Search This Blog

Wednesday 13 December 2017

ಶಾಸನ ವಿಧಗಳು ಮತ್ತು ಶಾಸನ ಧರ್ಮಗಳು ನನ್ನ ಅನಿಸಿಕೆ

"ಬಿಡುವ, ಮರಳ್ಚುವಟ್ಟುವ ಮಗುಳ್ವಾ ಕಡಂಗುವ ರೂಪಿಡುವ ಜಗುಳ್ವ ಝಳ್ಪಿಸುವ" ಕ್ರಿ. . 1125ರ ೧೦೮ ಸಾಲಿನ ಈ ಶಾಸನವಿರುವುದು ಧಾರವಾಡದ ಮುಗದ್ ನಲ್ಲಿ. ಚಾಳುಕ್ಯ ತ್ರಿಭುವನಮಲ್ಲ ಆರನೇ ವಿಕ್ರಮಾದಿತ್ಯನಕಾಲದ್ದು. ಶಾಸನದ ಆರಂಭದಿಂದ ಕೊನೆಯ ತನಕವೂ ನಾಕಿರಾಜ ಎನ್ನುವವನ ಅನೇಕ ವಿಶೇಷ ಗುಣಗಳನ್ನು ಸಾರುತ್ತಾ ಹೋಗುತ್ತದೆ. ಶಾಸನಗಳ ವಿಧಗಳು ಮತ್ತು ಶಾಸನಧರ್ಮವನ್ನು ಸಾರಲಾಗಿದೆ. "ಬಿಡುವ, ಮರಳ್ಚುವಟ್ಟುವ ಮಗುಳ್ವಾ ಕಡಂಗುವ ರೂಪಿಡುವ ಜಗುಳ್ವ ಝಳ್ಪಿಸುವ" (ತ್ಯಾಗವನ್ನು, ಮೋಹವನ್ನು. ಹೊಡೆದಟ್ಟುವ ಶೌರ್ಯವನ್ನು, ತಿರುಗಿ ಬರುವ, ಕುಡುಂಗುವ - ಹುರಿದುಂಬಿಸುವ, ರೂಪಿಡುವ - ತನ್ನ ರೂಪದಂತೆಯೇ ಕಾಣುವ(ಹೋಲಿಕೆ) ಜಗುಳ್ವ - ದೂರವಾಗುವ,) ಎಂದು ಶಾಸನದ 27ನೇ ಸಾಲಿನಲ್ಲಿ ಹೇಳಲಾಗಿದೆ. ಮುಂದೆ 29 ನೇ ಸಾಲಿನಲ್ಲಿ "ಸುರಿಗೆವಿಡಿವವರ ದೇವಂ" ಎಂದು ನಾಕಿರಾಜನನ್ನು ದೈವತ್ವಕ್ಕೆ ಏರಿಸಲಾಗಿದೆ. ಪರಿವಾರಕ್ಕ ಪ್ರಜೆಗಂ ನಿರುತಂ ತಾಂ ದೆಯ್ಯಮಾಗಿ" ನಾಕಿರಾಜನು ಪ್ರಜಾನುರಾಗಿ ಎಂದು 43ನೇ ಸಾಲಿನಲ್ಲಿ ಹೇಳಲಾಗಿದೆ. 53ನೇ ಸಾಲಿನಲ್ಲಿ "ಮುಗುಂದಮೆಂಬುದಯ ಶೈಳಸ್ಥಾನದೊಳ್ತೇಜಮಾಗಿರೆ ಚೆಲ್ವಾದುದು ನಾಕಿರಾಜ ವಿಭುವೆಂಬಾದಿತ್ಯ ನಿತ್ಯೋದಯಂ" ಎಂದು ಉದಯ ಸಮಯದ ಸೂರ್ಯ ಮೇಲೇರುತ್ತಾ ತನ್ನ ಪ್ರಭೆಯನ್ನು ಹೆಚ್ಚಿಸಿಕೊಳ್ಳುವಂತೆ ನಾಕಿರಾಜನೂ ಸಹ ಸೂರ್ಯನಂತೆ ಪ್ರಭಾನ್ವಿತನು ಎನ್ನಲಾಗಿದೆ. ಶಾಸನದ ಕೊನೆಯಲ್ಲಿ ಅಂದರೆ 108ನೇ ಸಾಲಿನಲ್ಲಿ "ನಾಗಾರ್ಜುನ ಪಂಡಿತರು ಪೇಳ್ದ ಕಬ್ಬಂ ಕೆಸರು ಕಲ್ಲಾದಿಯಾಗಿ ಕಲ್ಲೋಝರ ಕೆಲಸ ಭರತೋಜನ ಕಂಡರಣೆ. ಎಂದು ನಾಗಾರ್ಜುನ ಎನ್ನುವ ವಿದ್ವಾಂಸ ಶಾಸನ ಕೃತಿಯನ್ನು ಬರೆದದ್ದು ಮತ್ತು ಅದನ್ನು ಲ್ಲಿನ ಕೆಲಸವನ್ನು ಮಾಡುವ ಶಿಲ್ಪಿ ಭರತನು ಕೆತ್ತಿದ್ದಾನೆ ಎಂದು ಬರೆಯಲಾಗಿದೆ ಶಾಸನದ 58ರಿಂದ 60ನೇ ಸಾಲಿನಲ್ಲಿ ಬಂದಿರುವ ಶಾಸನ ಧರ್ಮ ರೀತಿ ಇದೆ
