್ರತ್ಯೇಕ ಉಪಶಾಖೆಯನ್ನು ಸ್ಥಾಪಿಸಿ ಅನೇಕ ವರ್ಷಗಳ ವರೆಗೆ ರಾಜ್ಯವಾಳಿದರು. ಚಾಳುಕ್ಯ 2ನೆಯ ತೈಲಪನ ವಿರುದ್ಧ ಮುಂಜ ಆರು ಬಾರಿ ಯುದ್ಧ ಮಾಡಿದ. ಏಳನೆಯ ಬಾರಿ ತೈಲಪ ಅವನನ್ನು ಸೋಲಿಸಿ ಸೆರೆಯಲ್ಲಿಟ್ಟು ಕೊಲ್ಲಿಸಿದ (995). ಮುಂಜ ಒಳ್ಳೆಯ ಯೋಧನಾಗಿದ್ದನ್ನಲ್ಲದೆ ವಿದ್ಯಾಪಕ್ಷಪಾತಿಯಾಗಿದ್ದು ಪದ್ಮಗುಪ್ತ, ಧನಂಜಯ, ಹಲಾಯುಧ ಮುಂತಾದವರಿಗೆ ಆಶ್ರಯದಾತನಾಗಿದ್ದ. ಇವನ ನಂತರ ಇವನ ಸಹೋದರ ಸಿಂಧುರಾಜ ಆಳಿದ. ಇವನು ಚಾಳುಕ್ಯರನ್ನು ಸೋಲಿಸಿ ತನ್ನ ಸಹೋದರನ ಕಾಲದಲ್ಲಿ ಕಳೆದುಹೋಗಿದ್ದ ಪ್ರದೇಶಗಳನ್ನು ಮತ್ತೆ ಪಡೆದ. ಇವನ ಆಸ್ಥಾನದಲ್ಲಿದ್ದ ಪದ್ಮ ಗುಪ್ತ ಇವನನ್ನು ಕುರಿತು "ನವಸಹಸಾಂಕ" ಎಂಬ ಕೃತಿಯನ್ನು ರಚಿಸಿದ್ದಾನೆ. ಇವನ ಕಾಲದಲ್ಲಿ ಮಾಲವ ಸ್ವತಂತ್ರ ರಾಜ್ಯವಾಗಿ ಮುಂದುವರಿಯಿತಲ್ಲದೆ. ಇದಕ್ಕೆ ಅನೇಕ ಪ್ರದೇಶಗಳು ಸೇರಿಕೊಂಡುವು. ಇವನ ತರುವಾಯ ಭೋಜರಾಜ ಪಟ್ಟಕ್ಕೆ ಬಂದ.
ಪರಮಾರರ ಅಧಿಕಾರ ಮುಂಜ ಮತ್ತು ಸಿಂಧುರಾಜರ ಕಾಲದಲ್ಲಿ ಸಂಘಟಿತವಾಗಿ, ಭೋಜನ ಕಾಲದಲ್ಲಿ ಸಾಮ್ರಾಜ್ಯದ ಶ್ರೇಣಿಯನ್ನು ಮುಟ್ಟಿತು.