ಸಾಸನಮಾಗಿರೊಳ್ಪೆಸೆವ ಕಲ್ಲಿನ ಸಾಸನವೊಂದಿದಲ್ತು ಕೇಳ್
ಸಾಸದ ಸಾಸನಂ ಜಯದ ಸಾಸನ ವಾರ್ಪ್ಪಿನ ಸಾಸನಂ ಗುಣೋ
ದ್ಭಾಸನ ಸಾಸನಂ ಸಿರಿಯ ಸಾಸನ ವೊಳ್ಪಿನಸಾಸನಾಳಿಯಿಂ
ಲೇಸೆನೆ ನಾಕಿರಾಜ ವಿಭು ಸಾಸನ ಕೋಟಿಯನೆಯ್ದೆ ತಾಳ್ದಿದಮ್ 
ಒಳ್ಳೆಯತನವನ್ನು, ಜಯದ ವಿವರಣೆಯನ್ನು ಶೌರ್ಯಗುಣವನ್ನು, ಐಶ್ವರ್ಯಗಳ ವರ್ಣನೆ, ದಾನವನ್ನು ವಿವರಿಸುವ ಶಾಸನಗಳೆಂದು ವಿಂಗಡಿಸಿಕೊಳ್ಳಬಹುದುಇವುಗಳಲ್ಲಿ ದಾನಶಾಸನಗಳನೇಕವು ತಾಮ್ರಪಟಗಳ ಸಾಲಿಗೆ ಸೇರುತ್ತವೆ. ಸಾಸದ ಶಾಸನವೆಂದು ಹೇಳಿರುವುದು ಸಾಹಸದ ಶಾಸನವನ್ನು. ಜಯದ ಶಾಸನ, ಗುಣವನ್ನು ಹೇಳುವ ಶಾಸನ. ಹೀಗೆ ಕನ್ನಡದ ಶಾಸನಗಳ ವಿಧಗಳನ್ನು ಹೇಳುತ್ತಾ ನಾಕಿರಾಜನು ಎಲ್ಲಾ ಗುಣಗಳನ್ನು ಹೊಂದಿರುವ ಶಾಸನಗಳನ್ನು ಬರೆಸಲು ಸಮರ್ಥ ಎನ್ನುವುದನ್ನು ಹೇಳಲಾಗಿದೆ. ಇಲ್ಲಿ ಹೇಳಿರುವ ಶಾಸನಗಳನ್ನೆ ಎರಡು ವಿಧವಾಗಿ ನೋಡಿದರೆ ಒಂದು ದಾನಗಳಿಗೆ ಮತ್ತು ಇನ್ನೊಂದು ವೀರ ಶಾಸನಗಳನ್ನಾಗಿಸಬಹುದು. ದಾನಗಳು ಕಲ್ಲು ಮತ್ತು ತಾಮ್ರಗಳಿದ್ದರೆ ವೀರ ಶಾಸನಗಳು ಕಲ್ಲಿನಲ್ಲಿಯೇ ಬರೆಯಲ್ಪಟ್ಟ ವೀರಗಲ್ಲುಗಳಾಗಿವೆ. ತ್ಯಾಗ ಮತ್ತು ಶೌರ್ಯವನ್ನು ಶಾಸನದುದ್ದಕ್ಕೂ ಪ್ರತಿಪಾದಿಸಲಾಗಿದೆ. ವಿಕ್ರಮಾದಿತ್ಯನ ಶೌರ್ಯ ಪ್ರತಾಪಗಳನ್ನು ವರ್ಣಿಸಲಾಗಿದೆ. ಬಿಡುವ=ಯುದ್ಧದಲ್ಲಿ ಸೆರೆಸಿಕ್ಕ ವೀರರನ್ನು ಬದುಕಿಕೋ ಹೋಗುಎಂದು ಅಲ್ಲೇ ಬಿಟ್ಟುಬಿಡುವ, ಮರಳ್ಚುವ=ಸೆರೆಗೆ ತಳ್ಳಿದ ಮೇಲೆ ದೈನ್ಯತೆಯಿಂದ ಆತ ಅಥವಾ ಆತನ ಕಡೆಯವರು ಬೇಡಿಕೊಂಡಾಗ ಮರಳಿಸುವ, ಅಟ್ಟುವ=ಶತ್ರುಗಳು ಯಾರಾದರೂ ಕಂಡು ಬಂದರೆ ಬೆನ್ನಟ್ಟಿ ಹೋಗುವ, ಮಗುಳ್ವ=(ಯುದ್ಧದಲ್ಲಿ) ಮೇಲೆ ಬೀಳುವ, ಕಡಂಗುವ=ಕೆಡಹುವ, ರೂಪಿಡುವ= ಯಾರನ್ನಾದರೂ ನಿರ್ದಿಷ್ಟವಾಗಿ ಗುರಿಯಿಟ್ಟು ಅಂಥವರನ್ನು ಬಲಿಹಾಕುವ, ಜಗುಳ್ವ=ಊನಾಂಗರನ್ನಾಗಿ ಮಾಡುವ, ಝಳ್ಪಿಸುವ=ತದಕುವ, ಚೆನ್ನಾಗಿ ಬಾರಿಸುವ - ಇತ್ಯಾದಿ. ಸುರಿಗೆವಿಡಿವವರ ದೇವಂ=ಖಡ್ಗ ಹಿಡಿವವರ ದೇವನು, ಖಡ್ಗ ಹಿಡಿಯುವವರು (ಶೂರರು) ಆರಾಧಿಸಬೇಕಾದಂತಹ ವ್ಯಕ್ತಿತ್ವ ಆರನೆಯ ವಿಕ್ರಮಾದಿತ್ಯನದು 

No comments:

Post a Comment