ಭೋಜ ಸು.1010 ಸಮಯದಲ್ಲಿ ಮಾಲವ ಸಿಂಹಾಸನವನ್ನೇರಿದ. ಮಾಲದವ ವೈಭವ ಇವನ ಕಾಲದಲ್ಲಿ ಉತ್ತುಂಗ ಶಿಖರವನ್ನೇರಿತು. ಮಧ್ಯಕಾಲೀನ ಭಾರತದ ಪ್ರಸಿದ್ಧ ಅರಸರಲ್ಲಿ ಇವನೊಬ್ಬ. ಇವನು 40 ವರ್ಷಗಳಿಗೂ ಹೆಚ್ಚು ಕಾಲ (1010-1055) ಆಳ್ವಿಕೆ ನಡೆಸಿದ. ಭೋಜನ ದಿಗ್ವಿಜಯಗಳು ಭಾರತೀಯ ದಂತಕಥೆಗಳಲ್ಲೂ ಶಾಸನಗಳಲ್ಲೂ ಜನಪ್ರಿಯವಾಗಿವೆ. ಈತ ಚಾಳುಕ್ಯ, ಚೇದಿ ಮತ್ತು ಮುಸ್ಲಿಂ ರಾಜರ ವಿರುದ್ಧ ಸತತವಾಗಿ ಯುದ್ಧ ಮಾಡಿದ. ಸುಮಾರು 1055ರಲ್ಲಿ ಚಾಳುಕ್ಯರ ದೊರೆ 1ನೆಯ ಸೋಮೇಶ್ವರನೂ ಗುಜರಾತಿನ ದೊರೆ ಭೀಮನೂ ದಾಹಲದ ದೊರೆ ಕರ್ಣನೂ ಒಟ್ಟಾಗಿ ಭೋಜನನ್ನು ಯುದ್ಧದಲ್ಲಿ ಸೋಲಿಸಿದರು, ಸಮುದ್ರಗುಪ್ತನಂತೆ ಇವನಿಗೆ ಅಸಾಮಾನ್ಯವಾದ ಸಾಮರ್ಥ್ಯವಿತ್ತು. ಈತ ರಾಮ, ಧರ್ಮಪುತ್ರ, ವಿಕ್ರಮ ಮತ್ತು ಹಾಲರಂತೆ ಪ್ರಸಿದ್ಧನಾಗಿದ್ದಾನೆ. ಇವನಿಗೆ ಸಾಹಿತ್ಯದಲ್ಲಿ ಅಪಾರ ಅಭಿರುಚಿಯಿತ್ತು. ಇವನಿಗೆ "ಕವಿರಾಜ ಮಾಲವ ಚಕ್ರವರ್ತಿ" ಎಂಬ ಬಿರುದಿತ್ತು. ಈತ ಕಾವ್ಯ, ಖಗೋಳಶಾಸ್ತ್ರ, ಮಂತ್ರಶಾಸ್ತ್ರ, ನ್ಯಾಯ, ಪಶುವೈದ್ಯ, ತತ್ತ್ವ, ವ್ಯಾಕರಣ, ಅಲಂಕಾರ ಮೊದಲಾದ ವಿಷಯಗಳ ಮೇಲೆ ಗ್ರಂಥ ರಚಿಸಿದನೆಂದು ಪ್ರತೀತಿ, ಇವನ ಕಾಲದಲ್ಲಿ ಕಾವ್ಯದ ಒಂದು ಹೊಸ ಪ್ರಕಾರ ಆರಂಭವಾಯಿತು. ಶಬ್ದಗಳನ್ನು ಚಮತ್ಕಾರವಾಗಿ ಜೋಡಿಸಿ ರಚಿಸುವ ಕಲೆ ಮುಂದೆ ಬಂತು. ಶಬ್ಧವಷ್ಟೆ ಅರ್ಥಕ್ಕೆ ಪ್ರಧಾನ್ಯ ನೀಡಲಾಯಿತು. ಕಾವ್ಯದ ವಸ್ತುವಿನಷ್ಟೇ ಕಾವ್ಯದ ತಂತ್ರವೂ ಮುಖ್ಯವಾಯಿತು. ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ತನ್ನ ರಾಜಧಾನಿಯಾದ ಧಾರಾ ನಗರದಲ್ಲಿ "ಸರಸ್ವತಿ ದೇವಾಲಯವೆಂದು" ಒಂದು ವಿಶ್ವವಿದ್ಯಾಲಯವನ್ನು ಈತ ಸ್ಥಾಪಿಸಿದ. ಪ್ರಖ್ಯಾತ ಸಂಸ್ಕೃತ ಮಹಾಕಾವ್ಯಗಳಿಂದ ಆಯ್ದ ಕೆಲವು ಸ್ವಾರಸ್ಯಕರ ಭಾಗಗಳನ್ನು ಕಲ್ಲುಗಳ ಮೇಲೆ ಕೆತ್ತಿಸಿ, ವಿದ್ಯಾಲಯದ ಗೋಡೆಗಳನ್ನು ಕಟ್ಟಲು ಕಲ್ಲುಗಳನ್ನು ಉಪಯೋಗಿಸಲಾಯಿತು. ಪ್ರಭಾಚಂದ್ರ ಸೂರಿ, ಶಾಂತಿಸೇನ ಮತ್ತು ಧನಪಾಲ ಎಂಬ ಜೈನಕವಿಗಳು ಇವನ ಆಶ್ರಿತರಾಗಿದ್ದರು. ವಿಘ್ನೇಶ್ವರ ಎಂಬುವನು ಮಿತಾಕ್ಷರ ಎಂಬ ಗ್ರಂಥವನ್ನು ರಚಿಸಿದ.



No comments:

Post a Comment